• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಗೊತ್ತಾದಾಗ ಹೊತ್ತಾಯ್ತು!; ಕಲ್ಲೆಂದುಕೊಂಡಿದ್ದ ಕೋಳಿಗೆ ಮೊಸಳೆಯೆಂದು ತಿಳಿದಾಗ ಆಗಿದ್ದೇನು?

ಗೊತ್ತಾದಾಗ ಹೊತ್ತಾಯ್ತು!; ಕಲ್ಲೆಂದುಕೊಂಡಿದ್ದ ಕೋಳಿಗೆ ಮೊಸಳೆಯೆಂದು ತಿಳಿದಾಗ ಆಗಿದ್ದೇನು?

ಮೊಸಳೆ

ಮೊಸಳೆ

ಕೋಳಿಯು ಮೊಸಳೆ ಮುಖದ ಮೇಲೆ ನಡೆದುಕೊಂಡು ಬಂದು ನದಿ ದಾಟಬೇಕು ಎನ್ನುವಷ್ಟರಲ್ಲಿ ಮೊಸಳೆ ಆಹಾರಕ್ಕಾಗಿ ಬಾಯಿ ತೆರೆದಿದೆ.

  • Share this:

    ಮೊಸಳೆ ಬಲಿಷ್ಠ ಜಲಚರಪ್ರಾಣಿಗಳಲ್ಲಿ ಒಂದು. ನೀರಿನಲ್ಲಿದ್ದರಂತು ಎರಡರಷ್ಟು ಬಲ ಜಾಸ್ತಿ. ಇತ್ತೀಚೆಗೆ ನೀರು ಕುಡಿಯುತ್ತಿದ್ದ ಚಿರತೆಯೊಂದನ್ನು ಮೊಸಳೆ ನೀರಿಗೆ ಎಳೆದೊಯ್ದು ತಿಂದು ತೇಗಿದ ದೃಶ್ಯ ವೈರಲ್​ ಆಗಿತ್ತು. ಹಾಗಾಗಿ ಮೊಸಳೆ ಕಾದು ಕುಳಿತು ಬೇಟೆಯಾಡುತ್ತದೆ. ಅದರಂತೆ ಇಲ್ಲೊಂದು ವಿಡಿಯೋವಿದೆ. ನೋಡಲು ತಮಾಷೆಯಾಗಿದ್ದರು ನಿಮಿಷಾರ್ಧದಲ್ಲಿ ಕೋಳಿ ತನ್ನ ಪ್ರಾಣಪಾಯದಿಂದ ಪಾರಾಗಿದೆ.


    ಮೊಸಳೆಯೊಂದು ನೀರಿನ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಅತ್ತ ಕೋಳಿಯೊಂದು ಕಲ್ಲಿನ ಸೇತುವೆ ಎಂದು ತಿಳಿದುಕೊಂಡು ಮೊಸಳೆಯ ಮುಖದ ಮೇಲೆ ಸಂಚಾರ ಮಾಡಿದೆ. ಆದರೆ ನಿಜವಾಗಿಗೂ ಕೋಳಿಗೆ ತಾನು ಭಕ್ಷಕನ ಮೇಲಿದ್ದೇನೆ ಎಂದು ತಿಳಿದಿರಲಿಲ್ಲ. ಹಾಗಾಗಿ ಅದರ ಪಾಡಿಗೆ ಸಂಚಾರ ಮಾಡುತ್ತಾ ಬರುತ್ತದೆ.


    ಕೋಳಿಯು ಮೊಸಳೆ ಮುಖದ ಮೇಲೆ ನಡೆದುಕೊಂಡು ಬಂದು ನದಿ ದಾಟಬೇಕು ಎನ್ನುವಷ್ಟರಲ್ಲಿ ಮೊಸಳೆ ಆಹಾರಕ್ಕಾಗಿ ಬಾಯಿ ತೆರೆದಿದೆ. ಬಾರಿ ತೆರೆದಂತೆ ಕೋಳಿಗೆ ಗೊತ್ತಾಗಿದೆ. ಬದುಕಿದೆಯಾ ಬಡಜೀವವೇ ಎಂದು ಕೋಳಿ ಅಲ್ಲಿಂದ ಎದ್ದು ಬಿದ್ದು ಓಡಿದೆ. 10 ನಿಮಿಷದ ವಿಡಿಯೋ ಇದಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.



    ಐಪಿಎಸ್​ ಅಧಿಕಾರಿ ದಿಪಾಂಶು ಕಬ್ರಾ ಅವರು “2020 ರಿಂದ 2021… ನಂತರ 2021 ರ ಆರಂಭ…. ಹಾಗೆ ಸುಮ್ಮನೆ’’ ಎಂದು ಕ್ಯಾಪ್ಶನ್​ ನೀಡಿದ್ದಾರೆ. ದೃಶ್ಯ ನೋಡಿದ ಅನೇಕರು ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಹೆಚ್ಚಿನವರಿಗೆ ಈ ವಿಡಿಯೋ ನೋಡಿ ನಕ್ಕಿದ್ದಾರೆ.

    Published by:Harshith AS
    First published: