Viral News: ಮನುಷ್ಯರ ಜೊತೆ ಸೇರಿ ಬೆಳೆದಿದ್ದ ತಮ್ಮದೇ ಗುಂಪಿನ ಪ್ರಾಣಿಯನ್ನು ಹೊಡೆದು ಕೊಂದ ಚಿಂಪಾಂಜಿಗಳು!

Chimpanzee: ಚಿಂಪಾಂಜಿಯನ್ನು ಇತರ ಚಿಂಪಾಂಜಿ ಗಳೊಂದಿಗೆ ಹೇಗೆ ಬದುಕಬೇಕು ಎಂದು ಕಲಿಸಲು ಕೀನ್ಯಾದ ಅಭಯಾರಣ್ಯಕ್ಕೆ ಕಳಿಸಿ ಕೊಡಲಾಗಿತ್ತು. ಆದರೆ ಆ ಚಿಂಪಾಂಜಿ ಗೆ ಆದರೆ ಚಿಂಪಾಂಜಿಗಳ ಜೊತೆ ಹೊಂದಿಕೊಂಡು ಹೋಗಲು ಕಷ್ಟವಾಗಿತ್ತು. ಇಷ್ಟಕ್ಕೆ ರೊಚ್ಚಿಗೆದ್ದ ಸಹ ಚಿಂಪಾಂಜಿಗಳು ಮನುಷ್ಯರ ಜೊತೆ ಇದು ಬೆಳೆದುಬಂದಿದ್ದ ಚಿಂಪಾಂಜಿಯನ್ನು ಹೊಡೆದುಕೊಂದುಹಾಕಿರುವ ಘಟನೆ ನಡೆದಿದೆ

ಚಿಂಪಾಂಜಿ

ಚಿಂಪಾಂಜಿ

 • Share this:
  ಮನುಷ್ಯರಾಗಲು(Human) ಪ್ರಾಣಿಗಳಲ್ಲಿ(Animals) ತಮ್ಮದೇಯಾದ ಒಂದು ವೃತ್ತವನ್ನು(Circle) ರಚಿಸಿಕೊಂಡು ಇರುತ್ತಾರೆ.. ತಮ್ಮ ಪ್ರೀತಿಪಾತ್ರರು ಆತ್ಮೀಯರು ತಮಗೆ ಪರಿಚಯವಿದ್ದವರಷ್ಟೇ ಎಂದು ಬಯಸುತ್ತಾರೆ.. ಇದಕ್ಕೆ ಪ್ರಾಣಿಗಳು ಸಹ ಹೊರತಾಗಿಲ್ಲ..ಮನೇಲಿ(Home) ನಾವು ಒಂದು ನಾಯಿಯನ್ನು(Dog) ಹಾಕಿದ್ದೇವೆ ಎಂದರೆ ನಾಯಿ ಅದನ್ನ ತನ್ನ ಮನೆ ಎಂದು ಭಾವಿಸಿಕೊಂಡು ಇರುತ್ತದೆ.. ನನಗೆ ಬೇರೆ ಜನರು ಬರುವುದಾಗಲಿ ಅಥವಾ ಬೇರೆ ನಾಯಿಗಳು ಬರುವುದಾಗಲಿ ಅದನ್ನು ಮನೆಯಲ್ಲಿ ಸಾಕಿದ ಶ್ವಾನ ಸಹಿಸುವುದಿಲ್ಲ.. ಅಲ್ಲದೆ ಆ ನಾಯಿಯನ್ನು ಇದಕ್ಕಿದಂತೆ ಬೀದಿಯಲ್ಲಿ ಬಿಟ್ಟರೆ ಅದು ಬೀದಿಯಲ್ಲಿನ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತದೆ. ಇದು ಕೇವಲ ನಾಯಿಗಳಿಗೆ ಮಾತ್ರ ಅನ್ವಯ ಆಗುವುದಿಲ್ಲ.. ಒಂದು ಪರಿಸರದಲ್ಲಿ ಬೆಳೆದ ವ್ಯಕ್ತಿಯಾಗಲಿ ಪ್ರಾಣಿಯಾಗಲಿ ಮತ್ತೊಂದು ಪರಿಸರಕ್ಕೆ ಹೊಂದಿಕೊಳ್ಳಲು ಬಹಳ ಕಷ್ಟವಾಗುತ್ತದೆ.. ಈ ರೀತಿ ಒಂದು ಪರಿಸರದಿಂದ ಮತ್ತೊಂದು ಪರಿಸರಕ್ಕೆ ಹೋದ ಚಿಂಪಾಂಜಿ ಒಂದು ಹೊಂದಿಕೊಳ್ಳಲಾಗದೇ ಸಹ ಚಿಂಪಾಂಜಿ ಗಳಿಂದ ಹತ್ಯೆಗೆ ಯಾಗಿರುವ ದಾರುಣ ಘಟನೆಯೊಂದು ನಡೆದಿದೆ..

  ಚಿಂಪಾಂಜಿಗಳಿಂದಲೇ ಚಿಂಪಾಂಜಿಯ ಹತ್ಯೆ

  ತನ್ನ ಜೀವಮಾನದ ಬಹುತೇಕ ಭಾಗವನ್ನು ಚಿಂಪಾಂಜಿ ಒಂದು ಮನುಷ್ಯರ ಮಧ್ಯದಲ್ಲಿದ್ದು ಕಳೆದಿತ್ತು. ಹೇ ಕೆಲವು ದಿನಗಳ ಹಿಂದೆ ಆ ಚಿಂಪಾಂಜಿಯನ್ನು ಇತರ ಚಿಂಪಾಂಜಿ ಗಳೊಂದಿಗೆ ಹೇಗೆ ಬದುಕಬೇಕು ಎಂದು ಕಲಿಸಲು ಕೀನ್ಯಾದ ಅಭಯಾರಣ್ಯಕ್ಕೆ ಕಳಿಸಿ ಕೊಡಲಾಗಿತ್ತು. ಆದರೆ ಆ ಚಿಂಪಾಂಜಿ ಗೆ ಆದರೆ ಚಿಂಪಾಂಜಿಗಳ ಜೊತೆ ಹೊಂದಿಕೊಂಡು ಹೋಗಲು ಕಷ್ಟವಾಗಿತ್ತು. ಇಷ್ಟಕ್ಕೆ ರೊಚ್ಚಿಗೆದ್ದ ಸಹ ಚಿಂಪಾಂಜಿಗಳು ಮನುಷ್ಯರ ಜೊತೆ ಇದು ಬೆಳೆದುಬಂದಿದ್ದ ಚಿಂಪಾಂಜಿಯನ್ನು ಹೊಡೆದುಕೊಂದುಹಾಕಿರುವ ಘಟನೆ ನಡೆದಿದೆ.

  ಇದನ್ನೂ ಓದಿ:  ಹೆಲಿಕಾಪ್ಟರ್​ ಪತನ! ಸತತ 12 ಗಂಟೆಗಳ ಕಾಲ ಸಮುದ್ರದ ಮಧ್ಯದಲ್ಲಿ ಈಜಿ ದಡ ಸೇರಿ ಬದುಕುಳಿದ ಸಚಿವ!

  ಬರಾನ್ ಎಂಬ ಚಿಂಪಾಂಜಿಯನ್ನ ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿರುವ ಎರಾಮ್ ಪಾರ್ಕ್ ಮೃಗಾಲಯದಿಂದ ಕೀನ್ಯಾದ ಲೈಕಿಪಿಯಾದಲ್ಲಿರುವ ಸ್ವೀಟ್‌ವಾಟರ್ಸ್ ಚಿಂಪಾಂಜಿ ಅಭಯಾರಣ್ಯಕ್ಕೆ ವರ್ಗಾಯಿಸಲಾಗಿತ್ತು. ಅಲ್ಲದೆ ಬರಾನ್ ನ್ನು 90 ದಿನಗಳ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.
  ಕ್ವಾರಂಟೈನ್ನಿಂದ ಬರಾನ್ ಬಿಡುಗಡೆಗೊಂಡ ಬಳಿಕ ಆಕೆಯನ್ನು ಅಭಯಾರಣ್ಯದಲ್ಲಿ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದರಲ್ಲಿ ಸಹ ಚಿಂಪಾಂಜಿಗಳು ಇದ್ದಕಡೆಗೆ ಬರಾನ್ ಪ್ರವೇಶ ಮಾಡಿದ್ದಾಳೆ.. ಇದರಿಂದ ರೊಚ್ಚಿಗೆದ್ದ ಇತರ ಚಿಂಪಾಂಜಿಗಳು ಬರಾನ್ ಗೆ ಚೆನ್ನಾಗಿ ಥಳಿಸಿ ಹಲ್ಲೆ ಮಾಡಿವೆ. ಇದರಿಂದ ಎಚ್ಚೆತ್ತ ಝೂಕೀಪರ್‌ಗಳು ಕೊನೆಗೆ ಚಿಂಪಾಂಜಿಗಳನ್ನು ಶಾಂತಗೊಳಿಸಿ ಬರಾನ್ ನ
  ರಕ್ಷಣೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿಂಪಾಂಜಿ ಗಳಿಂದ ಹಲ್ಲೆಗೆ ಒಳಗಾಗಿದ್ದ ಚಿಂಪಾಂಜಿ ಸಾವಿಗೆ ಈಡಾಗಿದೆ.

  ಮನುಷ್ಯರ ಜೊತೆಗೆ ಬೆಳೆದಿದ್ದ ಬರಾನ್

  ಟೆಹ್ರಾನ್‌ನಲ್ಲಿರುವ ಎರಾಮ್ ಪಾರ್ಕ್ ನಲ್ಲಿ ಜನಿಸಿದ ಬರಾನ್ ನ್ನು ತಾಯಿ ಚಿಂಪಾಂಜಿ ತಿರಸ್ಕರಿಸಿದ ಕಾರಣ, ಮನುಷ್ಯರು ಬರಾನ್ ನ್ನು ಸಾಕಿ ಬೆಳೆಸಿದರು.. ಆದರೆ ಹೆಚ್ಚು ದಿನಗಳ ಕಾಲ ಹೀಗೆ ಮನುಷ್ಯರು ಸಾಕಿ ಬಳಸುವುದು ಸರಿಯಲ್ಲ ಎಂಬ ಕಾರಣಕ್ಕೆ ಬರಾನ್ ನ್ನು
  ಕೀನ್ಯಾದ ಲೈಕಿಪಿಯಾದಲ್ಲಿರುವ ಸ್ವೀಟ್‌ವಾಟರ್ಸ್ ಚಿಂಪಾಂಜಿ ಅಭಯಾರಣ್ಯಕ್ಕೆ ಕಳಿಸಿ ಆಕೆಗೆ ಇತರ ಚಿಂಪಾಂಜಿ ಗಳಂತೆಯೇ ಬದುಕುವುದನ್ನು ಕಲಿಯಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕೀನ್ಯಾದಲ್ಲಿ ಇತರ ಚಿಂಪಾಂಜಿಗಳು ಬರಾನ್ ನ್ನು ಹೊಡೆದು ಕೊಂದು ಹಾಕಿವೆ.

  ಇದನ್ನೂ ಓದಿ: 35 ವರ್ಷದಲ್ಲಿ ಬರೋಬ್ಬರಿ 400 ಬಾರಿ ಕೋರ್ಟ್‌ ಮುಂದೆ ಹಾಜರಾದ ವೃದ್ಧನಿಗೆ ಕೊನೆಗೂ ಸಿಕ್ತು ಜಯ

  ಇನ್ನು ಈ ಘಟನೆ ಬಗ್ಗೆ ಮಾತನಾಡಿರುವ ಎರಾಮ್ ಮೃಗಾಲಯದ ವಕ್ತಾರರು "ಚಿಂಪಾಂಜಿಗಳು ಸಾಮಾಜಿಕ ಜೀವಿಗಳು, ಅವರು ಆರೋಗ್ಯಕರ ಮತ್ತು ನೈಸರ್ಗಿಕ ಸಾಮಾಜಿಕ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಪಡೆಯಲು ತಮ್ಮ ಸಾಮಾಜಿಕ ಗುಂಪುಗಳಲ್ಲಿ ವಾಸಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಎರಾಮ್ ಮೃಗಾಲಯವು ಬರನ್ ಅನ್ನು ಉಳಿಸಲು ಸಾಧ್ಯವಾಯಿತು, ಆದರೆ ಆಕೆಯನ್ನು ಕೀನ್ಯಾದ ಅಂತರರಾಷ್ಟ್ರೀಯ ಚಿಂಪಾಂಜಿ ಆರೈಕೆ ಕೇಂದ್ರಕ್ಕೆ ವರ್ಗಾಯಿಸಲು ನಿರ್ಧರಿಸಲಾಯಿತು ಏಕೆಂದರೆ ಅವಳು ಅಗತ್ಯ ಸೌಲಭ್ಯಗಳು ಮತ್ತು ಪರಿಸರದೊಂದಿಗೆ ಉತ್ತಮವಾಗಿ ಬದುಕಬಹುದು ಎಂದು.. ಆದರೆ ಈಗ ನಿರ್ಧಾರವೇ ಅವಳ ಸಾವಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
  Published by:ranjumbkgowda1 ranjumbkgowda1
  First published: