Fake Kidnap: ಅಪ್ಪನಿಂದಲೇ 30 ಲಕ್ಷ ರೂ ಹಣ ಎಗರಿಸಲು Kidnap Drama ಮಾಡಿದ ಮಗ..! ಮುಂದೇನಾಯ್ತು ಗೊತ್ತಾ?

ದುಡ್ಡಿನಾಸೆಗಾಗಿ ತಮ್ಮನ್ನು ತಾವೇ ಅಪಾಯಕ್ಕೆ ಸಿಲುಕಿಸಿಕೊಳ್ಳುವ ಮಕ್ಕಳಿರುತ್ತಾರೆ ಎಂಬುದು ಈ ಘಟನೆಯಿಂದ ನಿಮಗೆ ತಿಳಿದುಬರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಈಗಿನ ಕಾಲದಲ್ಲಿ ಯಾರು ಯಾರನ್ನು ಬೇಕಾದರೂ ಯಾಮಾರಿಸಿ ಬಿಡಬಹುದು ಎಂಬುದಕ್ಕೆ ಸೂಕ್ತ ಉದಾಹರಣೆ ಚೆನ್ನೈಯಲ್ಲಿ ವರದಿಯಾಗಿದೆ. ಇಲ್ಲಿ ಸ್ವಂತ ಪುತ್ರನೇ ತಂದೆಯಿಂದ 30 ಲಕ್ಷ ರೂ. ಗಳನ್ನು ಎಗರಿಸಲು ಅಪಹರಣದ ನಾಟಕ (Drama) ವಾಡಿದ್ದು ಮಗನೇ ತಂದೆಗೆ ನಾಮ ಹಾಕಲು ಯತ್ನಿಸಿರುವುದನ್ನು ಚೆನ್ನೈ(Chennai) ನಗರ ಪೊಲೀಸರು ಪತ್ತೆಹಚ್ಚಿದ್ದಾರೆ. 24 ರ ಹರೆಯದ ಕೃಷ್ಣಪ್ರಸಾದ್ (Krishna Prasad) ತಂದೆಯಿಂದ ಹಣ ಲಪಟಾಯಿಸುವುದಕ್ಕಾಗಿ ಅಪಹರಣದ(Kidnapping) ನಾಟಕವನ್ನಾಡಿದ್ದು ಪೊಲೀಸರು ಆತನನ್ನ ಸಿಕಂದರಾಬಾದ್‌ನಲ್ಲಿ(Secunderabad) ಪತ್ತೆಹಚ್ಚಿ ಮನೆಗೆ ಕರೆತಂದಿದ್ದಾರೆ. ಪೊಲೀಸರು ಕೃಷ್ಣಪ್ರಸಾದ್‌ಗೆ ಇನ್ನು ಮುಂದೆ ಇಂತಹ ಕೃತ್ಯವೆಸಗಬಾರದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಘಟನೆಯ ವಿವರ:
ತಂದೆಯಿಂದಲೇ ಹಣ ಲಪಟಾಯಿಸುವುದಕ್ಕಾಗಿ ಅಪಹರಣದ ಕಥೆ ಕಟ್ಟುವ ಮಕ್ಕಳಿದ್ದಾರೆಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದೇ ಆದರೆ ನೀವು ಪೂರ್ಣ ಕಥೆಯನ್ನು ಅರಿತುಕೊಳ್ಳಲೇಬೇಕು. ದುಡ್ಡಿನಾಸೆಗಾಗಿ ತಮ್ಮನ್ನು ತಾವೇ ಅಪಾಯಕ್ಕೆ ಸಿಲುಕಿಸಿಕೊಳ್ಳುವ ಮಕ್ಕಳಿರುತ್ತಾರೆ ಎಂಬುದು ಈ ಘಟನೆಯಿಂದ ನಿಮಗೆ ತಿಳಿದುಬರುತ್ತದೆ. ಚೆನ್ನೈಯ ವಡಪಳನಿ ನಿವಾಸಿಯಾಗಿರುವ 54ರ ಹರೆಯದ ಪೆನ್ಸಿಲಿಯಾ ವೃತ್ತಿಯಲ್ಲಿ ಬ್ಯುಸಿನೆಸ್‌ಮೆನ್ ಆಗಿದ್ದಾರೆ.

ಅವರಿಗೆ ಇಬ್ಬರು ಪುತ್ರರು. ಈ ಕೃಷ್ಣಪ್ರಸಾದ್ ಪೆನ್ಸಿಲಿಯಾರ ಕಿರಿಯ ಪುತ್ರ. ವರದಿಗಳ ಪ್ರಕಾರ ಕೃಷ್ಣಪ್ರಸಾದ್‌ಗೆ ಶಾರ್ಟ್ ಫಿಲ್ಮ್ ಮಾಡುವ ಇಚ್ಛೆ ಇದ್ದು ಅದಕ್ಕಾಗಿ ದುಡ್ಡಿನ ಅಗತ್ಯವಿರುತ್ತದೆ. ತನ್ನನ್ನು ತಾನು ಅಪಹರಿಸಿಕೊಂಡು ತಂದೆಯಿಂದ ಫಿಲ್ಮ್‌ಗೆ ಬೇಕಾದ ಹಣ ಎಗರಿಸುವ ಉಪಾಯ ಕೃಷ್ಣಪ್ರಸಾದ್‌ಗೆ ಹೊಳೆದದ್ದೇ ಬೇರೆ ಬೇರೆ ಚಿತ್ರಗಳಿಂದ ಇಲ್ಲದಿದ್ದರೆ ಯಾರಾದರೂ ಚಿತ್ರ ನಿರ್ಮಾಪಕರಿಂದ ಎಂಬುದು ಇಲ್ಲಿ ಅರಿವಾಗುತ್ತದೆ.

ಇದನ್ನೂ ಓದಿ: Chinese Man: 30 ವರ್ಷಗಳಿಂದ ದೂರವಾಗಿದ್ದ ಮಗ ಮತ್ತೆ ತಾಯಿ ಮಡಿಲು ಸೇರಿದ ಕಥೆ... ಹೇಗೆ ಗೊತ್ತಾ?

ತಂದೆಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ಪುತ್ರ:
ತನ್ನ ಅಪಹರಣ ನಾಟಕವನ್ನು ಸೂಕ್ತವಾಗಿ ಯೋಜನೆಗಿಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರನಾದ ಕೃಷ್ಣಪ್ರಸಾದ್ ಹಿಂದಿನ ದಿನ ಸ್ಥಳೀಯ ಶಾಪಿಂಗ್ ಮಾಲ್‌ಗೆ ಹೋದವನು ಮನೆಗೆ ಮರಳಿ ಬರುವುದಿಲ್ಲ. ಮಾಲ್‌ಗೆ ಹೋದ ಮಗ ಮನೆಗೆ ಬಾರದೇ ಇರುವುದನ್ನು ನೋಡಿ ಗಾಬರಿಗೊಂಡ ತಂದೆ ಮರುದಿನ ಜನವರಿ 14ರಂದು ಪೊಲೀಸ್ ಠಾಣೆಗೆ ಭೇಟಿ ನೀಡಿ ಹಿಂದಿನ ದಿನ ಮಾಲ್‌ಗೆ ಹೋದ ಮಗ ಮನೆಗೆ ಮರಳಿ ಬಂದಿಲ್ಲ ಎಂಬ ದೂರು ನೀಡುತ್ತಾರೆ.

ಅದೂ ಅಲ್ಲದೆ ಕೃಷ್ಣಪ್ರಸಾದ್‌ನ ಮೊಬೈಲ್ ನಂಬರ್‌ನಿಂದ ತನಗೆ ಸಂದೇಶ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿರುವ ಪೆನ್ಸಿಲಿಯಾ, ತನ್ನ ಪುತ್ರನನ್ನು ಯಾರೋ ಅಪಹರಿಸಿದ್ದಾಗಿಯೂ, ಆತ ಬೇಕು ಎಂದಾದಲ್ಲಿ 30 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂಬ ಬೇಡಿಕೆ ಇಟ್ಟಿರುವುದಾಗಿ ಪೊಲೀಸರಿಗೆ ತಿಳಿಸುತ್ತಾರೆ. ಮುಗ್ಧ ತಂದೆಯನ್ನು ಈ ನಾಟಕದ ಮೂಲಕ ಬಲೆಗೆ ಹಾಕಬಹುದೆಂದು ಅಂದುಕೊಂಡಿದ್ದ ಕೃಷ್ಣ ಪ್ರಸಾದ್‌ನ ಲೆಕ್ಕಾಚಾರ ತಲೆಕೆಳಗಾದ್ದೇ ಇಲ್ಲಿ ಎಂದು ಹೇಳಬಹುದು.

ಯಶಸ್ವಿಯಾಗಿ ಪತ್ತೆ
ವಡಪಳನಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ರಾಜೇಶ್ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾರೆ ಹಾಗೂ ಅಪಹರಣ ಪ್ರಕರಣವನ್ನು ಬೇಧಿಸುವುದಕ್ಕಾಗಿ ತಂಡವನ್ನು ರಚಿಸುತ್ತಾರೆ. ಕೃಷ್ಣ ಪ್ರಸಾದ್‌ನ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡುವುದಕ್ಕಾಗಿ ಸೈಬರ್ ಕ್ರೈಮ್ ವಿಭಾಗದ ಸಹಾಯ ಪಡೆದುಕೊಳ್ಳುವ ತಂಡ ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಸಂಖ್ಯೆಯನ್ನು ಪತ್ತೆಹಚ್ಚುತ್ತದೆ. ಕೂಡಲೇ ಸಿಕಂದರಾಬಾದ್‌ಗೆ ತೆರಳಿದ ಪೊಲೀಸ್ ತಂಡ ಅಲ್ಲಿನ ಪೊಲೀಸರ ನೆರವಿನಿಂದ ಕೃಷ್ಣಪ್ರಸಾದ್‌ನಿಂದಲೇ ನಾಟಕೀಯವಾಗಿ ಅಪಹರಣಕ್ಕೊಳಗಾದ ಕೃಷ್ಣಪ್ರಸಾದ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚುತ್ತದೆ.

ಲೂಧಿಯಾನದಲ್ಲಿ ವರದಿಯಾದ ಇಂತಹುದ್ದೇ ಇನ್ನೊಂದು ಘಟನೆ:
ತನ್ನನ್ನೇ ತಾನು ಅಪಹರಿಸಿಕೊಂಡು ಮನೆಯವರನ್ನು ನಂಬಿಸಿ ಹಣ ಲಪಟಾಯಿಸುವ ತಂತ್ರಗಾರಿಕೆಯ ಪ್ರಕರಣಗಳು ಅಪರೂಪವೇನಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಇದೇ ರೀತಿ ಕ್ಷುಲ್ಲಕ ವಿಚಾರಕ್ಕಾಗಿ ಹದಿಹರೆಯದ ಹುಡುಗಿಯೊಬ್ಬಳು ಕೃಷ್ಣಪ್ರಸಾದ್‌ನಂತೆಯೇ ಅಪಹರಿಸಿಕೊಂಡ ಘಟನೆಯೊಂದು ವರದಿಯಾಗಿದೆ. ಲೂಧಿಯಾನದ ಹದಿಹರೆಯದ ಹುಡುಗಿಯೊಬ್ಬಳು ತಾನು ಅಪಹರಣಗೊಳಗಾಗಿರುವುದಾಗಿ ತಿಳಿಸಿ ಪೋಷಕರನ್ನು ಹಾಗೂ ಪೊಲೀಸರನ್ನು ಬೆಸ್ತುಬೀಳಿಸಿದ್ದಳು. ಆದರೆ ಆಕೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸರು ನಂತರ ಮನೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: Viral Story: ಈ ದೇಶದಲ್ಲಿ 40 ನಿಮಿಷಕ್ಕೆ ಒಂದು ಹುಡುಗಿಯ ಅಪಹರಣವಾಗುತ್ತದೆ!

ನಾಟಕಕ್ಕೆ ಬೆಂಬಲ
ಈಕೆ ಶಾಲೆಯ ಹೊರಗೆ ಕೆಲವು ಗಂಟೆಗಳ ಕಾಲ ಸ್ನೇಹಿತನನ್ನು ಭೇಟಿಯಾಗುವ ಸಲುವಾಗಿ ಅಪಹರಣದ ನಾಟಕವಾಡಿದ್ದಳು ಎಂಬುದು ನಂತರ ತಿಳಿದುಬಂದಿದೆ. ಮನೆಯಿಂದ ಶಾಲೆಗೆ ಎಂದು ಬೆಳಗ್ಗೆ ಹೋಗಿದ್ದ ಹುಡುಗಿ ಮಧ್ಯಾಹ್ನ ಶಾಲೆ ಬಿಟ್ಟ ನಂತರ ಕೂಡ ಮನೆಗೆ ಮರಳಲಿಲ್ಲ. ಇದರಿಂದ ಚಿಂತಾಕ್ರಾಂತರಾದ ಪೋಷಕರು ಭಮಿಯಾನ್ ಕಾಲನ್‌ನಲ್ಲಿರುವ ಆಕೆಯ ಇನ್ನೊಬ್ಬ ಸಹಪಾಠಿಯನ್ನು ಹುಡುಗಿಯ ಕುರಿತಾಗಿ ವಿಚಾರಿಸಿದ್ದಾರೆ. ಸಹಪಾಠಿಯ ಬಳಿ ತನ್ನನ್ನು ಐದು ಜನರು ಅಪಹರಿಸಿದ್ದಾಗಿ ಪೋಷಕರಿಗೆ ತಿಳಿಸಬೇಕೆಂದು ಹುಡುಗಿ ಆಕೆಯ ಮನವೊಲಿಸಿದ್ದಳು. ಗೆಳೆತನದಿಂದಾಗಿ ಸಹಪಾಠಿ ಕೂಡ ಆಕೆಯ ಅಪಹರಣದ ನಾಟಕಕ್ಕೆ ಬೆಂಬಲವಾಗಿ ನಿಂತಳು.
Published by:vanithasanjevani vanithasanjevani
First published: