ಒಂದೇ ತಿಂಗಳಿನಲ್ಲಿ 23 ಬಾರಿ ಮದುವೆ ಮತ್ತು ಡಿವೋರ್ಸ್; ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ..?

ಪನ್​ರೇ ಅದೇ ತಿಂಗಳಿನಲ್ಲಿ ನಾದಿನಿಯನ್ನು ಮದುವೆಯಾಗಿ ಡಿವೋರ್ಸ್​ ನೀಡಿದ್ದಾನೆ.

news18-kannada
Updated:September 27, 2019, 4:30 PM IST
ಒಂದೇ ತಿಂಗಳಿನಲ್ಲಿ 23 ಬಾರಿ ಮದುವೆ ಮತ್ತು ಡಿವೋರ್ಸ್; ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ..?
.
  • Share this:
ಇತ್ತಿಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಣ್ಣ ಪುಟ್ಟ ವಿಚಾರಗಳಿಗೆ ಗಂಡ-ಹೆಂಡತಿ ನಡುವೆ ಮನಸ್ತಾಪಗಳು ಬಂದು ವಿಚ್ಛೇದನ ಮೊರೆ ಹೋಗುತ್ತಾರೆ. ಆದರೆ, ಚೀನಾದಲ್ಲೊಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ 11 ಜನರು ಒಂದು ತಿಂಗಳಿನೊಳಗೆ 23 ಬಾರಿ ಮದುವೆಯಾಗಿ ಡಿವೋರ್ಸ್​ ನೀಡಿದ್ದಾರೆ.

ಚೀನಾದ ಬೀಚಿಂಗ್​​ನಲ್ಲಿ ವಾಸವಾಗಿರುವ ಕುಟುಂಬವೊಂದರ 11 ಜನರು ಆಪಾರ್ಟ್​ವೊಂದನ್ನು ಪಡೆಯಲು ಈ ರೀತಿಯ ಉಪಾಯವೊಂದನ್ನು ಮಾಡಿದ್ದಾರೆ. ಚೀನಾದ ಸರ್ಕಾರ ಅಲ್ಲಿನ ಜೇಜಿಯಾಂಗ್​ ಪ್ರದೇಶದಲ್ಲಿರುವ ಅಪಾರ್ಟ್​ಮೆಂಟ್​​​ವೊಂದನ್ನು ನೆಲಸಮ ಮಾಡಿತ್ತು. ಹಾಗಾಗಿ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸರ್ಕಾರ 40 (s.f)​ ​​​​ಸ್ವೈರ್​​ ಫೀಟಿನ ಅಪಾರ್ಟ್​ಮೆಂಟ್​ ನೀಡುವುದಾಗಿ ಹೇಳಿತ್ತು. ಇದನ್ನು ಪಡೆಯಲು ಕುಟುಂಬವೊಂದು 23 ಬಾರಿ ಮದುವೆಯಾಗಿ ಡಿವೋರ್ಸ್​ ನೀಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಕಡೆಗೂ ಸೀಟು ಹಂಚಿಕೆ ಕುರಿತು ಇತ್ಯರ್ಥ ಮಾಡಿಕೊಂಡ ಬಿಜೆಪಿ-ಶಿವಸೇನೆ

ಮದುವೆಯಾದ 11 ಜನರು  ಜೇಜಿಯಾಂಗ್​ ಪ್ರದೇಶದ ನಿವಾಸಿಗಳಾಗಿದ್ದು, ಪನ್​ರೇ ಎಂಬ ವ್ಯಕ್ತಿ ತನ್ನ ವಿಚ್ಛೇದಿತ ಪತ್ನಿ ಶ್ರೀಯನ್ನು ಮದುವೆಯಾಗಿದ್ದರು. ಈ ದಂಪತಿಗಳು 2011ರಲ್ಲಿ ಡಿವೋರ್ಸ್​ ಪಡೆದಿದ್ದರು. ಆದರೆ ಪನ್​ರೇ ಅವರು ಶ್ರೀಯನ್ನು ಮಾರ್ಚ್​ 6 ರಂದು ಮತ್ತೊಮ್ಮೆ ಮದುವೆಯಾಗಿದ್ದಾರೆ. ಮದುವೆಯಾದರೆ ಅಪಾರ್ಟ್​ಮೆಂಟ್​ ಆಕೆಯ ಹೆಸರಿಗೆ ಬರಬಹುದು ಎಂಬ ಕಾರಣಕ್ಕಾಗಿ ಮದುವೆಯಾಗಿದ್ದಾನೆ. ನಂತರ ಇಬ್ಬರು ವಿಚ್ಛೇದನ ತೆಗೆದುಕೊಂಡಿದ್ದಾರೆ.

ಪನ್​ರೇ ಅದೇ ತಿಂಗಳಿನಲ್ಲಿ ನಾದಿನಿಯನ್ನು ಮದುವೆಯಾಗಿ ಡಿವೋರ್ಸ್​ ನೀಡಿದ್ದಾರೆ. ಪನ್​ರೇ ತಂದೆ ಮಾತ್ರವಲ್ಲದೆ ಸಹೋದರ, ಸಹೋದರಿಯರು ಕೂಡ ಬೇರೆಯವರೊಂದಿಗೆ ಮದುವೆಯಾಗಿ ವಿಚ್ಛೇದನ ನೀಡಿದ್ದಾರೆ.   ಮಾಹಿತಿಯೊಂದರ ಮೇಲೆ ಆ ಕುಟುಂಬರ ಸಂಬಂಧಿಕರೆಲ್ಲರು ಸೇರಿದಂತೆ ಒಟ್ಟು 11 ಜನರು 23 ಬಾರಿ ಮದುವೆಯಾಗಿ ವಿಚ್ಛೇದನ ನೀಡಿದ್ದಾರೆ ಎಂದು ತಿಳಿದುಬಂದಿದೆ.

First published:September 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ