• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Post: ನಾನ್‌ವೆಜ್ ಮಾಡುವಾಗ ಅಡುಗೆ ಕೋಣೆ ಕಿಟಕಿ ಮುಚ್ಚಿ! ಪಕ್ಕದ ಮನೆಗೆ ಸಸ್ಯಹಾರಿ ಕುಟುಂಬ ಬರೆದ ಪತ್ರ ಫುಲ್ ವೈರಲ್

Viral Post: ನಾನ್‌ವೆಜ್ ಮಾಡುವಾಗ ಅಡುಗೆ ಕೋಣೆ ಕಿಟಕಿ ಮುಚ್ಚಿ! ಪಕ್ಕದ ಮನೆಗೆ ಸಸ್ಯಹಾರಿ ಕುಟುಂಬ ಬರೆದ ಪತ್ರ ಫುಲ್ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬರ್ನ್ಸ್ ಬೀಚ್ ನಿವಾಸಿಯೊಬ್ಬರು ತಮ್ಮ ನೆರೆಹೊರೆಯವರಿಗೆ ಪತ್ರ ಬರೆದಿದ್ದು ಮಾಂಸಾಹಾರಿ ಅಡುಗೆ ಮಾಡುವಾಗ ಅಡುಗೆ ಕೋಣೆಯ ಕಿಟಕಿ ಮುಚ್ಚುವಂತೆ ವಿನಂತಿಸಿದ್ದಾರೆ.

  • Share this:

ಆರೋಗ್ಯಕರ ಜೀವನಶೈಲಿಯ (Lifestyle) ಕುರಿತು ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ (Nonveg) ನಡುವೆ ಚರ್ಚೆಯು ವರ್ಷಗಳಿಂದ ನಡೆಯುತ್ತಿದೆ. ಸಸ್ಯಾಹಾರಿಗಳು (Veg) ತಾವು ತಿನ್ನುವ ಆಹಾರ (Fpod) ರುಚಿಕರ ಹಾಗೂ ಆರೋಗ್ಯಕರ ಎಂದು ಪ್ರತಿಪಾದಿಸಿದರೆ ಮಾಂಸಾಹಾರಿಗಳು ತಮ್ಮ ಆಹಾರದಲ್ಲಿ ಪೋಷಣೆಗೆ ಬೇಕಾದ ಎಲ್ಲಾ ಸತ್ವಗಳು ಇರುತ್ತವೆ ಎಂದು ವಾದಿಸುತ್ತಾರೆ. ಆದರೆ ಆಸ್ಟ್ರೇಲಿಯಾದ ಪರ್ತ್ ನಗರದ ಕುಟುಂಬವೊಂದು ಈ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದರೆ ನೀವು ನಂಬಲೇಬೇಕು.


ಅಡುಗೆ ಮಾಡುವಾಗ ಕಿಟಕಿ ಮುಚ್ಚುಂತೆ ಸಲಹೆ


ಬರ್ನ್ಸ್ ಬೀಚ್ ನಿವಾಸಿಯೊಬ್ಬರು ತಮ್ಮ ನೆರೆಹೊರೆಯವರಿಗೆ ಪತ್ರ ಬರೆದಿದ್ದು ಮಾಂಸಾಹಾರಿ ಅಡುಗೆ ಮಾಡುವಾಗ ಅಡುಗೆ ಕೋಣೆಯ ಕಿಟಕಿ ಮುಚ್ಚುವಂತೆ ವಿನಂತಿಸಿದ್ದಾರೆ. ಏಕೆಂದರೆ ಈ ನಿವಾಸಿ ಹಾಗೂ ಅವರ ಕುಟುಂಬದವರು ಸಸ್ಯಾಹಾರಿಗಳಾಗಿದ್ದು ನೆರೆಹೊರೆಯವರು ಮಾಂಸಾಹಾರಿ ಅಡುಗೆಗಳನ್ನು ಮಾಡುವಾಗ ಅದರ ವಾಸನೆ ಸಹ್ಯವಾಗುವುದಿಲ್ಲ ಅಂತೆಯೇ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ವರನಿಗೆ ಚಪ್ಪಲಿಯಲ್ಲಿ ಹೊಡೆದ ಮಾವನ ಮನೆಯವ್ರು! ವೈರಲ್ ವಿಡಿಯೋಗೆ ನೆಟ್ಟಿಗರ ಪ್ರಶಂಸೆ


ಈ ಪತ್ರದಲ್ಲಿ ಬರೆದಿರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂಬ ಸೂಚನೆಯನ್ನು ಈ ನಿವಾಸಿ ನೀಡಿದ್ದರು. ತಮ್ಮ ಸಸ್ಯಾಹಾರಿ ನಿವಾಸಿಯ ಪತ್ರವನ್ನು ನೋಡಿದ ನೆರೆಹೊರೆಯವರು ಆಶ್ಚರ್ಯಪಟ್ಟಿದ್ದು ಮಾತ್ರವಲ್ಲದೆ ಪತ್ರದಲ್ಲಿದ್ದ ವಿನಂತಿ ಅವರಿಗೆ ದಿಗ್ಭ್ರಮೆಯನ್ನುಂಟು ಮಾಡಿತ್ತು.


ಸಾಂದರ್ಭಿಕ ಚಿತ್ರ


ಪತ್ರ ನೋಡಿ ದಿಗ್ಭ್ರಮೆಗೊಂಡ ನೆರೆಹೊರೆಯವರು


ಈ ಪತ್ರವನ್ನು ಹೇ ಪರ್ತ್ ಫೇಸ್‌ಬುಕ್ ಪೇಜ್​​ನಲ್ಲಿ ಹಂಚಿಕೊಳ್ಳಲಾಗಿದ್ದು, ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಪರ್ತ್ ನೌ ವರದಿ ಮಾಡಿದಂತೆ, ಪತ್ರದಲ್ಲಿ ನಮಸ್ಕಾರ ನೆರೆಹೊರೆಯ ನಿವಾಸಿಗಳೇ, ದಯವಿಟ್ಟು ಅಡುಗೆ ಮಾಡುವಾಗ ನಿಮ್ಮ ಪಕ್ಕದ ಕಿಟಕಿಯನ್ನು ಮುಚ್ಚಬಹುದೇ? ಏಕೆಂದರೆ ನಾನು ಹಾಗೂ ನನ್ನ ಕುಟುಂಬವು ಸಸ್ಯಾಹಾರಿಗಳು (ನಾವು ಸಸ್ಯಾಧಾರಿತ ಆಹಾರವನ್ನು ಮಾತ್ರ ತಿನ್ನುತ್ತೇವೆ) ಮತ್ತು ನೀವು ಬೇಯಿಸುವ ಮಾಂಸದ ವಾಸನೆಯು ನಮಗೆ ಅನಾರೋಗ್ಯ ಮತ್ತು ಅಸಮಾಧಾನವನ್ನು ಉಂಟುಮಾಡುತ್ತದೆ. ನಿಮ್ಮ ತಿಳುವಳಿಕೆಯನ್ನು ನಾವು ಪ್ರಶಂಸಿಸುತ್ತೇವೆ. ಧನ್ಯವಾದಗಳು. ಎಂದು ಬರೆದಿದ್ದರು.


ವೈರಲ್ ಆದ ಪತ್ರದ ಸಾರಾಂಶ


ಈ ಪತ್ರವು ತಾಣದಲ್ಲಿ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಹೆಚ್ಚಿನವರು ಸಸ್ಯಾಹಾರಿ ಕುಟುಂಬದ ವಿನಂತಿಯನ್ನು ಅಸಮಂಜಸವೆಂದು ಟೀಕಿಸಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯಿಸಿರುವ ಹೆಚ್ಚಿನ ಬಳಕೆದಾರರು ನಾವೆಲ್ಲರೂ ಸೇರಿ ಮಾಂಸದಡುಗೆಯನ್ನು ಮಾಡೋಣ 100 ಜನ ಜನರು ಒಂದಾಗಿ ಸೇರಿ ಸಸ್ಯಾಹಾರಿಗಳಿರುವ ಮನೆಯ ಸುತ್ತ ಬಿರುಗಾಳಿಯನ್ನೇ ಸೃಷ್ಟಿಸಬೇಕು ಎಂದು ಟೀಕಿಸಿದ್ದಾರೆ.



ಬಳಕೆದಾರರ ಕಾಮೆಂಟ್ ಹೇಗಿತ್ತು?


ವೇಗನ್ ಇಲ್ಲವೇ ಸಸ್ಯಾಹಾರಿ ಜೀವನಶೈಲಿಯು ಪರಿಸರಕ್ಕೆ ಹಾನಿಯುಂಟು ಮತ್ತೊಬ್ಬರು ಕಾಮೆಂಟ್ ಮಾಡಿದ್ದು ಸಸ್ಯಾಹಾರಿ ಮನೆಯವರು ತಾವು ಮಾಡುತ್ತಿರುವ ಹಾನಿಯ ಬಗ್ಗೆ ಅರಿವನ್ನು ಹೊಂದಿರಬೇಕು. ಸಸ್ಯಾಹಾರಿಗಳು ಆಮ್ಲಜನಕವನ್ನು ಉತ್ಪಾದಿಸುವ ಸಸ್ಯಗಳನ್ನು ತಿನ್ನುತ್ತಾರೆ. ಸಸ್ಯಾಹಾರಿಗಳು, ಸಸ್ಯಗಳನ್ನು ತಿನ್ನುವುದನ್ನು ಸಸ್ಯಾಹಾರಿಗಳು ಸಹ ತಿನ್ನುತ್ತಾರೆ.


ಸಸ್ಯಾಹಾರಿಗಳು ತಮ್ಮ ಆಹಾರ ಕ್ರಮವನ್ನೇ ಮುಂದುವರಿಸಿದರೆ, ನಮ್ಮನ್ನೆಲ್ಲರನ್ನೂ ಸಾಯಿಸುವುದು ನಿಶ್ಚಿತ. ಅಂದರೆ ಇದರಲ್ಲಿ ಪ್ರಾಣಿಗಳೂ ಒಳಗೊಂಡಿವೆ. ಹಾಗಾಗಿ ನಿಮ್ಮ ಇಂತಹ ಯೋಚನೆಗಳನ್ನು ಬದಿಗಿಟ್ಟು ಚಿಂತಿಸಿ ಎಂದು ಸಲಹೆ ನೀಡಿದ್ದಾರೆ.


top videos



    ಇನ್ನೊಬ್ಬ ಬಳಕೆದಾರರು ನಿಮ್ಮ ನೆರೆಹೊರೆಯವರಲ್ಲಿ ಪತ್ರ ವ್ಯವಹಾರವನ್ನು ಏಕೆ ಇಟ್ಟುಕೊಳ್ಳಬೇಕು? ನೇರವಾಗಿಯೇ ಹೋಗಿ ಅವರಲ್ಲಿ ವಿನಂತಿಯನ್ನು ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪತ್ರ ಬರೆದು ಅವರಿಗೆ ಮಾಂಸಾಹಾರಿ ಅಡುಗೆಯನ್ನು ಹೇಗೆ ಮಾಡಬೇಕೆಂದು ನಿರ್ದೇಶನ ನೀಡುವುದು ಉಚಿತವಲ್ಲ ಎಂದು ತಿಳಿಸಿದ್ದಾರೆ. ಇನ್ನು ಕೆಲವರು ಮಾಂಸದಡುಗೆಯ ರುಚಿಯೇ ಬೇರೆ ಎಂದು ಕೊಂಡಾಡಿದ್ದು ಹುರಿದ ನೀರುಳ್ಳಿ ಹಾಗೂ ಮಸಾಲೆಯ ಸುವಾಸನೆ ಬಾಯಲ್ಲಿ ನೀರೂರುವಂತೆ ಮಾಡುತ್ತಿದೆ ಎಂದು ವಿವರಿಸಿದ್ದಾರೆ. ಇನ್ನು ಕೆಲವರು ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

    First published: