Teacher and Children: ಶಿಕ್ಷಕಿಯ ಚಿತ್ರ ಬಿಡಿಸಿದ ಪುಟಾಣಿಗಳು; ಮುಗ್ಧ ಮನಸ್ಸಿನ ಕ್ರಿಯಾತ್ಮಕತೆಗೆ ಭೇಷ್ ಎಂದ ನೆಟ್ಟಿಗರು

ಇಲ್ಲೊಬ್ಬ ಶಿಕ್ಷಕಿ ನಿಶಾತ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಒಂದು ವಿಭಿನ್ನವಾದ ಟಾಸ್ಕ್ ನೀಡಿದ್ದರು. ತಮ್ಮ ಚಿತ್ರವನ್ನು ಬಿಡಿಸುವಂತೆ ಮಕ್ಕಳಿಗೆ ಹೇಳಿದರು. ಮಾಸ್ಕ್ ಇರುವ ಸೆಲ್ಫಿಯೊಂದನ್ನು ನಿಶಾತ್ ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಂತೆಯೇ ಮಕ್ಕಳು ಬಿಡಿಸಿದ ಚಿತ್ರ ಹೇಗಿತ್ತು ನೋಡಿ.

ಶಿಕ್ಷಕಿಯ ಸೆಲ್ಫಿ ಚಿತ್ರ ಬಿಡಿಸಿದ ಮಕ್ಕಳು

ಶಿಕ್ಷಕಿಯ ಸೆಲ್ಫಿ ಚಿತ್ರ ಬಿಡಿಸಿದ ಮಕ್ಕಳು

  • Share this:
ನಾವು ಮಾತಿನಲ್ಲಿ, ಬರವಣಿಗೆಯಲ್ಲಿ ಹೇಳಲಾರದ ಅದೆಷ್ಟೋ ವಿಷಯಗಳನ್ನು ಚಿತ್ರಕಲೆಗಳ (Painting) ಮೂಲಕ ಬಣ್ಣಿಸಬಹುದಾಗಿದೆ. ಕಲೆಯ ವಿಷಯ ಇಲ್ಯಾಕಪ್ಪ ಬಂತು ಎಂಬುದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತಿದ್ದರೆ ಈ ಸುದ್ದಿ ಖಂಡಿತ ನಿಮಗೆ ಉಲ್ಲಾಸವನ್ನು ನೀಡುತ್ತದೆ. ಹಾಗೆಯೇ ಇಲ್ಲೊಬ್ಬ ಶಿಕ್ಷಕಿ (Teacher) ನಿಶಾತ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಒಂದು ವಿಭಿನ್ನವಾದ ಟಾಸ್ಕ್ ನೀಡಿದ್ದರು. ತಮ್ಮ ಚಿತ್ರವನ್ನು (Drawing) ಬಿಡಿಸುವಂತೆ ಮಕ್ಕಳಿಗೆ ಹೇಳಿದರು. ಮಾಸ್ಕ್ ಇರುವ ಸೆಲ್ಫಿಯೊಂದನ್ನು ನಿಶಾತ್ ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಂದನೇ ತರಗತಿಯ ಮಕ್ಕಳಲ್ಲಿ ಈ ಸೆಲ್ಫಿ ಚಿತ್ರವನ್ನು ಬಿಡಿಸುವಂತೆ ಮಕ್ಕಳಿಗೆ ಹೇಳಿದಾಗ ಮಕ್ಕಳೇನೋ (Children) ತಮ್ಮ ಶಿಕ್ಷಕಿಯ ಚಿತ್ರವನ್ನು ಬಿಡಿಸಿದರು ಆದರೆ ಚಿತ್ರಗಳು ತುಂಬಾ ಮೋಜಿನದಾಗಿತ್ತು ಮತ್ತು ನಕ್ಕು ನಕ್ಕು ಸುಸ್ತಾಯಿತು ಎಂದೇ ನಿಶಾತ್ ತಮ್ಮ ಅಭಿಪ್ರಾಯಗಳನ್ನು (Opinions) ಹಂಚಿಕೊಂಡಿದ್ದಾರೆ.

ಮಕ್ಕಳು ಬಿಡಿಸಿದ ಚಿತ್ರಗಳನ್ನು ಶಿಕ್ಷಕಿ ನಿಶಾತ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು ಮೋಜಿನ ಕಾಮೆಂಟ್‌ಗಳು ಇದಕ್ಕೆ ಬಂದಿವೆ. ಸ್ವತಃ ಮಾಸ್ಕ್ ಹಾಕಿಕೊಂಡಿರುವ ಚಿತ್ರವನ್ನು ನಿಶಾತ್ ತಾಣದಲ್ಲಿ ಹಂಚಿಕೊಂಡಿದ್ದು ಇದೇ ಚಿತ್ರವನ್ನು ಬಿಡಿಸುವಂತೆ ಮಕ್ಕಳಿಗೆ ಹೇಳಿದ್ದರು. ಮಕ್ಕಳು ಬಿಡಿಸಿದ ಚಿತ್ರಗಳು ಹೇಗಿದ್ದವು ಎಂಬುದನ್ನು ನೀವೇ ನೋಡಿ ಎಂಬ ಶೀರ್ಷಿಕೆ ನೀಡಿದ್ದಾರೆ.

ಮಕ್ಕಳ ಚಿತ್ರಕ್ಕೆ ಅಂಕ ನೀಡಿ ಶೀರ್ಷಿಕೆ ಬರೆದ ಶಿಕ್ಷಕಿ
ಟ್ವಿಟ್ಟರ್‌ನಲ್ಲಿ ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಹಂಚಿಕೊಂಡಿರುವ ಶಿಕ್ಷಕಿ ಅವರ ಪ್ರಯತ್ನಕ್ಕೆ ತಕ್ಕಂತೆ ಅಂಕಗಳನ್ನು ನೀಡಿರುವುದನ್ನು ಉಲ್ಲೇಖಿಸಿದ್ದಾರೆ. ಆರಂಭದಲ್ಲಿ ಚಿತ್ರವು ಹಾಳಾಗಿದ್ದರೂ ನನ್ನ ಕೂದಲನ್ನು ಬಿಡಿಸಿರುವುದು ಸುಂದರವಾಗಿತ್ತು.

ಇದನ್ನೂ ಓದಿ: Kerala Onam Lottery Result 2022: ಆಟೋ ಡ್ರೈವರ್‌ಗೆ ಒಲಿದ ಅದೃಷ್ಟ, ಕೊನೆ ಕ್ಷಣದಲ್ಲಿ ಖರೀದಿಸಿದ ಟಿಕೆಟ್‌ಗೆ ಬಂತು 25 ಕೋಟಿ ಬಹುಮಾನ!ನನ್ನ ದೇಹ ವೋಡ್ಕಾ ಬಾಟಲಿನಂತಾಗಿತ್ತು. ಒಟ್ಟಾರೆ 10 ರಲ್ಲಿ 5 ಅಂಕವನ್ನು ನೀಡಬಹುದು ಎಂದು ಚಿತ್ರಕ್ಕೆ ಶೀರ್ಷಿಕೆ ನೀಡಿ ಅಂಕ ನೀಡಿದ್ದಾರೆ. ಇನ್ನು ಎರಡನೆಯ ಚಿತ್ರಕ್ಕೂ ತಮ್ಮದೇ ಆದ ಶೀರ್ಷಿಕೆಗಳನ್ನು ನೀಡಿರುವ ಶಿಕ್ಷಕಿ, ನನ್ನ ತಲೆಗೂದಲನ್ನು ಸ್ವಲ್ಪ ಸಮಯದವರೆಗೆ ಬೋಳಿಸಿಕೊಳ್ಳಬೇಕೆಂಬ ಬಯಕೆಯನ್ನು ನಾನಿಲ್ಲಿ ಕಂಡಂತಿದೆ. ಕೈಗಳ ಆಕಾರ ಕೂಡ ವಿಚಿತ್ರವಾಗಿವೆ ಹಾಗಾಗಿ ಈ ಚಿತ್ರಕ್ಕೆ 10 ರಲ್ಲಿ 4.5 ಅಂಕಗಳನ್ನು ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮಕ್ಕಳ ಮನಸ್ಸಿನ ಭಾವನೆ ಚಿತ್ರದಲ್ಲಿ ಮೂಡಿಬಂದಿದೆ
ದೇಶಭಕ್ತಿಯ ಕಂಪನಗಳು ಕಣ್ಣಲ್ಲಿ ಕಾಣುತ್ತಿವೆ. ಕಣ್ರೆಪ್ಪೆಗಳನ್ನು ಬಿಡಿಸಿರುವುದು ಸುಂದರವಾಗಿದೆ. ಉಡುಪನ್ನು ಹೀಗೆಯೇ ಎಂದು ಹೇಳಲಾಗುತ್ತಿಲ್ಲ ಅಂತೂ ಈ ಚಿತ್ರಕ್ಕೆ 10 ರಲ್ಲಿ 6.5 ಅಂಕಗಳನ್ನು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಇನ್ನು ಕೆಲವು ಮಕ್ಕಳು ಚಿತ್ರವನ್ನು ಸುಂದರವಾಗಿ ಬರೆದಿದ್ದಾರೆ ಎಂಬ ಕಾಮೆಂಟ್‌ಗಳನ್ನು ಶಿಕ್ಷಕಿ ನೀಡಿದ್ದು ಮಕ್ಕಳ ಕಲಾ ವೈವಿಧ್ಯತೆಗೆ ಇವೆಲ್ಲವೂ ಉತ್ತಮ ಉದಾಹರಣೆಗಳು ಎಂದು ಬರೆದುಕೊಂಡಿದ್ದಾರೆ.ಮಕ್ಕಳು ನನ್ನ ಚಿತ್ರವನ್ನು ಹಾಗೆಯೇ ಬಿಡಿಸಿದ್ದಕ್ಕಿಂತಲೂ ತಮ್ಮ ಮನಸ್ಸಿನ ಭಾವನೆಗಳಿಗೆ ನನ್ನನ್ನು ವಸ್ತುವಾಗಿ ಪರಿಗಣಿಸಿ ಬಿಡಿಸಿದ್ದಾರೆ. ಹಾಗಾಗಿಯೇ ಚಿತ್ರದಲ್ಲಿ ಅವರ ಮುಗ್ಧತೆ ಎದ್ದುಕಾಣುತ್ತಿದೆ ಎಂಬುದು ಶಿಕ್ಷಕಿಯ ಅಭಿಪ್ರಾಯವಾಗಿದೆ.

ಇಂಟರ್ನೆಟ್ ಬಳಕೆದಾರರ ಮೆಚ್ಚುಗೆ ಪಡೆದ ಟ್ವೀಟ್
ಶಿಕ್ಷಕಿಯ ಪೋಸ್ಟ್ ಇಲ್ಲಿಯವರೆಗೆ 3,281 ಮೆಚ್ಚುಗೆಗಳನ್ನು ಪಡೆದುಕೊಂಡಿದ್ದು 165 ಮರುಟ್ವೀಟ್‌ಗಳಿಗೆ ಪಾತ್ರವಾಗಿದೆ. ಮಕ್ಕಳ ಪ್ರಯತ್ನ ಹಾಗೂ ಕ್ರಿಯಾತ್ಮಕತೆಯನ್ನು ಟ್ವಿಟ್ಟರ್ ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ನಮಗಿಂತಲೂ ಸುಂದರವಾಗಿ ಮಕ್ಕಳು ಚಿತ್ರಗಳನ್ನು ಬಿಡಿಸಿದ್ದಾರೆ ಎಂದೇ ಹೆಚ್ಚಿನ ಬಳಕೆದಾರರು ಕಾಮೆಂಟ್‌ಗಳ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ:  Love Story: ದವಡೆಯಿಲ್ಲದ ಶಿಕಾಗೊ ವ್ಯಕ್ತಿಗೆ ಸಿಕ್ಕ ನಿಜವಾದ ಪ್ರೀತಿ ಇದು!

ಮಕ್ಕಳು ಬಿಡಿಸಿದ ಚಿತ್ರಗಳ ಮೂಲಕ ಅವರ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದಾಗಿದೆ. ಹಾಗಿದ್ದರೆ ನಿಮ್ಮ ಮುಖದ ಯಾವ ಭಾಗ ಅವರಿಗೆ ಆಕರ್ಷಕವಾಗಿ ಕಂಡುಬಂದಿದೆ ಎಂದು ಒಬ್ಬರು ಬಳಕೆದಾರರು ಕೇಳಿದ್ದರೆ ಇನ್ನೊಬ್ಬರು ಈ ಟ್ವೀಟ್ ನಿಜಕ್ಕೂ ಅರ್ಥಪೂರ್ಣವಾಗಿದೆ. ನನ್ನ ದಿನವನ್ನು ಚೇತೋಹಾರಿಯನ್ನಾಗಿಸಿದೆ ಎಂದು ಇನ್ನೊಬ್ಬರು ಹೊಗಳಿದ್ದಾರೆ.

ಇತ್ತೀಚಿಗೆ ವೈರಲ್ ಆದ ಮತ್ತೊಂದು ವಿಡಿಯೋ 
ಕೆಲವು ದಿನಗಳ ಹಿಂದೆ, ತರಗತಿಯಲ್ಲಿ ಕೀಟಲೆ ಮಾಡಿದ್ದಕ್ಕಾಗಿ ಪುಟ್ಟ ಹುಡುಗನೊಬ್ಬ ತನ್ನ ತರಗತಿ ಶಿಕ್ಷಕಿಯ ಬಳಿ ಕ್ಷಮೆ ಕೋರುವ ಒಂದು ಸುಂದರ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡಿತ್ತು. ವಿಡಿಯೋದಲ್ಲಿ ಪುಟ್ಟ ಬಾಲಕ ತನ್ನ ಶಿಕ್ಷಕಿಯಲ್ಲಿ ನಿರಂತರವಾಗಿ ಕ್ಷಮೆ ಯಾಚಿಸುತ್ತಿರುವುದು ಹಾಗೂ ಈ ತಪ್ಪನ್ನು ತಾನು ಇನ್ನು ಮುಂದೆ ಪುನರಾವರ್ತಿಸುವುದಿಲ್ಲವೆಂದು ಮಗು ಹೇಳುತ್ತಿರುವುದನ್ನು ಕಾಣಬಹುದು. ಬಾಲಕ ಶಿಕ್ಷಕಿಯ ಕೆನ್ನಗೆ ಮುತ್ತಿಡುವ ಮೂಲಕ ಆಕೆಯ ಮನಗೆಲ್ಲುವ ಪ್ರಯತ್ನ ಮಾಡಿರುವುದೂ ವಿಡಿಯೋದಲ್ಲಿ ಮೂಡಿಬಂದಿದೆ.
Published by:Ashwini Prabhu
First published: