Viral Video: ಜೆಸಿಬಿ- ಮಹೀಂದ್ರಾ ಬೊಲೆರೊ ನಡುವೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ಯುವಕ

ಈ ಘಟನೆ ಕೇರಳದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಜುಲೈ 25 ರಂದು ಈ ಅಪಘಾತ ಸಂಭವಿಸಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

news18-kannada
Updated:August 2, 2020, 7:49 PM IST
Viral Video: ಜೆಸಿಬಿ- ಮಹೀಂದ್ರಾ ಬೊಲೆರೊ ನಡುವೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ಯುವಕ
ಜೆಸಿಬಿ-ಬೊಲೊರೊ ನಡುವೆ ನಡೆಯುವ ಅಪಘಾತದ ದೃಶ್ಯ
  • Share this:
ಕೆಲವೊಮ್ಮೆ ಅದೃಷ್ಟ ನಮ್ಮ ಕೈ ಹಿಡಿಯುತ್ತದೆ ಎಂಬುದಕ್ಕೆ ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಹೌದು. ಇದೊಂದು ಭೀಕರ ಅಪಘಾತದ ದೃಶ್ಯ. ಅತ್ತಕಡೆಯಿಂದ ಬರುತ್ತಿದ್ದ ಜೆಸಿಬಿ. ಇತ್ತ ಕಡೆಯಿಂದ ಬರುತ್ತಿದ್ದ ಮಹೀಂದ್ರಾ ಬೊಲೆರೊ ವಾಹನದ ನಡುವೆ ನಡೆಯುವ ಅಪಘಾತ. ಅದೃಷ್ಟವೆಂದರೆ ಅಪಘಾತದಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂಬುದೇ ವಿಶೇಷ.

ಈ ಘಟನೆ ಕೇರಳದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಜುಲೈ 25 ರಂದು ಈ ಅಪಘಾತ ಸಂಭವಿಸಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಎಡಗಡೆಯಿದ ಬರುತ್ತಿದ್ದ ಜೆಸಿಬಿ ಸವಾರ ತಕ್ಷಣವೇ ಬಲಗಡೆಗೆ ತಿರುಗಿಸುತ್ತಾನೆ. ಅತ್ತ ಎದುರಿನಿಂದ ವೇಗದಲ್ಲಿ ಬರುತ್ತಿದ್ದ ಬೊಲೊರೊ ವಾಹನ ನಿಯಂತ್ರಿಸಲಾಗದೆ ಜೆಸಿಬಿಗೆ ಡಿಕ್ಕಿ ಹೊಡೆಯುತ್ತದೆ. ಆದರೆ ಅಚ್ಚರಿಯೆಂದರೆ. ಇವೆರಡು ವಾಹನಗಳ ಅಪಘಾತದ ನಡೆಯುವ ವೇಳೆ ವ್ಯಕ್ತಿಯೊಬ್ಬ ರಸ್ತೆಯ ಬದಿಯಲ್ಲಿ ಬೈಕ್​ ಮೇಲೆ ಕುಳಿತು ಕೊಂಡು ಇರುತ್ತಾನೆ.  ಜೆಸಿಬಿಯ ಹೊಡೆತಕ್ಕೆ ಬೊಲೆರೊ ಎಗರಿ ಬೈಕ್​ ಸವಾರನಿಗೆ ಗುದ್ದುತ್ತದೆ.

ಆದರೆ ಅದೃಷ್ಟವೆಂದರೆ ಬೈಕ್​ ಸವಾರ ಕೆಲವೇ ಇಂಚಿನಿಂದ ಅಪಘಾತದಿಂದ ಪಾರಾಗುತ್ತಾನೆ. ಕುಳಿತಿದ್ದ ಬೈಕ್​ ಮಾರು ದೂರ ಹೋಗಿ ಬೀಳುತ್ತದೆ. ಅಪಘಾತ ಶಬ್ಧಕ್ಕೆ ಅಲ್ಲಿನ ಸ್ಥಳೀಯರು ಓಡಿ ಬರುತ್ತಾರೆ.
ಸದ್ಯ ಸಾಮಾಜಿಕ ಜಾಲತಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಅನೇಕರು ಈ ವಿಡಿಯೋ ನೋಡಿ ಅಚ್ಚರಿಯ ಕಾಮೆಂಟ್​ ಬರೆದಿದ್ದಾರೆ. ಕೆಲವರು ಮಹೀಂದ್ರಾ ಬೊಲೆರೊ ಗಟ್ಟಿಯಾದ ವಾಹನವೆಂದು ಬರೆದರೆ. ಇನ್ನು ಕೆಲವರು ಆನಂದ್​ ಮಹೀಂದ್ರಾ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಮತ್ತೊಬ್ಬರು ಅಪಘಾತದಿಂದ ಪಾರಾದ ವ್ಯಕ್ತಿಯನ್ನು ಅದೃಷ್ಟ ವ್ಯಕ್ತಿ ಎಂದು ಹೇಳಿದ್ದಾರೆ.
Published by: Harshith AS
First published: August 2, 2020, 7:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading