VIDEO: ಐಪಿಎಲ್​ ಪಂದ್ಯದ ವೇಳೆ ಮೊಳಗಿತು ಚೌಕಿದಾರ್ ಚೋರ್ ಹೈ ಘೋಷಣೆ..!

ರಫೇಲ್ ಹಗರಣದ ವಿಚಾರವಾಗಿ ಪ್ರಧಾನಿ ಮೋದಿ ಅವರೇ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲು ರಾಹುಲ್ ಗಾಂಧಿ  ಚೌಕಿದಾರ್ ಚೋರ್ ಹೈ ಎಂಬ ಪದ ಪ್ರಯೋಗ ಮಾಡಿದ್ದರು.

zahir | news18
Updated:March 26, 2019, 5:05 PM IST
VIDEO: ಐಪಿಎಲ್​ ಪಂದ್ಯದ ವೇಳೆ ಮೊಳಗಿತು ಚೌಕಿದಾರ್ ಚೋರ್ ಹೈ ಘೋಷಣೆ..!
@Business Standard
zahir | news18
Updated: March 26, 2019, 5:05 PM IST
ಜೈಪುರ: ಐಪಿಎಲ್​​ನಲ್ಲಿ ಮಾರ್ಚ್​ 26 ರಂದು ನಡೆದ ರಾಜಸ್ಥಾನ ಹಾಗೂ ಕಿಂಗ್ಸ್​ ಇಲೆವನ್​ ಪಂಜಾಬ್​ ತಂಡಗಳ ನಡುವಿನ ಜಿದ್ದಾ-ಜಿದ್ದಿ ಪಂದ್ಯದ ಎರಡು ವಿಡಿಯೋಗಳು ಭಾರೀ ವೈರಲ್ ಆಗಿದೆ. ಒಂದು ಆರ್. ಅಶ್ವಿನ್ ಮಾಡಿದ ಮನ್​ಕಡ್ ರನೌಟ್​ ವಿಡಿಯೋ. ಮತ್ತೊಂದು ಸ್ಟೇಡಿಯಂನಲ್ಲಿ ಮೊಳಗಿದ ಘೋಷಣೆಯ ವಿಡಿಯೋ ಆಗಿದೆ. ಇಲ್ಲಿ ಘೋಷಣೆ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ಅದರಲ್ಲಿ ಕೇಳಿಬಂದ ಘೋಷವಾಕ್ಯ.

ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕ್ರೀಡಾಂಗಣದ ಗ್ಯಾಲರಿಯಿಂದ 'ಚೌಕಿದಾರ್ ಚೋರ್ ಹೈ' ಎಂಬ ಘೋಷಣೆ ಕೂಗಲಾಯಿತು. ರಾಜಸ್ಥಾನ ಪರ ಜೈದೇವ್ ಉನದ್ಕಟ್ 18ನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಪ್ರೇಕ್ಷಕರ ಕಡೆಯಿಂದ 'ಚೌಕಿದಾರ್ ಚೋರ್ ಹೈ' ಎಂಬ ಘೋಷಣೆ ಕೇಳಿ ಬಂದಿದೆ.

ಈ ಘೋಷಣೆ ಮೊಳಗುತ್ತಿದ್ದಂತೆ ಉಳಿದ ಪ್ರೇಕ್ಷಕರು ಕೂಡ ಸಾಥ್ ನೀಡಿದ್ದಾರೆ. ಇದರಿಂದ ಮೈದಾನದೊಳಗೆ ಕೆಲವೊತ್ತು 'ಚೌಕಿದಾರ್ ಚೋರ್ ಹೈ' ಎಂಬ ಘೋಷವಾಕ್ಯ ಜೋರುಧ್ವನಿಯಲ್ಲಿ ಮೊಳಗಿತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.ಏನಿದು ಚೌಕಿದಾರ್ ಚೋರ್ ಹೈ?

ರಫೇಲ್ ಹಗರಣದ ವಿಚಾರವಾಗಿ ಪ್ರಧಾನಿ ಮೋದಿ ಅವರೇ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲು ರಾಹುಲ್ ಗಾಂಧಿ  'ಚೌಕಿದಾರ್ ಚೋರ್ ಹೈ' ಎಂಬ ಪದ ಪ್ರಯೋಗ ಮಾಡಿದ್ದರು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬರ್ಥದಲ್ಲಿ ರಾಹುಲ್ ಪ್ರಧಾನಿ ವಿರುದ್ಧ ಆರೋಪ ಮಾಡಿದ್ದರು. ಆದರೆ, ನರೇಂದ್ರ ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ರಾಹುಲ್ ಗಾಂಧಿ ಅವರ ಆರೋಪದ ವಿರುದ್ಧ ಪ್ರತಿತಂತ್ರ ರೂಪಿಸಿ 'ಮೈ ಭೀ ಚೌಕಿದಾರ್' ಅಭಿಯಾನ ಪ್ರಾರಂಭಿಸಿದ್ದರು. ಇದೀಗ ರಾಹುಲ್ ಗಾಂಧಿಯ ಈ ಘೋಷಣೆ ಸವಾಯ್ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ಮೊಳಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
First published:March 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...