365 ಮಹಿಳೆಯರ ಜತೆ ಡೇಟಿಂಗ್‌ ಮಾಡುವುದೇ ಈತನ ಗುರಿ! ಇನ್ನು ಕೇವಲ 30 ಮಂದಿಯನ್ನು ಭೇಟಿ ಮಾಡುವುದಷ್ಟೇ ಬಾಕಿ!

ನಟ ಮತ್ತು ವೃತ್ತಿಪರ ನರ್ತಕ ಸುಂದರ್ ರಾಮು 2015ರಲ್ಲಿ ತನ್ನ ಈ ಯೋಜನೆ ಆರಂಭಿಸಿದ್ದು, ಸದ್ಯ ತನ್ನ ಗುರಿ ಈಡೇರಿಸಿಕೊಳ್ಳಲು ಇನ್ನು 30 ಮಹಿಳೆಯರ ಜತೆ ಡೇಟಿಂಗ್ ಮಾಡಬೇಕಿದೆಯಷ್ಟೇ..! ಹೌದು, ಅವರು ಈಗಾಗಲೇ 335 ಮಹಿಳೆಯರ ಜತೆ ಡೇಟಿಂಗ್ ಮಾಡಿದ್ದಾರೆ.

ಸುಂದರ್ ರಾಮು

ಸುಂದರ್ ರಾಮು

  • Share this:

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸಗಳಿರುತ್ತವೆ. ಇದೇ ರೀತಿ ತಮಿಳುನಾಡಿನ ಚೆನ್ನೈ ಮೂಲದ ವ್ಯಕ್ತಿಯೊಬ್ಬರಿಗೆ ಡೇಟಿಂಗ್‌ ಮಾಡುವುದೇ ಒಂದು ಹವ್ಯಾಸ..! ಅದರಲ್ಲೂ ಅವರು 365 ಮಹಿಳೆಯರ ಜತೆ ಡೇಟಿಂಗ್‌ ಮಾಡುವ ಮಿಷನ್‌ ಅಥವಾ ಗುರಿ ಹೊಂದಿದ್ದಾರೆ. ನಟ ಮತ್ತು ವೃತ್ತಿಪರ ನರ್ತಕ ಸುಂದರ್ ರಾಮು 2015ರಲ್ಲಿ ತನ್ನ ಈ ಯೋಜನೆ ಆರಂಭಿಸಿದ್ದು, ಸದ್ಯ ತನ್ನ ಗುರಿ ಈಡೇರಿಸಿಕೊಳ್ಳಲು ಇನ್ನು 30 ಮಹಿಳೆಯರ ಜತೆ ಡೇಟಿಂಗ್ ಮಾಡಬೇಕಿದೆಯಷ್ಟೇ..! ಹೌದು, ಅವರು ಈಗಾಗಲೇ 335 ಮಹಿಳೆಯರ ಜತೆ ಡೇಟಿಂಗ್ ಮಾಡಿದ್ದಾರೆ. ರಾಮು ರೊಮ್ಯಾಂಟಿಕ್ ವ್ಯಕ್ತಿಯಾದರೂ ಅವರ ಗುರಿ ಕೇವಲ ಪ್ರೀತಿಯನ್ನು ಕಂಡುಕೊಳ್ಳುವುದಲ್ಲದೇ ಭಾರತದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು.


"ನಾನು ಮಹಿಳೆಯರನ್ನು ಗೌರವಿಸುವ ಮತ್ತು ಚೆನ್ನಾಗಿ ನಡೆಸಿಕೊಳ್ಳುವ ಕುಟುಂಬದಲ್ಲಿ ಬೆಳೆದಿದ್ದೇನೆ. ಮತ್ತು ನಾನು ಲಿಂಗ ತಾರತಮ್ಯವಿಲ್ಲದ ಶಾಲೆಗೆ ಹೋಗಿದ್ದೆ ಮತ್ತು ಹುಡುಗರು ಹಾಗೂ ಹುಡುಗಿಯರನ್ನು ವಿಭಿನ್ನವಾಗಿ ಪರಿಗಣಿಸಲಾಗಲಿಲ್ಲ. ಆದರೆ ನಾನು ಜಗತ್ತಿಗೆ ಕಾಲಿಟ್ಟ ಬಳಿಕ ಅಂತರ್ಗತ ಲಿಂಗ ವ್ಯತ್ಯಾಸಗಳನ್ನು ನಾನು ಆಳವಾಗಿ ಅರಿತುಕೊಂಡೆ ಮತ್ತು ಇದು ನನಗೆ ದೊಡ್ಡ ಸಂಸ್ಕೃತಿಯ ಆಘಾತವಾಗಿದೆ'' ಎಂದು ಅವರು ಬಿಬಿಸಿಗೆ ತಿಳಿಸಿದರು.


ಡಿಸೆಂಬರ್ 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಘಟನೆಯ ನಂತರ ಈ ಬದಲಾವಣೆ ತರಲು ಅವರಿಗೆ ಪ್ರೇರೇಪಣೆಯಾಯಿತು. "ಈ ಘಟನೆಯಿಂದ ನನಗೆ ತೀವ್ರ ಬೇಸರವಾಯಿತು. ನನಗೆ ತುಂಬಾ ರಾತ್ರಿಗಳು ನಿದ್ದೆ ಮಾಡಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.


ನಂತರ ರಾಮು 365 ಮಹಿಳೆಯರನ್ನು ಡೇಟಿಂಗ್ ಮಾಡುವ ಯೋಜನೆಯನ್ನು ಜನವರಿ 1, 2015 ರಂದು ಆರಂಭಿಸಿದ್ದು, ಈ ಬಗ್ಗೆ ಹಿಂದಿನ ದಿನ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಮಹಿಳೆಯರು "ನನ್ನನ್ನು ಕೇಳಬೇಕು, ಪ್ಲಾನ್‌ ಮಾಡಬೇಕು, ಸ್ಥಳವನ್ನು ಆರಿಸಬೇಕು ಮತ್ತು ಹಣ ಪಾವತಿಸಬೇಕು ಅಥವಾ ಅಡುಗೆ ಮಾಡಿ ಊಟ ಮಾಡಬೇಕಾಗುತ್ತದೆ ಎಂದು ಅವರು ಬರೆದಿದ್ದಾರೆ.

ಅವರು ಈ ಊಟದಲ್ಲಿ ಉಳಿಸಿದ ಹಣವನ್ನು ದತ್ತಿ ಸಂಸ್ಥೆಗಳಿಗೆ ಆಹಾರ ಖರೀದಿಸಲು ಬಳಸುತ್ತಾರೆ ಎಂದು ಹೇಳಿದರು.

ಇನ್ನು, ಅವರ ಆರಂಭಿಕ ಡೇಟ್‌ಗಳು ತಿಳಿದಿರುವ ಜನರೊಂದಿಗೆ ಇದ್ದವು. ಶೀಘ್ರದಲ್ಲೇ, ಅವರು "ದಿ ಡೇಟಿಂಗ್ ಕಿಂಗ್", "365-ಡೇಟ್‌ಗಳ ವ್ಯಕ್ತಿ'' ಮತ್ತು "ಸೀರಿಯಲ್ ಡೇಟರ್" ಎಂದು ಪ್ರಸಿದ್ಧರಾದರು.

ಅವರು ತಮ್ಮ ಈ ಡೇಟಿಂಗ್‌ ಮೀಟಿಂಗ್‌ಗಳ ಕತೆಗಳನ್ನು ಫೇಸ್‌ಬುಕ್‌ನಲ್ಲಿ ದಾಖಲಿಸುತ್ತಾರೆ. "ನನ್ನ ಡೇಟ್‌ಗಳೊಂದಿಗಿನ ನನ್ನ ಸಂಭಾಷಣೆಗಳನ್ನು ಬರೆಯುವ ಮೂಲಕ, ನಿಮ್ಮನ್ನು ಮಹಿಳೆಯ ಸ್ಥಾನದಲ್ಲಿ ಕಲ್ಪಿಸಿಕೊಳ್ಳಿ, ಅವರಂತೆ ಯೋಚಿಸಿ ಮತ್ತು ನೀವು ಅವರ ಸಮಸ್ಯೆಗಳನ್ನು ಸ್ವಲ್ಪ ಹೆಚ್ಚು ಅರ್ಥಮಾಡಿಕೊಳ್ಳುವಿರಿ ಎಂದು ನಾನು ಜನರಿಗೆ ಹೇಳಲು ಪ್ರಯತ್ನಿಸುತ್ತಿದ್ದೆ'' ಎಂದೂ ಹೇಳಿದ್ದಾರೆ.ಕಳೆದ ಐದೂವರೆ ವರ್ಷಗಳಲ್ಲಿ, ರಾಮು ವಿಯೆಟ್ನಾಂ, ಸ್ಪೇನ್, ಫ್ರಾನ್ಸ್, ಯುಎಸ್, ಥೈಲ್ಯಾಂಡ್ ಮತ್ತು ಶ್ರೀಲಂಕಾ ಸೇರಿದಂತೆ ಹಲವು ದೇಶಗಳ ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾರೆ.


ಇನ್ನು, ತನ್ನ ಅಜ್ಜಿಯೊಂದಿಗೆ ಡೇಟಿಂಗ್‌ ಮಾಡಿರುವುದು ಅತ್ಯಂತ ವಿಶೇಷದ ಡೇಟ್‌ ಎಂದು ಹೇಳಿಕೊಂಡಿದ್ದಾರೆ. ಅವರು ಮರ್ಸಿಡಿಸ್‌ನಲ್ಲಿ ಸ್ಥಳೀಯ ದೇವಸ್ಥಾನಕ್ಕೆ ಹೋದರು ಮತ್ತು ಸರೋವರವೊಂದರಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಿದರು.


ರಾಮು ಚರ್ಚ್ ಸೇರಲು ಭಾರತಕ್ಕೆ ಬಂದ ಸಿಸ್ಟರ್ ಲೊರೆಟೊ ಎಂಬ 9 ವರ್ಷ ವಯಸ್ಸಿನ ಐರಿಶ್ ಸನ್ಯಾಸಿನಿಯನ್ನೂ ಭೇಟಿಯಾಗಿದ್ದಾರೆ.


"ನಾನು ಸಾಕಷ್ಟು ಸುಂದರ ಮಹಿಳೆಯರೊಂದಿಗೆ ಸಾಕಷ್ಟು ಉಚಿತ ಊಟ ಮಾಡಿದ್ದೇನೆ, ಮತ್ತು ಈಗ ಅದು ಜೀವಮಾನದ ಯೋಜನೆಯಾಗಿದೆ. ಸಂಭಾಷಣೆಯನ್ನು ಮುಂದುವರಿಸುವುದು ಇದರ ಆಲೋಚನೆ'' ಎಂದೂ ರಾಮು ಹೇಳಿದ್ದಾರೆ.


Published by:Harshith AS
First published: