Vaccine: ಬೆಲ್ಜಿಯಂನಲ್ಲಿ ನಾಲ್ಕನೇ ಡೋಸ್​ ಲಸಿಕೆ ನೀಡಲು ಮುಂದಾದ ಸರ್ಕಾರ

ಕೋವಿಡ್19 ಲಸಿಕೆಗಳು ಹಾಗೂ ಓಮೈಕ್ರಾನ್ ವೇಗವಾಗಿ ಹರಡದಂತೆ ತಡೆಗಟ್ಟಲು ಸರಕಾರ ವಿಧಿಸಿರುವ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ

  • Share this:

ವೈರಸ್ ವಿರುದ್ಧ ದುರ್ಬಲ ರೋಗನಿರೋಧಕ (Weak Immunity) ಶಕ್ತಿ ಹೊಂದಿರುವ ಜನರ ಸುರಕ್ಷತೆಗಾಗಿ ಬೆಲ್ಜಿಯಂನ ಆರೋಗ್ಯ(Ministry of Health) ಸಚಿವಾಲಯವು ಕೊರೋನಾ ವೈರಸ್‌ (Coronavirus Vaccine) ಲಸಿಕೆಯ ನಾಲ್ಕನೇ ಡೋಸ್ ಅನ್ನು ಬಳಸುವ ಶಿಫಾರಸಿಗೆ ಅನುಮೋದನೆ ನೀಡಿದೆ. ಫೆಡರಲ್ ಸರಕಾರದ ಸಾರ್ವಜನಿಕ ಆರೋಗ್ಯ ಸಚಿವರಾದ ಕ್ರಿಸ್ಟಿ ಮೊರೆಲ್ ಹಾಗೂ ಪ್ರಾದೇಶಿಕ ಅಧಿಕಾರಿಗಳು ದೇಶದ ಆರೋಗ್ಯ ಮಂಡಳಿಯ ಶಿಫಾರಸನ್ನು(Recommendation) ಅಂಗೀಕರಿಸಿದ್ದಾರೆ ಎಂಬುದಾಗಿ ತಿಳಿಸಿದ್ದು ಲಸಿಕೆ ಯೋಜನೆಯನ್ನು ಯಾವಾಗ ಆರಂಭಿಸಲಾಗುತ್ತದೆ ಎಂಬ ಮಾಹಿತಿಯನ್ನು ಮೊರೆಲ್ ನೀಡಿಲ್ಲ.


ಬೆಲ್ಜಿಯಂ ಸ್ಥಿತಿ ಹೇಗಿದೆ..?


ಬೆಲ್ಜಿಯಂನ 77%ನಲ್ಲಿ ಸರಿಸುಮಾರು 11.5 ಮಿಲಿಯನ್ ಜನರು ಇದೀಗ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡಿದ್ದು 6.3 ಮಿಲಿಯನ್ ಬೆಲ್ಜಿಯನ್ನರು ಬೂಸ್ಟರ್ ಡೋಸ್ ಅನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಆರೋಗ್ಯ ಅಧಿಕಾರಿಗಳ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಸೋಮವಾರದವರೆಗೆ ಆಸ್ಪತ್ರೆಯಲ್ಲಿ 2,851 ಕೋವಿಡ್-19 ರೋಗಿಗಳು ದಾಖಲಾಗಿದ್ದು 364 ಜನರು ಒಳಗೊಂಡಂತೆ ತೀವ್ರ ನಿಗಾ ಘಟಕದಲ್ಲಿದ್ದಾರೆ. ಸಾಂಕ್ರಾಮಿಕದ ಆರಂಭದಿಂದ ಬೆಲ್ಜಿಯಂನಲ್ಲಿ ಕನಿಷ್ಟ ಪಕ್ಷ 28,800 ಜನರು ಕೋವಿಡ್-19 ನಿಂದ ಮೃತರಾಗಿದ್ದಾರೆ.


ಕೋವಿಡ್ ಕಠಿಣ ನಿಯಮಗಳ ವಿರುದ್ಧ ಪ್ರತಿಭಟನೆ:


ಕೋವಿಡ್-19 ಲಸಿಕೆಗಳು ಹಾಗೂ ಓಮೈಕ್ರಾನ್ ವೇಗವಾಗಿ ಹರಡದಂತೆ ತಡೆಗಟ್ಟಲು ಸರಕಾರ ವಿಧಿಸಿರುವ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಚದುರಿಸಲು ಪೊಲೀಸರು ನೀರಿನ ಫಿರಂಗಿ ಹಾಗೂ ಟಿಯರ್ ಗ್ಯಾಸ್ ಅನ್ನು ರಾಜಧಾನಿ ಬ್ರುಸೆಲ್ಸ್‌ನಲ್ಲಿ ಹಾಯಿಸಿದ್ದಾರೆ.


ಪೊಲೀಸರು ಅಂದಾಜಿಸಿರುವಂತೆ ಧರಣಿಯಲ್ಲಿ ಸುಮಾರು 50,000 ಜನರಿದ್ದು, ಫ್ರಾನ್ಸ್, ಜರ್ಮನಿ ಹಾಗೂ ಇತರ ದೇಶಗಳಿಂದ ಧರಣಿಯಲ್ಲಿ ಭಾಗವಹಿಸಲು ಪ್ರತಿಭಟನಾಕಾರರು ಆಗಮಿಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರು ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಿದ್ದರು ಹಾಗೂ ಕೆಲವರು ನಡಿಗೆಯ ಮೂಲಕ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೆ, ಇನ್ನು ಕೆಲವರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.


ಇದನ್ನೂ ಓದಿ: Covid 19: ಮನೆಯಲ್ಲಿದ್ದುಕೊಂಡೆ ಕೊರೊನಾ ಓಡಿಸ್ತೀವಿ, ಆಸ್ಪತ್ರೆವಾಸ ಬೇಡ ಅಂತಿದ್ದಾರೆ ಬೆಂಗಳೂರಿಗರು!


ಯುರೋಪಿಯನ್ ಒಕ್ಕೂಟದ ರಾಜತಾಂತ್ರಿಕ ಸೇವೆಯು ಬಳಸುವ ಕಟ್ಟಡದ ಮೇಲೆ ಕಪ್ಪು ಬಟ್ಟೆ ಧರಿಸಿದ ಪ್ರತಿಭಟನಾಕಾರರು ದಾಳಿ ಮಾಡುವುದನ್ನು ಹಾಗೂ ಕಟ್ಟಡದ ಪ್ರವೇಶ ದ್ವಾರದಲ್ಲಿ ಸ್ಫೋಟಕಗಳನ್ನು ಎಸೆಯುವುದು ಹಾಗೂ ಕಿಟಕಿಗಳನ್ನು ಒಡೆದು ಹಾಕಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.


ಸಾರ್ವಜನಿಕ ಶಾಂತಿ ಭಂಗಪಡಿಸಿದ್ದಕ್ಕಾಗಿ ಪೊಲೀಸರಿಂದ ಬಂಧನ:


ಸಾರ್ವಜನಿಕ ಶಾಂತಿ ಭಂಗಗೊಳಿಸಿದ್ದಕ್ಕಾಗಿ ಹಾಗೂ ಸುವ್ಯವಸ್ಥೆಯನ್ನು ಹಾಳುಗೆಡವಿದ್ದಕ್ಕಾಗಿ ಪೊಲೀಸರು ಭಾನುವಾರ 228 ಜನರನ್ನು ಬಂಧಿಸಲಾಗಿದೆ ಎಂದು ಬ್ರಸೆಲ್ಸ್ ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ, ಕಾನೂನು ಜಾರಿ ವಿರುದ್ಧ ನಡೆಸಿದ ದಂಗೆ ಹಾಗೂ ಹಾನಿಯ ಆರೋಪದ ಮೇಲೆ 11 ಜನರನ್ನು ಬಂಧಿಸಲಾಗಿದೆ.


ಪ್ರತಿಭಟನೆಯಲ್ಲಿ ಮೂವರು ಅಧಿಕಾರಿಗಳು ಹಾಗೂ 12 ಪ್ರತಿಭಟನಾಕಾರರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ವರದಿ ದೊರಕಿದೆ.ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಸಮಾಜದ ಭದ್ರ ಅಡಿಪಾಯಗಳಲ್ಲಿ ಒಂದಾಗಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Explained: ಕೋವಿಡ್ ಸಂದರ್ಭದ ಸಂಜೀವಿನಿ‌ Dolo650 ವಿಶೇಷತೆ ಏನು? ಡೀಟೆಲ್ಸ್


ಆದರೆ ಸಮಾಜವು ವಿವೇಚನಾರಹಿತ ಹಿಂಸಾಚಾರವನ್ನು ಎಂದಿಗೂ ಸ್ವೀಕರಿಸುವುದಿಲ್ಲ ಹಾಗೂ ಇದರಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಬೆಲ್ಜಿಯಂನ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

top videos


    ಕೋವಿಡ್ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪ್ರತಿಭಟಿಸಿ ಬೆಲ್ಜಿಯಂ ರಾಜಧಾನಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಹಿಂಸಾಚಾರಕ್ಕೂ ಕಾರಣವಾಗುತ್ತಿದೆ. ವರ್ಲ್ಡ್ ವೈಡ್ ಡೆಮಾನ್‌ಸ್ಟ್ರೇಷನ್ ಫಾರ್ ಫ್ರೀಡಮ್ ಮತ್ತು ಯುರೋಪಿಯನ್ಸ್ ಯುನೈಟೆಡ್ ಫಾರ್ ಫ್ರೀಡಮ್ ಸೇರಿದಂತೆ ಸಂಘಟಕರು ಇತರ ಯುರೋಪಿಯನ್ ಯೂನಿಯನ್ ರಾಜ್ಯಗಳಿಂದ ಜನರು ಬರಲು ಕರೆ ನೀಡಿದ್ದಾರೆ ಎನ್ನಲಾಗಿದ್ದು ಪೋಲೆಂಡ್, ನೆದರ್‌ಲ್ಯಾಂಡ್ಸ್‌, ಫ್ರಾನ್ಸ್ ಮತ್ತು ರೊಮೇನಿಯಾದ ಧ್ವಜಗಳು ಗುಂಪಿನಲ್ಲಿ ಕಂಡುಬಂದಿವೆ.

    First published: