ಬಿರಿಯಾನಿ ಅಂದ್ರೆ ನಾನ್ವೆಜ್ (Nonveg) ಪ್ರಿಯರಿಗೆ ಬಾಯಲ್ಲಿ ನೀರೂರುವುದಂತೂ ಪಕ್ಕಾ! ಚಿಕನ್ ಮಟನ್, ಫಿಶ್, ಎಗ್ ಬಿರಿಯಾನಿ ಹೀಗೆ ನಾನಾರೀತಿಯ ಬಿರಿಯಾನಿಗಳು ಹೊಟೇಲ್ಗಳಲ್ಲಿ ಲಭ್ಯವಿರುತ್ತದೆ. ಆಯಾ ಊರಿನಲ್ಲಿ ಇರೋರಿಗೆ ಎಲ್ಲೆಲ್ಲಿ ಕಡಿಮೆ ಬೆಲೆಯಲ್ಲಿ ಅತ್ಯಂತ ರುಚಿಕರವಾದ ಬಿರುಯಾನಿ ಸಿಗುತ್ತೆ ಅಂತ ಗೊತ್ತಿರುತ್ತದೆ ಅಲ್ವಾ? ಬೆಂಗಳೂರಿನಲ್ಲಿ ವಾಸ ಮಾಡೋರಿಗೆ ಇಂತಹ ನೂರಾರು ಸ್ಥಳಗಳು (Places) ಚಿರಪರಿಚಿತವಾಗಿರುತ್ತದೆ. ಅದೇ ರೀತಿಯಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲಿ ಬಿರಿಯಾನಿ ಸಿಗುತ್ತೆ ಅಂತ ಕೂಡ ತಿಳಿದಿರುತ್ತದೆ. ಆದರೆ ನಿಜವಾಗಿಯೂ ಪ್ರಸ್ತುತ ಬಿರಿಯಾನಿಯ ಬೆಲೆ 100ಕ್ಕಿಂತ ಹೆಚ್ಚು ಬೆಲೆಯಲ್ಲಿ ಸಿಗುತ್ತದೆ. ತುಂಬಾ ಕಾಸ್ಟ್ಲಿ (Costly) ಆದ್ರೂ ಕೂಡ ಜನರು ಆಸೆಪಟ್ಟು ಬಿರಿಯಾನಿ ತಿನ್ನೋದ್ರಲ್ಲಿ ನಾಮುಂದು ತಾಮುಂದು ಎಂದು ಹೋಗುತ್ತಾರೆ.
ಬರ್ತಾ ಬರ್ತಾ ದುನಿಯಾ ತುಂಬಾ ಕಾಸ್ಟ್ಲಿ ಆಗ್ತಾ ಇದೆ ಅಲ್ವಾ? ಅದೇ ರೀತಿಯಾಗಿ ನಾವು ತಿನ್ನೋ ತಿಂಡಿ ತಿನಿಸುಗಳು ಕೂಡ ತುಂಬಾ ಕಾಸ್ಟ್ಲಿ ಆಗ್ತಾ ಇದೆ. ಸಣ್ಣ ಹಣ್ಣಿನಿಂದ ಹಿಡಿದು ದೊಡ್ಡ ದೊಡ್ಡ ತಿನಿಸುಗಳ ವರೆಗೂ ಅಗ್ಗದ ಮಾತೇ ಇಲ್ಲ ಬಿಡಿ. ಯಾಕೆ ಇಷ್ಟೊಂದು ಕಾಸ್ಟ್ಲಿಯ ಬಗ್ಗೆ ಮಾತನಾಡ್ತಾ ಇರೋದು ಅಂದ್ರೆ ಇದೀಗ 2001 ಇಸವಿಯ ಬಿರಿಯಾನಿಯ ಮೆನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಾ ಇದೆ.
ಹೌದು. ಟಿವಿ, ರಿಮೋಟ್, ಮೊಬೈಲ್, ಹಣ್ಣು, ತರಕಾರಿಗಳ ರೇಟ್ ಆಗ ಹೇಗಿತ್ತು ಮತ್ತು ಈಗ ಹೇಗಿದೆ ಅಂತ 19 ಮತ್ತು 20 ರ ಮಕ್ಕಳಲ್ಲಿ ಕೇಳಿದ್ರೆ ಚೆನ್ನಾಗಿ ವಿವರಣೆ ಕೊಡಬಹುದೇನೋ. ಯಾಕಂದ್ರೆ ಆಗಿನ ರೇಟ್ಗೂ ಈಗಿನ ರೇಟ್ಗೂ ತುಂಬಾ ವ್ಯತ್ಯಾಸವಿದೆ ಅಂತ ಹೇಳಿದ್ರೂ ತಪ್ಪಾಗೋಲ್ಲ ಬಿಡಿ.
ಇದನ್ನೂ ಓದಿ: ಕೋಶ ಓದಿ ಆಯ್ತು, ಈಗ ದೇಶ ಸುತ್ತೋ ಕನಸಿದೆಯಾ? ಹಾಗಿದ್ರೆ ಕಡಿಮೆ ಖರ್ಚಲ್ಲಿ ಈ ದೇಶಗಳಿಗೆ ಟ್ರಿಪ್ ಹೋಗಿ ಬನ್ನಿ
ವೈರಲ್ ಆಗುತ್ತಿರುವ ಈ ರೆಸ್ಟೋರೆಂಟ್ ಮೆನುವಿನಲ್ಲಿ ಅಂದಿನ ವಿವಿಧ ಬಗೆಯ ಆಹಾರ ಮತ್ತು ಅದಕ್ಕೆ ತಗಲುತ್ತಿದ್ದ ಖರ್ಚನ್ನು ಉಲ್ಲೇಖಿಸಿರುವುದು ನೋಡಿದ್ರೆ ಇಷ್ಟೊಂದು ಕಡಿಮೆನಾ? ಅನಿಸ್ತದೆ. ಅಚ್ಚರಿಯೇನೆಂದರೆ ಅಂದು ರೆಸ್ಟೋರೆಂಟ್ನಲ್ಲಿ ಒಂದು ಪ್ಲೇಟ್ ಚಿಕನ್ ಬಿರಿಯಾನಿ ಬೆಲೆ ಕೇವಲ 30 ಇತ್ತು. ಇನ್ನೂ ಆಶ್ಚರ್ಯವೆಂದರೆ ಇಂದು ಮುಟ್ಟಿದರೆ ಕೈ ಸುಡುವ ಮಟನ್ ಬಿರಿಯಾನಿಗೆ, ಅಂದು ಕೇವಲ 32 ರೂ. ಇತ್ತು. 2001ರಲ್ಲಿ ದುಬಾರಿ ರೆಸ್ಟೋರೆಂಟ್ನಲ್ಲಿ ಕೇವಲ 30 ರೂ. ಗೆ ಬಿರಿಯಾನಿ ಸಿಗುತ್ತಿತ್ತು ಅಂದ್ರೆ ನಿಜಕ್ಕೂ ಅಚ್ಚರಿಯ ಸಂಗತಯೇ ಬಿಡಿ.
View this post on Instagram
ಹೀಗೆ ಉಳಿದ ಖಾದ್ಯಗಳ ಬೆಲೆಯೂ ಅದರಲ್ಲಿದ್ದು, ಎಗ್ ರೋಲಿಗೆ 7ರೂ, ಚಿಕನ್ ರೋಲಿಗೆ 10ರೂ, ಎಗ್ ಚಿಕನ್ ರೋಲ್ ಬೆಲೆ 15 ಹಾಗೂ ವಿಶೇಷ ಚಿಕನ್ ರೋಲ್ ಬೆಲೆ 24 ರೂ. ಇತ್ತೆಂದು ಮೆನುವಿನಲ್ಲಿ ಕಾಣುತ್ತಿದೆ.
ಮೆನುವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗಿನಿಂದ ಸಾವಿರಾರು ಮಂದಿ ಫೋಟೋಗೆ ಲೈಕ್ ಮಾಡಿದ್ದಾರೆ. ಇವತ್ತೇನಿದ್ರೂ ಒಂದು ಮೆನು, ಒಂದೇ ಐಟಂ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಂದು ಎಗ್ ರೋಲ್ ಇವತ್ತು 70 ರೂ. ಆಗಿದೆ. ಆ ದಿನಗಳೇ ಸರಿಯಾಗಿದ್ದವು ಎಂದೆಲ್ಲ ಕಮೆಂಟ್ ಮಾಡ್ತಾ ಇದ್ದಾರೆ. ನೋಡಿದ್ರಲ್ವಾ ಎಷ್ಟು ಕಡಿಮೆ ರೇಟ್ ಇತ್ತು, ಆದರೆ ಈಗ ಹೇಗಾಗಿದೆ ಕಾಲ ಅಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ