• Home
  • »
  • News
  • »
  • trend
  • »
  • Viral Video: ಪ್ರಚಾರಕ್ಕಾಗಿ ಈ ಬ್ಯಾಂಕ್ ಎಂಥ ಸ್ಪರ್ಧೆ ಏರ್ಪಡಿಸಿದೆ ನೋಡಿ, ನೆಟ್ಟಿಗರು ಫುಲ್ ಗರಂ!

Viral Video: ಪ್ರಚಾರಕ್ಕಾಗಿ ಈ ಬ್ಯಾಂಕ್ ಎಂಥ ಸ್ಪರ್ಧೆ ಏರ್ಪಡಿಸಿದೆ ನೋಡಿ, ನೆಟ್ಟಿಗರು ಫುಲ್ ಗರಂ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೀನಾದ ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಐದು ಸೆಕೆಂಡುಗಳಲ್ಲಿ ದೈತ್ಯವಾದ ರೋಲ್ ನಿಂದ ಟಿಶ್ಯೂವನ್ನು ಎಳೆಯಲು ಸಾಧ್ಯವಾದವರಿಗೆ ಆ ಟಿಶ್ಯೂ ರೋಲ್ ಅನ್ನು ಉಚಿತವಾಗಿ ನೀಡಿತು.

  • Share this:

ಈಗಂತೂ ಈ ದೊಡ್ಡ ದೊಡ್ಡ ಶಾಪಿಂಗ್ ಮಾಲ್ (Shopping Mall) ಗಳಲ್ಲಿರುವ ಬ್ರ್ಯಾಂಡೆಡ್ ಬಟ್ಟೆ (Branded Cloths) ಅಂಗಡಿಗಳು ಮತ್ತು ದೊಡ್ಡ ದೊಡ್ಡ ಅಂಗಡಿಗಳು ಹೆಚ್ಚು ಜನರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಏನೆಲ್ಲಾ ರಿಯಾಯಿತಿಗಳನ್ನು ನೀಡಲು ಮುಂದಾಗಿರುತ್ತಾರೆ ಅನ್ನೋದರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಕೆಲವೊಮ್ಮೆ ಈ ಅಂಗಡಿ (Shop_ ಯವರು ತಮ್ಮಲ್ಲಿ ಬರುವ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮಜಾ ಇರುವಂತಹ ಆಟಗಳನ್ನು ಸಹ ಆಡಿಸಿ, ಅದರಲ್ಲಿ ಗೆದ್ದವರಿಗೆ ಉಡುಗೊರೆ (Gift) ಯಾಗಿ ಗೃಹಪಯೋಗಿ ವಸ್ತುಗಳನ್ನು ನೀಡುವುದನ್ನು ಸಹ ನಾವು ನೋಡಿರುತ್ತೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಪ್ರಮೋಷನ್​ಗೋಸ್ಕರ ಹೀಗಾ ಮಾಡೋದು?


ಇದರ ರೀತಿಯಲ್ಲಿಯೇ ಈ ಬ್ಯಾಂಕ್ ಗಳು ಸಹ ತಮ್ಮ ಬ್ಯಾಂಕ್ ನತ್ತ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಲು ವಿವಿಧ ರೀತಿಯ ಸಾಲ ನೀಡುವುದು. ಅದನ್ನು ಬೇರೆ ಬ್ಯಾಂಕ್ ಗಳಿಗಿಂತಲೂ ಸ್ವಲ್ಪ ಕಡಿಮೆ ಬಡ್ಡಿದರದಲ್ಲಿ ನೀಡುವ ಅನೇಕ ರೀತಿಯ ಪ್ರಚಾರ ಕಾರ್ಯಗಳನ್ನು ಆಗಾಗ್ಗೆ ಮಾಡುತ್ತಲೇ ಇರುತ್ತವೆ ಅಂತ ಹೇಳಬಹುದು.


ಆದರೆ ಪ್ರಚಾರ ಕಾರ್ಯದ ಅಂಗವಾಗಿ ಜನರಿಗೆ ಟಾಸ್ಕ್ ನೀಡಿ ಅದರಲ್ಲಿ ಗೆದ್ದವರಿಗೆ ವಿಚಿತ್ರವಾದ ಉಡುಗೊರೆ ಕೊಡುತ್ತೇವೆ ಅಂತ ಘೋಷಿಸಿದ ಈ ಬ್ಯಾಂಕ್ ನ ಕಥೆ ಒಮ್ಮೆ ನೀವು ಕೇಳಲೆಬೇಕು.


ಎಂಥ ಸ್ಪರ್ಧೆಯನ್ನ ಏರ್ಪಡಿಸಿದೆ ನೋಡಿ!


ಚೀನಾದ ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಐದು ಸೆಕೆಂಡುಗಳಲ್ಲಿ ದೈತ್ಯವಾದ ರೋಲ್ ನಿಂದ ಟಿಶ್ಯೂವನ್ನು ಎಳೆಯಲು ಸಾಧ್ಯವಾದವರಿಗೆ ಆ ಟಿಶ್ಯೂ ರೋಲ್ ಅನ್ನು ಉಚಿತವಾಗಿ ನೀಡಿತು.


ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿರುವ ಈ ಬ್ಯಾಂಕ್ ತನ್ನ ವಿಲಕ್ಷಣ ಪ್ರಚಾರದ ಪ್ರಸ್ತಾಪಕ್ಕೆ ನೆಟ್ಟಿಗರಿಂದ ತೀವ್ರವಾದ ಟೀಕೆಗೆ ಗುರಿಯಾಗುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಪ್ರದೇಶದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಈ ಬ್ಯಾಂಕ್ ಈ ರೀತಿಯಾಗಿ ಮಾಡಿತ್ತು ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ: ನೋವಾಗದಂತೆ ಇಂಜೆಕ್ಷನ್ ಕೊಡೋ ಡಾಕ್ಟರ್ ಇವರು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ


ಟಿಶ್ಯೂ ಪೇಪರ್​ ಕೊಡ್ತೀನಿ ಎಂದ ಬ್ಯಾಂಕ್!


ಈ ಬ್ಯಾಂಕ್ ನೀಡಿದ ಪ್ರಚಾರದ ಪ್ರಸ್ತಾಪವು ದೊಡ್ಡ ಸಂಖ್ಯೆಯ ಹಿರಿಯ ನಾಗರಿಕರು, ವಿಶೇಷವಾಗಿ ವಯಸ್ಸಾದ ಮಹಿಳೆಯರನ್ನು ತನ್ನ ಕಡೆಗೆ ಸೆಳೆದಿದೆ. ಚೀನಾದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ವೀಬೊದಲ್ಲಿ, ಜನರು ಟಿಶ್ಯೂ ಪೇಪರ್ ಅನ್ನು ಹಿಡಿದು ಐದು ಸೆಕೆಂಡುಗಳ ಕಾಲಮಿತಿಯೊಳಗೆ ಅದನ್ನು ದೈತ್ಯವಾದ ರೋಲ್ ನಿಂದ ಎಳೆಯುವ ವೀಡಿಯೋವು ಸುಮಾರು 110 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಅಂತ ಹೇಳಲಾಗುತ್ತಿದೆ.


ಬ್ಯಾಂಕ್ ನ ಪ್ರಚಾರದ ಚಟುವಟಿಕೆಯನ್ನ ಟೀಕಿಸಿದ ನೆಟ್ಟಿಗರು!


ಆದಾಗ್ಯೂ, ಬ್ಯಾಂಕ್ ನ ಈ ಪ್ರಚಾರದ ಚಟುವಟಿಕೆಯನ್ನು ವಿಬೋದಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಪ್ರಚೋದಿಸಿತು. ಅದರಲ್ಲಿ ಕೆಲವರು ಅನಗತ್ಯ ತ್ಯಾಜ್ಯದಿಂದಾಗಿ ಕೋಪೋದ್ರಿಕ್ತ ಟೀಕೆಗಳನ್ನು ಹಾಕಿದರೆ, ಇನ್ನೂ ಕೆಲವರು ಈ ಪ್ರಸ್ತಾಪವು ಮಿತವ್ಯಯ ಮಾಡಲು ನೋಡುವ ಹಿರಿಯ ನಾಗರಿಕರ ಲಾಭವನ್ನು ಪಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


"ಉಚಿತ ವಸ್ತುಗಳನ್ನು ತೆಗೆದುಕೊಂಡು ಹೋಗುವ ಮತ್ತು ಇತರರ ವೆಚ್ಚದಲ್ಲಿ ಲಾಭ ಪಡೆಯುವ ಅಭ್ಯಾಸವನ್ನು ಬೆಳೆಸಿಕೊಂಡ ವೃದ್ಧರಿಗೆ ಇದು ಅವಮಾನಕರವಾಗಿದೆ" ಎಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಬಳಕೆದಾರರನ್ನು ಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.


ಇದನ್ನೂ ಓದಿ: ಯುಎಸ್​ನ ಇತಿಹಾಸದಲ್ಲಿಯೇ ಈ ಹುಡುಗ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಅಂತೆ!


"ಈ ಚಟುವಟಿಕೆಯಿಂದಾಗಿ ಅನೇಕ ಸಾರ್ವಜನಿಕ ಶೌಚಾಲಯಗಳಲ್ಲಿ ಟಿಶ್ಯೂ ಪೇಪರ್ ಗಳ ರೋಲ್ ಗಳನ್ನು ಹಾಕಿದ ಕೆಲವೇ ಕ್ಷಣದಲ್ಲಿ ವಯಸ್ಸಾದ ಜನರ ಕಾರಣದಿಂದಾಗಿ ಸ್ವಲ್ಪ ಸಮಯದ ನಂತರವೇ ಕಣ್ಮರೆಯಾಗುತ್ತಿವೆ" ಎಂದು ಇನ್ನೊಬ್ಬ ಕೋಪಗೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.


ಮೂರನೇ ಬಳಕೆದಾರರು "ಇದು ಟಿಶ್ಯೂ ಪೇಪರ್ ನ ವ್ಯರ್ಥವಲ್ಲವೇ? ಅವರು ಪಡೆಯುವ ಟಿಶ್ಯೂ ಪೇಪರ್ ತುಂಬಾನೇ ಕೊಳಕಾಗಿದೆ, ಅದು ಬಳಸಲು ಯೋಗ್ಯವಲ್ಲ" ಎಂದು ಹೇಳಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು