HOME » NEWS » Trend » CHINA ANNOUNCES THREE CHILD POLICY IN MAJOR POLICY SHIFT STG MAK

ಮೂರನೇ ಮಗು ಮಾಡಿಕೊಳ್ಳಲು ಅನುಮತಿ ನೀಡಿದ ಚೀನಾ: ಮತ್ತೆ ಜನಸಂಖ್ಯಾ ಸ್ಫೋಟಕ್ಕೆ ನಾಂದಿ?

ಚೀನಾದಲ್ಲಿ 1950 ರ ದಶಕದಿಂದ 10 ವರ್ಷಗಳಿಗೊಮ್ಮೆ ಮಾಡುವ ಜನಗಣತಿಯ ಫಲಿತಾಂಶಗಳು ಕಳೆದ ತಿಂಗಳು ಬಿಡುಗಡೆಯಾಗಿತ್ತು. ಈ ವರದಿಯಲ್ಲಿ, ಕಳೆದೊಂದು ದಶಕದಲ್ಲಿ ಜನಸಂಖ್ಯೆಯು ತೀವ್ರ ನಿಧಾನಗತಿಯ ದರದಲ್ಲಿ ಬೆಳೆದಿದೆ ಎಂದು ತೋರಿಸಿದೆ.

Trending Desk
Updated:May 31, 2021, 5:23 PM IST
ಮೂರನೇ ಮಗು ಮಾಡಿಕೊಳ್ಳಲು ಅನುಮತಿ ನೀಡಿದ ಚೀನಾ: ಮತ್ತೆ ಜನಸಂಖ್ಯಾ ಸ್ಫೋಟಕ್ಕೆ ನಾಂದಿ?
ಸಾಂದರ್ಭಿಕ ಚಿತ್ರ.
  • Share this:
ಪ್ರತಿ ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಅನುಮತಿ ನೀಡಲಾಗುವುದು ಎಂದು ಚೀನಾದ ಕ್ಸಿ ಜಿನ್‌ಪಿಂಗ್ ಸರ್ಕಾರ ಸೋಮವಾರ ಘೋಷಿಸಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಜನನ ಪ್ರಮಾಣದಲ್ಲಿ ನಾಟಕೀಯ ಕುಸಿತ ಕಂಡ ನಂತರ ಅಸ್ತಿತ್ವದಲ್ಲಿರುವ ಎರಡು ಮಕ್ಕಳ ಮಿತಿಯಿಂದ ಪ್ರಮುಖ ನೀತಿ ಬದಲಾವಣೆಯನ್ನು ಮಾಡಲಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಟ್‌ಬ್ಯೂರೋ ಸಭೆಯಲ್ಲಿ ಈ ಬದಲಾವಣೆಯನ್ನು ಅನುಮೋದಿಸಲಾಗಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಚೀನಾ ಇದಕ್ಕೂ ಮೊದಲು ಜನನ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಒಂದು ಮಗುವಿನ ನೀತಿಯನ್ನು ಹೊಂದಿತ್ತು. ಜನಸಂಖ್ಯೆಯ ಸ್ಫೋಟವನ್ನು ತಡೆಯಲು ಈ ನಿಯಮವನ್ನು ವಿಶ್ವದ ನಂ. 1 ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಘೋಷಿಸಲಾಗಿತ್ತು. ಆದರೆ, ಜನನ ಪ್ರಮಾಣ ತೀವ್ರ ಕುಸಿಯುತ್ತಿದ್ದಂತೆ 2016 ರಲ್ಲಿ, ಚೀನಾ ತನ್ನ ದಶಕಗಳಷ್ಟು ಹಳೆಯದಾದ ಆ ನೀತಿಯನ್ನು ರದ್ದುಗೊಳಿಸಿತ್ತು. ನಂತರ ಎರಡು ಮಕ್ಕಳನ್ನು ಹೊಂದಲು ಅನುಮತಿ ನೀಡಲಾಯ್ತು.

ಆದರೆ, ಚೀನಾದ ನಗರಗಳಲ್ಲಿ ಮಕ್ಕಳನ್ನು ಬೆಳೆಸುವ ವೆಚ್ಚ ಹೆಚ್ಚಾಗುತ್ತಿದ್ದಂತೆ ಎರಡು ಮಕ್ಕಳ ಮಿತಿಯನ್ನು ಹೇರಿದರೂ ಸಹ ಡ್ರ್ಯಾಗನ್‌ ರಾಷ್ಟ್ರದ ಜನನ ಪ್ರಮಾಣದಲ್ಲಿ ನಿರಂತರ ಏರಿಕೆಯಾಗಲು ವಿಫಲವಾಯ್ತು. ಮಕ್ಕಳನ್ನು ಬೆಳೆಸುವ ವೆಚ್ಚ ಹೆಚ್ಚಾದ ಹಿನ್ನೆಲೆ ಹೊಸದಾಗಿ ಮದುವೆಯಾದ ವಧು - ವರರು ಹೆಚ್ಚುತ್ತಿರುವ ವೆಚ್ಚಕ್ಕೆ ಹೆದರಿ ಎರಡು ಮಕ್ಕಳನ್ನು ಮಾಡಿಕೊಳ್ಳಲು ಮುಂದಾಗುತ್ತಿಲ್ಲ ಎಂಬ ವರದಿಗಳು ಕೇಳಿಬಂದಿವೆ.

ಇದನ್ನೂ ಓದಿ: Cycle Girl: ಕಳೆದ ವರ್ಷ ಲಾಕ್​ಡೌನ್​ನಲ್ಲಿ 1200 ಕಿಮೀ ಸೈಕಲ್​ ತುಳಿದು ಸುದ್ದಿಯಾಗಿದ್ದ ಬಿಹಾರದ ಬಾಲಕಿಯ ತಂದೆ ಸಾವು!

ಇನ್ನೊಂದೆಡೆ, ಚೀನಾದಲ್ಲಿ 1950 ರ ದಶಕದಿಂದ 10 ವರ್ಷಗಳಿಗೊಮ್ಮೆ ಮಾಡುವ ಜನಗಣತಿಯ ಫಲಿತಾಂಶಗಳು ಕಳೆದ ತಿಂಗಳು ಬಿಡುಗಡೆಯಾಗಿತ್ತು. ಈ ವರದಿಯಲ್ಲಿ, ಕಳೆದೊಂದು ದಶಕದಲ್ಲಿ ಜನಸಂಖ್ಯೆಯು ತೀವ್ರ ನಿಧಾನಗತಿಯ ದರದಲ್ಲಿ ಬೆಳೆದಿದೆ ಎಂದು ತೋರಿಸಿದೆ. ಅಲ್ಲದೆ, 2020ಕ್ಕೆ ಒಬ್ಬ ಮಹಿಳೆಗೆ 1.3 ಮಕ್ಕಳ ಫಲವತ್ತತೆ ದರವನ್ನು ತೋರಿಸಲಾಗಿದ್ದು, ಇದು ಹೆಚ್ಚು ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುವ ದೇಶಗಳಾದ ಜಪಾನ್‌ ಹಾಗೂ ಇಟಲಿಗೆ ಸಮ ಎಂಬ ಆಘಾತಕಾರಿ ಫಲಿತಾಂಶವೂ ಬಂದಿದೆ.

ಇದನ್ನೂ ಓದಿ: Coronavirus India Updates: 50 ದಿನಗಳ ಬಳಿಕ ದೇಶದಲ್ಲಿ ಒಂದೂವರೆ ಲಕ್ಷದಷ್ಟು ಕೊರೋನಾ ಪ್ರಕರಣಗಳು ಪತ್ತೆ

ಈ ಹಿನ್ನೆಲೆ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರ ಈಗ ಎರಡು ಮಕ್ಕಳು ನೀತಿಯನ್ನು ರದ್ದುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಮೂರು ಮಕ್ಕಳನ್ನು ಹೊಂದಲು ಸಹ ಅವಕಾಶ ನೀಡಿದೆ. ಆದರೆ, ಇದರಿಂದ ಮಕ್ಕಳ ಜನನ ಪ್ರಮಾಣ ಎಷ್ಟರ ಮಟ್ಟಿಗೆ ಏರಿಕೆಯಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
Youtube Video

ಇನ್ನೊಂದೆಡೆ, ಈ ಹೊಸ ನೀತಿಯ ತಕ್ಷಣದ ಪರಿಣಾಮವು ಸಕಾರಾತ್ಮಕವಾಗಲಿದ್ದರೂ ಸಣ್ಣ ಮಟ್ಟದ್ದಾಗಿರಬಹುದು. ಆದರೆ, ದೀರ್ಘಾವಧಿಯ ಪರಿಣಾಮವು ಮಕ್ಕಳನ್ನು ಬೆಳೆಸುವ ವೆಚ್ಚವನ್ನು ವಿಶೇಷವಾಗಿ ಶಿಕ್ಷಣ ಮತ್ತು ವಸತಿಯ ವೆಚ್ಚಗಳು ಯಶಸ್ವಿಯಾಗಿ ಕಡಿಮೆ ಮಾಡಲು ಸಾಧ್ಯವಾದರೆ ಅದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Published by: MAshok Kumar
First published: May 31, 2021, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories