ಮಂಗನಿಂದ ಮಾನವನಾದ (Monkey to Human) ಎಂಬ ಮಾತಿದೆ. ಹಲವಾರು ಶತಮಾನಗಳಿಂದ, ಮಾನವ ಹಾಗೂ ವಾನರ ಜಾತಿಗಳಲ್ಲಿನ ಹಲವು ಪ್ರಮುಖ ಹೋಲಿಕೆಗಳಿಂದಾಗಿ ಈ ಹೇಳಿಕೆ ಬರಲು ಕಾರಣವಾಗಿದೆ (Evolution) . ಮಾನವ ಆರಂಭದಲ್ಲಿ ಹೀಗಿರಲಿಲ್ಲ. ಆತ ಹಲವು ಅವಸ್ಥಾಂತರಗಳನ್ನು ಪಡೆದಿದ್ದಾನೆ ಎನ್ನುತ್ತದೆ ಮಾನವ ವಿಕಾಸ.
ಮಂಗನಂತೆ ಕೈ-ಕಾಲುಗಳನ್ನು ಬಳಸಿಕೊಂಡು ನಡೆಯುತ್ತಿದ್ದ ಮಾನವ ನಿಧಾನವಾಗಿ ತನ್ನ ಎರಡೂ ಕಾಲಿನ ಸಹಾಯದಿಂದ ನೇರವಾಗಿ ನಡೆಯಲು ಶುರು ಮಾಡಿದ ಎನ್ನಲಾಗಿದೆ. ಈಗ ಯಾರಾದರೂ ಸುಮ್ಮನೇ ತಮ್ಮ ಎರಡೂ ಕೈ, ಎರಡೂ ಕಾಲು ಬಳಸಿಕೊಂಡು ಬಗ್ಗಿ ನಡೆದರೇ, ಮೂಲವನ್ನೇ ಮರೆತು ನೀನೇನೂ ಒಳ್ಳೆ ಪ್ರಾಣಿಯಂತೆ ನಡೆಯುತ್ತೀಯಾ ಎನ್ನುತ್ತೇವೆ. ಮಗು ಕೂಡ ಮೊದಲು ಅಂಬೆಗಾಲಿಟ್ಟು ನಂತರ ಒಂದೊಂದೇ ಹೆಜ್ಜೆ ಇಡಲು ಪ್ರಾರಂಭಿಸಿ ನಡೆಯುವುದನ್ನು ಕಲಿಯುತ್ತದೆ. ಇಷ್ಟೇಲ್ಲಾ ಪೀಠಿಕೆ ಏಕೆಂದರೆ ಸದ್ಯ ಇದಕ್ಕೆ ಸಂಬಂಧಿಸಿದಂತೆ ಚೀನಾದಲ್ಲಿ ಟ್ರೆಂಡ್ ಒಂದು ಕಂಡುಬರುತ್ತಿದೆ. ಬನ್ನಿ, ಈ ಬಗ್ಗೆ ಇನ್ನಷ್ಟು ತಿಳಿಯೋಣ.
ಚೀನಾದಲ್ಲಿ ಹೊಸ ಪ್ರವೃತ್ತಿ
ನಮ್ಮ ಕೈ-ಕಾಲು ಬಳಸಿಕೊಂಡು ನಡೆಯುವುದು ಒಂದು ವಿಶಿಷ್ಟ ರೀತಿಯ ವ್ಯಾಯಾಮವಾಗಿದ್ದು, ಮಾನವ ವಿಕಾಸದ ಸಿದ್ಧಾಂತವನ್ನು ಪುನರ್ವಿಮರ್ಶಿಸಲು ಮತ್ತು ನಾವು ಚಿಕ್ಕವರಾಗಿದ್ದಾಗ ಅಂಬೆಗಾಲಿಟ್ಟ ಚಿತ್ರಣವನ್ನು ನೆನಪಿಸುತ್ತದೆ ಎನ್ನಬಹುದು. ಚೀನಾದಲ್ಲೂ ಈಗ ಈ ಪ್ರವೃತ್ತಿ ಕಂಡು ಬರುತ್ತಿದ್ದು, ಇದೇನಿದು ಚೀನಾದ ಹೊಸ ಅವತಾರ ಅಂತಾ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.
ಇದನ್ನೂ ಓದಿ: Lesson With Game: ತುಂಟ ಮಕ್ಕಳಿದ್ದರೆ ಹೀಗೆ ಆಟವಾಡುತ್ತಾ ಪಾಠ ಮಾಡಿ!
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ನಲ್ಲಿನ ವರದಿಯ ಪ್ರಕಾರ ಬೀಜಿಂಗ್ನಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಳೆದ ವಾರ ಆಟದ ಮೈದಾನದಲ್ಲಿ ವೃತ್ತವಾಗಿ ತಮ್ಮ ಕೈ-ಕಾಲು ಬಳಸಿಕೊಂಡು ಬಗ್ಗಿ ಪ್ರಾಣಿಗಳಂತೆ ನಡೆಯುತ್ತಿರುವ ಫೋಟೋಗಳು, ವೀಡೀಯೋಗಳು ವೈರಲ್ ಆಗಿವೆ. ಇದನ್ನು ಮಗು ಅಂಬೆಹರಿಯುವ ಪ್ರವೃತ್ತಿಗೂ ಹೋಲಿಕೆ ಮಾಡಬಹುದಾಗಿದೆ.
ವಿದ್ಯಾರ್ಥಿಗಳಿಂದ ಸಾಮೂಹಿಕ ಕ್ರಾವ್ಲಿಂಗ್
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮ ಎಲ್ಲಾ ಅಂಗಗಳನ್ನು ಬಳಸಿ ನಡೆಯುವುದನ್ನು ನೋಡಬಹುದು. ಇದನ್ನು ಚತುರ್ಭುಜ ಚಲನೆ ಎಂದೂ ಕರೆಯುತ್ತಾರೆ, ಇದು ಅವರನ್ನು ಪ್ರಾಣಿಗಳಂತೆ ನಡೆಯುವಂತೆ ಮಾಡುತ್ತದೆ. ಇದು ಕೇವಲ ಖುಷಿ ನೀಡುವುದು ಮಾತ್ರವಲ್ಲದೇ ಆರೋಗ್ಯಕರವೂ ಆಗಿತ್ತು ಎಂದು ಸುದ್ದಿವಾಹಿನಿ ವಿದ್ಯಾರ್ಥಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇತ್ತೀಚಿನ ವಾರಗಳಲ್ಲಿ ಚೀನಾದಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ ಈ "ಸಾಮೂಹಿಕ ಕ್ರಾವ್ಲಿಂಗ್" ಪುನರಾವರ್ತನೆಯಾಗಿದೆ, ಇದು ವಿದ್ಯಾರ್ಥಿಗಳಲ್ಲಿ ಎದ್ದ ಹಠಾತ್ ಪ್ರವೃತ್ತಿಯಾಗಿದೆ, ಇದು ಶಾಲಾ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Mosquito Bite: ಸೊಳ್ಳೆ ಕಚ್ಚಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ವ್ಯಕ್ತಿ ಕೋಮಾಗೆ ಹೋಗಿದ್ರಂತೆ!
ಚೀನಾದ ಒಂದು ಸಾಮಾಜಿಕ ಜಾಲತಾಣದಲ್ಲಿ #Xiaohongshu ಕ್ರಾಲಿಂಗ್ ಸ್ಪರ್ಧೆ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಇದನ್ನು ಪೋಸ್ಟ್ ಮಾಡಿದ್ದು, ವೀಡಿಯೋ ಇದುವರೆಗೆ 3.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಒತ್ತಡ ನಿವಾರಿಸಲು ಈ ಮಾರ್ಗ
ಲಾಕ್ಡೌನ್ಗಳ ಬೇಸರ, ಆನ್ಲೈನ್ ತರಗತಿಗಳು ಮತ್ತು ನಿರಂತರ ಕೊರೊನಾವೈರಸ್ ಪರೀಕ್ಷೆಗಳಿಗೆ ಸೀಮಿತಗೊಳಿಸಿದ ಸಾಂಕ್ರಾಮಿಕ ರೋಗದ ಸುಮಾರು ಮೂರು ವರ್ಷಗಳ ನಂತರ ಒತ್ತಡವನ್ನು ನಿವಾರಿಸಲು ಇದು ಕೇವಲ ಒಂದು ಮಾರ್ಗವಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ ಸದೃಢರಾಗಿ ಮತ್ತು ಆರೋಗ್ಯವಾಗಿರಲು ಈ ಪ್ರವೃತ್ತಿಯು ಸಹಾಯ ಮಾಡುತ್ತಿದೆ ಎಂದಿದ್ದಾರೆ ವಿದ್ಯಾರ್ಥಿಗಳು.
ಔಟ್ಲೆಟ್ ವರಿದ ಪ್ರಕಾರ, ಒಬ್ಬ ಬಳಕೆದಾರರು ತಮ್ಮ ಪೋಸ್ಟ್ನಲ್ಲಿ "ನನ್ನ ಎಲ್ಲಾ ಇಂಟರ್ನೆಟ್ ಸ್ನೇಹಿತರಿಂದ ಉತ್ತೇಜಿತನಾಗಿದ್ದೇನೆ, ನಾನು ಇಂದು ಈ ಕ್ರಾವ್ಲಿಂಗ್ ಅನ್ನು ಪ್ರಯತ್ನಿಸಿದೆ ಮತ್ತು ಏಳು ನಿಮಿಷಗಳ ಕಾಲ ಅಂಬೆಹರಿದೆ. ನನ್ನ ಈ ವ್ಯಾಯಾಮ ನೋಡಿ ನಮ್ಮ ಮನೆಯ ಬೆಕ್ಕು ಕೂಡ ಹೆದರಿರಬಹುದು" ಎಂದು ಬರೆದಿದ್ದಾರೆ.
ಚತುರ್ಭುಜ ಚಲನೆಯು ಪ್ರಯೋಜನ
"ಪ್ರೈಮಲ್ ಪ್ಲೇ" ಅಂಬೆ ಹರಿಯುವಂತೆ ಹೋಗುವುದು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಚತುರ್ಭುಜ ಚಲನೆಯು ದೇಹದ ಸಮತೋಲನ ಮತ್ತು ಚಟುವಟಿಕೆಯ ವ್ಯಾಪ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಎಲ್ಲಾ ನಾಲ್ಕು ಅಂಗಗಳ ಮೇಲೆ ವೇಗವಾಗಿ ಚಲಿಸುವ ಸಾಮರ್ಥ್ಯವು ಎರಡು ವಿಭಿನ್ನ ಚಲನೆಗಳ ನಡುವೆ ನಿಮ್ಮ ದೇಹವನ್ನು ಹೆಚ್ಚು ಕ್ರಿಯಾತ್ಮಕವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಈ ವೆಬ್ಸೈಟ್ ವಿವರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ