(video)ಚೀನೀ ಹುಡುಗಿಯ ತಮಿಳು ಕೇಳಿ ದಂಗಾಗಬೇಡಿ!


Updated:July 31, 2018, 5:41 PM IST
(video)ಚೀನೀ ಹುಡುಗಿಯ ತಮಿಳು ಕೇಳಿ ದಂಗಾಗಬೇಡಿ!

Updated: July 31, 2018, 5:41 PM IST
ಭಾಷೆಗೆ ಜಾತಿ-ಧರ್ಮ, ಅಥವಾ ಪ್ರಾದೇಶಿಕತೆಯ ಹಂಗಿಲ್ಲ, ಆದರೆ ಭಾರತದಂತಹ ರಾಷ್ಟ್ರದಲ್ಲಿ 36 ಕಿ.ಮೀ ಅಂತರಲ್ಲಿ ಭಾಷೆ ಬದಲಾಗುತ್ತಲೇ ಇರುತ್ತದೆ, ಹೀಗಾಗಿ ನಮ್ಮ ಪ್ರಾದೇಶಿಕ ಭಾಷೆಯನ್ನು ಮಾತನಾಡಲೇ ಕಷ್ಟಪಡುವ ಈ ದಿನಗಳಲ್ಲಿ ಚೀನಾದ ಯುವತಿಯೊಬ್ಬಳು ಚೀನಾದ ಮಹಾಗೋಡೆಯ ಕುರಿತು ತಮಿಳಿನಲ್ಲೇ ವಿಶ್ಲೇಷಿಸಿರುವ ವಿಡಿಯೋ ವೈರಲ್​ ಆಗಿದೆ.

ಮಹೇಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್​ ಮಹೇಂದ್ರ ಸೋಮವಾರ (ಜು.30)ರಂದು ವಿಡಿಯೋ ವೊಂದನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಚೀನಾದ ಯುವತಿಯೊಬ್ಬಳು ಅಲ್ಲಿನ ಮಹಾಗೋಡೆ ಕುರಿತು ತಮಿಳು ಭಾಷೆಯಲ್ಲಿ ವಿಶ್ಲೇಷಿಸುತ್ತಿರುವುದು ಕಂಡು ಬಂದಿದೆ. ತಮಿಳು ಭಾಷೆಯನ್ನು ಕಲಿಯುವುದು ಅತ್ಯಂತ ಸುಲಭದ ಕೆಲಸವಲ್ಲ, ಆದರೆ ಈಕೆ ಮಾತನಾಡುವ ಶೈಲಿ ನೋಡಿದರೆ ತಮಿಳಿನ ಮಹಾಗೋಡೆಯನ್ನೇ ಕಬಳಿಸಿದಂತಿದೆ ಎಂದು ಆನಂದ್​ ಬರೆದುಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ



ತಮಿಳಿನ ಸಾಂಪ್ರಾದಾಯಿಕ ತೊಡುಗೆಯುಟ್ಟ ಯುವತಿ ವಿಡಿಯೋದ ಆರಂಭದಲ್ಲಿ ವಣಕ್ಕಂ (ನಮಸ್ಕಾರ)ದಿಂದಲೇ ಆರಂಭಿಸಿ ಮಹಾಗೋಡೆ ಕುರಿತು ವಿವರಿಸಲು ಆರಂಭಿಸಿದ್ದಾಳೆ. ಆಕೆ ಮಾತನಾಡುವ ಶೈಲಿ ಯಾವುದೇ ತಮಿಳಿಗರಿಗೂ ಕಡಿಮೆಯಿಲ್ಲ ಎಂಬಂತಿತ್ತು, ಕೆಲ ನೆಟ್ಟಿಗರು ಆಕೆ ಮಾತನಾಡುವ ಉಚ್ಚಾರಣೆಯಲ್ಲಿ ಲೋಪವನ್ನು ಎತ್ತಲು ಯತ್ನಿಸಿದರಾದರೂ ಯಾವುದೂ ಹೈಲೈಟ್ ಆಗಿಲ್ಲ.

ಚೀನಾದಲ್ಲಿ ತಮಿಳು ಭಾಷೆಯ ರೆಡಿಯೋವೊಂದು ಈ ಹಿಂದೆ ಫೇಮಸ್​ ಆಗಿತ್ತು, ಕಳೆದ 58 ವರ್ಷಗಳಿಂದ ಭಾರತ ಮತ್ತು ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಮಿಳಿನಲ್ಲೇ ರೆಡಿಯೋ ಸೇವೆಯನ್ನು ಚೀನಾ ರೇಡಿಯೊ ಇಂಟರ್​ನ್ಯಾಶನಲ್​ ನೀಡುತ್ತಿದೆ. ರೆಡಿಯೋ ಪಿಕಿಂಗ್​ ಎಂದೇ ಸಿಆರ್​ಐ ಫೇಮಸ್​ ಆಗಿದೆ. 1941ರಲ್ಲಿ ಈ ರೇಡಿಯೊ ಸ್ಟೇಷನ್​ ಆರಂಭಿಸಲಾಗಿತ್ತು.
First published:July 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ