Whiskey: ಬರೋಬ್ಬರಿ 4 ಕೋಟಿ ಮೊತ್ತದ Japanese whiskey ಬಾಟಲಿ ಖರೀದಿ ಮಾಡಿದ ಚೀನಾದ ಭೂಪ..!

Whiskey: ಹೌಸ್ ಆಫ್ ಸಂಟೋರಿ ಇತಿಹಾಸದಲ್ಲಿ ಇದು ಅತ್ಯಂತ ಹಳೆಯ ಸಿಂಗಲ್ ಮಾಲ್ಟ್ ವಿಸ್ಕಿಯಾಗಿದೆ. ಇದು 1960ರ ದಶಕದ ಮೂರು ಅಸಾಧಾರಣ ಸಿಂಗಲ್ ಮಾಲ್ಟ್‌ಗಳಿಂದ ಕೂಡಿದ ಮಿಶ್ರಣವಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಜಪಾನೀಸ್(Japanese) ಸಿಂಗಲ್ ಮಾಲ್ಟ್ ವಿಸ್ಕಿಯ (Malt whiskey) ಈ ಅಪರೂಪದ ಬಾಟಲಿಯನ್ನು ಇಸ್ತಾನ್‌ಬುಲ್ ವಿಮಾನ (Istanbul Airport) ನಿಲ್ದಾಣದ ಸುಂಕ-ಮುಕ್ತ ಅಂಗಡಿಯಲ್ಲಿ € 488,000 ಗೆ ಮಾರಾಟ ಮಾಡಲಾಗಿದೆ. ಅಂದರೆ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಇದರ ಬೆಲೆ 4.14 ಕೋಟಿ ರೂ.ಗೆ ಸಮಾನವಾಗಿದೆ. ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಶನಲ್‌ನ ಮ್ಯಾಗಜೀನ್‌ನ ಏರ್‌ಪೋರ್ಟ್ ವರ್ಲ್ಡ್ ಪ್ರಕಾರ, 55 ವರ್ಷದ ಹಳೆಯ ಯಮಝಕೀ(Yamazaki) , ವಿಸ್ಕಿಯ ಅತ್ಯಂತ ಸೀಮಿತ ಆವೃತ್ತಿಯಾಗಿದ್ದು, ಯುನಿಫ್ರೀ ಡ್ಯೂಟಿ ಫ್ರೀ ಇದನ್ನು ಡಿಸೆಂಬರ್ 2021ರಿಂದ ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ ಮಾರಾಟ ಮಾಡುತ್ತಿದೆ.

ಇಸ್ತಾನ್‌ಬುಲ್ ವಿಮಾನ ನಿಲ್ದಾಣ

ಈ ಅಸಾಧಾರಣ ಮದ್ಯವು ಸೀಮಿತ ಎಡಿಷನ್ ಆಗಿರುವ ಕಾರಣದಿಂದಾಗಿಯೇ ಗ್ರಾಹಕರನ್ನು ಬಿಡ್ ಮಾಡಲು ಆಹ್ವಾನಿಸಲಾಯಿತು. ಒಟ್ಟು 8 ಗ್ರಾಹಕರು ಬಿಡ್‌ಗಳನ್ನು ಸಲ್ಲಿಸಿದ್ದು ಕೊನೆಗೆ ಚೀನಾದ ಗ್ರಾಹಕರೊಬ್ಬರು ಬಿಡ್ ಅನ್ನು ಗೆದ್ದರು. ಯುನಿಫ್ರೀ ಡ್ಯೂಟಿ ಫ್ರೀ ಸಿಇಒ ಅಲಿ ಎನ್ಹೆರ್, "ನಮ್ಮ ಅಂಗಡಿಯಲ್ಲಿ ಈ ದಾಖಲೆಯ ಮಾರಾಟ ಸಂಭವಿಸಿರುವುದು ನಮಗೆ ರೋಮಾಂಚಕ ವಿಷಯವಾಗಿದೆ" ಎಂದು ಹೇಳಿದರು. ವಿಮಾನ ನಿಲ್ದಾಣದ ರೀಟೇಲ್ ವ್ಯಾಪಾರದಲ್ಲಿ ಅದ್ಭುತ ಫಲಿತಾಂಶಗಳನ್ನು ಸಾಧಿಸಲು ವಿಶೇಷ ಉತ್ಪನ್ನಗಳು ಸಹಾಯ ಮಾಡುತ್ತವೆ ಎಂಬುದಕ್ಕೆ ಈ ಮಾರಾಟವೇ ಸಾಕ್ಷಿ .

ಏಕೆಂದರೆ ಇಸ್ತಾನ್‌ಬುಲ್ ವಿಮಾನ ನಿಲ್ದಾಣವು ವಿವೇಚನಾಶೀಲ ಅಂತಾರಾಷ್ಟ್ರೀಯ ಮಾರುಕಟ್ಟೆಯ ಗ್ರಾಹಕರಿಗೆ" ಯಮಝಕಿ, 55 ಇಯರ್ ಓಲ್ಡ್" ನಂತಹ ಅಪರೂಪದ ಶಾಂಪೇನ್‌ಗಳನ್ನು ನೀಡಲು ಸೂಕ್ತ ಸ್ಥಳವಾಗಿದೆ. ಎಲ್ಲವನ್ನೂ ಸಂಟೋರಿಯ ಸಂಸ್ಥಾಪಕ ಶಿಂಜಿರೋ ಟೋರಿಯ ಮೇಲ್ವಿಚಾರಣೆಯಲ್ಲಿ ಬಟ್ಟಿ ಇಳಿಸಲಾಗಿದೆ.

 ಇದನ್ನೂ ಓದಿ: ವಿಸ್ಕಿ ಫ್ಲೇವರ್ ಯಾವುದರ ಮೇಲೆ ಅವಲಂಬನೆ ಆಗಿರುತ್ತದೆ ಗೊತ್ತಾ?

ಹಳೆಯ ಸ್ಕಾಚ್ ವಿಸ್ಕಿ

ಅವರ ವೆಬ್‌ಸೈಟ್‌ನ ಪ್ರಕಾರ, ಸಂಟೋರಿಯ ಮುಖ್ಯ ಬ್ಲೆಂಡರ್, ಶಿಂಜಿ ಫುಕುಯೊ, ಈ ಮದ್ಯವನ್ನು ಈ ಕೆಳಗಿನಂತೆ ವಿವರಿಸುತ್ತಾರೆ: ”ಹಳೆಯ ಸ್ಕಾಚ್ ವಿಸ್ಕಿಗಳು ತಮ್ಮ ಉತ್ಕ್ರುಷ್ಟ ಗುಣಮಟ್ಟದೊಂದಿಗೆ ಪರಿಪೂರ್ಣ ಸೌಂದರ್ಯದ ಗ್ರೀಕ್ ಶಿಲ್ಪಗಳನ್ನು ನೆನಪಿಸುತ್ತವೆ. ಕಲಾಕೃತಿಯಂತೆ, ತಕ್ಷಣವೇ ಬೆರಗುಗೊಳಿಸುತ್ತವೆ. ಆದರೆ “ಯಮಜಾಕಿ 55, ಹಳೆಯ ಬೌದ್ಧ ಪ್ರತಿಮೆಯಂತೆ ನಿಗೂಢ ಮತ್ತು ಶಾಂತ. ಜಪಾನಿನ ಧೂಪದ್ರವ್ಯದ ಪರಿಮಳ ಮತ್ತು ಹಳೆಯ ಮರದ ನೆಲದ ಜೊತೆಗೆ, ನಾರಾದ ತೊಡೈಜಿ ದೇವಾಲಯದಂತೆ, ಅದರ ಆಂತರಿಕ ಸೌಂದರ್ಯವನ್ನು ಪ್ರಶಂಸಿಸಲು ಸಮಯ ತೆಗೆದುಕೊಳ್ಳುತ್ತದೆ.”

2021ರ ಬಿಡುಗಡೆಯ ಭಾಗವಾಗಿ, ಸಂಟೋರಿ ಪ್ರಪಂಚದ ಇತರ ಭಾಗಗಳಿಗೆ 100 ಬಾಟಲಿಗಳ ಮತ್ತೊಂದು ಸೀಮಿತ ಬ್ಯಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಯಲ್ಲಿನ ಹೆಚ್ಚಿನ ಪಾಲನ್ನು ಟರ್ಕಿಯ ಗೇಟ್‌ವೇಯಲ್ಲಿ ಯುನಿಫ್ರೀಯ ಜಂಟಿ ಉದ್ಯಮ ಪಾಲುದಾರರಾದ ಗೆಬ್ರ್ ಹೈನೆಮನ್ ಸೇರಿದಂತೆ ಪ್ರಮುಖ ಟ್ರಾವೆಲ್ ರಿಟೇಲ್ ಪಾಲುದಾರರಿಗೆ ಹಂಚಲಾಗಿದೆ .

ದುಬಾರಿ ಮದ್ಯದ ಬಾಟಲಿ

ವಿಶ್ವದ ಅತ್ಯಂತ ದುಬಾರಿ ಮದ್ಯದ ಬಾಟಲಿಗಳನ್ನು ಸಾಮಾನ್ಯವಾಗಿ ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ, ಆದಾಗ್ಯೂ ವಿಮಾನ ನಿಲ್ದಾಣಗಳು ಕೆಲವು ಪ್ರಮುಖ ಮಾರಾಟಗಳನ್ನು ಕಂಡಿವೆ. ದುಬೈ ವಿಮಾನ ನಿಲ್ದಾಣದಲ್ಲಿ 2018 ರಲ್ಲಿ $1.2 ಮಿಲಿಯನ್‌ಗೆ ಮಾರಾಟವಾದ ಮಕಲನ್ 1926 ಸ್ಕಾಚ್ ಬಾಟಲಿಗಳು ವಿಸ್ಕಿ ಬೂಮ್ ಅನ್ನು ಪ್ರಾರಂಭಿಸಿದವು. $2 ಮಿಲಿಯನ್‌ಗೆ ಮಾರಾಟವಾದ ಮತ್ತೊಂದು ಬಾಟಲಿಯು ಅತ್ಯಂತ ದುಬಾರಿ ಬಾಟಲಿಯ ಪ್ರಸ್ತುತ ದಾಖಲೆಯನ್ನು ಹೊಂದಿದೆ.

ಇದನ್ನೂ ಓದಿ: ಪ್ರತಿದಿನ ಒಂದು ಪಿಂಟ್ ಹೊಡೆಯಿರಿ.. ಹೃದಯಾಘಾತ ತಡೆಯಿರಿ..! ಆರೋಗ್ಯವಾಗಿರಿ..!!

ಆದರೆ, ಹೆಸರನ್ನು ಅನಾವರಣಗೊಳಿಸಲು ಇಚ್ಛೆಪಡದ ಚೈನೀಸ್ ಶಾಫರ್‌ ವಿಮಾನ ನಿಲ್ದಾಣದಲ್ಲಿ ವಿಂಡೋ ಶಾಪಿಂಗ್ ಮಾಡುವಾಗ ಈ ಖರೀದಿಯನ್ನು ಮಾಡಲಿಲ್ಲ. ಅಂಗಡಿಯಲ್ಲಿ ಪ್ರದರ್ಶನಕ್ಕಾಗಿ ಬಾಟಲಿಗಳನ್ನು ಇಟ್ಟಿದ್ದರೂ ಸಹ , ಬಿಡ್‌ಗಳನ್ನು ಆಹ್ವಾನಿಸಲಾಗಿತ್ತು. ಬಿಡ್‌ಗಳನ್ನು ಸಲ್ಲಿಸಿದ ಎಂಟು ಜನರಲ್ಲಿ ವಿಜೇತ ಬಿಡ್ $559,200 ರದ್ದಾಗಿತ್ತು ಎಂದು ತಿಳಿದುಬಂದಿದೆ.
Published by:vanithasanjevani vanithasanjevani
First published: