ಪ್ರಾಣಿಗಳೇ(Animals) ಗುಣದಲ್ಲಿ ಮೇಲೂ.. ಈ ಮಾತು ನೂರಕ್ಕೂ ನೂರು ಸತ್ಯ. ಮಾತು ಬರದಿದ್ದರೂ ಪ್ರಾಣಿಗಳು ಮನುಷ್ಯ(Humans)ರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ. ಈ ರೀತಿಯ ಹಲವು ವಿಶೇಷ ವಿಡಿಯೋ(Special Video)ಗಳನ್ನು ನೀವು ನೋಡಿದ್ದೀರಾ. ಮಂಗ(Monkey)ನಿಂದ ಮಾನವ(Human) ಅಂತ ಎಲ್ಲರಿಗೂ ಗೊತ್ತು. ಆದರೆ ಇಲ್ಲೊಂದು ಚಿಂಪಾಂಜಿ(Chimpanzee) ಮಾಡಿರುವ ಒಂದು ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ದೃಶ್ಯಗಳು ಕಾಣಸಿಗದ ದಿನವೇ ಇಲ್ಲ. ಪ್ರತಿದಿನ ಒಂದಲ್ಲ ಒಂದು ಪ್ರಾಣಿಗಳ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂಥಹ ಪ್ರಾಣಿಗಳ ವಿಡಿಯೋ ನಮ್ಮ ಮುಖದಲ್ಲಿ ನಗು(Smile) ಮೂಡುವಂತೆ ಮಾಡುತ್ತವೆ. ಈ ದೃಶ್ಯವನ್ನು ನೋಡುವಾಗಲೂ ನಿಮಗೆ ಇಂತಹದ್ದೇ ಅನುಭವವಾಗಬಹುದು. ಚಿಂಪಾಂಜಿಯೊಂದು ಎಷ್ಟರ ಮಟ್ಟಿಗೆ ತನ್ನ ಬುದ್ಧಿವಂತಿಕೆ(Wisdom) ತೋರಿದೆ ಅಂದರೆ ನೀವು ನೋಡಿದರೆ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತೀರಾ.
ಚಿಂಪಾಂಜಿ ಬುದ್ದಿವಂತಿಕೆ ಕಂಡು ಎಲ್ಲರಿಗೂ ಶಾಕ್!
ಒಮ್ಮೊಮ್ಮೆ ಪ್ರಾಣಿಗಳು ತೋರುವ ಬುದ್ಧಿವಂತಿಕೆ, ಸಮಯಪ್ರಜ್ಞೆ ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಚಿಂಪಾಂಜಿಯೊಂದು ಹಣ್ಣುಗಳನ್ನು ಕೊಂಡೊಯ್ಯುವ ರೀತಿ ಮತ್ತು ತನಗೆ ಹಿಡಿದುಕೊಳ್ಳಲಾಗದ ಹಣ್ಣುಗಳನ್ನೂ ಹರಸಾಹಸ ಪಟ್ಟು ಕೊಂಡೊಯ್ಯಲು ಬಳಸಿದ ಜಾಣ ಮಾರ್ಗ ಎಲ್ಲರಿಗೂ ಇಷ್ಟವಾಗಿದೆ. ಕೊಟ್ಟ ಹಣ್ಣನು ಬಿಳಿಸಿಕೊಳ್ಳದೇ, ಅದರಲ್ಲೂ ಒಂದು ಹಣ್ಣು ಕೆಳಗೆ ಬೀಳದಂತೆ ಕೈಯಲ್ಲಿ, ಬಾಯಲ್ಲಿ, ಕೆಳಗೆ ಬಿದ್ದ ಹಣ್ಣನ್ನು ಕಾಲಲ್ಲಿ ಹಿಡಿದುಕೊಂಡು ಹೋಗುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಚಿಂಪಾಂಜಿಯ ಬುದ್ಧಿವಂತಿಕೆ ಕಂಡು ನೆಟ್ಟಿಗರು ಕಣ್ಣು ಬಾಯಿ ಬಿಟ್ಕೊಂಡು ಈ ವಿಡಿಯೋವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ.
ಕಾಲುಗಳಲ್ಲೂ ಹಣ್ಣು ಹೊತ್ತೊಯ್ದ ಚಿಂಪಾಂಜಿ!
@buitengebieden_ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಚಿಂಪಾಂಜಿಯೊಂದು ಕೈಯಲ್ಲಿ ಹಣ್ಣುಗಳ ರಾಶಿಯನ್ನು ಹಿಡಿದು ಸಾಗುವ ದೃಶ್ಯದ ಸೆರೆಯಾಗಿದೆ. ಇಲ್ಲಿ ಗಮನ ಸೆಳೆಯುವುದು ಈ ಚಿಂಪಾಂಜಿಯ ಕಾಲುಗಳಲ್ಲಿ ಇರುವ ಎರಡು ಹಣ್ಣುಗಳು. ಹೌದು, ತನ್ನ ಕೈಯಲ್ಲಿ ಹಿಡಿಯಲಾಗದ ಹಣ್ಣುಗಳನ್ನು ಈ ಚಿಂಪಾಂಜಿ ಕಾಲಿನಲ್ಲೂ ಇಟ್ಟು ಜಾಣತನದಿಂದ ಕೊಂಡೊಯ್ದಿದೆ. ಬರೀ ಕಾಲಷ್ಟೇ ಅಲ್ಲ, ಚಿಂಪಾಂಜಿಯ ಬಾಯಿಯಲ್ಲೂ ಒಂದು ಹಣ್ಣು ತೆಗೆದುಕೊಂಡು ಹೋಗುತ್ತಿರುವುದನ್ನ ನೀವು ನೋಡಬಹುದು.
ಇದನ್ನು ಓದಿ : ಬಸವನ ಹುಳುವಿನಿಂದ ತಯಾರಾಗುತ್ತೆ ಈ ಸಾಬೂನು!; ಇದರಿಂದ ನಿಮ್ಮ ಚರ್ಮಕ್ಕೇನು ಲಾಭ ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಒಂದೇ ಬಾರಿಗೆ ಹಲವು ಹಣ್ಣುಗಳನ್ನು ಕೊಂಡೊಯ್ಯಲು ಈ ಜಾಣ ಪ್ರಾಣಿ ಮಾಡಿರುವ ಐಡಿಯಾ ಮಾತ್ರ ಸೂಪರ್ ಆಗಿದೆ. ಚಿಂಪಾಂಜಿಯ ಐಡಿಯಾಗೆ ಫುಲ್ ಫಿದಾ ಆಗಿದ್ದಾರೆ.
`ನೀವು ಚೀಲಕ್ಕೆ 10 ಸೆಂಟ್ಸ್ ಪಾವತಿಸಲು ಬಯಸದೇ ಇದ್ದಾಗ' ಈ ರೀತಿ ಹಣ್ಣುಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಕ್ಯಾಪ್ಶನ್ ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಮತ್ತೊಬ್ಬರು ಪ್ಲಾಸ್ಟಿಕ್ ಬ್ಯಾಗ್ ಬ್ಯಾನ್ ಆಗಿದ್ದಾಗ ನಾನು ಇದೇ ರೀತಿಯಲ್ಲಿ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದೆ ಅಂತ ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ: ಸಿಂಹದಂತೆ ವೇಷ ಧರಿಸಿ ಬಂದ ನಾಯಿ: ಜನರನ್ನು ಬೆಚ್ಚಿಬೀಳಿಸಿದ 12 ಸೆಕೆಂಡ್ ವಿಡಿಯೋ ನೋಡಿ
ಪ್ರಾಣಿಗಳಿಗೆ ನಿಜವಾಗಿ ಆಹಾರದ ಬೆಲೆ ಗೊತ್ತಿದೆ. ಆದರೆ ಮನುಷ್ಯ ಮಾತ್ರ ಆಹಾರವನ್ನು ಮಿತವಾಗಿ ಬಳಸದೇ ಹೆಚ್ಚು ವೇಸ್ಟ್ ಮಾಡುತ್ತಿದ್ದಾನೆ. ಆಡಂಬರದ ಜೀವನ ನಡೆಸಲು ಹೋಗಿ ಪ್ರಾಣಿಗಳಿಗಿಂತ ಕಡೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಮನುಷ್ಯ ಇನ್ನಾದರೂ ಆಹಾರಕ್ಕೆ ಹೆಚ್ಚಿನ ಮಹತ್ವ ಕೊಡಲಿ ಅಂತ ಮತ್ತೊಬ್ಬ ಕಮೆಂಟ್ ಮಾಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ