Birth Gift: "ಮೂರನೇ ಮಗು ಹುಟ್ಟಿಸಿಕೊಳ್ಳಿ, 11 ಲಕ್ಷ ರೂಪಾಯಿ ಬಹುಮಾನ ಪಡೆಯಿರಿ"! ದಂಪತಿಗೆ ಖಾಸಗಿ ಕಂಪನಿಯಿಂದ ಬಿಗ್ ಆಫರ್
‘ಮೂರನೇ ಮಗು’ (3rd Child) ಯೋಜನೆಯನ್ನು ಚೀನಾ ವ್ಯಾಪಕವಾಗಿ ಜಾರಿಗೆ ತರುತ್ತಿದೆ. ಮೂರನೇ ಮಗು ಪಡೆಯುವುದನ್ನು ಉತ್ತೇಜಿಸಲು ಸರ್ಕಾರವೇ (Government) ವಿವಿಧ ಯೋಜನೆ ತರುತ್ತಿದೆ. ಇದೀಗ ಮೂರನೇ ಮಗು ಪಡೆದರೆ ದಂಪತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಖಾಸಗಿ ಕಂಪನಿಯೊಂದು ಆಫರ್ (Offer) ಕೊಟ್ಟಿದೆ.
ಚೀನಾ: ‘ವಿಶ್ವದ ಅತ್ಯಂತ ಹೆಚ್ಚು ಜನರಿರುವ ದೇಶ ಯಾವುದು?’ ಎಂದರೆ ‘ಚೀನಾ’ (China) ಅಂತ ಎಲ್ಲರೂ ಹೇಳಬಹುದು. ಆದರೆ ಕೆಲವೇ ವರ್ಷಗಳಲ್ಲಿ ಈ ಉತ್ತರ (Answer) ತಪ್ಪಾಗಲಿದೆ. ಕಾರಣ ಚೀನಾದಲ್ಲಿ ಜನಸಂಖ್ಯೆ (Population) ಪ್ರಮಾಣ ಕುಸಿಯುತ್ತಾ ಇದೆಯಂತೆ. ಜನಸಂಖ್ಯಾ ಅಭಿವೃದ್ಧಿ ದರ (Population development rate) ಬಹುತೇಕ ಶೂನ್ಯಕ್ಕೆ (Zero) ತಲುಪಿದೆ. 2019ರಲ್ಲಿ ಇದ್ದ 140 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ ಅಂತ ಇತ್ತೀಚಿಗೆ ಬಿಡುಗಡೆ ಮಾಡಲಾದ 7ನೇ ರಾಷ್ಟ್ರೀಯ ಜನಗಣತಿ ವರದಿಯಲ್ಲಿ (National Census Report) ತಿಳಿಸಲಾಗಿದೆ. ಇದರಿಂದ ಚೀನಾದಲ್ಲಿ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ (Labor Problem) ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಿದೆ. ಹೀಗಾಗಿ ‘ಮೂರನೇ ಮಗು’ (3rd Child) ಯೋಜನೆಯನ್ನು ಚೀನಾ ವ್ಯಾಪಕವಾಗಿ ಜಾರಿಗೆ ತರುತ್ತಿದೆ. ಮೂರನೇ ಮಗು ಪಡೆಯುವುದನ್ನು ಉತ್ತೇಜಿಸಲು ಸರ್ಕಾರವೇ (Government) ವಿವಿಧ ಯೋಜನೆ ತರುತ್ತಿದೆ. ಇದೀಗ ಮೂರನೇ ಮಗು ಪಡೆದರೆ ದಂಪತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಖಾಸಗಿ ಕಂಪನಿಯೊಂದು ಆಫರ್ (Offer) ಕೊಟ್ಟಿದೆ.
ಮಕ್ಕಳ ಜನನ ಉತ್ತೇಜಿಸಲು ಚೀನಾ ಕ್ರಮ
ಜನಸಂಖ್ಯಾ ಬೆಳವಣಿಗೆ ದರ ಕುಸಿಯುತ್ತಿರುವುದರಿಂದ ಚೀನಾ ಕಂಗೆಟ್ಟಿದೆ. ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು 1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತರಲಾಗಿತ್ತು. ಆದರೆ ಜನಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಮೇ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು. ಇದೀಗ ಅದನ್ನು ಉತ್ತೇಚಿಸಲು ಸರ್ಕಾರವೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.
ಮೂರನೇ ಮಗು ಪಡೆದರೆ 11 ಲಕ್ಷ ಆಫರ್!
ಚೀನಾದ ದಂಪತಿ 3ನೇ ಮಗು ಪಡೆಯುವುದನ್ನು ಪ್ರೋತ್ಸಾಹಿಸಲು ಖಾಸಗಿ ಕಂಪನಿಯೊಂದು ಹೊಸ ಆಫರ್ ನೀಡಿದೆ. ಅದರ ಪ್ರಕಾರ ತಮ್ಮಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ ಭಾರೀ ಆಫರ್ ಪಡೆಯಬಹುದಾಗಿದೆ. ಬರೋಬ್ಬರಿ 90,000 ಯುವಾನ್ ನಗದು ಹಣ ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ 11 ಲಕ್ಷ ರೂಪಾಯಿಗಳ ಪ್ರೋತಾಹ ಧನ ನೀಡಲಾಗುತ್ತದೆ. ಚೀನಾದ ರಾಜಧಾನಿ ಬೀಜಿಂಗ್ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಸಂಸ್ಥೆ ಈ ಆಫರ್ ನೀಡುತ್ತಿದೆ.
11 ಲಕ್ಷ ಪ್ರೋತ್ಸಾಹ ಧನ ಅಷ್ಟೇ ಅಲ್ಲ, ಆಕರ್ಷಕ ರಜೆಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳು 3ನೇ ಮಗು ಪಡೆದರೆ ಒಂದು ವರ್ಷ ವೇತನ ಸಹಿತ ರಜೆ ನೀಡುತ್ತದೆ. ಇನ್ನು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ವೇತನ ಸಹಿತ ರಜೆಯನ್ನು ಕೂಡಾ ನೀಡುತ್ತಿದೆ.
ಇನ್ನು 3ನೇ ಮಗುವಷ್ಟೇ ಅಲ್ಲ, ತನ್ನ ಉದ್ಯೋಗಿಗಳು ಮೊದಲು ಹಾಗೂ 2ನೇ ಮಗುವನ್ನು ಪಡೆದರೂ ಸಹ ಅವರಿಗೆ ಆಕರ್ಷಕ ಗಿಫ್ಟ್ ನೀಡಲು ಈ ಕಂಪನಿ ಯೋಚಿಸಿದೆ. ಅದರ ಪ್ರಕಾರ ಎರಡನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳು 60,000 ಯುವಾನ್ ನಗದು ಹಣ, ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 7 ಲಕ್ಷ ರೂಪಾಯಿ ನೀಡಲಿದೆ. ಇನ್ನು ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದರೂ ಅವರಿಗೆ 30,000 ಯುವಾನ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 3.50 ಲಕ್ಷ ಪಡೆಯಲಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ