• Home
  • »
  • News
  • »
  • trend
  • »
  • Innovation: ಬೋಂಡಾ ವ್ಯಾಪಾರಿಯ ಹೊಸ ಆವಿಷ್ಕಾರ! ಕ್ಷಣಮಾತ್ರದಲ್ಲಿ ರೆಡಿಯಾಗತ್ತೆ ಬೋಂಡಾ-ಬಜ್ಜಿ

Innovation: ಬೋಂಡಾ ವ್ಯಾಪಾರಿಯ ಹೊಸ ಆವಿಷ್ಕಾರ! ಕ್ಷಣಮಾತ್ರದಲ್ಲಿ ರೆಡಿಯಾಗತ್ತೆ ಬೋಂಡಾ-ಬಜ್ಜಿ

ಬಸಂತ್

ಬಸಂತ್

ವ್ಯಾಪಾರವನ್ನು ಮತ್ತು ಗ್ರಾಹಕರನ್ನು ಕಳೆದುಕೊಳ್ಳಲು ಬಯಸದ ಬಸಂತ್‌ ಇದಕ್ಕಾಗಿ ಸ್ಮಾರ್ಟ್‌ ಆಗಿ ಏನಾದರೊಂದು ಮಾಡಲೇಬೇಕೆಂದು ನಿರ್ಧರಿಸಿ ಹೊಸ ಆವಿಷ್ಕಾರ ಮಾಡಿದ್ದಾರೆ.

  • Share this:

ಒಮ್ಮೊಮ್ಮೆ ಭಾರಿ ಹೊತ್ತು ಹಿಡಿಯುವ ಕೆಲಸಗಳಿಗೆ (Work) ಸಣ್ಣದಾಗಿ ಯಾವುದೋ ಒಂದು ಟ್ರಿಕ್‌ ಅನ್ನು ಕಂಡುಹಿಡಿದು ಕ್ಷಣಮಾತ್ರದಲ್ಲಿ ಮುಗಿಸುವ ಸಾಕಷ್ಟು ಆವಿಷ್ಕಾರಗಳು (Innovation) ನಮ್ಮ ಸುತ್ತಮುತ್ತ ಅಥವಾ ನಮ್ಮ ಮನೆಯಲ್ಲಿಯೇ ನೋಡುತ್ತೇವೆ. ಇಂತಹ ಆವಿಷ್ಕಾರಗಳನ್ನು ಮಾಡಲು ವಿಜ್ಞಾನಿಗಳೇ ಆಗಬೇಕಂತಿಲ್ಲ. ಒಂದು ಕೆಲಸದಲ್ಲಿ ಪರಿಣಿತಿ ಹೊಂದಿರುವವರಿಗೆ, ಅದರ ಬಗ್ಗೆ ತಿಳಿದುಕೊಂಡವರಿಗೆ ಆ ಕೆಲಸವನ್ನು ಹೇಗೆ ಸುಲಭ (Easy) ಮಾಡಬಹುದು ಎಂಬ ಐಡಿಯಾ ಖಂಡಿತ ಇರುತ್ತದೆ. ಇದೇ ರೀತಿ ಇಲ್ಲೊಬ್ಬ ಬೋಂಡಾ, ಭಜ್ಜಿ, ಪಕೋಡಾ (Pakoda) ವ್ಯಾಪಾರಿ ಬಾಣಲೆಗೆ ಹಿಟ್ಟು ಬಿಡುವ ಕೆಲಸವನ್ನು ಕ್ಷಣಮಾತ್ರದಲ್ಲಿ ಮುಗಿಸಲು ಹೊಸದೊಂದು ಟ್ರಿಕ್‌ ಕಂಡುಕೊಂಡಿದ್ದಾನೆ.


12ನೇ ತರಗತಿಯವರೆಗೆ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ಛತ್ತೀಸ್‌ಗಢದ ನಿವಾಸಿ ಬಸಂತ್, ಜೀವನ ನಡೆಸಲು ಒಂದು ಬೊಂಡಾ ಅಂಗಂಡಿ 'ಭಾಜಿಯಾ' ಸ್ಟಾಲ್ ಇಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಸಂಜೆ ಹೊತ್ತು ಏನಾದರೂ ಸ್ನ್ಯಾಕ್ಸ್‌ ಸವಿಯುವವರು ಈ ಬೊಂಡಾ-ಬಜ್ಜಿ ಅಂಗಡಿಗಳನ್ನು ಹುಡುಕಿಕೊಂಡು ಹೋಗುವುದರ ಬಗ್ಗೆ ಹೆಚ್ಚೇನೂ ಹೇಳುವುದೇ ಬೇಡ.


ಗ್ರಾಹಕರ ಹೆಚ್ಚಳವೇ ಯಂತ್ರ ಆವಿಷ್ಕಾರಕ್ಕೆ ಕಾರಣ
ಬಸಂತ್‌ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಅಂಗಡಿಯಲ್ಲಿ ಬೊಂಡಾ-ಬಜ್ಜಿ ಮಾರುತ್ತಿದ್ದರು. ವ್ಯಾಪಾರದಲ್ಲಿ ಬಸಂತ್‌ ಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಸಮಸ್ಯೆ ಕೂಡ ಹೆಚ್ಚಾದವು. ಅದೇನಪ್ಪಾ ಅಂದರೆ ಪ್ರತಿದಿನ ಬೆಳಿಗ್ಗೆ ಸಂಜೆ ಹಲವು ಜನ ಅವರ ಅಂಗಡಿಗೆ ಭೇಟಿ ನೀಡುತ್ತಿದ್ದರು.


ಆದರೆ ಬಸಂತ್‌ಗೆ ಗ್ರಾಹಕರು ಅದನ್ನು ಪಡೆಯುವಷ್ಟು ವೇಗವಾಗಿ ಬಜ್ಜಿ-ಬೋಂಡಾವನ್ನು ಎಣ್ಣೆಯಲ್ಲಿ ಕೈಯಿಂದ ಬಿಟ್ಟು ತಯಾರಿಸಿಕೊಡುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತಿತ್ತಂತೆ. ಕೆಲವೊಮ್ಮೆ ಜನರು ಕಾಯಲು ಸಾಧ್ಯವಾಗದೇ ನಿರಾಶೆಯಿಂದ ವಾಪಸ್‌ ಹೋಗುತ್ತಿದ್ದರಂತೆ. ವ್ಯಾಪಾರವನ್ನು ಮತ್ತು ಗ್ರಾಹಕರನ್ನು ಕಳೆದುಕೊಳ್ಳಲು ಬಯಸದ ಬಸಂತ್‌ ಇದಕ್ಕಾಗಿ ಸ್ಮಾರ್ಟ್‌ ಆಗಿ ಏನಾದರೊಂದು ಮಾಡಲೇಬೇಕೆಂದು ನಿರ್ಧರಿಸುತ್ತಾರೆ.


ಇದನ್ನೂ ಓದಿ: ತಿಮಿಂಗಿಲಗಳನ್ನು ಸಂರಕ್ಷಿಸುವಲ್ಲಿ ಕೃತಕ ಬುದ್ಧಿಮತ್ತೆ ಹೇಗೆ ಸಹಕಾರಿಯಾಗಿದೆ?


ಬೋಂಡಾ, ಬಜ್ಜಿಗಳನ್ನು ತಕ್ಷಣ ಬಿಡುವ ಯಾವುದಾರೂ ಯಂತ್ರ ಸಿಗಬಹುದಾ ಎಂದು ಹುಡುಕುತ್ತಾರೆ. ದುರದೃಷ್ಟವಶಾತ್, ಮಾರುಕಟ್ಟೆಯಲ್ಲಿ ಅಂತಹ ಯಾವುದೇ ಯಂತ್ರ ಲಭ್ಯವಿಲ್ಲ ಎಂದು ಕಂಡುಕೊಂಡ ಮೇಲೆ ಬಸಂತ್‌ ಸ್ವತಃ ತಾವೇ ಒಂದು ಮಷಿನ್‌ ನಿರ್ಮಿಸಲು ಮುಂದಾಗುತ್ತಾರೆ.


ಹಲವು ವಿಫಲ ಪ್ರಯತ್ನಗಳ ನಂತರ ಯಶಸ್ಸು
ಯಂತ್ರವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ, ಅವರು ಹೇಳುತ್ತಾರೆ, “ನನಗೆ ಯಂತ್ರವು ಹೇಗಿರಬೇಕು ಎಂದು ನನಗೆ ನಿಖರವಾಗಿ ತಿಳಿದಿತ್ತು. ಈ ಯಂತ್ರ ಸಿದ್ಧಪಡಿಸಲು ನಾನು ವಿವಿಧ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ಪ್ರಾರಂಭಿಸಿದೆ. ನಾನು ಮೊದಲು ಮೂಲಮಾದರಿಯನ್ನು ಪ್ಲಾಸ್ಟಿಕ್‌ನಿಂದ ಮಾಡಿಕೊಂಡೆ. ಆದರೆ ಪ್ಲಾಸ್ಟಿಕ್‌ ಮಷಿನ್‌ ಶಾಖಕ್ಕೆ ಕರಗಬಹುದು ಎಂದು ನಾನು ಅರಿತುಕೊಂಡೆ. ನಂತರ ಇದನ್ನು ತಯಾರಿಸಲು ಮತ್ತಷ್ಟು ವಸ್ತುಗಳನ್ನು ಹುಡುಕಿಕೊಂಡೆ" ಎನ್ನುತ್ತಾರೆ ಬಸಂತ್. ಕೆಲವು ತಿಂಗಳುಗಳ ಪ್ರಯೋಗಗಳ ಬಳಿಕ, ಬಸಂತ್ ಸ್ಟೀಲ್‌ ಯಂತ್ರವನ್ನು ಕಂಡುಹಿಡಿದರು.


ಹ್ಯಾಂಡ್ಹೆಲ್ಡ್ ಯಂತ್ರ
ಮಾರುಕಟ್ಟೆಯಲ್ಲಿ ಕೆಲವು ಯಂತ್ರಗಳು ಲಭ್ಯವಿದ್ದರೂ ಸಹ ಇವು ದೊಡ್ಡ ಮಟ್ಟದಲ್ಲಿ ಮಾತ್ರ ಇದ್ದವು. ಹೀಗಾಗಿ ಇವರ ವ್ಯಾಪಾರಕ್ಕೆ ತಕ್ಕ ರೀತಿ ಯಂತ್ರವನ್ನು ಅಂದರೆ ಸಣ್ಣ ಹ್ಯಾಂಡ್ಹೆಲ್ಡ್ ಯಂತ್ರವನ್ನು ತಯಾರಿಸಿಕೊಂಡರು. "ಮುಂಜಾನೆ ಬೇಗ ಎದ್ದು ನನ್ನ ಸಮಯವನ್ನು ಯಂತ್ರದ ಆವಿಷ್ಕಾರಕ್ಕೆ ಮೀಸಲಿಡುತ್ತಿದ್ದೆ. ನಾನು ಮಾಡಿದ ಪ್ರತಿ ಹೊಸ ಮೂಲ ಮಾದರಿಯೊಂದಿಗೆ, ನಾನು ಹೊಸದನ್ನು ಕಲಿಯಲು ಮತ್ತು ಉತ್ಪನ್ನವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತಿತ್ತು. ಸುಮಾರು ಎರಡೂವರೆ ತಿಂಗಳ ನಂತರ ನಾನು ತಯಾರಿಸಿದ ಒಂದು ಸಾಧನ ನನಗೆ ಹೆಚ್ಚು ಖುಷಿ ನೀಡಿತು ಮತ್ತು ನನ್ನ ಕೆಲಸಕ್ಕೆ ಯೋಗ್ಯ ಎಂದು ಅರಿತುಕೊಂಡೆ" ಎನ್ನುತ್ತಾರೆ ಬಸಂತ್ .


ಇದನ್ನೂ ಓದಿ: ಈತನಿಗೆ 45 ವರ್ಷಗಳ ಬಳಿಕ ಬಾಲ್ಯದಲ್ಲಿ ಆರೈಕೆ ಮಾಡಿದ್ದ ದಾದಿ ಸಿಕ್ಕಿದ್ಳು! ಸಂತಸದ ಕ್ಷಣ ಇಲ್ಲಿದೆ ನೋಡಿ


ಹೇಗಿದೆ ಬೋಂಡಾ-ಬಜ್ಜಿ ಬಿಡುವ ಸ್ಮಾರ್ಟ್‌ ಯಂತ್ರ?
ಇದು ಒಂದು ಸಣ್ಣ ಕೈಯಲ್ಲಿ ಹಿಡಿಯುವ ಸಾಧನವಾಗಿದ್ದು, ಬಳಕೆದಾರರಿಗೆ 10 ನಿಮಿಷಗಳಲ್ಲಿ 1 ಕೆಜಿ ಭಜ್ಜಿ, ಪಕೋಡಾ ಮಾಡಲು ಅನುಮತಿಸುತ್ತದೆ. ಮೊದಲ ಕೆಲವು ಮೂಲಮಾದರಿಗಳು ನನಗೆ ಪ್ರತಿ ತುಂಡಿಗೆ 600 ರೂ.ಗಳಷ್ಟು ವೆಚ್ಚವಾಯಿತು ಮತ್ತು ಅವುಗಳಲ್ಲಿ ಹಲವು ಸರಿಯಾಗಿ ಕೆಲಸ ಮಾಡಲಿಲ್ಲ. ನಾನು ಈಗ ತಯಾರಿಸುವ ಕೆಲಸ ಮಾಡುವ ಯಂತ್ರವನ್ನು ತಯಾರಿಸಲು ಪ್ರತಿ ತುಂಡಿಗೆ 800 ರೂ. ವೆಚ್ಚವಾಗುತ್ತದೆ. ಅಂಗಡಿಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾಗಲೂ ಯಂತ್ರದ ಮೂಲಕ ಹೆಚ್ಚು ಬೋಂಡಾಗಳನ್ನು ತಯಾರಿಸುವುದು ಸುಲಭವಾಗಿದೆ ಎಂದಿದ್ದಾರೆ ಸಾಧಕ ವ್ಯಾಪಾರಿ.


ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಯಂತ್ರ ಪ್ರದರ್ಶನ
ಈ ನಾವೀನ್ಯತೆಯನ್ನು ದೇಶಾದ್ಯಂತ ಇತರ ಅನೇಕರಿಗೆ ಕೊಂಡೊಯ್ಯುವ ಉತ್ಸುಕತೆಯೊಂದಿಗೆ, 2018 ರಲ್ಲಿ, ಬಸಂತ್ ಈ ಯಂತ್ರವನ್ನು ಲಕ್ನೋದ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್‌ನಲ್ಲಿ ಪ್ರದರ್ಶಿಸಲು ಅವಕಾಶವನ್ನು ಪಡೆದರು. “ನನ್ನ ವಿವರಗಳನ್ನು ಸ್ವೀಕರಿಸಿದ ನಂತರ ಪ್ರತಿಷ್ಠಾನದ ತಂಡವೊಂದು ನನ್ನ ಆವಿಷ್ಕಾರವನ್ನು ಪರಿಶೀಲಿಸಲು ಬಂದಿತು ಮತ್ತು ವಿಜ್ಞಾನ ಉತ್ಸವದ ಭಾಗವಾಗಲು ನನ್ನನ್ನು ಆಹ್ವಾನಿಸಿತು. ಫೌಂಡೇಶನ್‌ ನನ್ನ ಕೆಲಸಕ್ಕಾಗಿ 25,000 ರೂ.ಗಳ ಅನುದಾನವನ್ನು ನೀಡಿ ಪ್ರೋತ್ಸಾಹಿಸಿತು" ಎಂದು ತಿಳಿಸಿದರು.


200 ಯಂತ್ರಗಳನ್ನು ತಯಾರಿಸಿ ಮಾರಾಟ
ಬಸಂತ್ ಇದುವರೆಗೆ 200 ಯಂತ್ರಗಳನ್ನು ತಯಾರಿಸಿ ಛತ್ತೀಸ್‌ಗಢದ ಇತರ ಸಣ್ಣ ಸ್ಟಾಲ್ ಮಾಲೀಕರಿಗೆ ಮಾರಾಟ ಮಾಡಿದ್ದಾರೆ. ಹೊರ ರಾಜ್ಯಗಳಿಂದಲೂ ಕೆಲವು ಆರ್ಡರ್‌ಗಳು ಬಂದಿದ್ದು, ಅದನ್ನು ಅವರು ಕೊರಿಯರ್ ಮಾಡುತ್ತಾರೆ. ನಾಗಪುರದ ನಿವಾಸಿ ಮನೀಶ್ ಸಾಹು ಅವರು ಬಸಂತ್ ಅವರಿಂದ ಯಂತ್ರವನ್ನು ಖರೀದಿಸಿದ್ದು, “ಮೊದಲು ಕೇವಲ 10 ಕೆಜಿ ಬೋಂಡಾ ತಯಾರಿಸುತ್ತಿದ್ದೇವು ಆದರೆ ಯಂತ್ರದ ಸಹಾಯದಿಂದ ನಾವು ಈಗ ಪ್ರತಿದಿನ 40 ಕೆಜಿಗಿಂತ ಹೆಚ್ಚು ಮಾರಾಟ ಮಾಡುತ್ತೇವೆ. ಇದರಿಂದ ನಮ್ಮ ಮಾರಾಟವೂ ಹೆಚ್ಚಿದೆ" ಎಂದರು.

First published: