Marriage: ವಿದೇಶಿ ಜೋಡಿಯ ಭಾರತೀಯ ಪ್ರೀತಿ, ಹಿಂದೂ ಸಂಪ್ರದಾಯದಂತೆ ಗುಜರಾತಿನಲ್ಲಿ ಮದುವೆಯಾದ ವಿದೇಶಿ ಜೋಡಿ

Couples: ಹತ್ತು ಹಲವಾರು ದೇಶಗಳನ್ನು ತನ್ನ ಜೀವನದಲ್ಲಿ ಸುತ್ತಿರುವ ಮುಲ್ಲರ್ ಭಾರತದ ಬಗ್ಗೆ ವಿಶೇಷ ಭಾವನೆಯನ್ನು ಇಟ್ಟುಕೊಂಡಿದ್ದಾರೆ.. ಪಾಶ್ಚಿಮಾತ್ಯ ವಿವಾಹಗಳು ಕೇವಲ ಬೌದ್ಧಿಕವಾಗಿ ನಡೆಯುತ್ತವೆ.. ಆದರೆ ಭಾರತದಲ್ಲಿ ಹಾಗಲ್ಲ ಇಲ್ಲಿ ನನಗೆ ನನ್ನ ಮನೆ ಕಂಡುಕೊಂಡಷ್ಟೇ ಸಂತಸವಾಗಿದೆ ಎಂದು ಭಾರತದ ಬಗ್ಗೆ ಮುಲ್ಲರ್ ತಮ್ಮ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ.

ಮುಲ್ಲರ್ ಹಾಗೂ ಜೂಲಿಯ

ಮುಲ್ಲರ್ ಹಾಗೂ ಜೂಲಿಯ

 • Share this:
  ಪ್ರೀತಿ (Love) ಪ್ರೇಮಿಗಳು (Lovers) ಪ್ರಪಂಚದ (World) ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಒಂದು ಮಾಡುತ್ತದೆ.. ಪ್ರೀತಿ ಹುಟ್ಟಲು ಹಣ (Money) ಸಂಪತ್ತು ಅಧಿಕಾರ ಬೇಕೆಂದಿಲ್ಲ.. ಒಮ್ಮೆ ಒಬ್ಬರ ಮೇಲೆ ಪ್ರೀತಿಯ ಭಾವನೆ (Feelings) ಮೂಡಿದರೆ ಅವರನ್ನ ಪಡೆದುಕೊಳ್ಳಲು ಏನು ಬೇಕಾದರೂ ಮಾಡಲು ಸಹ, ಏನನ್ನು ಬೇಕಾದರೂ ಕಳೆದುಕೊಳ್ಳಲು ಸಹ ಜನರು ಸಿದ್ಧರಾಗಿರುತ್ತಾರೆ.. ಹೀಗಾಗಿಯೇ ಗಡಿ (Border) ಭಾಷೆ (Language), ನೆಲವನ್ನು ಮೀರಿ ಪ್ರೇಮ ಬೆಳೆದು ನಿಂತಿದೆ ಎಂಬುದಕ್ಕೆ ಹಲವಾರು ವಿಶಿಷ್ಟ ರೀತಿಯ ಮದುವೆಗಳು ಸಾಕ್ಷಿಯಾಗಿವೆ.. ಯಾವುದೋ ದೇಶದ ವರ ಇನ್ಯಾವುದೋ ದೇಶದ ವಧುವನ್ನ ಮದುವೆಯಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಅದೇ ರೀತಿ ಇಲ್ಲೊಬ್ಬ ಪ್ರೇಮಿ ಐಷಾರಾಮಿ ಜೀವನ ನಡೆಸುತ್ತಿದ್ದು ಉದ್ಯಮ ಉದ್ಯೋಗದಲ್ಲಿದ್ದು, ಕೇವಲ ತಾನು ಪ್ರೀತಿಸುತ್ತಿದ್ದ ಗಳಿಗಾಗಿ ದೇಶಬಿಟ್ಟು ದೇಶಕ್ಕೆ ಬಂದು ಭಾರತೀಯ ಸಂಸ್ಕೃತಿಯಂತೆ ಮದುವೆಯಾಗಿ ಎಲ್ಲರ ಮನಗೆದ್ದಿದ್ದಾರೆ..

  ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಭಾರತಕ್ಕೆ ಬಂದ ಪ್ರೇಮಿಗಳು.

  ಜರ್ಮನಿಯಲ್ಲಿ (Germany) ಐಷಾರಾಮಿ ಜೀವನ ನಡೆಸುತ್ತಿದ್ದ ಕ್ರಿಸ್ ಮುಲ್ಲರ್ ಗೆ ಆಧ್ಯಾತ್ಮಿಕದಲ್ಲಿ ಒಲವು ಮೂಡಿ ಅವರ ಬಗ್ಗೆ ತಿಳಿದುಕೊಳ್ಳಲು ದೇಶಗಳನ್ನು ಸುತ್ತಲು ತೊಡಗಿದರು. ಹೀಗೆ ಆಧ್ಯಾತ್ಮಿಕದ ಪ್ರಯಾಣದಲ್ಲಿ ಯೋಗದಲ್ಲಿ ಪರಿಣಿತರಾಗಿರುವ ರಷ್ಯಾದ ಶಾಲಾ ಶಿಕ್ಷಕಿ ಜೂಲಿಯಾ ಉಖ್ವಾಕಟಿನಾ ಅವರನ್ನು ಭೇಟಿಯಾಗಿ ಪ್ರೀತಿಯಲ್ಲಿ ಬೀಳುತ್ತಾರೆ.. ಹೇಗೆ ಈ ಜೋಡಿಗಳು ಇಬ್ಬರೂ ವಿಯೆಟ್ನಾಂನಲ್ಲಿ ಓಡಿಹೋಗಿ ತಮ್ಮ ಬದುಕು ಕಟ್ಟಿಕೊಳ್ಳಲು ನಿರ್ಧಾರ ಮಾಡುತ್ತಾರೆ.. ಆದರೆ ತಮ್ಮ ಮದುವೆ ಪಕ್ಕಾ ಭಾರತೀಯ ಸಂಸ್ಕೃತಿಯಲ್ಲಿ ನಡೆಯಬೇಕು ಎನ್ನುವ ಕಾರಣಕ್ಕೆ ಮುಲ್ಲರ್ ಹಾಗೂ ಜೂಲಿಯ ಜೋಡಿ ಭಾರತಕ್ಕೆ ಬಂದು ಪಕ್ಕಾ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

  ಇದನ್ನೂ ಓದಿ: ಮಗಳಿಗಾಗಿ ಮೊಬೈಲ್ ಖರೀದಿಸಿ ಮೆರವಣಿಗೆಯಲ್ಲಿ ಗ್ರಾಮಕ್ಕೆ ತಂದ ಚಾಯ್‌ವಾಲಾ

  ಗುಜರಾತ್ ನಲ್ಲಿ ನಡೆದ ವಿದೇಶಿ ಜೋಡಿಯ ಹಿಂದೂ ವಿವಾಹ

  2019 ರಿಂದಲೂ ಭಾರತದ ಮೇಲೆ ವಿಶೇಷ ಅಭಿಮಾನ ಪ್ರೀತಿ ಹಾಗೂ ಗೌರವ ಹೊಂದಿರುವ ಮುಲ್ಲರ್ ಹಾಗೂ ಜೂಲಿಯ ಜೋಡಿ ಭಾರತವನ್ನು ಆಧ್ಯಾತ್ಮಿಕ ನೆಲೆಯಾದವರು ಎಂದು ಗೌರವಿಸುತ್ತಾ ಬಂದಿದ್ದಾರೆ.. ಅದೇ ಭಾರತವನ್ನು ತಮ್ಮ ಸ್ವಂತ ಮನೆ ಎನ್ನುವಂತೆ ಭಾವನೆ ವ್ಯಕ್ತಪಡಿಸುವ ಈ ಜೋಡಿ, ಗುಜರಾತಿನ ಹಿಮ್ಮತ್ ನಗರದ ಸರೋಡಿಯದಲ್ಲಿ ಅಲ್ಲಿನ ಗ್ರಾಮಸ್ಥರ ಸಮ್ಮುಖದಲ್ಲಿ ವೈದಿಕ ಸಂಪ್ರದಾಯ ಹಾಗೂ ಹಿಂದೂ ಧರ್ಮದ ಪದ್ಧತಿಯಂತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

  ಭಾರತದ ಬಗ್ಗೆ ಮುಲ್ಲರ್ ಗೆ ಇದೆ ಅಪಾರ ಪ್ರೇಮ..  ಇನ್ನು 2019 ರಲ್ಲಿ ದಿವಂಗತ ಜ್ಞಾನಿ ಪುರುಷ ಕನುದಾದಾಜಿ ಅವರಿಂದ ದಾದಾ ಭಗವಾನ್ ಅವರ ಆಧ್ಯಾತ್ಮಿಕ ವಿಜ್ಞಾನವನ್ನು ಮುಲ್ಲರ್ ಹಾಗೂ ಜೂಲಿಯಾ ದಂಪತಿಗಳು ಕಲಿತುಕೊಂಡಿದ್ದರು.. ಅಲ್ಲದೆ ದಾದಾ ಭಗವಾನ್ ಅವರ ಅನುಯಾಯಿ ಲಾಲಾಭಾಯಿ ಪಟೇಲ್ ಅವರನ್ನು ತಮ್ಮ ಗುರುಗಳಾಗಿ ಸ್ವೀಕಾರ ಮಾಡಿದ ಮುಲ್ಲರ್ ಹಾಗೂ ಜೂಲಿಯಾ ದಂಪತಿ ಪರ ಸಮ್ಮುಖದಲ್ಲಿಯೇ ಮದುವೆಯಾಗಲು ತೀರ್ಮಾನ ಮಾಡಿ ಸರೋಡಿಯಾ ಗ್ರಾಮದಲ್ಲಿ ಭಾರತೀಯ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಶಾಸ್ತ್ರೋಕ್ತವಾಗಿ ನಡೆದ ಮದುವೆ

  ವಿದೇಶಿ ಪ್ರಜೆಗಳು ಭಾರತೀಯ ಸಂಪ್ರದಾಯದಂತೆ ಮದುವೆಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಕಾಟಾಚಾರ ವಾಗಿ ಮದುವೆ ಮಾಡದೆ, ಭಾರತೀಯ ಹಿಂದೂ ತಂಪತಿಗಳು ಹೇಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಅದೇ ರೀತಿ ಮುಲ್ಲರ್ ಹಾಗೂ ಜೂಲಿಯ ಅವರ ಮದುವೆಯನ್ನು ಮಾಡಲಾಗಿದೆ.. ಗುಜರಾತಿ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಗಣೇಶ ಪೂಜೆ, ಅರಿಶಿನ ಶಾಸ್ತ್ರ, ಸಪ್ತಪದಿ ಮತ್ತಿತರ ಆಚರಣೆಗಳು ಕೂಡ ನಡೆದಿವೆ.. ಅಲ್ಲದೇ ವಧು ಹಾಗೂ ವರ ಗುಜರಾತಿ ಗಾರ್ಬಾ ನೃತ್ಯ ಮಾಡಿ, ಮದುವೆಗೆ ಬಂದಿದ್ದ ಊರಿನ ಹಿರಿಯರ ಆಶೀರ್ವಾದ ಕೂಡ ಪಡೆದುಕೊಂಡಿದ್ದಾರೆ.

  ಇದನ್ನೂ ಓದಿ: ಮಗಳಿಗಾಗಿ ಮೊಬೈಲ್ ಖರೀದಿಸಿ ಮೆರವಣಿಗೆಯಲ್ಲಿ ಗ್ರಾಮಕ್ಕೆ ತಂದ ಚಾಯ್‌ವಾಲಾ

  ಸದ್ಯ ಆಧ್ಯಾತ್ಮಿಕತೆಯ ಜೊತೆಜೊತೆಗೆ ತಮ್ಮ ವೃತ್ತಿಜೀವನದಲ್ಲಿ ಯಶಸ್ವಿ ಕಾಣುತ್ತಿರುವ ಮುಲ್ಲರ್ ಸ್ಪಿರಾಶಿಯೊ ಯುಜಿ ಮತ್ತು ಇನ್ನರ್ ಲಿವಿಂಗ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಸಂಸ್ಥಾಪಕರಾಗಿದ್ದಾರೆ. ವ್ಯಕ್ತಿಯ ವೈಯಕ್ತಿಕ ಬೆಳವಣಿಗೆ ಹಾಗೂ ಆಂತರಿಕ ಅಭಿವೃದ್ಧಿ ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಮಾಲೋಚನೆಗಳನ್ನು ನೀಡುತ್ತಾ ಜನರಿಗೆ ಆಧ್ಯಾತ್ಮಿಕತೆಯನ್ನು ಬೋಧಿಸುತ್ತಾ ಬಂದಿದ್ದಾರೆ.
  Published by:ranjumbkgowda1 ranjumbkgowda1
  First published: