Welcome to Mars: ಮಂಗಳನ ಅಂಗಳದಲ್ಲಿ ಚೈನಾ ರೋವರ್, ಇತಿಹಾಸ ಸೃಷ್ಟಿ

ಮಂಗಳನ ಅಂಗಳದಲ್ಲಿ ಚೈನಾದ ರೋವರ್

ಮಂಗಳನ ಅಂಗಳದಲ್ಲಿ ಚೈನಾದ ರೋವರ್

ಕಳೆದ ಫೆಬ್ರವರಿಯಿಂದ ಮಂಗಳವನ್ನು ಸುತ್ತುವರೆದಿರುವ ಟಿಯಾನ್ವೆನ್-1 ಮೊದಲೇ ಗುರಿಯಾಗಿಸಿಕೊಂಡಿದ್ದ ಮಂಗಳ ಗ್ರಹದ ದಕ್ಷಿಣ ಭಾಗದಲ್ಲಿನ ಯುಟೋಪಿಯಾ ಪ್ಲಾನಿಟಿಯಾ ಪ್ರದೇಶದ ಮೇಲೆ ಇಳಿಯಿತು.

  • Share this:

ಚೀನಾ ಬಾಹ್ಯಾಕಾಶ ಸಂಸ್ಥೆಯ ಜೂರೋಂಗ್ ರೋವರ್ ಎಂಬ ನೌಕೆ ಶನಿವಾರ ಯಶಸ್ವಿಯಾಗಿ ಮಂಗಳ ಗ್ರಹವನ್ನು ಸ್ಪರ್ಶಿಸಿದೆ ಎಂದು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ ಸಂಸ್ಥೆ ದೃಢಪಡಿಸಿದ್ದು, ಈ ಮೂಲಕ ಮೊದಲ ಮಂಗಳ ಗ್ರಹ ಕಾರ್ಯಾಚರಣೆಯಲ್ಲಿ ಚೀನಾ ದೇಶ ಇತಿಹಾಸ ನಿರ್ಮಿಸಿದೆ ಎಂದು ಹೇಳಿದೆ. ಅಲ್ಲದೆ, ಬೀಜಿಂಗ್‍ನ ಬಾಹ್ಯಾಕಾಂಶ ಸಂಸ್ಥೆಯ ಮಹಾತ್ವಾಕಾಂಕ್ಷೆ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸುವ ಯೋಜನೆಗೆ ಪುಷ್ಟಿ ದೊರೆತಿದೆ. ಜೊತೆಗೆ ರೋವರನ್ನು ಮಂಗಳನ ಮೈ ಮೇಲೆ ಇಳಿಸಿದ ಮೂರನೇ ದೇಶ ಎಂಬ ಖ್ಯಾತಿಗೂ ಒಳಗಾಗಿದೆ. ಈ ಮೊದಲು ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಇದರಲ್ಲಿ ಯಶಸ್ವಿಯಾಗಿತ್ತು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.


ಕಳೆದ ಫೆಬ್ರವರಿಯಿಂದ ಮಂಗಳವನ್ನು ಸುತ್ತುವರೆದಿರುವ ಟಿಯಾನ್ವೆನ್-1 ಮೊದಲೇ ಗುರಿಯಾಗಿಸಿಕೊಂಡಿದ್ದ ಮಂಗಳ ಗ್ರಹದ ದಕ್ಷಿಣ ಭಾಗದಲ್ಲಿನ ಯುಟೋಪಿಯಾ ಪ್ಲಾನಿಟಿಯಾ ಪ್ರದೇಶದ ಮೇಲೆ ಇಳಿಯಿತು. ಈ ಕುರಿತು ನಿಹಾಓ ಮಾರ್ಸ್ ಎಂಬ ವಿಶೇಷ ಟಿವಿ ಕಾರ್ಯಕ್ರಮದಲ್ಲಿ "ರೋವರ್ ಈ ಮೊದಲೇ ಆಯ್ಕೆ ಮಾಡಿದ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದಿದೆ" ಎಂದು ರಾಜ್ಯ ಪ್ರಸಾರ ಸಿಸಿಟಿವಿ ಹೇಳಿದೆ ಎಂದು ತಿಳಿಸಿದೆ. ಇನ್ನು ಈ ಬಗ್ಗೆ ಚೀನಾದ ಕ್ಸಿನುವಾ ಎಂಬ ನ್ಯೂಸ್ ಏಜೆನ್ಸಿಯು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ ಸಂಸ್ಥೆಯು ರೋವರ್ ಯಶಸ್ವಿಯಾಗಿ ಇಳಿದಿರುವುದನ್ನು ದೃಢಪಡಿಸಿದೆ ಎಂದು ಹೇಳಿದೆ.


ಟಿಯಾನ್ವೆನ್-1 ಎಂಬ ಬಾಹ್ಯಾಕಾಶ ನೌಕೆಯು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿದ್ದು ಇದನ್ನು ಕಳೆದ ವರ್ಷ ಜುಲೈ 23ರಂದು ಚೀನಾ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿತ್ತು. ಸೌರಮಂಡಲ ವ್ಯವಸ್ಥೆಯಲ್ಲಿ ಚೀನಾದ ಗ್ರಹಗಳ ಪರಿಶೋಧನೆಯಲ್ಲಿ ಇದು ಮೊದಲ ಹೆಜ್ಜೆಯಾಗಿದೆ.


ಕೆಂಪು ಗ್ರಹ ಮಂಗಳನ ಸುತ್ತ ಪರಿಭ್ರಮಿಸುವುದು, ಇಳಿಯುವುದು ಮತ್ತು ತಿರುಗುವ ಕಾರ್ಯಾಚರಣೆ ಮಾಡಿದ ಮೊದಲ ದೇಶ ಎಂದು ಹೇಳಲಾಗುತ್ತಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ. ಚೀನಾ ಈಗ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಚಂದ್ರನ ಸುತ್ತ ಶೋಧ ನಡೆಸಿದೆ ಮತ್ತು ಮಂಗಳ ಗ್ರಹದ ಮೇಲೆ ರೋವರ್ ಅನ್ನು ಇಳಿಸಿದೆ. ಈ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲಿ ಈ ಪ್ರತಿಷ್ಠಿತ ಗೌರವ ಚೀನಾ ರಾಷ್ಟ್ರಕ್ಕೆ ದೊರೆತಂತಾಗಿದೆ.


ಟಿಯಾನ್ವೆನ್ -1 ರೋವರ್, ಸುಮಾರು 240 ಕೆಜಿ ತೂಕ ಹೊಂದಿದ್ದು, 6 ಚಕ್ರಗಳು ಮತ್ತು ನಾಲ್ಕು ಸೌರ ಫಲಕಗಳನ್ನು ಹೊಂದಿದೆ. ಪ್ರತಿ ಗಂಟೆಗೆ 200 ಮೀಟರ್‌ನಷ್ಟು ದೂರ ಚಲಿಸುವ ಸಾಮರ್ಥ್ಯ ಹೊಂದಿದೆ.
ಕಳೆದ ಜುಲೈನಲ್ಲಿ ರೋವರ್ ಅನ್ನು ಸಾಗಿಸಿದ ಚೀನಾದ ಟಿಯಾನ್ವೆನ್ -1 ಚೀನಾದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಫೆಬ್ರವರಿಯಲ್ಲಿ ಬಾಹ್ಯಾಕಾಶ ನೌಕೆ ಮಂಗಳನ ಕಕ್ಷೆಗೆ ಪ್ರವೇಶಿಸಿತು. ಇದನ್ನು ಸ್ಪರ್ಶಿಸುವ ಕ್ಲಿಷ್ಟಕರ ಹಂತ ಎಂದು ರಾಜ್ಯ ಮಾಧ್ಯಮ ವರದಿ ಮಾಡಿತ್ತು.


ತಲುಪುವಿಕೆಯನ್ನು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಮಂಡಳಿಯ ನೈಲ್-ಬಿಟರ್ ಎನ್ನಲಾಗಿದೆ. ಇನ್ನು ಪ್ಯಾರಾಚೂಟ್, ರಾಕೆಟ್ ಅನ್ನು ಬಳಸಿ ನಿಧಾನವಾಗಿ ಇಳಿಯುವ ಪ್ರಕ್ರಿಯೆ ಮತ್ತು ಬಫರ್ ಲೆಗ್ಸ್‌ ಅನ್ನು ಮಿಷನ್‍ನ ಅತ್ಯಂತ ಸವಾಲಿನ ಹಂತ ಎಂದು ರಾಜ್ಯ ಮಾಧ್ಯಮಗಳು ವಿವರಿಸುತ್ತದೆ.


ಇದು ಭೌಗೋಳಿಕ ದತ್ತಾಂಶಗಳನ್ನು ಸಂಗ್ರಹಿಸಲು ಮತ್ತು ಫೋಟೋಗಳನ್ನು ತೆಗೆಯಲು ಮೂರು ತಿಂಗಳುಗಳ ಕಾಲ ಮಂಗಲ ಗ್ರಹದ ಸುತ್ತಮುತ್ತಲು ತಿರುಗುವ ಸಾಧ್ಯತೆ ಇದೆ.


ಸಂಕೀರ್ಣ ಲ್ಯಾಂಡಿಂಗ್ ಪ್ರಕ್ರಿಯೆಯನ್ನು "ಏಳು ನಿಮಿಷಗಳ ಭಯಾನಕತೆ’ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ರೇಡಿಯೊ ಸಿಗ್ನಲ್‍ಗಳು ಮಂಗಳದಿಂದ ಭೂಮಿಯನ್ನು ತಲುಪುವುದಕ್ಕಿಂತ ವೇಗವಾಗಿ ನಡೆಯುತ್ತದೆ, ಅಂದರೆ ಇಲ್ಲಿ ಸಂವಹನಗಳು ಸೀಮಿತವಾಗಿರುತ್ತದೆ.


ಹಲವು ಬಾರಿ ಯುಎಸ್, ರಷ್ಯಾ, ಯೂರೋಪ್‌ ರಾಷ್ಟ್ರಗಳು ರೋವರ್‌ ಅನ್ನು ಮಂಗಳ ಗ್ರಹದ ಮೇಲೆ ಇಳಿಸುವಲ್ಲಿ ವಿಫಲಗೊಂಡಿದ್ದವು. ಇತೀಚೆಗೆ 2016ರಲ್ಲಿ ರಷ್ಯನ್-ಯೂರೋಪಿಯನ್ ಬಾಹ್ಯಾಕಾಶ ನೌಕೆಯ ಜಂಟಿ ಕಾರ್ಯಚರಣೆ ವಿಫಲಗೊಂಡಿತ್ತು.


ಇದನ್ನೂ ಓದಿhttps://kannada.news18.com/news/coronavirus-latest-news/new-chinese-vaccine-sinopharm-gets-who-emergency-approval-sktv-561999.html


ಯುಎಸ್ ರೋವರ್ ಮಂಗಳದ ಮೇಲೆ ಸಣ್ಣ ರೊಬೊಟಿಕ್ ಹೆಲಿಕಾಪ್ಟರ್ ಅನ್ನು ಉಡಾವಣೆ ಮಾಡಿತು, ಇದು ಮತ್ತೊಂದು ಗ್ರಹದ ಮೇಲಿನ ಮೊದಲ ಚಾಲಿತ ಹಾರಾಟ ಎನಿಸಿಕೊಂಡಿತು.


ಚೀನಾ ದೇಶವು ಯುನೈಟೆಡ್ ಸ್ಟೇಟ್ಸ್ ಹಾಗೂ ರಷ್ಯಾವು ಬಾಹ್ಯಾಕಾಶ ವಿಜ್ಞಾನದಲ್ಲಿ ತಲುಪಿರುವ ಜ್ಞಾನದ ಹಂತವನ್ನು ಮುಟ್ಟಲು ಶರವೇಗದಲ್ಲಿ ಪ್ರಯತ್ನಿಸಿತ್ತು. ಈ ಎರಡು ರಾಷ್ಟ್ರಗಳು ಬಹು ಪರಿಣತಿ ಪಡೆದ ಗಗನಯಾತ್ರಿಗಳನ್ನು ಮತ್ತು ಬಾಹ್ಯಾಕಾಶ ವಿಜ್ಞಾನಿಗಳನ್ನು ಹೊಂದಿದ್ದಾರೆ.


2022ನ್ನು ಗುರಿಯಾಗಿಸಿಕೊಂಡಿರುವ ಚೀನಾ ಮೊದಲ ಬಾರಿಗೆ ತನ್ನ ಬಾಹ್ಯಾಕಾಶ ಕೇಂದ್ರದ ಮಾದರಿಯನ್ನು ಕಳೆದ ತಿಂಗಳು ಯಶಸ್ವಿಯಾಗಿ ಬಿಡುಗಡೆ ಮಾಡಿತು. ಇನ್ನು ಕೊನೆಯದಾಗಿ ಚೀನಾ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವ ಧ್ಯೇಯ ಹೊಂದಿದೆ. ಕಳೆದ ವಾರ ಚೀನೀ ಲಾಂಗ್ ಮಾರ್ಚ್ 5ಬಿ ರಾಕೆಟ್‍ನ ಒಂದು ಭಾಗ ಅನಿಯಂತ್ರಣದಿಂದಾಗಿ ಭೂಮಿಗೆ ಇಳಿಯಿತು.


ಇದನ್ನೂ ಓದಿhttps://kannada.news18.com/news/national-international/a-bakery-in-washington-finds-a-sweet-way-to-find-the-thief-who-robbed-them-in-a-viral-post-stg-sktv-564799.html


ಪ್ರಾಚೀನ ಸಮುದ್ರದ ತಾಣವೆಂದು ಭಾವಿಸಲಾದ ಯುಟೋಪಿಯಾ ಪ್ಲಾನಿಟಿಯಾ, ಸೆಡಿಮೆಂಟರಿ ಪದರಗಳನ್ನು ಹೊಂದಿದ್ದು ಅದು ಹಿಂದಿನ ನೀರಿನ ಪುರಾವೆಗಳನ್ನು ಒಳಗೊಂಡಿದೆ. ಇನ್ನೂ ರೋಮಾಂಚನಕಾರಿ ಎಂದರೆ ಈ ಬಂಡೆಗಳ ಪದರಗಳು ಮಂಗಳ ಗ್ರಹದ ಹಿಂದಿನ ಜೀವನದ ಯಾವುದೇ ಕುರುಹುಗಳನ್ನು ಒಳಗೊಂಡಿರಬಹುದು ಎಂದು ಬ್ರೌನ್ ವಿಶ್ವವಿದ್ಯಾಲಯದ ಗ್ರಹ ವಿಜ್ಞಾನಿ ಜೇಮ್ಸ್ ಹೆಡ್ ಹೇಳುತ್ತಾರೆ.


ಟಿಯಾನ್ವೆನ್ -1 ಮತ್ತು ಜೂರೋಂಗ್ ರೋವರ್ ಅಪರಿಚಿತ ಬ್ರಹ್ಮಾಂಡವನ್ನು ಅಧ್ಯಯನ ಮಾಡಲು, ಯುವಜನತೆಯ ವೈಜ್ಞಾನಿಕ ಅರಿವನ್ನು ಮತ್ತಷ್ಟು ಉತ್ತೇಜಿಸಲು, ಇಡೀ ದೇಶದ ಸೃಜನಶೀಲತೆಯನ್ನು ದುಪ್ಪಟ್ಟುಗೊಳಿಸಲು, ಅಪರಿಚಿತರನ್ನು ಅನ್ವೇಷಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮಾನವರು ವಾಸಿಸುವ ಜಾಗವನ್ನು ವಿಸ್ತರಿಸಲು ಬಹಳ ಮಹತ್ವದ್ದಾಗಿದೆ ಎಂದೇ ಹೇಳಬಹುದು.


ಇನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ಚೀನಾ ಬಾಹ್ಯಾಕಾಶದ ಸಾಧನೆಗೆ ಶುಭಾಶಯ ಕೋರಿದ್ದಾರೆ. ಸ್ಕ್ರಂಬಲ್ ಫಾರ್ ದ ಸ್ಕೈ: ದ ಗ್ರೇಟ್ ಪವರ್ ಆಫ್ ಕಾಂಪಿಟೇಷನ್ ಟು ಕಂಟ್ರೋಲ್ ದ ಸೋರ್ಸಸ್ ಆಫ್ ಔಟರ್ ಸ್ಪೇಸ್ ಎಂಬ ಪುಸ್ತಕದ ಲೇಖರಾದ ನಮ್ರತಾ, ಇದು ಚೀನಾ ದೇಶ ಕಿರೀಟಪ್ರಾಯದ ದಿನ ಎಂದು ಹೇಳಿದ್ದಾರೆ.

top videos
    First published: