• Home
  • »
  • News
  • »
  • trend
  • »
  • Viral Video: ಮಗುವಿನ ಗಾಯಕ್ಕೆ ಕೀಟದ ಲೇಪನವನ್ನು ಔಷಧವಾಗಿ ಬಳಸಿದ ಜಾಣ ತಾಯಿ ಚಿಂಪಾಂಜಿ

Viral Video: ಮಗುವಿನ ಗಾಯಕ್ಕೆ ಕೀಟದ ಲೇಪನವನ್ನು ಔಷಧವಾಗಿ ಬಳಸಿದ ಜಾಣ ತಾಯಿ ಚಿಂಪಾಂಜಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಿ ಚಿಂಪಾಂಜಿ ಒಂದು ತನ್ನ ಮಗನ ಕಾಲಿನಲ್ಲಾದ ಗಾಯಕ್ಕೆ ಮೊದಲ ಬಾರಿಗೆ ಅಪರಿಚಿತ ಕೀಟವೊಂದನ್ನು ಅರೆದು ಹಚ್ಚುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • Share this:

    ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ವಿಡಿಯೋಗಳು (Videos) ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಪ್ರಾಣಿ-ಪಕ್ಷಿಗಳು (Animals) ಕೂಗುವುದು, ಬೇಟೆಯಾಡುವುದು, ಮರಿಗಳೊಂದಿಗೆ ಆಟವಾಡುವುದು, ಉಣಿಸುವುದು ಹೀಗೆ ಹಲವು ವಿಡಿಯೋಗಳು ನಮ್ಮ ಗಮನ ಸೆಳೆಯುತ್ತವೆ. ಮನುಷ್ಯರು ಬುದ್ಧಿವಂತರು ಏನೇ ನೋವಾಗಲಿ ಅದಕ್ಕೆ ತಕ್ಕ ಔಷಧ (Medicine) ಮಾಡಿಕೊಂಡು ಬಿಡುತ್ತೇವೆ. ಆದರೆ ಪ್ರಾಣಿಗಳು ಏನು ಮಾಡುತ್ತವೆ ಎಂಬ ಆಲೋಚನೆಗೆ ಚಿಂಪಾಂಜಿ ಒಂದು ಉತ್ತರಿಸಿದೆ. ಚಿಂಪಾಂಜಿಗಳು (Chimpanzee) ಜಾಣ್ಮೆಯನ್ನು (Talent) ಪ್ರದರ್ಶಿಸುತ್ತವೆ. ನಾವ್ಯಾಕೆ ಇದನ್ನ ಹೇಳ್ತಿದಿವಿ ಅಂದ್ರೆ ಇಲ್ಲೊಂದು ತಾಯಿ ಚಿಂಪಾಂಜಿ ತನ್ನ ಮಗು ಚಿಂಪಾಂಜಿಗೆ ಆಗಿದ್ದ ಗಾಯಕ್ಕೆ ಕೀಟವನ್ನೇ ಔಷಧವಾಗಿ ಹಚ್ಚಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಪತ್ತೆ ಮಾಡಿದ್ದಾರೆ.


    ತಾಯಿ ಚಿಂಪಾಂಜಿಯ ಜಾಣ್ಮೆ ವಿಡಿಯೋದಲ್ಲಿ ಸೆರೆ


    ಬುದ್ಧಿವಂತ ಮಾನವ  ತಾನು ಗಾಯಗೊಂಡರೆ ಬ್ಯಾಂಡೇಜ್, ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ನಂಜುನಿರೋಧಕ ದ್ರವವನ್ನು ಗಾಯದ ಮೇಲೆ ಸಿಂಪಡಿಸಿ,  ಸ್ವಚ್ಛಗೊಳಿಸಿ ಬ್ಯಾಂಡೇಜ್‌ ಕಟ್ಟಿಕೊಳ್ಳೂತ್ತಾನೆ. ಆದರೆ ಚಿಂಪಾಂಜಿಗಳು ಕೂಡ ಅದನ್ನೇ ಮಾಡುತ್ತಿವೆ. ಆದರೆ ಅವರು ನಂಜು ನಿವಾರಕ ಔಷಧದ ಬದಲು ಕೀಟವನ್ನು ಲೇಪನಕ್ಕೆ ಬಳಸಿವೆ.

    ಇದನ್ನೂ ಓದಿ: ಮಗಳನ್ನು ಮಂಗ ಎಂದು ಕರೆಯುವ ತಾಯಿ! ಇದಕ್ಕೆ ನೆಟಿಜನ್ ಏನಂದ್ರು ಗೊತ್ತಾ?


    ತಾಯಿ ಚಿಂಪಾಂಜಿ ಒಂದು ತನ್ನ ಮಗನ ಕಾಲಿನಲ್ಲಾದ ಗಾಯಕ್ಕೆ ಮೊದಲ ಬಾರಿಗೆ ಅಪರಿಚಿತ ಕೀಟವೊಂದನ್ನು ಅರೆದು ಹಚ್ಚುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು  ಸೆರೆ ಹಿಡಿದಿದ್ದಾರೆ.


    ಮಗುವಿನ ಗಾಯಕ್ಕೆ ಕೀಟದ ಲೇಪನ ಮಾಡಿದ ಚಿಂಪಾಂಜಿ


    ಈ ಬಗ್ಗೆ ಡೈಲಿ ಮೇಲ್ ವರದಿ ಮಾಡಿದ್ದು, ಸುಜೀ ಹೆಸರಿನ ವಯಸ್ಕ ಚಿಂಪಾಂಜಿ, ತನ್ನ ಮಗ ಸಿಯಾ ನ ಕಾಲಿಗೆ ಆದ ಗಾಯವನ್ನು ಪರೀಕ್ಷಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ. ತಾಯಿ ಚಿಂಪಾಂಜಿ ಕೀಟವನ್ನು ಹಿಡಿದು ತನ್ನ ಮಗುವಿನ ಗಾಯಕ್ಕೆ ಹಚ್ಚುವ ಮೊದಲು ಅದನ್ನು ತನ್ನ ಬಾಯಿಗೆ ಹಾಕಿಕೊಳ್ಳುತ್ತದೆ.




    ಸಂಶೋಧಕರಿಗೆ ಅದು ಯಾವ ಕೀಟ ಎಂದು ಖಚಿತ ಮಾಹಿತ ಸಿಕ್ಕಿಲ್ಲ. ಆದರೂ ಸಹ ತಾಯಿ ಚಿಂಪಾಂಜಿ ಲೇಪಿಸಿದ ಕೀಟ, ಗಾಯದ ಶುದ್ಧೀಕರಣ ಅಥವಾ ನೋವು ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ಊಹಿಸುತ್ತಿದ್ದಾರೆ ಎಂದು ಹೇಳಿದೆ.


    ಪ್ರಾಣಿಗಳ ಆರೈಕೆ, ಕಾಳಜಿ ಸ್ವಭಾವ


    ವೀಡಿಯೊದಲ್ಲಿ, ಸುಜೀ ಮೊದಲು ತನ್ನ ಮಗ ಸಿಯಾನ ಪಾದವನ್ನು ನೋಡುತ್ತದೆ.  ನಂತರ ಏನು ಮಾಡಬಹುದು ಎಂಬಂತೆ ಯೋಚಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ತಲೆಯೆತ್ತಿ ನೋಡುವ ತಾಯಿ ಚಿಂಪಾಂಜಿ, ಕೀಟವನ್ನು ನೋಡುತ್ತಾಳೆ ಮತ್ತು ಅದನ್ನು ಹಿಡಿದು ತನ್ನ ಮಗನ ಕಾಲಿಗೆ ಹಚ್ಚುತ್ತಾಳೆ. ಇದು ವಿಶೇಷ ಸಂಗತಿಯಾಗಿದೆ. ಏಕೆಂದರೆ  ಅನೇಕ ಜನರು ಪ್ರಾಣಿಗಳಲ್ಲಿ ಯೋಚನಾ ಸಾಮರ್ಥ್ಯ ಮತ್ತು ಬುದ್ಧಿವಂತಿಕೆ ಇರುವುದನ್ನು ಅಲ್ಲಗಳೆಯುತ್ತಾರೆ.


    ಇದನ್ನೂ ಓದಿ: ಗೃಹಿಣಿಯರಿಗೆ Axis Bankನಿಂದ ಭರ್ಜರಿ ಆಫರ್​​; ಕೆಲಸಕ್ಕೆ ಹುಡುಕುತ್ತಿದ್ರೆ ಇದಕ್ಕಿಂತ ಇಲ್ಲ ಉತ್ತಮ ಅವಕಾಶ


    ಆದರೆ ಇಲ್ಲಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯ ಆರೈಕೆ ಮತ್ತು ಕಾಳಜಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಎವಲ್ಯೂಷನರಿ ಆಂಥ್ರೊಪಾಲಜಿ ಮತ್ತು ಓಝೌಗಾ ಚಿಂಪಾಂಜಿ ಪ್ರಾಜೆಕ್ಟ್ ಎರಡರ ವಿಕಸನೀಯ ಜೀವಶಾಸ್ತ್ರಜ್ಞ ಅಲೆಸ್ಸಾಂಡ್ರಾ ಮಸ್ಕರೊ ನೇತೃತ್ವದಲ್ಲಿ ನಡೆಸಿದ ಅಧ್ಯಯನದಲ್ಲಿ ಪ್ರಾಣಿಗಳು ಮತ್ತೊಂದು ಪ್ರಾಣಿಯ ಬಗ್ಗೆ  ಕಾಳಜಿ ತೋರುವುದು, ಗಾಯಕ್ಕೆ ಔಷಧ ಹಚ್ಚುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.


    ಒಟ್ಟಿನಲ್ಲಿ ತಾಯಿ ಚಿಂಪಾಂಜಿ ತನ್ನ ಮಗುವಿಗೆ ಕೀಟದ ಲೇಪನವನ್ನೇ ಔಷಧವಾಗಿ ಬಳಕೆ ಮಾಡಿ, ಗಾಯವನ್ನು ಹೋಗಲಾಡಿಸಲು ಪ್ರಯತ್ನ ಮಾಡಿದ್ದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

    Published by:renukadariyannavar
    First published: