• Home
  • »
  • News
  • »
  • trend
  • »
  • Viral Video: ಆಮೆಯೊಂದಿಗೆ ಆ್ಯಪಲ್ ಹಂಚಿಕೊಂಡ ಚಿಂಪಾಂಜಿ! ಈ ಪ್ರಾಣಿಗಳ ಪ್ರೀತಿ ಈಗ ನೆಟ್ಟಿಗರ ಫೇವರೇಟ್

Viral Video: ಆಮೆಯೊಂದಿಗೆ ಆ್ಯಪಲ್ ಹಂಚಿಕೊಂಡ ಚಿಂಪಾಂಜಿ! ಈ ಪ್ರಾಣಿಗಳ ಪ್ರೀತಿ ಈಗ ನೆಟ್ಟಿಗರ ಫೇವರೇಟ್

ಚಿಂಪಾಂಜಿ ಆಮೆಯೊಂದಿಗೆ ಆ್ಯಪಲ್ ಹಂಚಿಕೊಳ್ಳುತ್ತಿರುವ ದೃಶ್ಯ

ಚಿಂಪಾಂಜಿ ಆಮೆಯೊಂದಿಗೆ ಆ್ಯಪಲ್ ಹಂಚಿಕೊಳ್ಳುತ್ತಿರುವ ದೃಶ್ಯ

ಚಿಂಪಾಂಜಿಯೊಂದು ಆಮೆಯೊಂದಿಗೆ ಆ್ಯಪಲ್ ಅನ್ನು ಹಂಚಿಕೊಂಡಿದ್ದು ಇದು ಎರಡು ವಿಭಿನ್ನ ಜಾತಿಯ ಪ್ರಾಣಿಗಳ ನಡುವಿನ ಪರಸ್ಪರ ಸಹಾನುಭೂತೀಯ ಗುಣವನ್ನು ತೋರಿಸುತ್ತಿದೆ. ಈ ವೀಡೀಯೋ ಸೋಶಿಯಲ್ ಮೀಡೀಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಜನರನ್ನು ಮಂತ್ರಮುಗ್ಧಗೊಳಿಸಿದೆ.

  • Share this:

ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ತನ್ನ ವಿಶೇಷ ಗುಣಗಳೊಂದಿಗೆ ಇತರ ಜೀವಿಗಳನ್ನು ಆಕರ್ಷಿಸುತ್ತವೆ. ಅಲ್ಲದೆ ಒಬ್ಬರು ಇನ್ನೊಬ್ಬರಿಂದ ಕಲಿತುಕೊಳ್ಳುವಂತಹದು ಈ ಜಗತ್ತಿನಲ್ಲಿ ಸಾಕಷ್ಟು ಇದೆ. ಅದು ಮನುಷ್ಯ ಮನುಷ್ಯನಿಂದಲೆ ಕಲಿಯುವಂತಹದ್ದು ಇರಬಹುದು ಇಲ್ಲ ಪ್ರಾಣಿಗಳ (Animals) ನಡುವೆ ಇರಬಹುದು ಇಲ್ಲವೆ ಮನುಷ್ಯ ಪ್ರಾಣಿಗಳಿಂದ ಕಲಿಯುವಂತಹದ್ದು ಇರಬಹುದು. ಕೆಲವು ಪ್ರಾಣಿಗಳು ತಮ್ಮ ವಿಭಿನ್ನವಾದ ವಿಚಾರಗಳಿಂದ, ವಿಶೇಷವಾದ ಘಟನೆಗಳಿಂದ ಮನುಷ್ಯನನ್ನು ಆಕರ್ಷಿಸುತ್ತದೆ. ಇದೀಗ ಅಂತಹದೇ ಒಂದು ಘಟನೆಯ ವೀಡೀಯೋ ಸಾಮಾಜಿಕ ತಾಲತಾಣದಲ್ಲಿ ತುಂಬಾನೇ ವೈರಲ್ (Viral) ಆಗುತ್ತಿದೆ. ಚಿಂಪಾಂಜಿಯೊಂದು (Chimpanzee) ಆಮೆಯೊಂದಿಗೆ (Tortoise) ಆ್ಯಪಲ್ (Appel) ಹಂಚಿಕೊಂಡ ವೀಡಿಯೋವಂದು ತುಂಬಾನೇ ಸದ್ದು ಮಾಡುತ್ತಿದ್ದು, ಇದು ಪರಸ್ಪರ ಹಂಚಿಕೊಳ್ಳುವಿಕೆ, ಅನ್ಯೋನ್ಯ ಬದುಕಿನ ಬಗ್ಗೆ ಸಂದೇಶ ನೀಡುವಂತಿದೆ.


ಪ್ರಾಣಿಗಳಲ್ಲೂ ಅನ್ಯೋನತೆಯ ಗುಣವಿದೆ
ಪ್ರಾಣಿಗಳು ಸಹಾನುಭೂತಿಯ ಜೀವಿಗಳು, ಪರಸ್ಪರ ದಯೆ ಮತ್ತು ಔದಾರ್ಯವನ್ನು ತೋರಿಸಲು ಹೆಸರುವಾಸಿಯಾಗಿದೆ. ಮೌಖಿಕ ಸಂವಹನದ ಕೊರತೆಯ ಹೊರತಾಗಿಯೂ, ಪ್ರಾಣಿಗಳು ಇತರೆ ಪ್ರಾಣಿಗಳ ಕುರಿತಾಗಿ ಹೇಗಾದರೂ ಪರಸ್ಪರ ಅರ್ಥಮಾಡಿಕೊಳ್ಳುತ್ತವೆ. ಮನುಷ್ಯರಂತೆ, ಚಿಂಪಾಂಜಿಗಳು ಸೇರಿದಂತೆ ಅನೇಕ ಪ್ರಾಣಿಗಳು ತಮ್ಮ ಹತ್ತಿರದ ಸ್ನೇಹಿತರೊಂದಿಗೆ ಆಹಾರವನ್ನು ಹಂಚಿಕೊಂಡು ತಿನ್ನುವ ಗುಣವನ್ನು ಹೊಂದಿದೆ.


ಇದನ್ನೂ ಓದಿ: Viral Video: ಕುದುರೆ ಮೇಲೆ ನಾಯಿ ಸವಾರಿ! ಹೇಗಿದೆ ನೋಡಿ ಪ್ರಾಣಿಗಳ ಫ್ರೆಂಡ್‌ಶಿಪ್


ಆಮೆಗೆ ಆ್ಯಪಲ್ ನೀಡಿದ ಚಿಂಪಾಂಜಿ
ಚಿಂಪಾಂಜಿಯು ಮನುಷ್ಯನ ದೈಹಿಕ ಗುಣಲಕ್ಷಣಗಳಿಗೆ ಪರಸ್ಪರ ಸಂಬಂಧ ಹೊಂದಿರುವ ಅತೀ ಮುಗ್ಧತೆಯುಳ್ಳ ಪ್ರಾಣಿಯಾಗಿದೆ. ಇದೀಗ ಚಿಂಪಾಂಜಿಯೊಂದು ಆಮೆಗೆ ತನ್ನಲ್ಲಿರುವ ಸೇಬು ಹಣ್ಣನ್ನು ನೀಡುವ ಮೂಲಕ ತುಂಬಾನೆ ಫೇಮಸ್ ಆಗಿದೆ. ಅಲ್ಲದೆ ಇದು ಒಂದು ರೀತಿಯಲ್ಲಿ ಮನುಷ್ಯನಿಗಿಯೇ ಹಂಚಿ ತಿನ್ನುವ ವಿಚಾರದ ಸಂದೇಶವನ್ನು ಪ್ರಾಣಿಗಳು ನೀಡಿದಂತಿದೆ.



ಪರಸ್ಪರ ಹಂಚಿಕೊಳ್ಳುವುದು ಕಾಳಜಿಯ ಪ್ರತೀಕ


ಬುಟೆಂಗ್ ಬಿಡನ್ (Buitengebieden) ಎಂಬ ಟ್ವಿಟ್ಟರ್ ಖಾತೆಯು ಚಿಂಪಾಂಜಿ ಆಮೆಯೊಂದಿಗೆ ಆ್ಯಪಲ್ ಹಂಚಿಕೊಳ್ಳುತ್ತಿರುವ ಮುದ್ದಾದ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು "ಹಂಚಿಕೊಳ್ಳುವುದು ಕಾಳಜಿಯುಳ್ಳದ್ದು" ಎಂದು ಸೂಕ್ತವಾಗಿ ಬರೆದಿದೆ. ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದ್ದ ಪ್ರಾಣಿಗಳ ಮುಗ್ಧತೆಗೆ ಜನ ಮನಸೋತಿದ್ದಾರೆ.


ವೀಡಿಯೊ 6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಹಲವಾರು ಕಮೆಂಟ್‌ಗಳೊಂದಿಗೆ 35,000 ಕ್ಕೂ ಹೆಚ್ಚು ಹಂಚಿಕೆಯಾಗಿದೆ. ಒಬ್ಬ ಬಳಕೆದಾರರು ಬರೆದಿದ್ದಾರೆ, "ನಾವು ಗಮನಹರಿಸಿದರೆ ಮಾತ್ರ ಪ್ರಾಣಿಗಳು ನಮಗೆ ತುಂಬಾ ಕಲಿಸಬಲ್ಲವು." ಇನ್ನೊಬ್ಬರು, "ಆ್ವ ಅದು ಸುಂದರವಾಗಿದೆ" ಎಂದು ಪ್ರತಿಕ್ರಿಯಿಸಿದರು. ಮತ್ತೊಬ್ಬರು "ನಂಬಿಕೆಯೊಂದಿಗೆ ಸಹಬಾಳ್ವೆ ನಡೆಸಿದಾಗ ಮತ್ತು ಸಹಾನುಭೂತಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಾದಾಗ ಯಾವುದೇ ದ್ವೇಷದ ಭಾವನೆ ಇರುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.


ಅನ್ಯೋನ್ಯತೆ ನೆಮ್ಮದಿಯ ಬದುಕಿಗೆ ದಾರಿ


ಪ್ರಾಣಿಗಳ ನಡುವಿನ ಅನ್ಯೋನ್ಯತೆ ಕುರಿತಾದ ಪ್ರಸಂಗಗಳು ಇದೇ ಮೊದಲ ಬಾರಿ ಕೇಳುವುದಲ್ಲ. ಕಪ್ಪಗೆ ನೆರಳಾದ ಹಾವು, ಹಸಿವಿನಿಂದ ಕ್ರೋಧಗೊಂಡ ಹುಲಿ ದನವನ್ನು ಬಿಟ್ಟು ಹೋದ ಹೀಗೆ ಅನೇಕ ಘಟನೆಗಳನ್ನು ಪುರಾಣದಿಂದಲೂ ಕೇಳಿಕೊಂಡು ಬಂದಿದ್ದೇವೆ. ಇವೆಲ್ಲವೂ ಒಂದೊಳ್ಳೆ ಸಂದೇಶವನ್ನು ಜಗತ್ತಿಗೆ ನೀಡುತ್ತಿದೆ.


ಇದನ್ನೂ ಓದಿ: Goat Viral Video: ತನ್ನನ್ನು ಮಾರಲು ಕರೆತಂದ ಮಾಲೀಕನ ತಬ್ಬಿಕೊಂಡು ಮನುಷ್ಯರಂತೆಯೇ ಕಣ್ಣೀರಿಟ್ಟ ಮೇಕೆ


ಚಿಂಪಾಂಜಿ ಮತ್ತು ಆಮೆಯೆಂಬ ಎರಡು ವಿಭಿನ್ನ ಜಾತಿಗಳ ನಡುವಿನ ಪರಸ್ಪರ ಅನ್ಯೋನತೆ ನಿಜಕ್ಕೂ ಅದ್ಭುತವಾದುದಾಗಿದದೆ. ಈ ಅಮೋಘ ದೃಶ್ಯವು ಜನರಿಗೆ ಅನ್ಯೋನ್ಯತೆಯ ಬದುಕು, ಪರಸ್ಪರ ಹಂಚಿಕೊಳ್ಳುವಿಕೆಯಿಂದ ಶಾಂತಿ ನೆಲೆಸುತ್ತದೆ ಎಂಬ ಸಂದೇಶವನ್ನು ನೀಡುತ್ತಿದೆ. ಇದು ನೆಮ್ಮದಿಯ ಬದುಕಿಗೆ ದಾರಿಯಾಗಿದೆ.

Published by:Nalini Suvarna
First published: