Shocking: ಹನಿಮೂನ್ ವಿಡಿಯೋ ವೈರಲ್ ಮಾಡ್ತೀನಿ! ಹೆಂಡತಿಯಿಂದ ಗಂಡನಿಗೇ ಧಮ್ಕಿ!

ಹೆಂಡತಿಯೂ ಇಲ್ಲ, ಹಣವೂ ಹೋಯ್ತು, ಬೆಳ್ಳಿ ಬಂಗಾರದ ಆಭರಣಗಳೂ ಹೋಯ್ತು..ಇಷ್ಟೇ ಅಲ್ಲದೇ ತನ್ನ ವಿರುದ್ಧವೇ ವಂಚನೆ ಪ್ರಕರಣವೂ ದಾಖಲಾಯ್ತು..

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಪ್ರೀತಿ ಪ್ರೇಮ ಪ್ರಣಯದ ಹೆಸರಲ್ಲಿ (Love) ಮೋಸದಾಟ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಬಹುಶಃ ನಮ್ಮ ಕಣ್ಣೆದುರಿಗೇ ನಡೆದರೂ ಮುಂದೊಂದು ದಿನ ನಾವೂ ಇಂತಹುದೇ ಮೋಸದಾಟಕ್ಕೆ (Cheating Case) ಬಲಿಯಾಗುವ ಅಪಾಯವೂ ಇರುತ್ತದೆ. ಇದೀಗ ಅಂತಹುದೇ ಒಂದು, ಪ್ರೀತಿಯ ಹೆಸರಲ್ಲಿ ನಡೆದ ಮೋಸದಾಟ ಬಯಲಿಗೆ ಬಂದಿದೆ. ಅದೂ ಅಂತಿಂಥಾ ಪ್ರೀತಿಯಲ್ಲಿ, ಫೇಸ್​​ಬುಕ್  ಪರಿಣಯ!  (Facebook Love) ಅದೂ ಪರಿಣಯವೊಂದೇ ಆಗಿದ್ದರೆ ಸುದ್ದಿಯಾಗುತ್ತಲೇ ಇರಲಿಲ್ಲ, ಬದಲಿಗೆ ಇಲ್ಲಿ ನಡೆದದ್ದು ಮೋಸದಾಟ, ಮದುವೆಯ ಹೆಸರಲ್ಲಿ ಮಹಾ ವಂಚನೆ! ಇಂತಹದ್ದೊಂದು ಘಟನೆ ನಿಜವಾಗಿಯೂ ನಡೆದಿದೆ ಎಂದರೆ ನೀವು ನಂಬಲಾರಿರಿ, ಆದರೆ ಇದು ಕೇವಲ ನಂಬಿಕೆಯ ಪ್ರಶ್ನೆಯಲ್ಲ. ಎಲ್ಲರೂ ಜಾಗೃತೆಯಿಂದ ಸಂಬಂಧ  (Wife Husband Relationship) ಬೆಳೆಸಬೇಕೆಂದು ಪಾಠ ಹೇಳುವ ಸುದ್ದಿ!

  ನವೀನ್ ಗುಪ್ತಾ ಎಂಬಾತ ಗುಜರಾತ್ ರಾಜ್ಯದಲ್ಲಿ ತನ್ನ ಪಾಡಿಗೆ ತಾನು ಬದುಕಿದ್ದ. ಒಂದಿನ ಫೇಸ್​ಬುಕ್ ತೆರೆದು ನೋಡಿದರೆ ಈತನಿಗೆ ರಾಣಿ ರಾಕ್ವಾರ್ (Rani Rakwar) ಎಂಬಾಕೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು!. ಇದೇ ರಿಕ್ವೆಸ್ಟ್ ಮುಂದೆ ತಲೆಮೇಲೆ ಕೈಹೊತ್ತು ಕೂರುವಂತೆ ಮಾಡಿತ್ತು!

  ಫೇಸ್​ಬುಕ್ ಪರಿಣಯ
  ಫೇಸ್​ಬುಕ್ ಗೆಳೆತನ ಪರಿಚಯಕ್ಕೆ ತಿರುಗಿತು. ನಿಧಾನವಾಗಿ ಪ್ರೇಮವೋ ಎಂಥದ್ದೋ ಮಣ್ಣಾಂಗಟ್ಟಿ ಬೆಳೆಯಿತು. ತಾಳಿ ಕಟ್ಟುವವರೆಗೂ ಮುಂದುವರೆದು ಮಧುಚಂದ್ರವೂ ಆಯಿತು! ಇಲ್ಲಿಯವರೆಗೆ ಎಲ್ಲಾ ಸರಾಗವಾಗಿಯೇ ನಡೆದಿತ್ತು. ಆದರೆ ಮುಂದೆ ನಡೆದದ್ದೇ ಬೇರೆ!

  ರಾಣಿ ರಾಕ್ವಾರ್ ವೃತ್ತಿಯಲ್ಲಿ ನರ್ಸ್ ಆಗಿದ್ದಳು. ಅವಿವಾಹಿತೆ ಎಂದು ಪರಿಚಯಿಸಿಕೊಂಡಿದ್ದ ಈಕೆಗೆ ಕಂಕಣ ಕಟ್ಟಿದ್ದ ನವೀನ್.   ಅದೂ ಎರಡೂ ಕುಟುಂಬಗಳು ಮಾತುಕತೆ ನಡೆಸಿದ ನಂತರೇ. ಆದರೆ ಮದುವೆಯಾಗಿ ಹನಿಮೂನೂ ಆದ ನಂತರ ಈ ಮದುವೆಯ ಗತಿಯಯೇ ಬದಲಾಯಿತು. ನಮ್ಮ ಹನಿಮೂನಿನ ಆಪ್ತ ಕ್ಷಣಗಳನ್ನು ವೈರಲ್ ಮಾಡುತ್ತೇನೆ ಎಂದು ಸ್ವತಃ ಪತಿ ಮಹಾಶಯೆ ರಾಣಿಯೇ ಗಂಡನಿಗೆ ಧಮ್ಕಿ ಹಾಕುತ್ತಿದ್ದಾಳಂತೆ.

  ಆಘಾತದ ಮೇಲೆ ಆಘಾತ!
  ಅಲ್ಲದೇ ಇನ್ನೊಂದು ಆಘಾತವೂ ನವೀನ್​ಗೆ ಬಂದಿತ್ತು. ರಾಣಿಗೆ ಈಗಾಗಲೆ ಮದುವೆಯಾಗಿದೆ. ಅಲ್ಲದೇ ಒಂದು ಮಗುವೂ ಇದೆ ಎಂಬ ಸುದ್ದಿ ನವೀನ್ ಕುಟುಂಬಕ್ಕೆ ತಲುಪಿದೆ. ಮಧುಚಂದ್ರದ ಸವಿ ಸವಿದಾಗಲೇ ರಾಣಿಗೆ ತನ್ನ ಚಿನ್ನಾಭರಣ ಸೇರಿದಂತೆ 8.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ನವೀನ್ ಕೊಟ್ಟಿದ್ದನಂತೆ!

  ಇದನ್ನೂ ಓದಿ: Shocking: ಬಾ..ನನ್ನ ಹೆಂಡತಿ ಜೊತೆ ಮಲಗು! ರಿಯಾಲಿಟಿ ಶೋನಲ್ಲಿ ಉದ್ಯಮಿಯ ರಹಸ್ಯ ಬಾಯ್ಬಿಟ್ಟ ಸ್ಪರ್ಧಿ!

  ಆದರೂ ಇತ್ತ ಗಂಡನ ವಿರುದ್ಧ ಧಮ್ಕಿ ಹಾಕಿದ್ದ ಪತ್ನಿ ತನಗೆ ಗಂಡ ವಂಚನೆ ಮಾಡಿದ್ದಾನೆ ಎಂದು ಪೊಲೀಸ್ ದೂರನ್ನೂ ದಾಖಲಿಸಿದ್ದಾಳೆ. ಇದೆಲ್ಲ ಕೂಡಿ ನವೀನ್​ಗೆ ಯಾಕಾದರೂ ಮದುವೆಯಾದೆನೋ ಅನಿಸುವಂತಾಗಿದೆ…ಅದಕ್ಕೇ ಹೇಳಿದ್ದು ಮದುವೆಯಾಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗಲ್ಲ ಎಂದು!

  ಇಷ್ಟೆಲ್ಲ ಆಗುವವರೆಗೆ ನವೀನ್‌ಗೆ ಹೆಂಡತಿಯ ದೆಸೆಯಿಂದ ಮೂರು ತಿಂಗಳ ಜೈಲುವಾಸವೂ ಆಗಿದೆ.

  ಮನುಷ್ಯನನ್ನು ಹೈರಾಣು ಮಾಡೋಕೆ ಇಷ್ಟು ಸಾಕಲ್ಲ?
  ಹೆಂಡತಿಯೂ ಇಲ್ಲ, ಹಣವೂ ಹೋಯ್ತು, ಬೆಳ್ಳಿ ಬಂಗಾರದ ಆಭರಣಗಳೂ ಹೋಯ್ತು..ಇಷ್ಟೇ ಅಲ್ಲದೇ ತನ್ನ ವಿರುದ್ಧವೇ ವಂಚನೆ ಪ್ರಕರಣವೂ ದಾಖಲಾಯ್ತು..ವಿಚ್ಛೇದನಕ್ಕಾಗಿ ಪದೇ ಪದೇ ಒತ್ತಡವೂ ಬೀಳುತ್ತಿದೆ. ಹನಿಮೂನಿನ ಆಪ್ತ ಕ್ಷಣಗಳ ವಿಡಿಯೋ ವೈರಲ್ ಮಾಡಿ ತನ್ನ ಹೆಂಡತಿಯೇ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರೆ? ಒಬ್ಬ ಮನುಷ್ಯನನ್ನು ಹೈರಾಣು ಮಾಡಲು ಇಷ್ಟು ಸಾಕಲ್ಲ?

  ಇದನ್ನೂ ಓದಿ: Ram Rajya: ಭಾರತದ ಈ ಹಳ್ಳಿಯಲ್ಲಿ ಮನೆಗಳಿಗೆ ಜನರು ಬೀಗ ಹಾಕದೇ ಹೊರ ನಡೆಯುತ್ತಾರಂತೆ!

  ಆದರೂ ಪಟ್ಟು ಬಿಡದ ನವೀನ್ ಕೋರ್ಟ್ ಮೊರೆ ಹೋದರು. ಎಲ್ಲವನ್ನೂ ತಿಳಿಸಿದ್ದಾರೆ. ಈ ಪ್ರಕರಣದ ಅಂತಿಮ ತೀರ್ಪು ಏನಾಗುತ್ತದೆ ಎಂದು ಕಾದುನೋಡಬೇಕಿದೆ.
  Published by:guruganesh bhat
  First published: