Chennai Birdman: ಸಾವಿರಾರು ಗಿಳಿಗಳ ಪೋಷಣೆಗಾಗಿ ತಮ್ಮ ಸಂಬಳದ ಶೇ. 40ರಷ್ಟು ಖರ್ಚು ಮಾಡ್ತಾರೆ ಈ ವ್ಯಕ್ತಿ..!

ಚೆನ್ನೈನ 'ಬರ್ಡ್‌ಮ್ಯಾನ್' (Birdman)ಎಂದೇ ಪ್ರಸಿದ್ದಿ ಹೊಂದಿರುವ ಇವರು ಗಿಳಿಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಇವರ ತೋರಿಸುವ ಪ್ರೀತಿಗೆ (love)ಮಾರು ಹೋಗಿ ಸಾವಿರಾರು ಗಿಳಿಮರಿಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಕಳೆದ 16 ವರ್ಷಗಳಿಂದ(16 years) ತಮ್ಮ ತಾರಸಿಯಲ್ಲಿ ಸಾವಿರಾರು ಗಿಳಿಗಳಿಗೆ ಆಹಾರ ನೀಡುತ್ತಿದ್ದಾರೆ ಎಂದರೆ ನಿಜ್ಕಕೂ ಹೆಮ್ಮೆ ಪಡುವಂತಹ ವಿಚಾರ ಇದು.

ಚೆನ್ನೈನ 'ಬರ್ಡ್‌ಮ್ಯಾನ್'

ಚೆನ್ನೈನ 'ಬರ್ಡ್‌ಮ್ಯಾನ್'

 • Share this:
  ಪಕ್ಷಿಗಳ ಮೇಲೆ ಜನರಿಗೆ ಏನು ಒಂಥರ ಪ್ರೀತಿ .... ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಪಕ್ಷಿಗಳನ್ನು ಕಂಡು ಉತ್ಸಾಹದಿಂದ ಮನಸ್ಸಿನಲ್ಲಿ ತಾವೇ ಆಕಾಶದಲ್ಲಿ ಹಾರುವಂತೆ ಸಂತಸಪಡುತ್ತಾರೆ. ಅದರಲ್ಲೂ ಗಿಳಿಮರಿಗಳನ್ನು ಕಂಡರೆ ಸಾಕು ವಿಶೇಷ ಕಾಳಜಿಯನ್ನೇ(special care) ಮಾಡುತ್ತಾರೆ, ಇತರ ಎಲ್ಲಾ ಪಕ್ಷಿಗಳಿಗಿಂತ(birds) ಗಿಳಿ ತುಂಬಾ ಆಕರ್ಷಕ ಮತ್ತು ಮುದ್ದಾಗಿರುತ್ತವೆ. ಹಸಿರು ಬಣ್ಣದಿಂದ ಕೂಡಿರುವ ಈ ಪಕ್ಷಿಯ ಆರೈಕೆ ಚೆನ್ನಾಗಿ ಮಾಡಬೇಕು. ಅದರಂತೆ ಚೆನ್ನೈನಲ್ಲಿ ಪಕ್ಷಿಪ್ರೇಮಿಯಾದ ವ್ಯಕ್ತಿಯೊಬ್ಬರು ಗಿಳಿಗಳ ಆರೈಕೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಹೌದು ಚೆನ್ನೈ (Chennai’s) ಮೂಲದ ವ್ಯಕ್ತಿಯಾದ ಅಕಾ ಸಿ.ಶೇಕರ್‌ ಅಕಾ(C Sekar aka)ಎಂಬಾತ ಗಿಳಿಗಳ (parakeets) ಆರೈಕೆಗಾಗಿಯೇ ತಮ್ಮ ಸಂಬಳದಿಂದ ಶೇ 40ರಷ್ಟು ಖರ್ಚು ಮಾಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

  ಇದನ್ನು ಓದಿ:ಚೆನ್ನೈನಲ್ಲಿ 5 ಮೂತ್ರಪಿಂಡಗಳಿರುವ 41 ವರ್ಷದ ವ್ಯಕ್ತಿ ಬದುಕಿದ್ದೇ ಪವಾಡ..!

  ಚೆನ್ನೈನ 'ಬರ್ಡ್‌ಮ್ಯಾನ್' ( Chennai Birdman)ಎಂದೇ ಪ್ರಸಿದ್ದಿ ಹೊಂದಿರುವ ಇವರು ಗಿಳಿಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಇವರ ತೋರಿಸುವ ಪ್ರೀತಿಗೆ (love)ಮಾರು ಹೋಗಿ ಸಾವಿರಾರು ಗಿಳಿಮರಿಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಕಳೆದ 16 ವರ್ಷಗಳಿಂದ(16 years) ತಮ್ಮ ತಾರಸಿಯಲ್ಲಿ ಸಾವಿರಾರು ಗಿಳಿಗಳಿಗೆ ಆಹಾರ ನೀಡುತ್ತಿದ್ದಾರೆ ಎಂದರೆ ನಿಜ್ಕಕೂ ಹೆಮ್ಮೆ ಪಡುವಂತಹ ವಿಚಾರ ಇದು.

  ಚೆನ್ನೈನ ಅತ್ಯಂತ ಹಳೆಯ ನೆರೆಹೊರೆಯ ಟ್ರಿಪ್ಲಿಕೇನ್‌ನಲ್ಲಿ ನೆಲೆಸಿರುವ ಶೇಕರ್ ಅವರು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ (electrician) ಮತ್ತು ಕ್ಯಾಮೆರಾ ತಂತ್ರಜ್ಞರಾಗಿ (camera technician ) ಕೆಲಸ ಮಾಡುತ್ತಾರೆ. ಮತ್ತು, ಅವರು ಕಾರ್ಯನಿರ್ವಹಿಸುವ ಅಂಗಡಿಯ ಮೇಲ್ಭಾಗದಲ್ಲಿ, ಅವರು ಪ್ರತಿದಿನ ಕನಿಷ್ಠ 2000 (2000 parakeets ) ಗಿಳಿಗಳಿಗೆ ಆಹಾರವನ್ನು ನೀಡುವ ಟೆರೇಸ್ ಆಗಿದೆ. ಚಳಿಗಾಲದಲ್ಲಿ, ಪಕ್ಷಿಗಳ ಸಂಖ್ಯೆ 8000 ಕ್ಕೆ ಏರುತ್ತದೆ ಎಂದರೆ ನಿಜಕ್ಕೂ ಆಶ್ಚರ್ಯವಾಗಲಿದೆ.

  ಈ ಗಿಳಿಗಳ ದೈನಂದಿನ ಆಹಾರಕ್ಕಾಗಿ ಪ್ರತಿದಿನ ಸುಮಾರು 75 ಕೆಜಿ ಅಕ್ಕಿಯನ್ನು (rice) ಶೇಕರ್‌ ಬಳಸುತ್ತಿದ್ದಾರೆ. ಹಸಿರು ಅತಿಥಿಗಳಿಗೆ ಅವರು ಆಹಾರವನ್ನು ಖರೀದಿಸಲು ತಮ್ಮ ಮಾಸಿಕ ಆದಾಯದ 40 ಪ್ರತಿಶತವನ್ನು ವ್ಯಯಿಸುತ್ತಿದ್ದಾರೆ.

  ಅದು ಹೇಗೆ ಪ್ರಾರಂಭವಾಯಿತು?
  2004 ರಲ್ಲಿ ಸುನಾಮಿ ಸಂಭವಿಸಿದ (tsunami ) ನಂತರ ಶೇಕರ್‌ ಅವರು ತಮ್ಮ ತಾರಸಿಯಲ್ಲಿ ಮೊದಲ ಬಾರಿಗೆ ಗಿಳಿ, ಪಕ್ಷಿಗಳನ್ನು ಬರುವುದನ್ನು ಗುರುತಿಸಿ ನಂತರ ಇದು ಒಂದು ಸಣ್ಣ ಪ್ರಯತ್ನವಾಗಿ ಪ್ರಾರಂಭಿಸಿದರು. ಮುಂದೆ ಅದು ಸಾವಿರಾರು ಪಕ್ಷಿಗಳ ನೆಲೆಯಾಯಿತು. ನಾವು ಗುಬ್ಬಚ್ಚಿಗಳಿಗಾಗಿ ಟೆರೇಸ್‌ನಲ್ಲಿ ಇಡುವ ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ತಿನ್ನುವುದನ್ನು ನಾನು ನೋಡಿದೆ. ಮತ್ತು ಆಹಾರವನ್ನು (food)ನೀಡಲು ಪ್ರಾರಂಭಿಸಿದೆ, ಇದರ ಪರಿಣಾಮವಾಗಿ ಅನೇಕ ಗಿಳಿಗಳು ಸಂಜೆ ನನ್ನ ಟೆರೇಸ್‌ಗೆ ಹಾರಲು ಪ್ರಾರಂಭಿಸಿದವು. ಈ ಸಂಖ್ಯೆ ಯಾವಾಗ ಸಾವಿರವಾಯಿತು ಎಂದು ನನಗೆ ತಿಳಿದಿರಲಿಲ್ಲ, ”ಎಂದು ಅವರು ಹೇಳುತ್ತಾರೆ.

  ಇದನ್ನು ಓದಿ: Tamil Nadu Rains: ಪ್ರಜ್ಞಾಹೀನ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತೊಯ್ದ ಮಹಿಳಾ ಇನ್ಸ್​ಪೆಕ್ಟರ್

  ನಿರ್ವಹಣೆ ಹೇಗೆ?
  ಪ್ರತಿದಿನ ಮುಂಜಾನೆ (morning) 4 ಗಂಟೆಯ ಸುಮಾರಿಗೆ, ಶೇಕರ್ ತನ್ನ ಟೆರೇಸ್‌ಗೆ ಹೋಗಿ ಸುಮಾರು 20 ನಿಮಿಷಗಳ ಕಾಲ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಹಲವಾರು ಮರದ ಹಲಗೆಗಳನ್ನು ಹಂತ-ಹಂತವಾಗಿ ಜೋಡಿಸುತ್ತಾರೆ. ಅವರು ನೆನೆಸಿದ ಅಕ್ಕಿಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿಕೊಂಡು ಅಡುಗೆಮನೆಯಿಂದ ಮೆಟ್ಟಿಲುಗಳ ಮೇಲೆ ಟೆರೇಸ್‌ಗೆ ತರಲು ಸುಮಾರು 5-6 ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ. ಅವನು ಪ್ರತಿ ಹಕ್ಕಿಗೆ ಧಾನ್ಯಗಳ ಸಣ್ಣ ಭಾಗಗಳನ್ನು ಜೋಡಿಸಿಕೊಂಡು ಅವುಗಳನ್ನು ಹಲಗೆಗಳ ಮೇಲೆ ಅಂದವಾಗಿ ಜೋಡಿಸುತ್ತಾರೆ.

  ನಿತ್ಯ ಕರ್ತವ್ಯ

  ಇನ್ನೊಂದು ಅರ್ಧ ಗಂಟೆಯಲ್ಲಿ ಹಲವು ಭಾಗಗಳಿಂದ ಬಂದ ಗಿಳಿಗಳು ತಮ್ಮ ಸಹವರ್ತಿ ಪಕ್ಷಿಗಳೊಂದಿಗೆ ಮಧ್ಯಪ್ರವೇಶಿಸದೆ ತಮ್ಮದೇ ಆದ ಜಾಗದಲ್ಲಿ ಬಹಳ ಶಿಸ್ತಿನಿಂದ ತಿಂದು ಹಾರಿ ಹೋಗುತ್ತದೆ. ಕೆಲವೊಮ್ಮೆ ಪಾರಿವಾಳಗಳು (even pigeons)ಕೂಡ ಇಲ್ಲಿ ತಿನ್ನಲು ಬರುತ್ತವೆ. ಕೆಲಸದ ನಂತರದ ಎರಡನೇ ಬ್ಯಾಚ್ ಪ್ಯಾರಾಕೆಟ್‌ಗಳಿಗೆ ಅವರು ಸಂಜೆ ಅದೇ ಅಭ್ಯಾಸವನ್ನು ಅನುಸರಿಸುತ್ತಾರೆ.

  ಪಕ್ಷಿಗಳಿಗೆ ಸೇವೆ ಸಲ್ಲಿಸುವ ನಡುವೆ, ಶೇಕರ್‌ ತಮ್ಮ ಮನೆಯ ನೆಲ ಮಹಡಿಯಲ್ಲಿರುವ ಅವರದೇ ಅಂಗಡಿಯಲ್ಲಿ ಸಂಜೆ 7 ಗಂಟೆಯವರೆಗೆ ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾರೆ ಮತ್ತು ವಿರಾಮದ (breaks)ನಡುವೆ, ಪಕ್ಷಿಗಳನ್ನು ಪರಿಶೀಲಿಸುತ್ತಾರೆ ಅಥವಾ ಗಿಳಿಗಳು ಹೋದ ನಂತರ ಟೆರೇಸ್ ಅನ್ನು ಸ್ವಚ್ಛಗೊಳಿಸುವುದು ಅವರ ನಿತ್ಯ ಕರ್ತವ್ಯಗಳಲ್ಲಿ ಒಂದಾಗಿದೆ.
  Published by:vanithasanjevani vanithasanjevani
  First published: