ಕಾರಿನೊಂದಿಗೇ ಮೃತದೇಹದ ಸಮಾಧಿ: ಕಾರಣ ತಿಳಿದ್ರೆ ಶಾಕ್ ಆಗ್ತೀರಾ!


Updated:June 4, 2018, 5:05 PM IST
ಕಾರಿನೊಂದಿಗೇ ಮೃತದೇಹದ ಸಮಾಧಿ: ಕಾರಣ ತಿಳಿದ್ರೆ ಶಾಕ್ ಆಗ್ತೀರಾ!

Updated: June 4, 2018, 5:05 PM IST
ನ್ಯೂಸ್ 18 ಕನ್ನಡ

ಬೀಜಿಂಗ್(ಜೂ.04): ಚೀನಾದಲ್ಲಿ ನಡದ ಘಟನೆಯೊಂದು ಎಲ್ಲರನ್ನೂ ದಂಗಾಗಿಸಿದೆ. ಸಾಮಾಜಿಕ ಜಾಲಾತತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರ ಹಿಂದಿನ ಕಥೆ ಕೇಳಿದ ಪ್ರತಿಯೊಬ್ಬರೂ ಬೆಚ್ಚಿ ಬಿದ್ದಿದ್ದಾರೆ. ತನ್ನನ್ನು ಶವ ಪೆಟ್ಟಿಗೆಯಲ್ಲಿ ಸಮಾಧಿ ಮಾಡುವ ಬದಲು, ತನ್ನ ನೆಚ್ಚಿನ ಕಾರಿನಲ್ಲಿ ಸಮಾಧಿ ಮಾಡಬೇಕೆಂಬುವುದು ಉತ್ತರ ಚೀನಾದ ಬಾವೋಂಡಿಯಾ ನಗರದ ವ್ಯಕ್ತಿಯೊಬ್ಬನ ಕೊನೆಯ ಇಚ್ಛೆಯಾಗಿತ್ತು. ಈ ಸ್ಪೆಷಲ್ ಬೇಡಿಕೆಯನ್ನು ಆತ ತನ್ನ ವಿಲ್​ನಲ್ಲಿ ಬರೆಸಿಕೊಂಡಿದ್ದ. ಕುಟುಂಬಸ್ಥರು ಆತನ ಆ ಬೇಡಿಕೆಯನ್ನು ಪೂರೈಸಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ನಲ್ಲಿ ಪ್ರಕಟವಾದ ವರದಿಯಲ್ಲಿ ಮೇ 28 ರಂದು ವ್ಯಕ್ತಿಯೊಬ್ಬನನ್ನು ಸಿಲ್ವರ್ ಹೂಂಡಾಯ್ ಸೊನಾಟಾದಲ್ಲಿ ಸಮಾಧಿ ಮಾಡಲಾಗಿದೆ. ಮಣ್ಣು ಮಾಡಲು ಕ್ರೇನ್​ ತರಿಸಿಕೊಂಡಿದ್ದು, ಕಾರಿನ ಸಮೇತ ಮೃತದೇಹವನ್ನು ಹೂಳಲಾಗಿದೆ. ಇನ್ನು ಸಮಾಧಿ ಮಾಡಲು ಮೂವರ ಸಹಾಯವನ್ನೂ ಪಡೆಯಲಾಗಿದೆ ಎನ್ನಲಾಗಿದೆ. ಅದೇ ಹಳ್ಳಿಯ ಯುವಕನೊಬ್ಬ ಈ ವಿಡಿಯೋ ಪಙಓಸ್ಟ್​ ಮಾಡಿ ಅವರಿಗೆ ತಮ್ಮ ಯೌವನದ ದಿನಗಳಿಂದಲೂ ಕಾರುಗಳ ಬಗ್ಗೆ ಬಹಳಷ್ಟು ಪ್ರೀತಿ ಇತ್ತು ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟ್​ಗೆ ಉತ್ತರಿಸಿರುವ ಮತ್ತೊಬ್ಬ ಯುವಕ ಅವರಿಗೆ ವಿಮಾನ ಇಷ್ಟವಿರಲಿಲ್ಲ ಎಂಬುವುದೇ ಪುಣ್ಯ ಎಂದಿದ್ದಾರೆ.
First published:June 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...