VIDEO: ಚೀನಾದ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಹೀಗೂ ಶಿಕ್ಷೆ ನೀಡುತ್ತೆ..!

ಈಗ ಮತ್ತೊಮ್ಮೆ ನೌಕರ ಘನತೆಗೆ ಕುಂದುಂಟು ಮಾಡುವ ರೀತಿಯಲ್ಲಿ ಕಂಪೆನಿ ವರ್ತಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

zahir | news18
Updated:January 20, 2019, 9:18 PM IST
VIDEO: ಚೀನಾದ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಹೀಗೂ ಶಿಕ್ಷೆ ನೀಡುತ್ತೆ..!
ಸಾಂದರ್ಭಿಕ ಚಿತ್ರ
zahir | news18
Updated: January 20, 2019, 9:18 PM IST
ಚೀನಾ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇದೀಗ ವಿಡಿಯೋವೊಂದು ವೈರಲ್​ ಆಗಿದೆ. ಚೀನಾದ ಕಂಪೆನಿಯೊಂದು ತಾನು ನೀಡಿದ ಟಾರ್ಗೆಟ್ ಅನ್ನು ಮುಟ್ಟಿಲ್ಲ ಎಂಬ ಕಾರಣಕ್ಕೆ ​ಉದ್ಯೋಗಿಗಳನ್ನು ಅಮಾನುಷವಾಗಿ ನಡೆಸಿಕೊಂಡಿದೆ.

ಇಯರ್ ಎಂಡ್​ ಟಾರ್ಗೆಟ್​(ವಾರ್ಷಿಕ ಗುರಿ) ರೀಚ್​ ಮಾಡದ ಉದ್ಯೋಗಿಗಳಿಗೆ ರಸ್ತೆಯಲ್ಲಿ ಅಂಬೆಗಾಲಿಟ್ಟು ನಡೆಯುವ ಶಿಕ್ಷೆಯನ್ನು ನೀಡಿದೆ. ಕಂಪೆನಿಯ ಧ್ವಜವನ್ನು ಹಿಡಿದಿರುವ ಉದ್ಯೋಗಿಯೊಬ್ಬರು ಹೆಣ್ಣು ಮಕ್ಕಳು ಸೇರಿದಂತೆ ತನ್ನ ಸಹೋದ್ಯೋಗಿಗಳನ್ನು ರಸ್ತೆಯಲ್ಲಿ ಅಂಬೆಗಾಲಿಡಿಸುತ್ತಾ ನಡೆಸಿದ್ದಾರೆ. ಈ ವೇಳೆ ಯಾರೋ ವಿಡಿಯೋ ಮಾಡಿ ಸಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ವಿಶ್ವದೆಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.


ಈ ವಿಡಿಯೋ ತುಣುಕು ವೈರಲ್​ ಆಗುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಉದ್ಯೋಗಿಗಳಿಗೆ ಈ ರೀತಿಯ ಶಿಕ್ಷೆಯನ್ನು ವಿಧಿಸಿ ನೌಕರರ ಆತ್ಮ ಗೌರವಕ್ಕೆ ಕುತ್ತು ತರುತ್ತಿದ್ದಾರೆ ಎಂದು ಹಲವರು ಕಂಪೆನಿ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಕೂಡ ಇಂತಹದ್ದೇ ಘಟನೆ ಚೀನಾದಲ್ಲಿ ನಡೆದಿದ್ದು, ಕಂಪೆನಿ ನೀಡಿದ ಟಾರ್ಗೆಟ್​ ತಲುಪದ ಉದ್ಯೋಗಿಗಳಿಗೆ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡುವ ವಿಡಿಯೋ ಹರಿಬಿಡಲಾಗಿತ್ತು.

ಅದೇ ರೀತಿ ಬ್ಯಾಂಕ್​ವೊಂದರ ಅಧಿಕಾರಿ, ತನ್ನ ಸಿಬ್ಬಂದಿಗಳು  ಟಾರ್ಗೆಟ್​ ತಲುಪಿಲ್ಲ ಎಂದು ಹೊಡೆದಿದ್ದರು. ವೇದಿಕೆ ಮೇಲೆ ನಿಲ್ಲಿಸಿ ಉದ್ಯೋಗಿಗಳಿಗೆ ಕೋಲಿನಿಂದ ಬಾರಿಸುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಈಗ ಮತ್ತೊಮ್ಮೆ ನೌಕರ ಘನತೆಗೆ ಕುಂದುಂಟು ಮಾಡುವ ರೀತಿಯಲ್ಲಿ ಕಂಪೆನಿ ವರ್ತಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಂಪೆನಿಯೊಂದು ನಡುರಸ್ತೆಯಲ್ಲೇ ಉದ್ಯೋಗಿಗಳಿಗೆ ಅಂಬೆಗಾಲು ನಡಿಗೆ ಶಿಕ್ಷೆ ವಿಧಿಸಿದೆ ಎಂಬ ದೂರ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಮಾನವೀಯ ನಡೆಯನ್ನು ತಡೆದಿದ್ದಾರೆ.
First published:January 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...