ಕೆಲವೊಮ್ಮೆ ಕೆಲವು ಪ್ರಾಣಿಗಳು ಸೇಮ್(Same) ಮನುಷ್ಯರಂತೆಯೇ ಆಡುತ್ತವೆ. ಮಾನವನು ಯಾವ ರೀತಿಯಾಗಿ ಊಟವನ್ನು ಮಾಡುತ್ತಾನೆ, ಯಾವ ರೀತಿಯಾಗಿ ಬಟ್ಟೆ ಹಾಕುತ್ತಾನೆ ಜೊತೆಗೆ ಅವನ ಹಾವ ಭಾವಗಳನ್ನು ನೋಡಿ ಒಂದಷ್ಟು ಬುದ್ಧಿಗಳನ್ನು ಕಲಿತುಕೊಳ್ಳುತ್ತವೆ. ಅದೇ ನಾವು ಝೂಗೆ (Zoo) ಹೋದಾಗ ದೂರದಿಂದ ಪ್ರಾಣಿ, ಪಕ್ಷಿಗಳನ್ನು ನೋಡಿ ಮೋಜು ಮಾಡಿ ಬರುತ್ತೇವೆ. ಆದರೆ ಕೆಲವೊಂದು ಝೂಗಳಲ್ಲಿ ಚಿಂಪಾಂಜಿಯಂತಹ ಪ್ರಾಣಿಗಳನ್ನು ನೋಡಲು ಬಂದಂತಹ ಪ್ರವಾಸಿಗರ ಬಳಿ ಈ ಪ್ರಾಣಿಯನ್ನು (Animal) ಬಿಡುತ್ತಾರೆ. ಅವುಗಳು ಮನುಷ್ಯರ ಮೈಮೇಲೆ ಕುಳಿತು, ಅವರ ಜೊತೆ ಆಟವನ್ನು ಆಡುವುದನ್ನು ಹಲವಾರು ವಿಡಿಯೋಗಳಲ್ಲಿ ನೋಡಬಹುದಾಗಿದೆ. ಅವುಗಳ ಮೂಡ್ ಮೇಲೆ ಡಿಪೆಂಡ್ ಆಗಿರುತ್ತದೆ. ಇನ್ನು ಕೆಲವೊಮ್ಮೆ ಆ ಪ್ರಾಣಿಗಳು ಫುಲ್ ಸಿಟ್ಟಾಗಿದ್ರೆ ಯಾವ ಪ್ರವಾಸಿಗರನ್ನು ಮಾತನಾಡಿಸೋಲ್ಲ. ಇಷ್ಟೆಲ್ಲಾ ಯಾಕೆ ಪೀಠಿಕೆ (Introduction) ಹಾಕ್ತಾಇರೋದು ಅಂದ್ರೆ ಇಲ್ಲೊಂದು ಪ್ರಾಣಿಯ ವಿಡಿಯೋ ಸಖತ್ ವೈರಲ್ ಆಗಿದೆ.
ಝೂಗೆ ಹೋದಾಗ ಅದೆಷ್ಟೋ ಜನರಿಗೆ ಪ್ರಾಣಿಗಳನ್ನು ದೂರದಿಂದ ನೋಡೋಕೆ ಸಖತ್ ಖುಷಿ ಪಡ್ತಾರೆ. ಅದುವೇ ಶೇಕ್ಹ್ಯಾಂಡ್ ಮಾಡಲು ಹತ್ತಿರ ಬಂದರೆ ಬೆಚ್ಚಿ ಬೀಳುತ್ತಾರೆ. ಪ್ರಾಣಿಗಳಗೆ ಹೆಚ್ಚಾಗಿ ಮನುಷ್ಯರ ಜೊತೆಗೆ ಬೇಗ ಸಸ್ನೇಹವನ್ನು ಬೆಳೆಸಿಕೊಳ್ಳುತ್ತವೆ. ಅವು ಮೂಕ ಪ್ರಾಣಿ ಆಗಿದ್ದರೂ ಕೂಡ, ಭಾವನೆಗಳಿಗೆ ಸಾಕಷ್ಟು ಬೆಲೆಯನ್ನು ನೀಡುತ್ತದೆ. ಹೀಗಾಗಿ ಅವುಗಳ ಜೊತೆ ಬೆರೆತರೆ ಸಮಯ ಹೋಗೋದೇ ತಿಳಿಯದು. ಇಲ್ಲೊಂದು ಪ್ರಾಣಿಯ ವಿಡಿಯೋ ವೈರಲ್ ಆಗಿದೆ.
ಒಂದು ಚಿಂಪಾಂಜಿ ತನ್ನನ್ನು ನೋಡಲು ಬಂದ ಪ್ರವಾಸಿಗರಿಗೆ ಏನು ಮಾಡಿದೆ ನೋಡಿ. ಪ್ರಾಣಿಗಳಿಗೂ ಕೆಲವೊಮ್ಮೆ ತಮಗೂ ಬಟ್ಟೆಗಳನ್ನು ಹಾಕಬೇಕು ಅಂತ ಅನಿಸ್ಬೋದು. ಅದಕ್ಕಾಗಿ ಅವುಗಳೇನು ಬಟ್ಟೆಗಳನ್ನು ತೆಗೆದುಕೊಳ್ಳಲು ಅಂಗಡಿಗಳಿಗೆ ಹೋಗೋಲ್ಲ ಬಿಡಿ. ಇಲ್ಲೊಬ್ಬ ವ್ಯಕ್ತಿ ಬ್ಲಾಕ್ ಜಾಕೆಟ್ ಅನ್ನು ಧರಿಸಿರುತ್ತಾನೆ. ಅಲ್ಲಿಗೆ ಚಿಂಪಾಂಜಿ ಓಡಿ ಓಡಿ ಬರುತ್ತದೆ. ಆತ ಅದನ್ನು ಎತ್ತಿಕೊಳ್ಳಲು ಹೋಗುತ್ತಾನೆ ಆದರೆ, ಆ ಚಿಂಪಾಂಜಿಗೆ ಬೇಕಾಗಿರುವುದು ಆತನ ಪ್ರೀತಿ ಅಲ್ಲ. ಬದಲಾಗಿ ಬ್ಲಾಕ್ ಜಾಕೆಟ್.
ಇದನ್ನೂ ಓದಿ: ಮುದ್ದು ನಾಯಿಗೆ ವಿಮಾನದಲ್ಲಿಲ್ವಂತೆ ಪ್ರವೇಶ! ಫ್ಲೈಟ್ ಜರ್ನಿಯನ್ನೇ ಕ್ಯಾನ್ಸಲ್ ಮಾಡಿದ ಫ್ಯಾಮಿಲಿ!
ಎಸ್, ಈ ವಿಡಿಯೋವಂತೂ ಸಖತ್ ಮಜವಾಗಿದೆ. ಆತನ ಜಾಕೆಟ್ ಅನ್ನು ಯಾವ ರೀತಿಯಾಗಿ ಜಿಪ್ ಓಪನ್ ಮಾಡಿ, ಅವನಿಂದ ತೆಗೆಸುತ್ತದೆ. ತೆಗೆಸುವುದು ಮಾತ್ರವಲ್ಲದೇ ಆ ಚಿಂಪಾಂಜಿನೇ ಜಾಕೆಟ್ ಅನ್ನು ಹಾಕಿಕೊಳ್ಳುತ್ತದೆ ಎಂದು. ತಲೆಯ ಮೇಲೆ ಎಲ್ಲಾ ಈ ಜಾಕೆಟ್ ಅನ್ನು ಹಾಕಿಕೊಳ್ಳುತ್ತದೆ. ಅಲ್ಲಿ ಇದ್ದವರೆಲ್ಲರೂ ಜೋರಾಗಿ ನಗುತ್ತಾರೆ ಮತ್ತು ಬೊಬ್ಬೆಯನ್ನು ಹೊಡೆಯುತ್ತಾರೆ. ಆ ವ್ಯಕ್ತಿ ಸಂತೋಷದಿಂದಲೇ ಜಾಕೆಟ್ ಅನ್ನು ತೆಗೆದು ಪ್ರಾಣಿಗೆ ನೀಡುತ್ತಾನೆ. ಯಾವುದೇ ಬೇಜಾರು ಅಥವಾ ಕೋಪವನ್ನು ಮಾಡಕೊಳ್ಳದೇ ಜಾಕೆಟ್ ಅನ್ನು ನೀಡುತ್ತಾನೆ.
View this post on Instagram
ನೀವು ಕೂಡ ಝೂಗಳಿಗೆ ಹೋದಾಗ ಯಾವುದಾದರೂ ಪ್ರಾಣಿಗಳು ಪ್ರೀತಿಯಿಂದ ನಿಮ್ಮ ಬೆನ್ನೇರಿದ್ರೆ ನಿರ್ಲಕ್ಷ್ಯ ಮಾಡಬೇಡಿ. ಅವುಗಳಿಗೆ ಆಗುವಾ ಆಹಾರಗಳನ್ನು ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ