ಅಶ್ಲೀಲ ವಿಡಿಯೋ ಕುರಿತು ಮಾಹಿತಿ ನೀಡಿದ್ರೆ ಸಿಗುತ್ತೆ 62 ಲಕ್ಷ ರೂ..!

ಚೀನಾ ಸೈಬರ್​ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಸಿಎಸಿ) ಸೈಬರ್ ಸಂಸ್ಥೆ ಇತ್ತೀಚೆಗೆ ರಾಜಕೀಯ ವದಂತಿಗಳನ್ನು ಹರಡುತ್ತಿದ್ದ 9800 ಕ್ಕೂ ಅಧಿಕ ಸಾಮಾಜಿಕ ಖಾತೆಗಳನ್ನು ನಿಷ್ಕ್ರಿಯಗೊಳಿಸಿತ್ತು.

news18
Updated:November 18, 2018, 5:11 PM IST
ಅಶ್ಲೀಲ ವಿಡಿಯೋ ಕುರಿತು ಮಾಹಿತಿ ನೀಡಿದ್ರೆ ಸಿಗುತ್ತೆ 62 ಲಕ್ಷ ರೂ..!
.
  • Advertorial
  • Last Updated: November 18, 2018, 5:11 PM IST
  • Share this:
ವೆಬ್​ಸೈಟ್ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ಚೀನಾ ಸರ್ಕಾರ ಈಗ ಮತ್ತೊಂದು ಪ್ರಕಟಣೆಯನ್ನು ಹೊರಡಿಸಿದೆ. ಈ ಹಿಂದೆಯಿದ್ದ ಅಶ್ಲೀಲ ವಿಡಿಯೋ ಜಾಲತಾಣ ಮತ್ತು ಸರ್ಕಾರದ ವಿರುದ್ಧದ ಪ್ರಕಟಣೆ ಬಗ್ಗೆ ಮಾಹಿತಿ ಒದಗಿಸಿದರೆ ನೀಡುತ್ತಿದ್ದ ಬಹುಮಾನವನ್ನು ಮತ್ತಷ್ಟು ಹೆಚ್ಚಿಸಿರುವುದಾಗಿ ಸರ್ಕಾರ ತಿಳಿಸಿದೆ.

ಈ ಹಿಂದೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೆ ಚೀನಾ ಸರ್ಕಾರ 3 ಲಕ್ಷ ಯುವಾನ್( 31 ಲಕ್ಷ ರೂ) ಬಹುಮಾನವಾಗಿ ನೀಡುತ್ತಿದ್ದರು. ಆದರೆ ಡಿಸೆಂಬರ್ 1 ರಿಂದ ಈ ಮೊತ್ತವನ್ನು ದ್ವಿಗುಣಗೊಳಿಸುವುದಾಗಿ ತಿಳಿಸಿರುವ ಸರ್ಕಾರ, 6 ಲಕ್ಷ ಯುವಾನ್ (62 ಲಕ್ಷ ರೂ.) ಬಹುಮಾನ ಘೋಷಣೆ ಮಾಡಿದೆ.

ಇತ್ತೀಚೆಗಷ್ಟೇ ಚೀನಾದಲ್ಲಿ 4 ಸಾವಿರಕ್ಕೂ ಹೆಚ್ಚಿನ ಪೋರ್ನ್​ ವೆಬ್​ಸೈಟ್​ಗಳನ್ನು ಬ್ಯಾನ್ ಮಾಡಲಾಗಿದ್ದು, ಆದರೂ ಅಲ್ಲಲ್ಲಿ ಕೆಲ ವೆಬ್​ಸೈಟ್​ಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಅಲ್ಲದೆ ಸರ್ಕಾರ ವಿರುದ್ಧ ಮತ್ತು ದೇಶಕ್ಕೆ ಮಾರಕವಾಗುವಂತಹ ಪ್ರಕಟಣೆಗಳನ್ನು ಸಾಮಾಜಿಕ ಜಾಲತಾಣ, ವೆಬ್​ಸೈಟ್​ಗಳಲ್ಲಿ ಪ್ರಕಟಿಸಲಾಗುತ್ತಿದ್ದು ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಬಹುಮಾನದ ಆಫರ್​ಗಳನ್ನು ನೀಡಲಾಗಿದೆ ಎನ್ನಲಾಗಿದೆ.

ಚೀನಾ ಸೈಬರ್​ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಸಿಎಸಿ) ಸೈಬರ್ ಸಂಸ್ಥೆ ಇತ್ತೀಚೆಗೆ ರಾಜಕೀಯ ವದಂತಿಗಳನ್ನು ಹರಡುತ್ತಿದ್ದ 9800 ಕ್ಕೂ ಅಧಿಕ ಸಾಮಾಜಿಕ ಖಾತೆಗಳನ್ನು ನಿಷ್ಕ್ರಿಯಗೊಳಿಸಿತ್ತು. ಅಲ್ಲದೆ ದೇಶಕ್ಕೆ ಹಾನಿಯಾಗುವಂತಹ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಈ ಹಿಂದೆ WeChat ಮತ್ತು Weibo ಆ್ಯಪ್​ಗಳ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: ತೆರೆಯಲ್ಲಿ ನಗಿಸಿದ ಚಾಪ್ಲಿನ್ ಮರೆಯಲ್ಲಿ ಸೆಕ್ಸ್ ಮೆಷಿನ್..!

ದೇಶದ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿರುವ ಸಿಎಸಿ, 2012 ರಲ್ಲಿ ದೇಶದಲ್ಲಿ ನಕಲಿ ಹೆಸರಿನಲ್ಲಿ ಬ್ಲಾಗ್, ಚಾಟ್​ ಗ್ರೂಪ್, ಟ್ವಿಟರ್​ನಂತಹ ಖಾತೆಗಳನ್ನು ಹೊಂದುವುದು ಕಾನೂನು ಬಾಹಿರ ಎಂದು ಆದೇಶ ಹೊರಡಿಸಿತ್ತು. ಜನರ ಭದ್ರತೆ ಮತ್ತು ದೇಶದ ಹಿತಾಸಕ್ತಿಗಾಗಿ ಬಹುಮಾನದ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದೆ ಚೀನಾ ಸರ್ಕಾರ  ಹೇಳಿಕೊಂಡಿದೆ.

ಇದನ್ನೂ ಓದಿ: ವಿಶ್ವಕಪ್ 2019: ಈ ತಂಡ ಪ್ರಶಸ್ತಿ ಗೆಲ್ಲಲಿದೆ; ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್
First published:November 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ