Haunted House Testers: ನಿಮಿಷಕ್ಕೆ 700 ರೂ, ದಿನಕ್ಕೆ 17 ಸಾವಿರ ಸಂಬಳ.. ಆದ್ರೆ ಈ ಕೆಲಸ ಮಾಡಲು ಗುಂಡಿಗೆ ಬೇಕು ಕಂಡ್ರಿ!

Haunted House Testers: ಚೀನಾದ ಯಾವುದಾದರು ಮನೆಯಲ್ಲಿ ಇಂತಹ ಸುದ್ದಿ ಕೇಳಿಬಂದರೆ. ಇದಕ್ಕಾಗಿ ಜನರಿಗೆ ಭೂತವಿಲ್ಲವೆಂದು ಸಾಬೀತು ಪಡಿಸುವ ಕೆಲಸವನ್ನು ಆಹ್ವಾನಿಸುತ್ತಾರೆ. ಕೆಲಸ ಮಾಡುವ ವ್ಯಕ್ತಿ ಒಂದು ರಾತ್ರಿ ಇಂತಹ ಭಯಾನಕ ಮನೆಯಲ್ಲಿ ಮಲಗಬೇಕು (Haunted House Testers) ಮತ್ತು ಭೂತವಿಲ್ಲ ಎಂದು ಸಾಬೀತುಪಡಿಸಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಹೊಸ ಮನೆ ಖರೀದಿಸುವ ಮುನ್ನ ಆ ಜಾಗ ಹೇಗಿದೆ? ಭೂತ ಅಥವಾ ದೆವ್ವದ (Ghost) ಉಪಟಳವಿದೆಯಾ ಎಂದು ಪರೀಕ್ಷಿಸುತ್ತಾರೆ. ಒಂದು ವೇಳೆ ಆ ಮನೆಯಲ್ಲಿ ಏನಾದರು ಅನ್ಯ ಶಕ್ತಿಗಳ ಉಪಟಳವಿದ್ದರೆ ಪೂಜೆ-ಪಥ (pooja-paath)ಮಾಡುವ ಮೂಲಕ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಚೀನಾದಲ್ಲಿ (China) ಹಾಗಲ್ಲ. ಯಾವುದಾದರು ಮನೆಯಲ್ಲಿ ಭೂತದ ತೊಂದರೆಯಿದೆ ಎಂದು ತಿಳಿದುಬಂದರೆ. ಅಲ್ಲಿ ಭೂತವಿಲ್ಲವೆಂದು ಸಾಬೀತು ಪಡಿಸುವ ಕೆಲಸವೊಂದಕ್ಕೆ ಜನರನ್ನು ಆಹ್ವಾನಿಸುತ್ತಾರೆ. ಮಾತ್ರವಲ್ಲದೆ ಕೆಲಸದಕ್ಕಿಸಿಕೊಂಡವ ಅಲ್ಲಿ ಮಲಗಿದರೆ ದುಬಾರಿ ಸಂಬಳವನ್ನು ಪಡೆಯಬಹುದಾಗಿದೆ.

    ಚೀನಾದ ಯಾವುದಾದರು ಮನೆಯಲ್ಲಿ ಇಂತಹ ಸುದ್ದಿ ಕೇಳಿಬಂದರೆ. ಇದಕ್ಕಾಗಿ ಜನರಿಗೆ ಭೂತವಿಲ್ಲವೆಂದು ಸಾಬೀತು ಪಡಿಸುವ ಕೆಲಸವನ್ನು ಆಹ್ವಾನಿಸುತ್ತಾರೆ. ಕೆಲಸ ಮಾಡುವ ವ್ಯಕ್ತಿ ಒಂದು ರಾತ್ರಿ ಇಂತಹ ಭಯಾನಕ ಮನೆಯಲ್ಲಿ ಮಲಗಬೇಕು (Haunted House Testers) ಮತ್ತು ಭೂತವಿಲ್ಲ ಎಂದು ಸಾಬೀತುಪಡಿಸಬೇಕು.

    ಇದೊಂದು ಅಚ್ಚರಿಯವಿಚಾರವಾಗಿದ್ದು, ಚೀನಾದ ಆಸ್ತಿ ವ್ಯವಹಾರದಲ್ಲಿ ಇದು ಹೊಸದೇನಲ್ಲ. ಅಲ್ಲಿನ ರಿಯಲ್ ಎಸ್ಟೇಟ್ ಏಜೆನ್ಸಿ ಹಾಂಟೆಡ್ ಹೌಸ್ ಟೆಸ್ಟರ್ ಆಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಆಹ್ವಾನಿಸುವುದಲ್ಲದೆ,  ಅವರಿಗೆ ಸಾಕಷ್ಟು ಹಣವನ್ನು ಪಾವತಿಸುತ್ತಾರೆ.

    ಇದನ್ನು ಓದಿ: Viral News: ಒಂದೆಡೆ ಸೇರಿದ ಮೂರು ನಾಗರಹಾವುಗಳು, ಇಲ್ಲಿದೆ ನೋಡಿ ಬಲು ಅಪರೂಪದ ದೃಶ್ಯ!

    ಭೂತ, ದೆವ್ವ ಎಂಬ ಕಥೆಯನ್ನು ಹೊಂದಿರುವ ಆಸ್ತಿಯನ್ನು ಮಾರಾಟ ಮಾಡಲು ಮತ್ತು ಜನರ ಮನವೊಲಿಸಲು ಅಂತಹ ಮನೆಗಳಲ್ಲಿ ಮಲಗಲು ಜನರಿಗೆ ಭಾರೀ ಬೇಡಿಕೆಯಿದೆ.

    ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಹಾಂಟೆಡ್ ಹೌಸ್ ಟೆಸ್ಟರ್‌ಗಳ ಕೆಲಸ ಸುಲಭವಲ್ಲ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲವು ಮನೆಗಳಲ್ಲಿ ವಾಸ ಮಾಡಬೇಕಾಗಿದೆ. ಕೆಲವು ಮನೆಗಳು ಹಲವು ವರ್ಷಗಳಿಂದ ಬಳಕೆಯಾಗುತ್ತಿಲ್ಲ. ಮತ್ತೊಂದು ವಿಚಾರವೆಂದರೆ ಮನೆಗಳ ಬಗ್ಗೆ ಭಯಾನಕ ಮತ್ತು ಭೂತದ ಕಥೆಗಳನ್ನು ಕೇಳಿದ ನಂತರವೂ ಇಲ್ಲಿ ಅಂತಹದ್ದೇನೂ ಇಲ್ಲ ಎಂದು ಸಾಬೀತುಪಡಿಸಬೇಕಾಗಿದೆ. ಈ ಕೆಲಸಕ್ಕಾಗಿ ಅವರು ಪ್ರತಿ ನಿಮಿಷದ ಆಧಾರದ ಮೇಲೆ ಸಂಬಳ ಪಡೆಯುತ್ತಾರೆ.

    ಇದನ್ನು ಓದಿ: HaLow Wifi: ಈ ವೈ-ಫೈ ಹಾಕಿಸಿಕೊಂಡರೆ 1 ಕಿ.ಮೀವರೆಗೆ ಸಿಗ್ನಲ್ ಸಿಗುತ್ತೆ!

    ನಿಮಿಷಕ್ಕೆ 700 ಸಂಬಳ!

    ಅಂದಹಾಗೆಯೇ ನಿಮಿಷಕ್ಕೆ 700 ರೂ. ನೀಡಲಾಗುತ್ತದೆ. ಅಂತಹ ಮನೆಯಲ್ಲಿ ಒಬ್ಬ ವ್ಯಕ್ತಿ 24 ಗಂಟೆಗಳ ಕಾಲ ಇದ್ದರೆ, ಅವನಿಗೆ  16,744 ರೂ ನೀಡುತ್ತಾರಂತೆ. ಸಾಮಾನ್ಯವಾಗಿ ಆಸ್ತಿ ಹೂಡಿಕೆದಾರರು ಮತ್ತು ಮನೆ ಮಾಲೀಕರು ಹಳೆಯ ಮನೆಗಳಿಗೆ ಹೋಗಲು ಹಿಂಜರಿಯುತ್ತಾರೆ. ಅದರಂತೆ, ಅವರು ಮನೆ ಪರೀಕ್ಷಕರನ್ನು ಒತ್ತಾಯಿಸುತ್ತಾರೆ. ಇದಕ್ಕಾಗಿ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಮೂಲಕ ವೃತ್ತಿಪರರನ್ನು ಹುಡುಕಲಾಗುತ್ತದೆ. ಈ ಜನರಿಗೆ ಭಯಾನಕ ಮನೆಗಳಲ್ಲಿ ವಾಸಿಸುವ ಅನುಭವವಿದೆ. ಇಲ್ಲಿ 24 ಗಂಟೆಗಳ ಕಾಲ ಕಳೆದ ನಂತರ ಇಲ್ಲಿ ಉಳಿಯಲು ಯಾವುದೇ ತೊಂದರೆ ಇಲ್ಲ ಎಂದು ತಮ್ಮ ಗ್ರಾಹಕರಿಗೆ ವಿಡಿಯೋ ಮೂಲಕ ಮನವರಿಕೆ ಮಾಡಿಕೊಡುತ್ತಾರೆ. ಹೆಚ್ಚಿನ ಜನರು ಈ ಕೆಲಸವನ್ನು ಅರೆಕಾಲಿಕ ಉದ್ಯೋಗವಾಗಿ ಮಾಡುತ್ತಾರೆ.
    Published by:Harshith AS
    First published: