Cheapest Icecream: 2 ರೂಪಾಯಿಗೆ ಸಿಗುತ್ತೆ ಕೋನ್ ಐಸ್ಕ್ರೀಮ್! ಇಲ್ಲಿ ಯಾವಾಗ್ಲೂ ರಶ್

ಕೆಲವೊಂದು ಕಡಿಮೆ ಬೆಲೆಗೆ ಸಿಕ್ಕರೆ, ಇನ್ನೂ ಕೆಲವು ಸ್ವಲ್ಪ ದುಬಾರಿಯಾಗಿರುತ್ತವೆ. ಇಲ್ನೋಡಿ.. ಇದಕ್ಕಿಂತ ಕಡಿಮೆ ಬೆಲೆಯ ಐಸ್‌ಕ್ರೀಮ್ ನಿಮಗೆ ಬಹುಶಃ ಎಲ್ಲೂ ಸಿಗದು. ಹೌದು.. ಚೆನ್ನೈ ನಗರದಲ್ಲಿರುವ ಈ ಐಸ್‌ಕ್ರೀಮ್ ಪಾರ್ಲರ್ ಕೇವಲ 2 ರೂಪಾಯಿಗೆ ಒಂದು ಕೋನ್ ಐಸ್‌ಕ್ರೀಮ್ ಅನ್ನು ಮಾರಾಟ ಮಾಡುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೇಸಿಗೆ (Summer) ಬಂತೆಂದರೆ ಸಾಕು ಸುಡುವ ಬಿಸಿಲಿನ ಶಾಖವನ್ನು ತಡೆದುಕೊಳ್ಳಲು ಮತ್ತು ದೇಹವನ್ನು ಸ್ವಲ್ಪ ಮಟ್ಟಿಗಾದರೂ ತಂಪಾಗಿರಿಸಿಕೊಳ್ಳಲು ಅನೇಕ ರೀತಿಯ ಹಣ್ಣುಗಳು (Fruits), ತಂಪಾದ ಪಾನೀಯಗಳು (Cold Drinks) ಮತ್ತು ಐಸ್‌ಕ್ರೀಮ್ (Icecream) ಅನ್ನು ಹುಡುಕಿಕೊಂಡು ಹೋಗುತ್ತೇವೆ. ಐಸ್‌ಕ್ರೀಮ್ ಎಂದ ತಕ್ಷಣ ಮೊದಲು ನಮ್ಮ ತಲೆಗೆ ಬರುವುದೇ ಅದರ ಬೆಲೆ. ಕೆಲವೊಂದು ಕಡಿಮೆ ಬೆಲೆಗೆ ಸಿಕ್ಕರೆ, ಇನ್ನೂ ಕೆಲವು ಸ್ವಲ್ಪ ದುಬಾರಿಯಾಗಿರುತ್ತವೆ. ಇಲ್ನೋಡಿ. ಇದಕ್ಕಿಂತ ಕಡಿಮೆ ಬೆಲೆಯ ಐಸ್‌ಕ್ರೀಮ್ Cheapest Icecream) ನಿಮಗೆ ಬಹುಶಃ ಎಲ್ಲೂ ಸಿಗದು. ಹೌದು.. ಚೆನ್ನೈ ನಗರದಲ್ಲಿರುವ ಈ ಐಸ್‌ಕ್ರೀಮ್ ಪಾರ್ಲರ್ ಕೇವಲ 2 ರೂಪಾಯಿಗೆ ಒಂದು ಕೋನ್ ಐಸ್‌ಕ್ರೀಮ್ ಅನ್ನು ಮಾರಾಟ ಮಾಡುತ್ತಿದೆ.

2 ರೂಪಾಯಿಗೆ ಐಸ್‌ಕ್ರೀಮ್ ಮಾರಾಟ
ಏನಪ್ಪಾ ಇವರು ಇಷ್ಟು ಅಗ್ಗದ ಬೆಲೆಗೆ ಹೇಗಪ್ಪಾ ಐಸ್‌ಕ್ರೀಮ್ ಮಾರಾಟ ಮಾಡುತ್ತಾರೆ ಎಂದು ನಿಮಗೆ ಪ್ರಶ್ನೆಯೊಂದು ಮೂಡಬಹುದು. ಬನ್ನಿ ಹಾಗಾದರೆ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಈ ಐಸ್‌ಕ್ರೀಮ್ ಪಾರ್ಲರ್ ಹೆಸರು ‘ವಿನೂಸ್ ಇಗ್ಲೂ’ ಅಂತ. ಇದನ್ನು ನಡೆಸುತ್ತಿರುವ ವಿ.ವಿನೋತ್ ಅವರೇ ಸ್ವತಃ ಈ ಅಗ್ಗದ ಬೆಲೆಯ ಐಸ್‌ಕ್ರೀಮ್ ಬಗ್ಗೆ ಏನು ಹೇಳಿದ್ದಾರೆ ನೋಡಿ.

"ನನ್ನ ಐಸ್‌ಕ್ರೀಮ್ ಅಂಗಡಿಯಲ್ಲಿ 2 ರೂಪಾಯಿಗೆ ಐಸ್‌ಕ್ರೀಮ್ ಮಾರಾಟ ಮಾಡುವುದರಿಂದ ನಾನು ಯಾವುದೇ ಲಾಭವನ್ನು ಗಳಿಸುವುದಿಲ್ಲ" ಎಂದು ವಿನೋತ್ ಹೇಳುತ್ತಾರೆ. "ಆದರೆ ಗ್ರಾಹಕರು ಐಸ್‌ಕ್ರೀಮ್ ನೊಂದಿಗೆ ಕೇಕ್ ಅಥವಾ ಬ್ರೌನಿ ಅಥವಾ ಪಾಲ್ಕೋವಾ (ಡೈರಿ ಆಧಾರಿತ ಸಿಹಿತಿಂಡಿ) ನಂತಹ ಹೆಚ್ಚಿನ ಮಾರ್ಜಿನ್ ಉತ್ಪನ್ನಗಳನ್ನು ಆರ್ಡರ್ ಮಾಡುತ್ತಾರೆ. ಈ ರೀತಿಯಾಗಿ ನಾನು ಹಣ ಸಂಪಾದಿಸುತ್ತೇನೆ" ಎಂದು ಹೇಳಿದರು.

ಚೆನ್ನೈ ಅಲ್ಲಿ ಇದೆ ಇವರ ಈ ಶಾಪ್
ಚೆನ್ನೈ ನಗರದಲ್ಲಿರುವ ಪಶ್ಚಿಮ ಮಾಂಬಲಂ ಏರಿಯಾದಲ್ಲಿ ಒಂದು ಮೂಲೆಯಲ್ಲಿರುವ ವಿನೋತ್ ಅವರ ಐಸ್‌ಕ್ರೀಮ್ ಅಂಗಡಿ ಶುಕ್ರವಾರ ಮಧ್ಯಾಹ್ನ ಚಿಕ್ಕ ಮಕ್ಕಳಿಂದ ತುಂಬಿ ತುಳುಕುತ್ತಿರುತ್ತದೆ. ಇನ್ನೂ ರಜೆಯಲ್ಲಿ ನೂರಾರು ಮಕ್ಕಳು, ಒಂದೆರಡು ಐಸ್‌ಕ್ರೀಮ್ ಕೋನ್ ಗಳನ್ನು ತಿಂದು ಬರೋಣ ಅಂತ ಕೈಯಲ್ಲಿ ಸ್ವಲ್ಪ ನಾಣ್ಯಗಳನ್ನು ಹಿಡಿದುಕೊಂಡು ಬಂದು ಅಂಗಡಿಯ ಕೌಂಟರ್ ಮುಂದೆ ನಿಲ್ಲುತ್ತಾರೆ.

ವಿವಿಧ ಫ್ಲೇವರ್ ಐಸ್ ಕ್ರೀಮ್
ಸಗಟು ಅಕ್ಕಿ ವ್ಯಾಪಾರವನ್ನು ನಡೆಸುತ್ತಿರುವ ಎರಡನೇ ತಲೆಮಾರಿನ ಉದ್ಯಮಿಯಾಗಿರುವ ವಿನೋತ್ ಒಂದು ಕಾಲದಲ್ಲಿ ಇವರ ಕುಟುಂಬದ ವ್ಯಾಪಾರವನ್ನು ಪುನರಾರಂಭಿಸಲು ನಿರ್ಧರಿಸಿದಾಗ ವಿನು ಅವರು ‘ವಿನೂಸ್ ಇಗ್ಲೂ’ವನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಿದರು. ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್, ಪಿಸ್ತಾ ಮತ್ತು ಮ್ಯಾಂಗೋ ಐಸ್‌ಕ್ರೀಮ್ ಗಳನ್ನು ಪ್ರತಿ ಕೋನ್ ಗೆ ಕೇವಲ 2 ರೂಪಾಯಿಗೆ ಮಾರಾಟ ಮಾಡುವ ಹಳೆಯ ಬೆಲೆ ತಂತ್ರವನ್ನು ಅಳವಡಿಸಿಕೊಳ್ಳಲು ಇವರು ನಿರ್ಧರಿಸಿದರು.

ನಗರದಾದ್ಯಂತ ಐದು ಶಾಖೆಗಳು
1995 ರಲ್ಲಿ, ವಿನೋದ್ ಅವರ ತಂದೆ ವಿಜಯನ್ ಅವರು ಪ್ರತಿ ಕೋನ್ ಅನ್ನು 1 ರೂಪಾಯಿಗೆ ಮಾರಾಟ ಮಾಡಲು ಪ್ರಾರಂಭಿಸಿದರು, ನಂತರ ವ್ಯವಹಾರದ ಎರಡನೇ ವಾರದಲ್ಲಿ ಬೆಲೆಗಳನ್ನು 2 ರೂಪಾಯಿಗೆ ಏರಿಸಿದರು. "ನಿಸ್ಸಂಶಯವಾಗಿ, ಈ ದರಗಳು ಆ ಸಮಯದಲ್ಲಿ ಅಷ್ಟೊಂದು ಸುದ್ದಿ ಮಾಡಲಿಲ್ಲ" ಎಂದು ವಿನೋತ್ ಹೇಳುತ್ತಾರೆ. ಕಾಲಾನಂತರದಲ್ಲಿ, ವ್ಯವಹಾರವು ಬೆಳೆಯಿತು ಮತ್ತು ವಿಜಯನ್ ನಗರದಾದ್ಯಂತ ಐದು ಶಾಖೆಗಳನ್ನು ಹೊಂದಿದ್ದರು, ಅದರಲ್ಲಿ ಜನಪ್ರಿಯವಾದುದು ಪಶ್ಚಿಮ ಮಾಂಬಲಂ. ಇದನ್ನು ವಿನೋತ್ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ.ಇದನ್ನೂ ಓದಿ: Health Tips: ಐಸ್ ಕ್ರೀಂ ತಿನ್ನಿ ಒತ್ತಡ ದೂರ ಮಾಡಿ; ಇದರ ಆರೋಗ್ಯ ಪ್ರಯೋಜನ ತಿಳಿಯಿರಿ

"ಹಳೆಯ ಶೈಲಿಯ ಕೋನ್ ಯಂತ್ರದಿಂದ ಐಸ್‌ಕ್ರೀಮ್ ತಯಾರಿಸುವಾಗ ನಾನು ಆಗಾಗ್ಗೆ ತರಗತಿಗಳನ್ನು ಬಂಕ್ ಮಾಡುತ್ತಿದ್ದೆ ಮತ್ತು ನನ್ನ ತಂದೆಯೊಂದಿಗೆ ಹೋಗುತ್ತಿದ್ದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಐಸ್‌ಕ್ರೀಮ್ ನಿಂದ ಗಳಿಸುವ ಹಣ
ಸ್ಥಳೀಯ ಐಸ್‌ಕ್ರೀಮ್ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ಇವರ ಉದ್ದೇಶವಾಗಿದೆ ಎಂದು ವಿನೋತ್ ಹೇಳುತ್ತಾರೆ. ಲಾಭವನ್ನು ನೋಡದೆ ಇದ್ದರೂ ಸಹ ವಿನು ಅವರ ಇಗ್ಲೂವಿನಲ್ಲಿ ಪ್ರತಿದಿನ ಸುಮಾರು 50,000 ರೂಪಾಯಿಗಳ ವ್ಯವಹಾರದಲ್ಲಿ 3,000 ರೂಪಾಯಿಗಳನ್ನು ಅವರ ಜನಪ್ರಿಯ ಎರಡು ರೂಪಾಯಿಗಳ ಐಸ್‌ಕ್ರೀಮ್ ನಿಂದ ಗಳಿಸುತ್ತಿದ್ದಾರೆ."ಅಂದರೆ ಸುಮಾರು 1,500 ಗ್ರಾಹಕರು, ಪ್ರತಿದಿನ 2 ರೂಪಾಯಿಯ ಐಸ್‌ಕ್ರೀಮ್ ಕೋನ್ ಗಳನ್ನು ತಿನ್ನಲು ನಮ್ಮ ಅಂಗಡಿಗೆ ಬರುತ್ತಾರೆ" ಎಂದು ವಿನೋತ್ ಹೇಳುತ್ತಾರೆ. ತುಂಬಾ ಜನರು ಅಂಗಡಿಗೆ ಬರುವುದರಿಂದ ವಿನೋತ್ ಇತ್ತೀಚೆಗೆ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದರು.

ಇದನ್ನೂ ಓದಿ: BreakFast Recipe: ಚಪಾತಿ, ದೋಸೆಗೆ ಮಾಡಿ ಸ್ಪೈಸಿ ಎಗ್ ಮಸಾಲ

'ವಿನೂಸ್ ಇಗ್ಲೂ' ಪಡೆದ ಜನಪ್ರಿಯತೆಯು ಸಾಮಾಜಿಕ ಮಾಧ್ಯಮ ಮತ್ತು ವಿಶೇಷವಾಗಿ ಯೂಟ್ಯೂಬ್ ನಿಂದಲೇ ಹೆಚ್ಚಾಗಿದ್ದು, ಇವುಗಳಿಗೆ ಧನ್ಯವಾದಗಳು ಎಂದು ವಿನೋತ್ ಹೇಳುತ್ತಾರೆ. ರುಚಿಗಳೊಂದಿಗೆ ಹೆಚ್ಚು ಪ್ರಯೋಗ ಮಾಡಲು ನಾವು ಬಯಸುವುದಿಲ್ಲ, ಏಕೆಂದರೆ ಜನರು ಸರಳ ರುಚಿಗಳನ್ನು ಇಷ್ಟಪಡುತ್ತಾರೆ. ನಾವು ಇತ್ತೀಚೆಗೆ ಪ್ರಯೋಗ ಮಾಡಲು ಪ್ರಯತ್ನಿಸಿ ಕಲ್ಲಂಗಡಿ ಮತ್ತು ಹಲಸಿನ ರುಚಿಗಳನ್ನು ಪರಿಚಯಿಸಿದೆವು, ಆದರೆ ಅವು ಅಷ್ಟೊಂದು ಜನಪ್ರಿಯವಾಗಲಿಲ್ಲ" ಎಂದು ವಿನೋತ್ ಹೇಳುತ್ತಾರೆ.
Published by:Ashwini Prabhu
First published: