ಪ್ರೇಮಿಗಳ ದಿನವು (Valentine's Day) ಪ್ರೀತಿಸಿದವರಿಗೆ ತಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಪ್ರೀತಿಯನ್ನು ಸಂಭ್ರಮಿಸಲು ಇರುವಂಥ ಒಂದು ವಿಶೇಷ ದಿನವಾಗಿದೆ. ಹೃದಯಕ್ಕೆ ಹತ್ತಿರವಾದವರ ಜೊತೆ ಸಮಯ ಕಳೆಯಲು ಇದೊಂದು ಅವಕಾಶ. ಆಸ್ಟ್ರೇಲಿಯಾ, ವೆನಿಸ್‌ನ ಆಕರ್ಷಕ ಕಾಲುವೆಗಳಿಂದ ಹಿಡಿದು ಬಾಲಿಯ ಪ್ರಾಚೀನ ಕಡಲತೀರಗಳವರೆಗೆ ಪ್ರಪಂಚದಲ್ಲಿ ಅನೇಕಾನೇಕ ಸುಂದರವಾದ ಮತ್ತು ರೋಮ್ಯಾಂಟಿಕ್ ಸ್ಥಳಗಳಿವೆ. ನಿಮ್ಮ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸ್ಪೂರ್ತಿ ನೀಡುವಂಥ ರೊಮ್ಯಾಂಟಿಕ್ ಜಾಗಗಳನ್ನು (Romantic Place) ನೋಡುತ್ತಿದ್ದರೆ ಪ್ರಪಂಚದ ಈ ಸ್ಥಳಗಳು ಪರಿಪೂರ್ಣವಾದವುಗಳಾಗಿವೆ.
1. ಪ್ಯಾರಿಸ್, ಫ್ರಾನ್ಸ್: "ಸಿಟಿ ಆಫ್ ಲವ್" ಎಂದು ಕರೆಯಲ್ಪಡುವ ಪ್ಯಾರಿಸ್, ರೊಮ್ಯಾನ್ಸ್‌ಗೆ ಹೇಳಿ ಮಾಡಿಸಿದ ತಾಣವಾಗಿದೆ. ಸೀನ್ ನದಿಯ ಉದ್ದಕ್ಕೂ ಕ್ಯಾಂಡಲ್ ಲೈಟ್ ಡಿನ್ನರ್‌ಗಳಿಂದ ಹಿಡಿದು ಟ್ಯುಲೆರೀಸ್‌ನ ಸುಂದರವಾದ ಉದ್ಯಾನವನಗಳ ಮೂಲಕ ಅಡ್ಡಾಡುವವರೆಗೆ ಪ್ಯಾರಿಸ್‌ನಲ್ಲಿ ಪ್ರೇಮಿಗಳು ಸಂಭ್ರಮಿಸಬಹುದು.
ಅಲ್ಲದೇ ಐಕಾನಿಕ್ ಚಾಂಪ್ಸ್-ಎಲಿಸೀಸ್ ಉದ್ದಕ್ಕೂ ಸ್ವಲ್ಪ ದೂರ ಅಡ್ಡಾಡಿ ಸಮಯ ಕಳೆಯಬಹುದು. ಅಲ್ಲದೇ ಐಫೆಲ್ ಟವರ್‌ನ ಮೇಲ್ಭಾಗಕ್ಕೆ ಭೇಟಿ ನೀಡಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ವಿಶೇಷ ದಿನವನ್ನು ಕಳೆಯಬಹುದು.
2. ವೆನಿಸ್, ಇಟಲಿ: ಕಾಲುವೆಗಳ ಮೇಲೆ ನಿರ್ಮಿಸಲಾದ ಮತ್ತು ನೀರಿನಿಂದ ಆವೃತವಾಗಿರುವ ಈ ಸುಂದರ ನಗರವು ಅನೇಕ ಜೋಡಿಗಳ ಕನಸಿನ ತಾಣವಾಗಿದೆ. ವೆನಿಸ್‌ನ ಮೋಡಿ ಮಾಡುವಂಥದ್ದು. ಇದರ ಸಾಟಿಯಿಲ್ಲದ ಸೌಂದರ್ಯವನ್ನು ಹೊಗಳಿದಷ್ಟೂ ಸಾಲದು. ಅಲ್ಲಿನ ಸುಂದರವಾದ ಕಾಲುವೆಗಳು ಹಾಗೂ ಆಕರ್ಷಕ ಸ್ಥಳಗಳಿಂದಾಗಿ ಇಲ್ಲಿ ನೀವು ಅದ್ಭುತವಾಗಿ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸಬಹುದು.
3. ರೋಮ್, ಇಟಲಿ: ಪ್ರೇಮಿಗಳ ದಿನದ ಆಚರಣೆಗೆ ರೋಮ್ ಒಂದು ಪರಿಪೂರ್ಣ ತಾಣವಾಗಿದೆ. ಈ ಎಟರ್ನಲ್ ಸಿಟಿಯು ರೋಮ್ಯಾಂಟಿಕ್ ಗೆಟ್ ಅವೇಗಾಗಿ ಹುಡುಕುತ್ತಿರುವ ಜೋಡಿಗಳಿಗೆ ಬೆಸ್ಟ್ ಸ್ಥಳವಾಗಿದೆ.
ಇದನ್ನೂ ಓದಿ: ಈ ದೇಶದಲ್ಲಿ ರೆಡ್ ಇಂಕ್ ಬಳಸೋದು ತುಂಬಾ ಡೇಂಜರ್! ಸತ್ಯ ಕೇಳಿದರೆ ಬೆಚ್ಚಿ ಬೀಳುತ್ತೀರಿ!
ಶ್ರೀಮಂತ ಇತಿಹಾಸ, ಸುಂದರವಾದ ವಾಸ್ತುಶಿಲ್ಪದಿಂದ ಹಿಡಿದು ಆಕರ್ಷಕ ಕೆಫೆಗಳು ಮತ್ತು ರುಚಿಕರವಾದ ತಿನಿಸುಗಳವರೆಗೆ ನೀವು ವಿಶೇಷವಾದ ಅನುಭವ ಪಡೆಯಬಹುದು.
ಇಲ್ಲಿನ ವಿಲ್ಲಾ ಬೋರ್ಗೀಸ್‌ನ ಸುಂದರವಾದ ಉದ್ಯಾನವನಗಳ ಮೂಲಕ ಓಡಾಡಿ, ಜಾನಿಕ್ಯುಲಮ್ ಬೆಟ್ಟದ ಮೇಲಿನ ಅದ್ಭುತ ದೃಶ್ಯವನ್ಯು ನೋಡಬಹುದು.
4. ಸ್ಯಾಂಟೊರಿನಿ, ಗ್ರೀಸ್: ಇಲ್ಲಿನ ಸಾಂಪ್ರದಾಯಿಕ ಬಿಳಿ ಕಟ್ಟಡಗಳು, ಪ್ರಾಚೀನ ಕಡಲತೀರಗಳು ಮತ್ತು ಬೆರಗುಗೊಳಿಸುವ ಸೂರ್ಯಾಸ್ತಗಳೊಂದಿಗೆ, ಸ್ಯಾಂಟೊರಿನಿ ಒಂದು ಪ್ರಣಯ ತಾಣವಾಗಿದೆ.
ಬಂಡೆಯ ಪಕ್ಕದ ಹಳ್ಳಿಗಳ ಉದ್ದಕ್ಕೂ ರೋಮ್ಯಾಂಟಿಕ್ ವಾಕಿಂಗ್ ಮತ್ತು ಏಜಿಯನ್ ಸಮುದ್ರದ ನೋಟದೊಂದಿಗೆ ರುಚಿಕರವಾದ ಗ್ರೀಕ್ ಊಟವನ್ನು ಆನಂದಿಸಬಹುದು. ಅಕ್ರೋಟಿರಿಯ ಪುರಾತನ ಅವಶೇಷಗಳಿಗೆ ಭೇಟಿ ನೀಡಬಹುದು. ಅಲ್ದೇ ವಿಶ್ರಾಂತಿಗಾಗಿ ದೋಣಿ ವಿಹಾರ ಮಾಡಬಹುದು.
5. ಬಾಲಿ, ಇಂಡೋನೇಷ್ಯಾ: ವಿಹಾರಕ್ಕಾಗಿ ಅತ್ಯದ್ಭುತ ತಾಣವನ್ನು ಹುಡುಕುತ್ತಿರುವ ಜೋಡಿಗಳಿಗೆ ಬಾಲಿ ಪರ್ಫೆಕ್ಟ್ ತಾಣವಾಗಿದೆ. ಇಲ್ಲಿ ನೀವು ಒಟ್ಟಿಗೆ ಯೋಗ ತರಗತಿಯನ್ನು ತೆಗೆದುಕೊಳ್ಳಬಹುದು.
ರಮಣೀಯವಾದ ತಾಣಗಳಲ್ಲಿ ರೊಮ್ಯಾಂಟಿಕ್ ವಾಕ್ ಮಾಡಬಹುದು. ಸಮುದ್ರ ತೀರದಿಂದ ಸೂರ್ಯಾಸ್ತವನ್ನು ವೀಕ್ಷಿಸಬಹುದು. ಅಲ್ಲದೇ ಸುಂದರವಾದ ಉಲುವಾಟು ದೇವಾಲಯಕ್ಕೆ ಭೇಟಿ ನೀಡಬಹುದು.
6. ಕ್ಯೋಟೋ, ಜಪಾನ್: ಈ ಸುಂದರವಾದ ನಗರವು ಮಧ್ಯಕಾಲೀನ ದೇವಾಲಯಗಳು ಮತ್ತು ಅತ್ಯದ್ಭುತ ಉದ್ಯಾನವನಗಳಿಗೆ ಹೆಸರಾಗಿದೆ. ಹೆಚ್ಚು ವಿಶ್ರಾಂತಿ ಮತ್ತು ಸುಸಂಸ್ಕೃತ ವಾತಾವರಣವನ್ನು ಗೌರವಿಸುವ ಜೋಡಿಗಳಿಗೆ ಇದೊಂದು ರೋಮ್ಯಾಂಟಿಕ್ ಗೆಟ್‌ವೇ ಆಗಿದೆ.
ಇಲ್ಲಿ ಭವ್ಯವಾದ ಬಿದಿರು ತೋಪಿನ ಮೂಲಕ ಸುತ್ತಾಡಬಹುದು. ಸುಪ್ರಸಿದ್ಧ ಫುಶಿಮಿ ಇನಾರಿ ದೇಗುಲಕ್ಕೆ ಭೇಟಿ ನೀಡಬಹುದು. ಸಾಂಪ್ರದಾಯಿಕ ಜಪಾನೀಸ್ ಆನ್‌ಸೆನ್‌ನಲ್ಲಿ ವಿಶ್ರಾಂತಿ ಪಡೆಯಬಹುದು. ಜೊತೆಗೆ ಸಾಂಪ್ರದಾಯಿಕ ಕ್ಯೋಟೋ ರೆಸ್ಟೋರೆಂಟ್‌ನಲ್ಲಿ ವಿಶೇಷ ಭೋಜನ ಮಾಡಬಹುದು.
7. ಬಾರ್ಸಿಲೋನಾ, ಸ್ಪೇನ್: ವಿಶಿಷ್ಟವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಈ ರೋಮಾಂಚಕ ನಗರವು ಕಲೆ ಮತ್ತು ಸಂಸ್ಕೃತಿಯನ್ನು ಮೆಚ್ಚುವ ಕಪಲ್‌ಗಳಿಗೆ ಪರ್ಫೆಕ್ಟ್ ತಾಣವಾಗಿದೆ.
ಗೋಥಿಕ್ ಕ್ವಾರ್ಟರ್‌ನ ಸುಂದರವಾದ ಬೀದಿಗಳಲ್ಲಿ ಓಡಾಡಬಹುದು. ಐಕಾನಿಕ್ ಪಾರ್ಕ್ ಗುಯೆಲ್ ಮತ್ತು ಸಗ್ರಾಡಾ ಫ್ಯಾಮಿಲಿಯಾ ಸೇರಿದಂತೆ ಆಂಟೋನಿ ಗೌಡಿಯ ಅದ್ಭುತ ಕೃತಿಗಳನ್ನು ಕಣ್ತುಂಬಿಕೊಳ್ಳಬಹುದು.
ಕಲಾವಿದರ ಪ್ರಸಿದ್ಧ ಕೃತಿಗಳನ್ನು ನೋಡಲು ಪಿಕಾಸೊ ಮ್ಯೂಸಿಯಂಗೆ ಭೇಟಿ ನೀಡಬಹುದು. ಸ್ಥಳೀಯ ತಪಸ್ ಬಾರ್‌ನಲ್ಲಿ ರೊಮಾಂಟಿಕ್ ಭೋಜನವನ್ನು ಆನಂದಿಸಿ, ಕಡಲತೀರದಿಂದ ಸೂರ್ಯಾಸ್ತದ ಸೌಂದರ್ಯವನ್ನು ಸವಿಯಬಹುದು.
8. ವಿಯೆನ್ನಾ, ಆಸ್ಟ್ರಿಯಾ: ಉತ್ತಮವಾದ ಭೋಜನ ಮತ್ತು ಶಾಸ್ತ್ರೀಯ ಸಂಗೀತವನ್ನು ಆನಂದಿಸುವ ಜೋಡಿಗಳಿಗೆ ಈ ಸೊಗಸಾದ ನಗರವು ಪರಿಪೂರ್ಣವಾಗಿದೆ.
ಇದು ಅದ್ಭುತ ವಾಸ್ತುಶಿಲ್ಪ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ನಗರದ ಹಲವಾರು ಶಾಸ್ತ್ರೀಯ ಸಂಗೀತದ ಸ್ಥಳಗಳಲ್ಲಿ ಸಂಗೀತ ಕಚೇರಿಯನ್ನು ಆನಂದಿಸಬಹುದು.
ಸ್ಕೋನ್‌ಬ್ರನ್ ಅರಮನೆಯ ಸುಂದರವಾದ ಉದ್ಯಾನವನಗಳ ಸುತ್ತಲೂ ಓಡಾಡಬಹುದು. ಪ್ರಸಿದ್ಧ ವಿಯೆನ್ನಾ ಒಪೇರಾ ಹೌಸ್‌ಗೆ ಭೇಟಿ ನೀಡಿ ಸಮಯ ಕಳೆಯಬಹುದು. ಪ್ರಸಿದ್ಧ ಕಾಫಿಹೌಸ್‌ಗಳಲ್ಲಿ ಹೊಸ ರುಚಿಯನ್ನು ಆಸ್ವಾದಿಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ