• Home
  • »
  • News
  • »
  • trend
  • »
  • China Water Dam: ಭೂಮಿಯ ತಿರುಗುವಿಕೆಯನ್ನೇ ನಿಧಾನಗೊಳಿಸಿದ ಚೀನಾದ ಈ ಅಣೆಕಟ್ಟು!

China Water Dam: ಭೂಮಿಯ ತಿರುಗುವಿಕೆಯನ್ನೇ ನಿಧಾನಗೊಳಿಸಿದ ಚೀನಾದ ಈ ಅಣೆಕಟ್ಟು!

ತ್ರೀ ಗೋರ್ಜಸ್ ಅಣೆಕಟ್ಟು

ತ್ರೀ ಗೋರ್ಜಸ್ ಅಣೆಕಟ್ಟು

ಚೀನಾದ ಈ ತ್ರೀ ಗೋರ್ಜಸ್ ಅಣೆಕಟ್ಟು ಭೂಮಿಯ ತಿರುಗುವಿಕೆಯನ್ನು ಸಹ ನಿಧಾನಗೊಳಿಸುತ್ತದೆ ಎಂದು ಹೇಳಲಾಗಿದೆ.

  • Share this:

ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು (Water Dam) ಎಂಬ ಖ್ಯಾತಿಗೆ ಪಾತ್ರವಾಗಿರುವ ಚೀನಾದ ತ್ರೀ ಗೋರ್ಜಸ್ ಅಣೆಕಟ್ಟನ್ನು, ಚೀನಾದ ನಾಗರಿಕತೆಯ ಮುಖ್ಯ ಭಾಗವಾದ ಯಾಂಗ್ಟ್ಜಿ ನದಿಯ ಮೇಲೆ ನಿರ್ಮಿಸಲಾಗಿದೆ. ಹಲವಾರು (Many) ವಿಶೇಷತೆಗಳನ್ನು, ರೋಚಕತೆಗಳನ್ನು ಹೊಂದಿರುವ ಈ ಅಣೆಕಟ್ಟು ಬಾಹ್ಯಾಕಾಶದಿಂದ ನಿಂತು ನೋಡಿದರೂ ಸಹ ಕಾಣುತ್ತದೆಯಂತೆ. ಇನ್ನೊಂದು ಅಚ್ಚರಿ ವಿಷಯವೆಂದರೆ ಚೀನಾದ ಈ ತ್ರೀ ಗೋರ್ಜಸ್ ಅಣೆಕಟ್ಟು ಭೂಮಿಯ ತಿರುಗುವಿಕೆಯನ್ನು(Earth Rotation) ಸಹ ನಿಧಾನಗೊಳಿಸುತ್ತದೆ ಎಂದು ಹೇಳಲಾಗಿದೆ.


ಚೀನಾ ಜನರ ಬೇಡಿಕೆಯನ್ನು ಪೂರೈಸಲು ಡ್ಯಾಂ ನಿರ್ಮಾಣ


ಚೀನಾದ ಈ ಅಸಾಧಾರಣ ಅಣೆಕಟ್ಟು ಎರಡು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೊಂದಿದೆ ಮತ್ತು ಇಡೀ ಯೋಜನೆ ಪೂರ್ಣಗೊಳ್ಳಲು 17 ವರ್ಷಗಳನ್ನು ತೆಗೆದುಕೊಂಡಿದೆ. 2003 ರಲ್ಲಿ ನಿರ್ಮಿಸಲಾದ ತ್ರೀ ಗೋರ್ಜಸ್ ಅಣೆಕಟ್ಟನ್ನು ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ಎಂದು ಪರಿಗಣಿಸಲಾಗಿದೆ. ಚೀನಾದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ವಿದ್ಯುತ್‌ ಬೇಡಿಕೆ ಮುಂತಾದವುಗಳನ್ನು ಪೂರೈಸಲು ಮತ್ತು ದೇಶದಾದ್ಯಂತ ತಂತ್ರಜ್ಞಾನದ ಹೆಚ್ಚಳವನ್ನು ಪೂರೈಸಲು ಶಕ್ತಿಯನ್ನು ಉತ್ಪಾದಿಸುವ ಸಲುವಾಗಿ ಈ ಡ್ಯಾಂ ಅನ್ನು ನಿರ್ಮಾಣ ಮಾಡಲಾಯಿತು.


ಭೂಮಿಯನ್ನೇ ನಿಯಂತ್ರಿಸುತ್ತದೆ ತ್ರೀ ಗೋರ್ಜಸ್ ಅಣೆಕಟ್ಟು


ಈ ಅಣೆಕಟ್ಟಿನ ನಿರ್ಮಾಣದ ಮತ್ತೊಂದು ಪ್ರಮುಖ ಉದ್ದೇಶವೆಂದರೆ ಯಾಂಗ್ಟ್ಜಿ ನದಿಯಲ್ಲಿ ಉಂಟಾಗುವ ಪ್ರವಾಹವನ್ನು ತಪ್ಪಿಸಿ ಸ್ಥಳೀಯರನ್ನು ರಕ್ಷಿಸುವುದಾಗಿದೆ. ಡ್ಯಾಂ ನಿರ್ಮಾಣದ ಉದ್ದೇಶ ದೇಶಕ್ಕೆ ಹಿತವಾದರೂ ವಾಸ್ತವವಾಗಿ ಭೂಮಿ ಮೇಲೆ ಪರಿಣಾಮ ಬೀರಿದ್ದು, ಈ ಅಣೆಕಟ್ಟು ಭೂಮಿಯ ತಿರುಗುವಿಕೆಯನ್ನು ನಿಧಾನಗೊಳಿಸುವಂತೆ ಮಾಡಿದೆ.


ಅಣೆಕಟ್ಟು ಭೂಮಿಯ ಸುತ್ತುವಿಕೆಯನ್ನು ಹೇಗೆ ನಿಧಾನಗೊಳಿಸುತ್ತದೆ?


ಅಣೆಕಟ್ಟಿನ ಹಿಂದಿನ ವಾಸ್ತುಶೈಲಿಯು ಎಷ್ಟು ಉತ್ತಮವಾಗಿದೆ ಎಂದರೆ ಅದು 39 ಟ್ರಿಲಿಯನ್ ಕಿಲೋಗ್ರಾಂಗಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ (10 ಟ್ರಿಲಿಯನ್ ಗ್ಯಾಲನ್ ನೀರು) ಮತ್ತು ನದಿಯು ಸಮುದ್ರ ಮಟ್ಟದಿಂದ 175 ಮೀಟರ್ ಎತ್ತರದಲ್ಲಿದೆ. ತುಂಬಾ ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ ಇದು "ಮೊಮೆಂಟ್ ಆಫ್ ಜಡತ್ವ" ಎಂಬ ಪರಿಣಾಮವನ್ನು ಸೃಷ್ಟಿಸಲು ಕಾರಣವಾಗಿದೆ. ಅಣೆಕಟ್ಟಿನ ಮೂಲಕ ಹೆಚ್ಚಿನ ಪ್ರಮಾಣದ ನೀರಿನ ಹರಿವಿನಿಂದಾಗಿ, ಭೂಮಿಯ ತಿರುಗುವಿಕೆ ನಿಧಾನಗೊಳ್ಳುತ್ತದೆ.


ಇದನ್ನೂ ಓದಿ: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!


ಭೂಮಿಯ ತಿರುಗುವಿಕೆ 0.06 ಮೈಕ್ರೋಸೆಕೆಂಡ್‌ ನಿಧಾನ


ನಾಸಾದ ಲೆಕ್ಕಾಚಾರಗಳ ಪ್ರಕಾರ ಇದು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ, ಅಣೆಕಟ್ಟು ಭೂಮಿಯ ತಿರುಗುವಿಕೆಯನ್ನು 0.06 ಮೈಕ್ರೋಸೆಕೆಂಡ್‌ಗಳಷ್ಟು ನಿಧಾನಗೊಳಿಸುತ್ತದೆ ಎಂದು ತಿಳಿಸಿದೆ. ಚಂದ್ರನ ಸ್ಥಾನ, ಭೂಕಂಪಗಳು ಮತ್ತು ಇತ್ತೀಚೆಗೆ ಸಾಬೀತಾಗಿರುವ ಹವಾಮಾನ ಬದಲಾವಣೆಯಂತಹ ಇತರ ಅಂಶಗಳಿಂದಾಗಿ ಭೂಮಿಯ ಈ ತಿರುಗುವಿಕೆಯು ವಾಸ್ತವವಾಗಿ ನಿಧಾನಗೊಳ್ಳುತ್ತದೆ ಎಂದಿದ್ದಾರೆ.


ಭವಿಷ್ಯದಲ್ಲಿ ಸಮಯದ ಮೇಲೂ ಪರಿಣಾಮ ಬೀರುತ್ತಾ?


ಇನ್ನೂ ಆಸಕ್ತಿದಾಯಕ ವಿಷಯವೆಂದರೆ ಭೂಮಿಯ ತಿರುಗುವಿಕೆಯು ದೈನಂದಿನ ಸಮಯದ ಮೇಲೂ ಪರಿಣಾಮ ಬೀರುತ್ತದೆ. ಪ್ರತಿ ಐದು ವರ್ಷಗಳಿಗೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ದಿನವನ್ನು ಒಂದು ಮಿಲಿಸೆಕೆಂಡ್‌ಗಳಷ್ಟು ದೀರ್ಘಗೊಳಿಸಲಾಗುತ್ತದೆ, ಆದ್ದರಿಂದ ಭವಿಷ್ಯದಲ್ಲಿ ದಿನವು ಗಂಟೆಗಳಿಂದ ದೀರ್ಘವಾಗಬಹುದು. ಜೊತೆಗೆ ಇದು ಉತ್ತರ ಧ್ರುವವನ್ನು ಎರಡು ಸೆಂಟಿಮೀಟರ್‌ಗಳಷ್ಟು ಬದಲಾಯಿಸಲು ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.


ಅನೂಕೂಲಗಳಿಗಿಂತ ಅನಾಹುತಗಳೇ ಹೆಚ್ಚು!


ಇದು ಚೀನಾದ ಅತಿದೊಡ್ಡ ಯೋಜನೆಯಾಗಿದ್ದು, $28 ಶತಕೋಟಿಗಿಂತ ಹೆಚ್ಚು ಹೂಡಿಕೆಯೊಂದಿಗೆ ನಿರ್ಮಾಣವಾಗಿದೆ. 2300 ಮೀಟರ್ ಉದ್ದ ಮತ್ತು 115 ಮೀಟರ್ ಅಗಲವಿರುವ ಅಣೆಕಟ್ಟು 39.3 ಬಿಲಿಯನ್ ಘನ ಮೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಣೆಕಟ್ಟಿನಿಂದ ಹಿಡಿದಿರುವ ಹೆಚ್ಚಿನ ಪ್ರಮಾಣದ ನೀರಿನ ಕಾರಣದಿಂದಾಗಿ ಇದು ಚೀನಾದ ಪಶ್ಚಿಮ ಪ್ರದೇಶದಲ್ಲಿ ಸಣ್ಣ ಭೂಕಂಪಗಳ ಸೃಷ್ಟಿಗೂ ಕೂಡ ಕಾರಣವಾಗಿದೆ.


ಇದನ್ನೂ ಓದಿ: ಪಟ್ಟದಕಲ್ಲಿನ ಕಲ್ಲು ಕಲ್ಲುಗಳಲ್ಲೂ ಇದೆ ಕರುನಾಡ ಇತಿಹಾಸ, ನೀವೂ ಒಮ್ಮೆ ನೋಡಿ ಬನ್ನಿ ಚಾಲುಕ್ಯರ ಸಾಹಸ


ಅಣೆಕಟ್ಟಿನಿಂದ ಪ್ರಚೋದಿಸಲ್ಪಟ್ಟ ಭೂಕಂಪನಗಳು ಅಸ್ಥಿರವಾಗಿರುವುದರಿಂದ ಚೀನಾದ ಆ ಪ್ರದೇಶದ 1.3 ಮಿಲಿಯನ್ ಜನರನ್ನು ಸುರಕ್ಷಿತವಾಗಿಡಲು ಸ್ಥಳಾಂತರಿಸಲಾಗಿದೆ. ಜನರು ತಮ್ಮ ತಾಯ್ನಾಡನ್ನು ತೊರೆಯುವುದರ ಜೊತೆಗೆ, ಅಣೆಕಟ್ಟಿನ ನಿರ್ಮಾಣವು ಐತಿಹಾಸಿಕ ಸ್ಮಾರಕಗಳನ್ನು ಸಹ ನಾಶಪಡಿಸಿದೆ.


ಅಣೆಕಟ್ಟು ವಾಸ್ತವವಾಗಿ ಮೂರು ನಗರಗಳು, 114 ಪಟ್ಟಣಗಳು ​​ಮತ್ತು ಒಟ್ಟು 1,680 ಹಳ್ಳಿಗಳನ್ನು ಮುಳುಗಡೆ ಮಾಡಿದೆ. ಈ ಸಮಯದಲ್ಲಿ ಜನ ಚೀನಾದಲ್ಲಿ ಕಮ್ಯುನಿಸ್ಟ್ ಆಡಳಿತದ ವಿರುದ್ಧ ಎಷ್ಟೇ ಪ್ರತಿಭಟನೆ ಮಾಡಿದರೂ ಸಹ ಸರ್ಕಾರ ಈ ಅಣೆಕಟ್ಟನ್ನು ನಿರ್ಮಿಸಿತು.


ಒಟ್ಟಿನಲ್ಲಿ ಈ ಅಣೆಕಟ್ಟು ಚೀನಾದ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದಕ್ಕಿಂತ ಹೆಚ್ಚಿನ ಹಾನಿಯನ್ನುಂಟು ಮಾಡಿದೆ ಎಂದು ಹೇಳಬಹುದು. ಅಣೆಕಟ್ಟಿಗೆ ಬಳಸಿದ ಇಂಜಿನಿಯರಿಂಗ್‌ ತಂತ್ರಜ್ಞಾನ ಎಲ್ಲವೂ ಉತ್ತಮವಾಗಿಯೇನೋ ಇವೆ ಆದರೆ ಇದು ಭವಿಷ್ಯದಲ್ಲಿ ಭೂಮಿ, ಮಾನವರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂಬುವುದು ತಜ್ಞರ ಲೆಕ್ಕಾಚಾರ.

First published: