• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಬ್ರಿಡ್ಜ್​ ಮೇಲೆಯೇ ಮನೆಗಳನ್ನು ನಿರ್ಮಿಸಿದೆ ಚೀನಾ! ಹರ್ಷ್​ ಗೋಯೆಂಕಾ ಪೋಸ್ಟ್​​ ಫುಲ್ ವೈರಲ್

Viral Video: ಬ್ರಿಡ್ಜ್​ ಮೇಲೆಯೇ ಮನೆಗಳನ್ನು ನಿರ್ಮಿಸಿದೆ ಚೀನಾ! ಹರ್ಷ್​ ಗೋಯೆಂಕಾ ಪೋಸ್ಟ್​​ ಫುಲ್ ವೈರಲ್

ಹರ್ಷ್​​ ಗೋಯೆಂಕಾ

ಹರ್ಷ್​​ ಗೋಯೆಂಕಾ

ನಮ್ಮ ದೇಶದ ಕೈಗಾರಿಕೋದ್ಯಮಿಗಳಾದ ಹರ್ಷ್ ಗೋಯೆಂಕಾ ಮತ್ತು ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫಾಲೋವರ್​​ಗಳಿಗಾಗಿ ಶೇರ್​ ಮಾಡುತ್ತಲೇ ಇರುತ್ತಾರೆ. ಇದೀಗ ಹರ್ಷ್​ ಗೋಯೆಂಕಾ ಅವರು ಹೊಸ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

  • Share this:

ಸದಾ ಒಂದಲ್ಲ ಒಂದು ಸಕಾರಾತ್ಮಕವಾದ ಮತ್ತು ಜೀವನಕ್ಕೆ ಸ್ಪೂರ್ತಿ ನೀಡುವಂತಹ ಪೋಸ್ಟ್ ಗಳನ್ನು ನಮ್ಮ ದೇಶದ ಕೈಗಾರಿಕೋದ್ಯಮಿಗಳಾದ ಹರ್ಷ್ ಗೋಯೆಂಕಾ (Harsh Goenka) ಮತ್ತು ಆನಂದ್ ಮಹೀಂದ್ರಾ (Anand Mahindra) ಅವರು ಸಾಮಾಜಿಕ ಮಾಧ್ಯಮದಲ್ಲಿ (Social Media) ತಮ್ಮ ಫಾಲೋವರ್​​ಗಳಿಗಾಗಿ ಶೇರ್​ ಮಾಡುತ್ತಲೇ ಇರುತ್ತಾರೆ. ಇವರು ಹಂಚಿಕೊಳ್ಳುವ ವಿಡಿಯೋ ಪೋಸ್ಟ್ ಗಳು ಅಷ್ಟೇ ಆಸಕ್ತಿದಾಯಕ ಸಹ ಆಗಿರುತ್ತವೆ. ಆಗಾಗ ಇವರಿಬ್ಬರು ಕೈಗಾರಿಕೋದ್ಯಮಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿರುವ ಅಭಿಮಾನಿಗಳನ್ನು ರಂಜಿಸಲು ಪ್ರೇರಕ ಮತ್ತು ಆಸಕ್ತಿದಾಯಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರು ಎಷ್ಟೋ ಬಾರಿ ಹಾಸ್ಯಮಯ ಟ್ವೀಟ್ ಗಳನ್ನು ಸಹ ಆನ್​​ಲೈನ್​​ನಲ್ಲಿ ಹಂಚಿಕೊಳ್ಳುತ್ತಾರೆ ಮತ್ತು ಇವುಗಳು ನೋಡುಗರ ಗಮನವನ್ನು ಸೆಳೆಯುತ್ತವೆ.


ಇವರಿಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಬಗ್ಗೆ ಈಗೇಕೆ ಮಾತು ಅಂತೀರಾ? ಈ ಬಾರಿ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಚೀನಾದ ಚಾಂಗ್ಕಿಂಗ್ ನಲ್ಲಿರುವ ಒಂದು ಸೇತುವೆಯ ಮೇಲೆ ನಿರ್ಮಿಸಲಾದ ವರ್ಣರಂಜಿತ ಪಟ್ಟಣದ ಆಕರ್ಷಕ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ ನೋಡಿ.


ಕೈಗಾರಿಕೋದ್ಯಮಿ ಗೋಯೆಂಕಾ ಅವರು ಹಂಚಿಕೊಂಡ ವೀಡಿಯೋದಲ್ಲಿ ಏನಿದೆ?


ಆರ್‌ಪಿಜಿ ಎಂಟರ್ಪ್ರೈಸಸ್ ನ ಅಧ್ಯಕ್ಷರಾದ ಹರ್ಷ್ ಗೋಯೆಂಕಾ ಅವರು ಈ ವಿಡಿಯೋವನ್ನು ಹಂಚಿಕೊಳ್ಳುವಾಗ "ಇಲ್ಲಿ ವಾಸಿಸುವುದನ್ನು ನೀವು ಒಮ್ಮೆ ಕಲ್ಪಿಸಿಕೊಳ್ಳಿ” ಅಂತ ಅದಕ್ಕೆ ಚಿಕ್ಕದಾಗಿ ಸುಂದರವಾಗಿ ಒಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. ನೀರಿನ ಮೇಲೆ ಎತ್ತರವಾಗಿ ನಿಂತಿರುವ ಸೇತುವೆಯ ಮೇಲ್ಭಾಗದಲ್ಲಿ ವರ್ಣರಂಜಿತ ಮನೆಗಳು ಮತ್ತು ಕಟ್ಟಡಗಳನ್ನು ಈ ವಿಡಿಯೋ ತೋರಿಸುತ್ತದೆ.


ಇದನ್ನೂ ಓದಿ: ಮನುಷ್ಯ ಸತ್ತ ನಂತರ ಏನಾಗುತ್ತೆ? ಸಾವಿನ ನಂತರದ ಕೂತೂಹಲಕಾರಿ ರಹಸ್ಯ ಇಲ್ಲಿದೆ!


ಚೀನಾ ಡೈಲಿ ವರದಿಯ ಪ್ರಕಾರ, 400 ಮೀಟರ್ ಉದ್ದದ ಸೇತುವೆಯು ಚಾಂಗ್ಕಿಂಗ್ ನ ಲಿನ್ಶಿ ಟೌನ್‌ಶಿಪ್ ನಲ್ಲಿರುವ ಸಾಂಪ್ರದಾಯಿಕ ಚೀನೀ ಮತ್ತು ಪಾಶ್ಚಿಮಾತ್ಯ ಶೈಲಿಯ ಕಟ್ಟಡಗಳಿಂದ ತುಂಬಿದೆ. ಈ ವಿಶಿಷ್ಟ ಸಂಯೋಜನೆಯು ಪ್ರವಾಸಿಗರಿಗೆ ಬಾಹ್ಯಾಕಾಶದ ಮೂಲಕ ಪ್ರಯಾಣಿಸುವಂತೆ ಅಸಾಮಾನ್ಯ ಅನುಭವವನ್ನು ನೀಡುತ್ತದೆ.


ಈ ಸ್ಥಳವನ್ನು ನೋಡಿ ಛಾಯಾಗ್ರಾಹಕ ಗುವೊ ಕ್ಸು ಏನಂದ್ರು ಗೊತ್ತೇ?


"ಸೇತುವೆಗಳು ಮತ್ತು ರೈಲು ಸಾರಿಗೆ ಚಾಂಗ್ಕಿಂಗ್ ನ ಎರಡು ಪ್ರಮುಖ ಸಂಕೇತಗಳಾಗಿವೆ. ಈಗ ನಗರವು ತನ್ನ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಮತ್ತು ಅವುಗಳನ್ನು ಸೇತುವೆಗಳ ಕೆಳಗೆ ನಿಜವಾಗಿಯೂ ಬೆರಗುಗೊಳಿಸುವ ಭೂದೃಶ್ಯಗಳಾಗಿ ಪರಿವರ್ತಿಸುವ ಮೂಲಕ ನನ್ನನ್ನು ಮತ್ತೆ ಆಕರ್ಷಿಸಿದೆ " ಎಂದು ಸ್ಥಳಕ್ಕೆ ಭೇಟಿ ನೀಡಿದ ಛಾಯಾಗ್ರಾಹಕ ಗುವೊ ಕ್ಸು ಚೀನಾ ಡೈಲಿಗೆ ತಿಳಿಸಿದರು.


ಈ ವಿಡಿಯೋಗೆ ಪ್ರತಿಕ್ರಿಯಿಸಿದ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಇದು ಯಾವುದೇ ಸಾಹಸಕ್ಕಿಂತ ಕಡಿಮೆಯಿಲ್ಲ" ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು "ವೈಮಾನಿಕ ನೋಟವನ್ನು ನೋಡಲು ತುಂಬಾ ಆಹ್ಲಾದಕರವಾಗಿದೆ, ಆದರೆ ರೀಲ್ ಲೈಫ್ ಅನ್ನ ರಿಯಲ್ ಆಗಿ ಬದುಕಲು ಪ್ರಾಯೋಗಿಕವಾಗಿ ತುಂಬಾನೇ ಕಷ್ಟವಾಗಿರುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.



ಮೂರನೆಯವರು ತಮಾಷೆ ಮಾಡುತ್ತಾ "ನಾವು ಹೈ-ಸ್ಪೀಡ್ ಬ್ರಾಡ್ಬ್ಯಾಂಡ್ ಮತ್ತು ದಿನಸಿಯನ್ನು ಪಡೆಯುವ ತನಕ ಚೆನ್ನಾಗಿಯೇ ಇರುತ್ತದೆ ಈ ಸ್ಥಳ ವಾಸಿಸುವುದಕ್ಕೆ" ಅಂತ ಕಾಮೆಂಟ್ ಮಾಡಿದ್ದಾರೆ.


ನಾಲ್ಕನೆಯವರು "ಸರ್, ಸೇತುವೆಯು ಅದರ ಮೇಲೆ ಮನೆಗಳನ್ನು ನಿರ್ಮಿಸಲು ಅಲ್ಲ. ಇದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿದೆ, ಜನರು ತಮ್ಮ ಮನೆಯಲ್ಲಿರುವ ಕಸ ಮತ್ತು ತ್ಯಾಜ್ಯವನ್ನು ನೇರವಾಗಿ ಕೆಳಗಿರುವಂತಹ ನದಿಗೆ ಎಸೆಯುತ್ತಾರೆ” ಎಂದು ಹೇಳಿದ್ದಾರೆ.




ಐದನೆಯವರು "ವಾವ್.. ಎಂತಹ ಅದ್ಬುತ ದೃಷ್ಟಿಕೋನ.. ಉತ್ತಮ ಸ್ಥಳದಿಂದ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು” ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರಂತೂ ಈ ಸೇತುವೆಯ ಸುರಕ್ಷತೆಯ ಬಗ್ಗೆ ತುಂಬಾನೇ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

First published: