Debit Cardನಿಂದ ಕತ್ತು ಕೊಯ್ದುಕೊಂಡು ಪ್ರಾಣಕ್ಕೆ ಕುತ್ತು ತಂದುಕೊಂಡ, ಅಸಲಿ ಕಾರಣ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!

ಕ್ತಿಯ ಒಂದು ಕೈಯಲ್ಲಿ ಡೆಬಿಟ್ ಕಾರ್ಡ್ ಹಿಡಿದುಕೊಂಡಿದ್ದನ್ನು ನೋಡಿದ ಪೊಲೀಸರಿಗೆ ಈ ಡೆಬಿಟ್ ಕಾರ್ಡ್‌ನಿಂದಲೇ ತನ್ನ ಮಣಿಕಟ್ಟನ್ನು ಮತ್ತು ಗಂಟಲನ್ನು ಕೊಯ್ದುಕೊಂಡಿದ್ದಾನೆ ಎಂಬ ವಿಚಾರ ಗೊತ್ತಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾನು ನೀಡಿದ ಹಣವನ್ನು ಹಿಂತಿರುಗಿ ಕೇಳಲು ಹೋದ 25 ವರ್ಷದ ವ್ಯಕ್ತಿ ಅಪಾರ್ಟ್ಮೆಂಟ್‌ (Apartment) ವೊಂದರಲ್ಲಿರುವ ಮನೆಯಲ್ಲಿ ಡೆಬಿಟ್ ಕಾರ್ಡ್‌ ( Debit card)ನಿಂದ ತನ್ನ ಮಣಿಕಟ್ಟನ್ನು ಮತ್ತು ಗಂಟಲನ್ನು  ಕೊಯ್ದುಕೊಂಡು ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಹೃದಯ (Heartbreaking) ವಿದ್ರಾವಕ ಘಟನೆಯೊಂದು ತಮಿಳುನಾಡಿನ ಪೆರವಲ್ಲೂರಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪೆರಿಯಾರ್ ನಗರದಲ್ಲಿ (Periyar City) 53 ವರ್ಷದ ಮಹಿಳೆಯೊಬ್ಬಳು ಅಲ್ಲಿಯೇ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನವನ್ನು ತಡೆದು ನಿಲ್ಲಿಸಿ, ಒಬ್ಬ ವ್ಯಕ್ತಿಯು ತನ್ನ ಅಪಾರ್ಟ್ಮೆಂಟ್‌ನಲ್ಲಿ ಬಂದು ಲಾಕ್ ಮಾಡಿಕೊಂಡಿದ್ದಾನೆ ಎಂದು ಅವಳು ಪೊಲೀಸರಿಗೆ ತಿಳಿಸಿದಳು.

ಮಣಿಕಟ್ಟಿನಿಂದ ರಕ್ತಸ್ರಾವ
ಆ ವಿಷಯ ತಿಳಿದ ಪೊಲೀಸರು ತಡ ಮಾಡದೆ ಆ ಮಹಿಳೆಯ ಜೊತೆಗೆ ಅವರ ಮನೆಗೆ ಧಾವಿಸಿ ಅವರ ಅಪಾರ್ಟ್ಮೆಂಟ್‌ನಲ್ಲಿರುವ ಮನೆಯ ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಅಲ್ಲಿ ಒಬ್ಬ ವ್ಯಕ್ತಿ ಕುತ್ತಿಗೆ ಮತ್ತು ಮಣಿಕಟ್ಟಿನಿಂದ ರಕ್ತಸ್ರಾವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಅವನು ಒಂದು ಕೈಯಲ್ಲಿ ಡೆಬಿಟ್ ಕಾರ್ಡ್ ಹಿಡಿದುಕೊಂಡಿದ್ದನ್ನು ನೋಡಿದ ಪೊಲೀಸರು ಈ ಡೆಬಿಟ್ ಕಾರ್ಡ್‌ನಿಂದಲೇ ತನ್ನ ಮಣಿಕಟ್ಟನ್ನು ಮತ್ತು ಗಂಟಲನ್ನು ಕೊಯ್ದುಕೊಂಡಿದ್ದಾನೆ ಎಂಬ ವಿಚಾರ ಗೊತ್ತಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದ ಆ ವ್ಯಕ್ತಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆ ವ್ಯಕ್ತಿಯ ವಿಚಾರಣೆಯ ನಂತರ ಪೊಲೀಸರಿಗೆ ಕೆಲವು ಮಾಹಿತಿಯು ಸಿಕ್ಕಿತು. ಆ ವ್ಯಕ್ತಿಯ ಹೆಸರು ಅರವಿಂದನ್ ಆಗಿದ್ದು, ಪುದುಚೆರ್ರಿ ನಿವಾಸಿಯಾಗಿದ್ದಾನೆ ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ಆ ಮಹಿಳೆಯ ಮಗಳು ಇಬ್ಬರು 2018ರವರೆಗೆ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದಿದ್ದು, ಆಗ ಆಕೆಯ ಮಗಳಿಗೆ 3.5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದನು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಇದನ್ನೂ ಓದಿ: ATM ಕಾರ್ಡ್ ಬ್ಲಾಕ್ ಆಗಿದೆಯಾ? Activate ಮಾಡಿಕೊಳ್ಳೋದು ಹೇಗೆ?

ಭಯದಲ್ಲಿ ಕೋಣೆ ಸೇರಿದ
“ಅವನು ನೀಡಿದ ಹಣವನ್ನು ಆ ಹುಡುಗಿ ಮತ್ತು ಅವಳ ತಾಯಿ ಅವನಿಗೆ ಮರುಪಾವತಿ ಮಾಡುವಲ್ಲಿ ತುಂಬಾನೇ ವಿಳಂಬ ಮಾಡುತ್ತಿದ್ದಾರೆ ಎಂದು ಆ ವ್ಯಕ್ತಿ ಸೋಮವಾರ ಖುದ್ದು ತಾನೇ ಅವರ ಮನೆಗೆ ಭೇಟಿ ನೀಡಿ, ಆ ಹಣವನ್ನು ತೆಗೆದುಕೊಂಡು ಬರೋಣ ಎಂದು ಬಂದಿದ್ದಾನೆ, ಆದರೆ ಆ ಮಹಿಳೆ ಕಳ್ಳ ಮನೆಗೆ ನುಗ್ಗಿದ್ದಾನೆ ಎಂದು ಕೂಗಿಕೊಂಡಿದ್ದಾಳೆ” ಎಂದು ಪೊಲೀಸರು ತಿಳಿಸಿದ್ದಾರೆ.

ಆನಂತರ “ಎಲ್ಲಿ ಜನರು ಬಂದು ತನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ ಎನ್ನುವ ಭಯದಲ್ಲಿ ಕೋಣೆಯನ್ನು ಲಾಕ್ ಮಾಡಿಕೊಂಡು ಡೆಬಿಟ್ ಕಾರ್ಡ್‌ನಿಂದ ನನ್ನ ಮಣಿಕಟ್ಟನ್ನು ಮತ್ತು ಗಂಟಲನ್ನು ಕೊಯ್ದುಕೊಂಡಿದ್ದೇನೆ” ಎಂದು ಅವನು ಪೊಲೀಸರು ನಡೆಸಿದ ವಿಚಾರಣೆಯಲ್ಲಿ ತಿಳಿಸಿದ್ದಾನೆ.

ವಿಚಾರಣೆ ನಡೆಸಿದ ಪೋಲಿಸರು
ಆದರೆ ಆ ಮಹಿಳೆ ಹೇಳುವುದೇ ಬೇರೆ ಕಥೆ, “ಅರವಿಂದನ್ ಅನುಮಾನಾಸ್ಪದ ರೀತಿಯಲ್ಲಿ ನನ್ನ ಅಪಾರ್ಟ್ಮೆಂಟ್ ಸುತ್ತಲೂ ಓಡಾಡುತ್ತಿದ್ದನು ಮತ್ತು ನನ್ನ ಮೊಬೈಲ್ ಫೋನ್ ನೀಡುವಂತೆ ಕೇಳಿದನು, ನಾನು ನನ್ನ ಮೊಬೈಲ್ ಫೋನ್ ಅವನಿಗೆ ನೀಡಲು ನಿರಾಕರಿಸಿದ್ದಾಗ ಅವನು ನನ್ನ ಮೇಲೆ ಹಲ್ಲೆ ಮಾಡಿದನು ಮತ್ತು ನನ್ನ ಮನೆಗೆ ನುಗ್ಗಿ ಒಳಗಡೆಯಿಂದ ಲಾಕ್ ಮಾಡಿಕೊಂಡನು” ಎಂದು ಪೊಲೀಸರಿಗೆ ಹೇಳಿದ್ದಾಳೆ.

ಇದನ್ನೂ ಓದಿ: ನಿಮ್ಮ ಬಳಿಯ PNBಯ ಕಾರ್ಡ್ ಇದೆಯಾ? ಹಾಗಿದ್ರೆ ನಿಮಗೆ ಸಿಗುತ್ತೆ 2 ಲಕ್ಷ ರೂಪಾಯಿ

ಈ ಮಹಿಳೆಯ ಮತ್ತು ಅರವಿಂದನ್ ಅವರ ಹೇಳಿಕೆಗಳು ಬೇರೆ ಬೇರೆ ಆಗಿದ್ದರಿಂದ, ಪೆರವಲ್ಲೂರು ಪೊಲೀಸರು ಎರಡೂ ಕಡೆಯವರನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಘಟನೆ ನಡೆದಾಗ ಮನೆಯಲ್ಲಿ ಆ ಮಹಿಳೆಯ ಮಗಳು ಇರಲಿಲ್ಲ. ಘಟನೆಯ ಸಂದರ್ಭದಲ್ಲಿ ಮಹಿಳೆಯ ಮಗಳು ಹೊರಗೆ ಹೋಗಿದ್ದಳು ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published: