ಹೊಸ ವರ್ಷದ ಸಂಭ್ರಮ: ತನ್ನ ನೌಕರರಿಗೆ ಲಕ್ಷಗಟ್ಟಲೇ ಬೋನಸ್​ ನೀಡಿದ ಸ್ಟೀಲ್ ಕಂಪೆನಿ

ಕಳೆದ ವರ್ಷ ಕಂಪೆನಿಯೊಂದು ಗೇಮ್​ ಶೋ ಏರ್ಪಡಿಸಿ ಹಣ ಬಾಚಿಕೊಳ್ಳುವ ಸ್ಪರ್ಧೆಯನ್ನು ತನ್ನ ನೌಕರರಿಗೆ ನೀಡಿತ್ತು.

zahir | news18
Updated:January 23, 2019, 8:38 PM IST
ಹೊಸ ವರ್ಷದ ಸಂಭ್ರಮ: ತನ್ನ ನೌಕರರಿಗೆ ಲಕ್ಷಗಟ್ಟಲೇ ಬೋನಸ್​ ನೀಡಿದ ಸ್ಟೀಲ್ ಕಂಪೆನಿ
@Shanghaiist/chinanews.com
  • News18
  • Last Updated: January 23, 2019, 8:38 PM IST
  • Share this:
ಹೊಸ ವರ್ಷವನ್ನು ಸ್ವಾಗತಿಸಲು ಚೀನಾ ದೇಶ ಸಕಲ ತಯಾರಿಯಲ್ಲಿದೆ. ಚೀನಿಯರ ಕ್ಯಾಲೆಂಡರ್ ಪ್ರಕಾರ ಫೆಬ್ರವರಿ 5 ರಿಂದ ಹೊಸ ವರ್ಷ ಆರಂಭವಾಗಲಿದ್ದು, ಇದನ್ನು ಸ್ಪ್ರಿಂಗ್ ಫೆಸ್ಟಿವಲ್​ ಎಂದು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಹಲವು ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಇಯರ್​ ಎಂಡ್​ ಬೋನಸ್​ ಕೊಡಲು ತಯಾರಿಯಲ್ಲಿದೆ. ಅದರಲ್ಲೂ ಮುಖ್ಯವಾಗಿ ಜಿಯಾಂಕ್ಸಿ ಪ್ರಾಂತ್ಯದ ಸ್ಟೀಲ್ ಕಂಪೆನಿಯೊಂದು ನೌಕರರಿಗೆ ಬಂಪರ್​ ಬೋನಸ್​ ಘೋಷಿಸುವ ಮೂಲಕ ಸುದ್ದಿಯಾಗಿದೆ.

ಕಂಪೆನಿಯು ನೀಡಲಿರುವ ಬೋನಸ್​ ಹಣವನ್ನು ಗೋಪುರದ ರೀತಿಯಲ್ಲಿರಿಸಿ, ನೌಕರರಿಗೆ ಸಪ್ರೈಸ್​ ನೀಡಿತ್ತು. ಇದಕ್ಕಾಗಿ ಕಂಪೆನಿಯು 34 ಕೋಟಿ ರೂ. ಅನ್ನು ತೆಗೆದಿರಿಸಿದ್ದು, 5 ಸಾವಿರ ಉದ್ಯೋಗಿಗಳಿಗೆ ಈ ಹಣವನ್ನು ಹಂಚಿದ್ದಾರೆ. ಪ್ರತಿ ನೌಕರನಿಗೂ ಇಲ್ಲಿ 60 ಸಾವಿರ ಯುವಾನ್​ ನೀಡಲಾಗಿದೆ. ಅಂದರೆ  62 ಲಕ್ಷ ರೂ. ಪ್ರತಿ ಉದ್ಯೋಗಿಗೆ ನ್ಯೂ ಇಯರ್​ ಗಿಫ್ಟ್​ ಸಿಕ್ಕಿದೆ. ಭರ್ಜರಿ ಬೋನಸ್​ ಸಿಕ್ಕಿರುವ ಖುಷಿಯಲ್ಲಿರುವ ಸ್ಟೀಲ್​ ಕಂಪೆನಿಯ ಉದ್ಯೋಗಿಯೊಬ್ಬರು, ಇಷ್ಟೊಂದು ಹಣವನ್ನು ಹೇಗೆ ಖರ್ಚು ಮಾಡಲಿ ಎಂಬುದೇ ತಿಳಿಯುತ್ತಿಲ್ಲ ಎಂದು ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಗೆದ್ದರೆ ಹಳ್ಳಿಯನ್ನು ದತ್ತು ತೆಗೆದುಕೊಳ್ಳಲಿದ್ದಾರೆ ನವೀನ್​ ಸಜ್ಜು

ಚೀನಾದ ಕಂಪೆನಿಗಳು ವರ್ಷಾಂತ್ಯದಲ್ಲಿ ಉದ್ಯೋಗಿಗಳಿಗೆ ಬೋನಸ್​ ನೀಡುವುದು ಇದೇ ಮೊದಲಲ್ಲ. ಕಳೆದ ವರ್ಷ ಕಂಪೆನಿಯೊಂದು ಗೇಮ್​ ಶೋ ಏರ್ಪಡಿಸಿ ಹಣ ಬಾಚಿಕೊಳ್ಳುವ ಸ್ಪರ್ಧೆಯನ್ನು ತನ್ನ ನೌಕರರಿಗೆ ನೀಡಿತ್ತು. ಈ ಮೂಲಕ ನೌಕರರು ನಿರ್ದಿಷ್ಟ ಸಮಯದಲ್ಲಿ ತಮಗೆ ಬೇಕಾದಷ್ಟು ಬೋನಸ್​ ಹಣವನ್ನು  ಬಾಚಿಕೊಳ್ಳುವ ಅವಕಾಶ ಪಡೆದಿದ್ದರು.

ಇದನ್ನೂ ಓದಿ: ನೀವು ಎಟಿಎಂ ಕಾರ್ಡ್​ ಬಳಸುತ್ತೀರಾ? ಹಾಗಿದ್ರೆ ಇನ್ಮುಂದೆ ಈ ಪೌಚ್​ಗಳನ್ನು ಬಳಸಲೇಬೇಕು

First published:January 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ