ಕಾಶಿ ರೈಲಿನಲ್ಲಿ ನಿರ್ಮಾಣವಾಯಿತು ಸಣ್ಣ ದೇವಾಲಯ!; ಇಲ್ಲಿ ಶಿವನಿಗೂ ಬುಕ್ ಆಗಿದೆ ಸೀಟ್

ಈ ವಿಶೇಷ ರೈಲಿನ ಬಿ5 ಕೋಚ್​ನ 64ನೇ ಸೀಟ್​ಅನ್ನು ಶಿವನಿಗಾಗಿ ಕಾಯ್ದಿರಿಸಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಾಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ರೈಲಿನಲ್ಲಿ ಇರಿಸಲಾದ ಶಿವನ ಫೋಟೋ

ರೈಲಿನಲ್ಲಿ ಇರಿಸಲಾದ ಶಿವನ ಫೋಟೋ

 • Share this:
  ಭಾರತೀಯರಲ್ಲಿ ಧಾರ್ಮಿಕ ನಂಬಿಕೆ ಹೆಚ್ಚಿದೆ. ಹೀಗಾಗಿ ಇಲ್ಲಿನ ಜನತೆ ಮರ, ಪ್ರಾಣಿ, ಕಲ್ಲಿನಲ್ಲೂ ದೇವರನ್ನು ಕಾಣುತ್ತಾರೆ. ಇದಕ್ಕೆ ಇತ್ತೀಚೆಗೆ ನಡೆದ ಘಟನೆ ತಾಜಾ ಉದಾಹರಣೆ. ಭಾನುವಾರ ಕೇಂದ್ರ ಸರ್ಕಾರ ಕಾಶಿ ಮಹಾಕಾಲ​ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿತ್ತು. ವಿಶೇಷ ಎಂದರೆ ರೈಲಿನಲ್ಲಿ ಮಿನಿ ದೇವಾಲಯವನ್ನೇ ನಿರ್ಮಾಣ ಮಾಡಲಾಗಿದೆ. ಇಲ್ಲಿ ಶಿವನಿಗೂ ಆಸನವೊಂದನ್ನು ಕಾಯ್ದಿರಿಸಲಾಗಿದೆ.

  ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕಾಶಿ ಮಹಾಕಾಲ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿದ್ದರು. ಈ ರೈಲು ಇಂದೋರ್​​ನ ಓಂ​ಕಾರೇಶ್ವರದಿಂದ ಉಜ್ಜಯಿನಿ ಮಾರ್ಗವಾಗಿ ಕಾಶಿಗೆ ತೆರಳಲಿದೆ. ಈ ರೈಲಿನಲ್ಲಿ ಭಕ್ತರು ಕಾಶಿಗೆ ಪ್ರಯಾಣ ಬೆಳೆಸಿದ್ದಾರೆ.

  ಈ ವಿಶೇಷ ರೈಲಿನ ಬಿ5 ಕೋಚ್​ನ 64ನೇ ಸೀಟ್​ಅನ್ನು ಶಿವನಿಗಾಗಿ ಕಾಯ್ದಿರಿಸಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಾಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

  ಇದನ್ನೂ ಓದಿ: ಹೆಸರಲ್ಲೇನಿದೆ? ಹೆಸರಲ್ಲಿ ಎಲ್ಲವೂ ಇದೆ: ಕೆಲ ದೇಶಗಳಲ್ಲಿ ಈ ಹೆಸರುಗಳನ್ನು ಇಡುವಂತಿಲ್ಲ

  ಶಿವನಿಗಾಗಿ ಕಾಯ್ದಿರಿಸಿರುವ ಸೀಟ್​ನಲ್ಲಿ ಶಿವನ ಫೋಟೋ ಇಡಲಾಗಿದೆ. ರೈಲನು ಹತ್ತಿದ ಭಕ್ತರು ಇಲ್ಲಿಗೆ ಆಗಮಿಸಿ ಶಿವನಿಗೆ ನಮಿಸಿ ತೆರಳುತ್ತಿದ್ದಾರೆ. ಹೀಗಾಗಿ ಚಿಕ್ಕ ದೇವಾಲಯವೇ ಇಲ್ಲಿ ನಿರ್ಮಾಣಗೊಂಡಿದೆ. ಈ ರೀತಿ ಮಾಡಿರುವ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ. ಇಂದೋರ್​ನಿಂದ ವಾರಾಣಸಿಗೆ ನಡುವಣ ಅಂತರ 1,131 ಕಿಲೋ ಮೀಟರ್​. ಸುಮಾರು 20 ಗಂಟೆಯಲ್ಲಿ ರೈಲು ಈ ಅಂತರವನ್ನು ಕ್ರಮಿಸಲಿದೆ.
  First published: