• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Clothes Bank: ಬೆಂಗಳೂರಿನ ಈ ಅಂಗಡಿಯಲ್ಲಿ ಎಲ್ಲಾ ಬಟ್ಟೆಗಳ ಬೆಲೆ ಒಂದು ರೂಪಾಯಿ, ಕೊಳ್ಳೋಕೆ ನೂಕುನುಗ್ಗಲು!

Clothes Bank: ಬೆಂಗಳೂರಿನ ಈ ಅಂಗಡಿಯಲ್ಲಿ ಎಲ್ಲಾ ಬಟ್ಟೆಗಳ ಬೆಲೆ ಒಂದು ರೂಪಾಯಿ, ಕೊಳ್ಳೋಕೆ ನೂಕುನುಗ್ಗಲು!

ಬಟ್ಟೆ ಖರೀದಿಸುತ್ತಿರುವ ಮಹಿಳೆಯರು

ಬಟ್ಟೆ ಖರೀದಿಸುತ್ತಿರುವ ಮಹಿಳೆಯರು

Clothes Bank In Bengaluru: ಮೊದಲ ದಿನವೇ ಮಳಿಗೆಯು ತೆರೆಯುತ್ತಿದ್ದಂತೆಯೇ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹೆಚ್ಚಿನ ನಿರ್ಗತಿಕ ಹಾಗೂ ಬಡ ಕುಟುಂಬಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ಬಟ್ಟೆಗಳನ್ನು ಆರಿಸಿ ಖರೀದಿಸಿದರು. ಪ್ರತಿ ವಾರ 150 ಕುಟುಂಬಗಳು ಮಳಿಗೆಗೆ ಭೇಟಿ ಕೊಡುತ್ತಾರೆ ಎಂದು ಲೋಬೋ ಹೇಳುತ್ತಾರೆ.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Share this:

ನಾಲ್ವರು ಕಾಲೇಜು ಸ್ನೇಹಿತರು(Collage Friends) ಸೇರಿ ಬೆಂಗಳೂರಿನಲ್ಲಿ(Bengaluru) ಬಟ್ಟೆ ಮಳಿಗೆಯೊಂದನ್ನು ಸ್ಥಾಪಿಸಿದ್ದು ಬಡವರು ಹಾಗೂ ನಿರ್ಗತಿಕರು ಈ ಬಟ್ಟೆ(Clothes Bank) ಮಳಿಗೆಯಲ್ಲಿ 1 ರೂ.ಗೆ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಈ ಮಳಿಗೆಯ ಹೆಸರು ಇಮ್ಯಾಜಿನ್ ಕ್ಲಾತ್ಸ್‌ ಬ್ಯಾಂಕ್ (Imagine Clothes Bank) ಎಂದಾಗಿದ್ದು ಹಸಿದವರಿಗೆ ಆಹಾರವನ್ನೊದಗಿಸುವ ಸಮುದಾಯ ರೆಫ್ರಿಜರೇಟರ್‌ಗಳ ಕಲ್ಪನೆಯ ಹಾದಿಯಲ್ಲಿಯೇ ಈ ಸೌಹಾರ್ದ ಉಪಕ್ರಮವನ್ನು ಸ್ನೇಹಿತರು, ಈ ವರ್ಷದ ಸೆಪ್ಟೆಂಬರ್ 12ರಂದು ಅನಾವರಣಗೊಳಿಸಿದ್ದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಬೆರಾಟೆನಾ ಅಗ್ರಹಾರದ ಲವ ಕುಶ ಲೇಔಟ್‌ನಲ್ಲಿನ ಎರಡು ಬೆಡ್‌ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆಸುತ್ತಿದ್ದಾರೆ. ಇದೀಗ ಭಾನುವಾರಗಳಂದು ಮಾತ್ರ ತೆರೆದಿರುತ್ತದೆ.


ನಾಲ್ಕು ಸ್ನೇಹಿತರ ಸಾಮಾಜಿಕ ಕೆಲಸ


ಬಡವರಿಗಾಗಿ ಬೆಂಗಳೂರಿನ ಬೊಟೀಕ್ ಯೋಜನೆಯ ಹಿಂದಿರುವ ರೂವಾರಿಗಳು ವಿನೋದ್ ಪ್ರೇಮ್ ಲೋಬೋ, ಮೆಲಿಶಾ ನೊರೊನ್ನಾ, ನಿತಿನ್ ಕುಮಾರ್ ಹಾಗೂ ವಿಘ್ನೇಶ್. ಹಲವಾರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಈ ನಾಲ್ವರು ಕಾಲೇಜು ಸ್ನೇಹಿತರು ಬಡವರಿಗೆ ಕೂಡ ತಮ್ಮ ಇಷ್ಟದ ಬಟ್ಟೆಯನ್ನು ತೊಡುವ ಹಾಗೂ ಕೈಗೆಟಕುವ ಬೆಲೆಯಲ್ಲಿ ಬಟ್ಟೆಗಳನ್ನು ಖರೀದಿಸುವ ಇರಾದೆಯಲ್ಲಿ ಬೊಟೀಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.


ನಾವು 2002ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ನಗರಗಳಲ್ಲಿ ಬಡವರಿಗಾಗಿ ಬಟ್ಟೆ ಮಳಿಗೆಗಳನ್ನು ಆಯೋಜಿಸಿದ್ದೆವು. ನಗರಗಳಲ್ಲಿರುವ ಶಾಲೆಗಳಿಂದ ವಿದ್ಯಾರ್ಥಿಗಳು ನೀಡುತ್ತಿದ್ದ ದೇಣಿಗೆಗಳಿಂದ ಬಟ್ಟೆಗಳನ್ನು ಸಂಗ್ರಹಿಸಲಾಗುತ್ತಿತ್ತು. ನಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿ ನಾವು ವೃತ್ತಿ ಬದುಕಿಗೆ ಕಾಲಿಡುವವರೆಗೆ ಉಚಿತ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿತ್ತು ಎಂದು ಐಟಿ ಕಂಪನಿಯೊಂದರಲ್ಲಿ ಸಂವಹನ ವೃತ್ತಿಪರರಾಗಿರುವ ಲೋಬೋ ತಿಳಿಸುತ್ತಾರೆ.


ಇದನ್ನೂ ಓದಿ: ಹಸುಗಳನ್ನು ಶುಲ್ಕವಾಗಿ ಪಡೆಯುತ್ತಿದ್ದ ಬಿಹಾರದ ಕಾಲೇಜು ಮುಚ್ಚಿದ್ದು ಏಕೆ ಗೊತ್ತೇ..?


ವೃತ್ತಿ ಬದುಕಿಗೆ ಕಾಲಿಟ್ಟ ನಂತರ ಸ್ನೇಹಿತರು ಬೆಂಗಳೂರಿನಲ್ಲಿ ಪುನಃ ಜೊತೆಯಾಗಿ ಸೇರಿಕೊಂಡು ಮಂಗಳೂರಿನಲ್ಲಿ ತಾವು ನಡೆಸುತ್ತಿದ್ದ ಅದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲಗೊಂಡಿರುವ ವಿಭಾಗಗಳನ್ನು ಪುನಶ್ಚೇತಗೊಳಿಸುವ ನಿಟ್ಟಿನಲ್ಲಿ ದತ್ತಿ ಟ್ರಸ್ಟ್ ಇಮ್ಯಾಜಿನ್ ರೂಪುಗೊಂಡಿತು. 2021ರ ಆರಂಭದಲ್ಲಿ ಅದರಲ್ಲೂ ಕೋವಿಡ್-19 ಸಾಂಕ್ರಾಮಿಕದ ನಂತರ ಹೆಚ್ಚಿನ ದಿನಗೂಲಿ ನೌಕರರು ಹಾಗೂ ವಲಸೆ ಕಾರ್ಮಿಕರು ನಿರುದ್ಯೋಗ ಸಮಸ್ಯೆಯಿಂದ ಹೈರಾಣಾದರು. ಇಂತಹ ವರ್ಗಗಳಿಗೆ ಕಿಂಚಿತ್ತಾದರೂ ನೆರವಾಗುವ ನಿಟ್ಟಿನಲ್ಲಿ ಸ್ನೇಹಿತರು ಕರ್ನಾಟಕದ ರಾಜಧಾನಿಯಲ್ಲಿ ಬಡವರಿಗಾಗಿ ಬಟ್ಟೆ ಮಳಿಗೆ ಆರಂಭಿಸುವ ಯೋಜನೆಯನ್ನು ನಿರ್ಧರಿಸಿದರು.


ಸ್ನೇಹಿತರು ಹಾಗೂ ಕೆಲವೊಬ್ಬರು ಪರಿಚಯಿಸ್ಥರ ಮೂಲಕ ನಾವು ಬಟ್ಟೆಗಳನ್ನು ಸಂಗ್ರಹಿಸಲು ಆರಂಭಿಸಿದೆವು ಹಾಗೂ ಬೆಂಗಳೂರಿನಲ್ಲಿರುವ ದೊಡ್ಡ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿರುವ ಕಲ್ಯಾಣ ಸಂಘ ಸಂಸ್ಥೆಗಳಿಗೂ ನಮ್ಮ ಯೋಜನೆಯ ವಿವರಗಳನ್ನು ತಿಳಿಸಿದೆವು ಎಂದು ಲೋಬೋ ಹೇಳುತ್ತಾರೆ. ನಮಗೆ ದೊರೆತ ಪ್ರತಿಕ್ರಿಯೆ ಉತ್ತಮವಾಗಿದ್ದವು ಎಂದು ಹೇಳುವ ಲೋಬೋ ಬೊಟೀಕ್ ಆರಂಭಿಸುವುದಕ್ಕಾಗಿ ಸ್ಥಳವನ್ನು ಹುಡುಕಾಡಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಎರಡು ಬೆಡ್‌ರೂಮ್‌ನ ಅಪಾರ್ಟ್‌ಮೆಂಟ್ ಅನ್ನು ವ್ಯವಸ್ಥಿತಗೊಳಿಸಿದರು.


ಶರ್ಟ್, ಪ್ಯಾಂಟ್, ಸ್ಕರ್ಟ್, ಸೀರೆ, ಜಾಕೆಟ್, ಬ್ಲಾಂಕೆಟ್ ಹಾಗೂ ಕರ್ಟನ್‌ಗಳನ್ನೊಳಗೊಂಡಂತೆ ಎಲ್ಲಾ ಬಗೆಯ ಬಟ್ಟೆಬರೆಗಳು ಇಲ್ಲಿ ಲಭ್ಯವಿವೆ. ಇವುಗಳಲ್ಲಿ ಕೆಲವೊಂದು ಹೊಸತಾಗಿದ್ದರೆ ಇನ್ನು ಕೆಲವು ಹಳೆಯದಾಗಿದ್ದರೂ ಹೊಸದರಂತೆಯೇ ಕಾಣುತ್ತಿದ್ದು ಇದನ್ನು ಸುಂದರವಾಗಿ ಸ್ಟೋರ್‌ನಲ್ಲಿ ಜೋಡಿಸಲಾಗಿದೆ. ಇಲ್ಲಿ ಬಟ್ಟೆಗಳನ್ನು ಮಡಚಿಡಲು ಹಾಗೂ ಜೋಡಿಸಿಡುವುದಕ್ಕಾಗಿಯೇ ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇನ್ನು ದೊರೆತ ಹಣವನ್ನು ನಿರ್ಗತಿಕ ಕುಟುಂಬಗಳ ಶಿಕ್ಷಣ ಹಾಗೂ ಆರೋಗ್ಯ ಅಗತ್ಯಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಲೋಬೋ ಹೇಳುತ್ತಾರೆ.


ದೊಡ್ಡ ಯೋಜನೆ ಆರಂಭಿಸಲು ಸಜ್ಜು


ಮೊದಲ ದಿನವೇ ಮಳಿಗೆಯು ತೆರೆಯುತ್ತಿದ್ದಂತೆಯೇ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹೆಚ್ಚಿನ ನಿರ್ಗತಿಕ ಹಾಗೂ ಬಡ ಕುಟುಂಬಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ಬಟ್ಟೆಗಳನ್ನು ಆರಿಸಿ ಖರೀದಿಸಿದರು. ಪ್ರತಿ ವಾರ 150 ಕುಟುಂಬಗಳು ಮಳಿಗೆಗೆ ಭೇಟಿ ಕೊಡುತ್ತಾರೆ ಎಂದು ಲೋಬೋ ಹೇಳುತ್ತಾರೆ.


ಇದನ್ನೂ ಓದಿ: ಒಸ್ಮಾನ್ ಕವಾಲಾ ಬಂಧನ ವಿಲಕ್ಷಣ ಕೃತ್ಯವೆಂದ ಪತ್ನಿ


ಏಳು ನಿರಂತರ ಭಾನುವಾರಗಳಿಂದ ಬಂದಂತಹ ಅಭೂತಪೂರ್ವ ಸ್ಪಂದನೆ ವೀಕ್ಷಿಸಿದ ಲೋಬೋ ಹಾಗೂ ಅವರ ಸ್ನೇಹಿತರು ನಿರ್ಗತಿಕ ಹಾಗೂ ಬಡ ಮಕ್ಕಳಿಗಾಗಿ ಮಕ್ಕಳ ದಿನಾಚರಣೆಯಂದು (ನವೆಂಬರ್ 14) ಆಟಿಕೆ ಮಳಿಗೆಯನ್ನು ಆರಂಭಿಸುವ ಯೋಜನೆ ಹೊಂದಿದ್ದಾರೆ.

Published by:Sandhya M
First published: