HOME » NEWS » Trend » CHICKEN NUGGET SHAPED AS A VERY SUS AMONG US CREWMATE SELLS FOR RS 72 LAKH STG MAK

Trending: ಒಂದು ಚಿಕನ್‌ ನಗ್ಗೆಟ್‌ 72 ಲಕ್ಷ ರೂ. ಗೆ ಮಾರಾಟ..!

ಭಾರತದಲ್ಲಿ PUBG ನಿಷೇಧದ ನಂತರ, ಈ ಆಟವು ಅಪಾರ ಜನಪ್ರಿಯತೆಯನ್ನು ತಲುಪಿದೆ. ಮತ್ತು ವಿಶ್ವ ಶ್ರೇಯಾಂಕದಲ್ಲಿ, ಕಳೆದ ವಾರ ಸುಮಾರು 400,000 ಏಕಕಾಲೀನ ಸ್ಟೀಮ್ ಆಟಗಾರರನ್ನು ಒಟ್ಟುಗೂಡಿಸಿ, ಅನುಭವಿ PUBG ಫ್ರ್ಯಾಂಚೈಸ್ ಅನ್ನು ಮೀರಿಸಿದೆ.

Trending Desk
Updated:June 11, 2021, 5:04 PM IST
Trending: ಒಂದು ಚಿಕನ್‌ ನಗ್ಗೆಟ್‌ 72 ಲಕ್ಷ ರೂ. ಗೆ ಮಾರಾಟ..!
ಚಿಕನ್ ನಗ್ಗೆಟ್.
  • Share this:
ಎನ್‌ಎಫ್‌ಟಿ ಅಥವಾ ಶಿಲೀಂಧ್ರವಲ್ಲದ ಟೋಕನ್‌ ಬಗ್ಗೆ ನೀವು ಕೇಳಿರುತ್ತೀರಿ.. ಹೆಚ್ಚು ಬೆಲೆಗೆ ವಸ್ತುಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಾರೆ, ಇದು ಆನ್‌ಲೈನ್‌ ಯುಗ. ಅತ್ಯಂತ ವಿಲಕ್ಷಣ ಸಂಗತಿಗಳು ಆನ್‌ಲೈನ್‌ನಲ್ಲಿ ಮಾರಾಟವಾಗುತ್ತದೆ. ಯುದ್ಧದ ರೀತಿ ಬಿಡ್ಡಿಂಗ್ ನಡೆಯುತ್ತದೆ. ಇದೇ ರೀತಿ, ಚಿಕನ್‌ ನಗ್ಗೆಟ್‌ವೊಂದಕ್ಕೆ ಬಂಗಾರದ ಬೆಲೆ ಬಂದಿದೆ. ಹೌದು, ಇಬೇಯಲ್ಲಿ ಚಿಕನ್ ನಗ್ಗೆಟ್‌ ದಾಖಲೆಯ 99,997 ಡಾಲರ್‌ಗೆ ಮಾರಾಟವಾಗಿದೆ. ಇದಕ್ಕೇಕೆ ಈ ಪಾಟಿ ಬೆಲೆ ಅನ್ಕೊಂಡ್ರಾ.. ಮುಂದೆ ಓದಿ..

ಈ ಚಿಕನ್‌ ನಗ್ಗೆಟ್‌ 'Among Us' ಎಂಬ ಜನಪ್ರಿಯ ಮಲ್ಟಿಪ್ಲೇಯರ್ ಆಟದ ಕ್ರೂಮೇಟ್‌ನ ಆಕಾರದಲ್ಲಿದೆ ಎಂಬ ಕಾರಣಕ್ಕೆ ಇದು 99,997 ಡಾಲರ್‌ಗೆ ಅಂದರೆ ಬರೋಬ್ಬರಿ 72 ಲಕ್ಷ ರೂ. ಗೆ ಮಾರಾಟವಾಗಿದೆ. ಮೇ 28 ರಂದು ಕೇವಲ ಇದನ್ನು 99 ಸೆಂಟ್ಸ್‌ಗೆ ಪಟ್ಟಿ ಮಾಡಲಾ ಗಿತ್ತು. ಸ್ವಲ್ಪ ಸಮಯದವರೆಗೆ ಇದಕ್ಕೆ ಯಾವುದೇ ಬಿಡ್‌ಗಳೂ ಇರಲಿಲ್ಲ. ಹಾಗೆ, ಕೊಳ್ಳುವ ವರೂ ಇರಲಿಲ್ಲ. ಆದರೆ, ಎರಡು ದಿನಗಳ ನಂತರ ಅದನ್ನು ಆಶ್ಚರ್ಯಕರವಾಗಿ

14,869.69 ಡಾಲರ್‌ಗೆ ಬಿಡ್‌ ಮಾಡಿದರು. ನಂತರ ಇಂಟರ್ನೆಟ್‌ನಲ್ಲಿ ಇದು ಜನಪ್ರಿಯವಾ ಗುತ್ತಾ ಹೋಗಿ ಅಂತಿಮವಾಗಿ 99,997 ಡಾಲರ್‌ಗೆ ಜೂನ್ 3 ರಂದು ಸಂಜೆ ಮಾರಾಟ ಮಾಡಲಾಯಿತು.

ಹೈಪ್‌ ಆದರೆ ಹೀಗೆ ನೋಡಿ.. ಅಂದ ಹಾಗೆ, ಇದು ಕೇವಲ ಕ್ರೂಮೇಟ್‌ ಆಕಾರದ ಚಿಕನ್ ನಗ್ಗೆಟ್‌ ಅಷ್ಟೇ ಅಲ್ಲ, ಇದು K-Pop BTS ಮೀಲ್‌ನಿಂದಲೂ ಬಂದಿದೆ. ಆದರೆ, ಈ ಚಿಕನ್‌ ನಗ್ಗೆಟ್‌ ಅನ್ನು ನಿಜವಾಗಿಯೂ ತಿನ್ನಬಹುದೇ ಅಥವಾ ಕೇವಲ ಪ್ರಚೋದನೆ ಅನ್ನೋ ಡೌಟ್‌ ಇದ್ಯಾ..? ಚಿಕನ್‌ ನಗ್ಗೆಟ್‌ ಅನ್ನು "ಘನೀಕರಿಸಲಾಗುತ್ತದೆ ಮತ್ತು ನಂತರ ಸುರಕ್ಷಿತ ಶಿಪ್ಪಿಂಗ್ ವಿಧಾನದೊಂದಿಗೆ ತಾಜಾತನವನ್ನು ಖಚಿತಪಡಿಸಿಕೊಳ್ಳಲು ಏರ್‌ ಸೀಲ್ಡ್‌ ಮಾಡಲಾಗುತ್ತದೆ'' ಎಂದು ಮಾರಾಟಗಾರರು ಉಲ್ಲೇಖಿಸಿದ್ದಾರೆ.

ಅಲ್ಲದೆ, "ಈ ಆಹಾರ ಉತ್ಪನ್ನವು ಸರಾಸರಿ 14 ದಿನಗಳ ಎಕ್ಸ್‌ಪೈರಿ ಅವಧಿಯನ್ನು ಹೊಂದಿದೆ ಮತ್ತು ಇದನ್ನು ಅವಧಿ ಮುಗಿಯುವ ಮೊದಲು ತಲುಪಿಸಲಾಗುವುದು'' ಎಂದೂ ನೋಟ್‌ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Prashant Kishore| ಮಹಾರಾಷ್ಟ್ರ ಮಿಷನ್ 2024; ಕುತೂಹಲ ಮೂಡಿಸಿದ ಶರದ್ ಪವಾರ್-ಪ್ರಶಾಂತ್ ಕಿಶೋರ್ ಸಭೆ

ಈ ಚಿಕನ್ ನಗ್ಗೆಟ್‌ ಸುದ್ದಿ ಟ್ವಿಟ್ಟರ್‌ನಲ್ಲೂ ವೈರಲ್‌ ಆಗಿದೆ. ಅಲ್ಲದೆ, ಕನಿಷ್ಠ ಶೆಚುವಾನ್ ಅದ್ದುವ ಸಾಸ್ ಅನ್ನು ಅದರೊಂದಿಗೆ ಸೇರಿಸಿ ಎಂದು Xbox ಉತ್ತರಿಸಿದೆ. ಅದಕ್ಕೆ ಮಾರಾಟಗಾರರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಆದರೂ, ಈ ನಗ್ಗೆಟ್‌ ಅನ್ನು ಮೊದಲೇ ಉಪಯೋಗಿಸಲಾಗಿದೆ ಎಂಬ ಸ್ಥಿತಿಯಲ್ಲಿದೆ. ಇದು ಮೋಸ ಅಲ್ವಾ..?ಇದನ್ನೂ ಓದಿ: Explainer: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಲೇ ಇದೆ ಇದಕ್ಕೆ ಕಾರಣವೇನು ಗೊತ್ತೇ..?

'Among Us' ಎಂಬ ಆನ್‌ಲೈನ್ ಮಲ್ಟಿಪ್ಲೇಯರ್ ಸಾಮಾಜಿಕ ಡಿಡಕ್ಷನ್‌ ಆಟವಾಗಿದ್ದು, ಇದನ್ನು ಅಮೆರಿಕದ ಗೇಮ್ ಸ್ಟುಡಿಯೋ ಇನ್ನರ್ಸ್‌ಲೋತ್ ಅಭಿವೃದ್ಧಿಪಡಿಸಿದೆ. ಜೂನ್ 15, 2018 ರಂದು ಈ ಗೇಮ್‌ ಬಿಡುಗಡೆಯಾಗಿದೆ. ಈ ಆಟವು ಸ್ಪೇಸ್‌ ವಿಷಯದ ಸೆಟ್ಟಿಂಗ್‌ನಲ್ಲಿ ನಡೆಯುತ್ತದೆ, ಅಲ್ಲಿ ಆಟಗಾರರು ಪ್ರತಿಯೊಬ್ಬರೂ ಎರಡು ಪಾತ್ರಗಳಲ್ಲಿ ಒಂದನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನವರು ಕ್ರೂಮೇಟ್ಸ್‌ ಆಗುತ್ತಾರೆ. ಹಾಗೆ, ಪೂರ್ವನಿರ್ಧರಿತ ಸಂಖ್ಯೆಯ ಇಂಪೋಸ್ಟರ್‌ಗಳು ಅಥವಾ ಮೋಸಗಾರರು ಇರುತ್ತಾರೆ.
Youtube Video

ಭಾರತದಲ್ಲಿ PUBG ನಿಷೇಧದ ನಂತರ, ಈ ಆಟವು ಅಪಾರ ಜನಪ್ರಿಯತೆಯನ್ನು ತಲುಪಿದೆ. ಮತ್ತು ವಿಶ್ವ ಶ್ರೇಯಾಂಕದಲ್ಲಿ, ಕಳೆದ ವಾರ ಸುಮಾರು 400,000 ಏಕಕಾಲೀನ ಸ್ಟೀಮ್ ಆಟಗಾರರನ್ನು ಒಟ್ಟುಗೂಡಿಸಿ, ಅನುಭವಿ PUBG ಫ್ರ್ಯಾಂಚೈಸ್ ಅನ್ನು ಮೀರಿಸಿದೆ. ಹಲವಾರು ಆಟಗಾರರ ತಂಡವು ಈ ಆಟವನ್ನು ಪ್ರಾರಂಭಿಸುತ್ತಾರೆ. ಮತ್ತು ಅವರಲ್ಲಿ ಒಬ್ಬರು ಅಥವಾ ಇಬ್ಬರು ‘ಮೋಸಗಾರ’ರಾಗಿರುತ್ತಾರೆ. ಕಾರ್ಯಗಳನ್ನು ಹಾಳುಮಾಡುವುದು ಮತ್ತು ಸಿಬ್ಬಂದಿಯನ್ನು ಕೊಲ್ಲುವುದು ಇಂಪೋಸ್ಟರ್‌ಗಳ ಕೆಲಸವಾದರೆ, ವೈಯಕ್ತಿಕ ಕೆಲಸಗಳನ್ನು ನಿರ್ವಹಿಸುವುದು ಮತ್ತು ಮೋಸಗಾರನನ್ನು ಕಂಡುಹಿಡಿಯುವುದು ಸಿಬ್ಬಂದಿಯ ಕೆಲಸವಾಗಿದೆ.
First published: June 11, 2021, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories