Viral Video: 21 ವರ್ಷಗಳ ನಂತರ ಕೊನೆಗೂ ಗಡ್ಡ ಬೋಳಿಸಿದ ವ್ಯಕ್ತಿ, ಫುಲ್ ವೈರಲ್​ ಆಗ್ತಿದೆ ವಿಡಿಯೋ

Chhattisgarh Man Shaves Beard: ಹರಕೆ ಮತ್ತು ಸಂಕಲ್ಪ ಹೊತ್ತುಕೊಳ್ಳುವುದು ಮೊದಲಿನಿಂದಲೂ ಪ್ರತೀಕವಾಗಿದೆ. ತನ್ನ ಸ್ವಾರ್ಥಕ್ಕಾಗಿ ಮಾತ್ರ ಹರಕೆಗಳನ್ನು ಹೊತ್ತುಕೊಳ್ಳುವ ಈ ಕಾಲದಲ್ಲಿ ಇಲ್ಲೊಬ್ಬರು ಊರಿಗಾಗಿ ಮತ್ತು ಊರಿನ ಜನತೆಗಾಗಿ ಹರಕೆಯನ್ನು ಹೊತ್ತಿದ್ದಾರೆ. ಕುತೂಹಲ ವ್ಯಕ್ತಿಯ ಒಂದು ಇಂಟ್ರೆಸ್ಟಿಂಗ್ ವಿಷಯವೊಂದು ಛತ್ತೀಸ್​ಘಡ್​ನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಕಾಲದಲ್ಲಿ ಯಾವುದಾದರೂ ವಿಷಯಗಳು ಅಥವಾ ಒಂದೊಳ್ಳೆ ಕಾರ್ಯಗಳು ನಿರ್ವಿಘ್ನ ಬಾರದಂತೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ (Education)  ಜನರು ವಿವಿಧ ರೋಪದಲ್ಲಿ ಸಂಕಲ್ಪ ಅಥವಾ ಹರಕೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಬರುಬರುತ್ತಾ ಈ ಸಂಕಲ್ಪಗಳು ಬದಲಾವಣೆ ಹೊಂದಲು ಆರಂಭವಾಯಿತು. ತಮ್ಮ ಸ್ಟಾರ್ ನಟರ ಸಿನಿಮಾಗಳು ಹಿಟ್ ಆಗಲು, ಕ್ರಿಕೆಟ್ ಟೀಮ್ (Cricket team) ವಿನ್ ಆಗಲೂ ಅಥವಾ ಇನ್ನಷ್ಟು ಕ್ರೇಝೀ ವಿಷಯಗಳಿಗೆ ಹರಕೆಗಳನ್ನು ಹೊರಲು ಆರಂಭವಾಯಿತು. ಇದೇ ರೀತಿಯಾಗಿ ಇಲ್ಲೋರ್ವ ವ್ಯಕ್ತಿ ಸುಮಾರು 21 ವರ್ಷಗಳ ನಂತರ ತನ್ನ ಗಡ್ಡವನ್ನು ಬೋಳಿಸಿಕೊಂಡಿದ್ದಾನೆ. ಯಾವುದೇ ಸ್ಟೈಲ್ ಅಲ್ಲ, ಬದಲಾಗಿ ಇದೊಂದು ಸಂಕಲ್ಪ ಅಂತಾರೆ ಇವರು. ಇದೀಗ ಇವರು ಗಡ್ಡ ಬೋಳಿಸುವ ವೀಡಿಯೋ ಸಖತ್ ವೈರಲ್ (viral) ಆಗಿದೆ.

ಏನದು ಸಂಕಲ್ಪ?
ಇವರ ಹೆಸರು ರಮಾಶಂಕರ್ ಗುಪ್ತಾ. ಮನೇಂದ್ರಘರ್ ನಿವಾಸಿಯಾದ ಆರ್​ಟಿನ ಕಾರ್ಯಕರ್ತರಾಗಿದ್ದಾರೆ. ಮನೇಂದ್ರಘರ್ - ಚಿರ್ಮಿರಿ-ಭಾರತ್​ಪುರಗಳು ಹೊಸ ಜಿಲ್ಲೆಯಾಗುವ ತನಕವೂ ತಾನು ಗಡ್ಡ ಬೋಳಿಸುವುದಿಲ್ಲ ಎಂಬ ಸಂಕಲ್ಪದ ಕಾರಣ ಸತತ 21 ವರ್ಷಗಳ ತನಕ ಗಡ್ಡವನ್ನು ಬೋಳಿಸದೇ ಹಾಗೆಯೇ ಇಟ್ಟುಕೊಂಡಿದ್ದರು. ಆದರೆ ಇದೀಗ ಛತ್ತೀಸ್​ಗಢ ಸರ್ಕಾರವು ರಾಜ್ಯದ 32ನೆಯ ಜಿಲ್ಲೆಯಾಗಿ ಎಂಸಿಬಿಯನ್ನು ಪ್ರಾರಂಭಿಸುವುದರೊಂದಿಗೆ ಗುಪ್ತಾರವರ ಸಂಕಲ್ಪ ಶುಕ್ರವಾರ ನೆರವೇರಿತು.

ಇದನ್ನೂ ಓದಿ: Troll Video: ಬ್ಲೌಸ್ ಹಾಕೊಂಡು ಭವಿಷ್ಯ ಹೇಳಮ್ಮಾ! ಖ್ಯಾತ ಜ್ಯೋತಿಷಿಯ ಗ್ರಹಚಾರ ಬಿಡಿಸಿದ ನೆಟ್ಟಿಗರು

'ಮನೇಂದ್ರಗಢ - ಚಿರ್ಮಿರಿ-ಭಾರತ್​ಪುರ ಇವು ಜಿಲ್ಲೆಯಾಗುವವರೆಗೂ ತನ್ನ ಗಡ್ಡವನ್ನು ಬೋಳಿಸಿಕೊಳ್ಳುವುದಿಲ್ಲ. ಈ ಜಿಲ್ಲೆಯ ಮಾನ್ಯತೆಗಾಗಿ ಹೋರಾಡಿದ ಜನರೆಲ್ಲರೂ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇದೀಗ ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಗುಪ್ತಾ ಬೇಡಿಕೊಳ್ಳುತ್ತಾ ತಮ್ಮ ಗಡ್ಡವನ್ನು ಬೋಳಿಸಿಕೊಂಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಕೂಡ ಆಗಿದೆ.ಈ ಪ್ರದೇಶವು ಜಿಲ್ಲೆಯಾಗಲು ಗುಪ್ತಾರವರು ಹಲವು ಹೋರಾಟಗಳನ್ನು ಮಾಡಿದ್ದರು. 'ಇದಕ್ಕಾಗಿ ನಾನು ಮುಖ್ಯಮಂತ್ರಿ ಭೋಫೆಶ್ ಬಾಘೇಲ್ ಅವರಿಗೆ ಧನ್ಯವಾದವನ್ನು ತಿಳಿಸುತ್ತೇನೆ. ಛತ್ತೀಸ್​ಗಢವು ದೇಶದಲ್ಲಿಯೇ ಮಾದರಿ ಆಗುವ ಜಿಲ್ಲೆಯಾಗಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಗುಪ್ತಾರವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಊರಿಗಾಗಿ ಹರಕೆ ಹೊತ್ತ ವ್ಯಕ್ತಿ
ಸಾಮಾನ್ಯವಾಗಿ ಜನರು ಯಾವುದೇ ಸಂಕಲ್ಪವನ್ನು ಮಾಡಿಕೊಳ್ಳುವ ಮೊದಲು ನೂರು ಬಾರಿ ಯೋಚಿಸುವುದು ಬಹಳ ವಿರಳ. ಯಾಕೆಂದರೆ ಆ ವಿಷಯಗಳ ಮೇಲೆ ಬಹಳ ಭರವಸೆಯನ್ನು ಹೊತ್ತಿರುತ್ತಾರೆ ಅಥವಾ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆಗ ಮಾತ್ರ ಹರಕೆ ಅಥವಾ ಸಂಕಲ್ಪ ಹೊಂದಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Viral Photo: ರಾಷ್ಟ್ರೀಯ ಉದ್ಯಾನವನದಲ್ಲಿ ಹಿಮದ ಗುಹೆ! ಅಪರೂಪದ ಚಿತ್ರ ನೀವೂ ನೋಡಿ

ಇದೇ ರೀತಿಯಾಗಿ ಗುಪ್ತಾರವರು ಕೂಡ ಸತತ 21 ವರ್ಷಗಳ ಕಾಲ ಜಿಲ್ಲೆಗಾಗಿ ಗಡ್ಡವನ್ನು ಬೋಳಿಸದೇ ಹಾಗೆಯೇ ಇದ್ರು. ಇದು ಯಾವುದೇ ಸ್ವಾರ್ಥದ ಹರಕೆಯಲ್ಲ. ಬದಲಾಗಿ ಊರಿಗಾಗಿ ಮತ್ತು ಊರಿನ ಜನರಿಗಾಗಿ ಹೊತ್ತುಕೊಂಡಿದ್ದಾರೆ. ಅಂತು ಇಂತು ಹಲವು ವರ್ಷಗಳ ನಂತರ ಮನೇಂದ್ರಗಢವು ಜಿಲ್ಲೆಯಾಗಿದೆ. ಇದೇ ಖುಷಿಯಲ್ಲಿ ಅಲ್ಲಿನ ಜನರು ಗುಪ್ತಾರವರನ್ನು ಶ್ಲಾಘಿಸಿದ್ದಾರೆ. ಇದರ ಜೊತೆಗೆ ಜಿಲ್ಲೆಯು ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಸರ್ಕಾರವು ಘೋಷಿಸಿದೆ.

ಸೌಕರ್ಯಗಳೇ ಇಲ್ಲದ ಊರು

ಜಿಲ್ಲೆ ಆಗುವುದರ ಮೊದಲು ಇಲ್ಲಿ ಸರಿಯಾಗಿ ಆಸ್ಪತ್ರೆಗಳು ಇರದೇ, ನೀರಿನ ವ್ಯವಸ್ಥೆ, ಸಾರಿಗೆ ವ್ಯವಸ್ಥೆಯು ಇರದೇ ಜನರು ಪರದಾಡುವಂತಾಗಿತ್ತು. ಯಾವಾಗ ದಿನೇ ದಿನೇ ಈ ವಿಷಯಗಳ ಕುರಿತಾಗಿ ಪ್ರಸ್ತಾವನೆಗಳು ಛತ್ತೀಸ್​ಗಢದ ಸರ್ಕಾರದಲ್ಲಿ ಆರಂಭವಾದವೋ ಅಂದಿನಿಂದ ಜನರಿಗೆ ಸೌಕರ್ಯಗಳು ಆರಂಭವಾದವು ಜೊತೆಗೆ ಜಿಲ್ಲೆಯಾಗಿ ಮಾರ್ಪಾಡಾದಾಗಲೂ ಪ್ರತಿಯೊಂದು ಸಿದ್ಧತೆಗಳೂ ಆರಂಭವಾದವು.

ಶುಕ್ರವಾರ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಛತ್ತೀಸ್​ಗಢದ 32ನೇ ಜಿಲ್ಲೆ ಮನೇಂದ್ರಗಢ - ಚಿರ್ಮಿರಿ-ಭರತ್​ಪುರಕ್ಕೆ ಚಾಲನೆ ನೀಡಿದರು. ಜಿಲ್ಲಾ ಕೇಂದ್ರವು ಮನೇಂದ್ರಗಢದಲ್ಲಿದ್ದು, ಚಿರ್ಮಿರಿಯಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮಾರ್ಪಾಡಾಗುತ್ತದೆ. ಇದೇ ಸಂದರ್ಭದಲ್ಲಿ ನೂತನ ಜಿಲ್ಲೆಯಲ್ಲಿ 200ಕೋಟಿರೂಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ.
First published: