Flight Ticket: ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಬೇಕೇ? ಇಲ್ಲಿವೆ ಸುಲಭ ಮಾರ್ಗಗಳು

ಮೊದಲೇ ನಿಮ್ಮ ಪ್ರಯಾಣದ ಬಗ್ಗೆ ನಿಮಗೆ ತಿಳಿದಿದ್ದರೆ ತಕ್ಷಣವೇ ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಳ್ಳುವುದರಿಂದ ನಿಮಗೆ ತುಂಬಾ ಕಡಿಮೆ ದರದಲ್ಲಿ ಸಹ ಫ್ಲೈಟ್ ಟಿಕೆಟ್ ಪಡೆಯಬಹುದಾಗಿದೆ. ಯಾವುದೇ ಹಬ್ಬದ ಸೀಸನ್ ಇರಲಿ ಅಥವಾ ದೀರ್ಘಕಾಲದ ರಜಾ ದಿನಗಳಿರಲಿ ಮುಂಗಡವಾಗಿ ಟಿಕೆಟ್ ಬುಕ್ ಮಾಡುವುದರಿಂದ ಕಡಿಮೆ ದರದಲ್ಲಿ ನಾವು ಟಿಕೆಟ್ ಪಡೆಯಬಹುದು.

flight

flight

  • Share this:
ಹಬ್ಬದ ಸೀಸನ್ ಹಾಗು ದೀರ್ಘಕಾಲದ ರಜೆಗಳು ಬಂದಾಗ ಸಾಮಾನ್ಯವಾಗಿ ಎಲ್ಲಾ ಫ್ಲೈಟ್​​ ಟಿಕೆಟ್‌ ದರವನ್ನು ತುಂಬಾ ದುಬಾರಿಯಾಗಿಸುತ್ತವೆ ಮತ್ತು ಸುಮಾರು ಜನರು ತಮ್ಮ ಪ್ರಯಾಣದ ದರದಲ್ಲಿ ಕಡಿತವನ್ನು ನಿರೀಕ್ಷೆ ಮಾಡುತ್ತಾರೆ. ಎಷ್ಟೋ ಜನರು ದುಬಾರಿಯಾದಂತಹ ಫ್ಲೈಟ್ ಟಿಕೆಟ್ ನೋಡಿಯೇ ತಮ್ಮ ಪ್ರವಾಸವನ್ನು ರದ್ದು ಗೊಳಿಸುತ್ತಾರೆ. ಆದರೆ ವರ್ಷದ ಎಲ್ಲಾ ದಿನಗಳಲ್ಲೂ ಸಹ ನಾವು ಕಡಿಮೆ ದರದಲ್ಲಿ ಟಿಕೆಟ್‌ ಪಡೆದುಕೊಳ್ಳಲು ಆರು ಸುಲಭವಾದ ಮಾರ್ಗಗಳನ್ನು ಅನುಸರಿಸುವುದು ಬಹಳ ಮುಖ್ಯ.


ಕೆಲವು ಜನರು ತಮ್ಮ ಕೆಲಸದ ನಿಮಿತ್ತ ಫ್ಲೈಟ್​​ನಲ್ಲಿ ತುಂಬಾ ಬಾರಿ ತಿರುಗಾಡಲೇ ಬೇಕಾದಂತಹ ಅನಿವಾರ್ಯತೆ ಇರುತ್ತದೆ. ಇಂತವರು ಸಹ ಈ ಕೆಳಗಿನ ಮಾರ್ಗಗಳನ್ನು ಅನುಸರಿಸುವುದರಿಂದ ತಮ್ಮ ಫ್ಲೈಟ್ ಟಿಕೆಟ್ ದರದಲ್ಲಿ ಸ್ವಲ್ಪ ಮಟ್ಟಿಗಾದರೂ ಸಹ ಕಡಿತ ಮಾಡಿಕೊಳ್ಳಬಹುದಾಗಿದೆ.


1. ಬೇಗನೆ ಫ್ಲೈಟ್ ಟಿಕೆಟ್ ಬುಕ್ ಮಾಡುವುದು


ಮೊದಲೇ ನಿಮ್ಮ ಪ್ರಯಾಣದ ಬಗ್ಗೆ ನಿಮಗೆ ತಿಳಿದಿದ್ದರೆ ತಕ್ಷಣವೇ ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಳ್ಳುವುದರಿಂದ ನಿಮಗೆ ತುಂಬಾ ಕಡಿಮೆ ದರದಲ್ಲಿ ಸಹ ಫ್ಲೈಟ್ ಟಿಕೆಟ್ ಪಡೆಯಬಹುದಾಗಿದೆ. ಯಾವುದೇ ಹಬ್ಬದ ಸೀಸನ್ ಇರಲಿ ಅಥವಾ ದೀರ್ಘಕಾಲದ ರಜಾ ದಿನಗಳಿರಲಿ ಮುಂಗಡವಾಗಿ ಟಿಕೆಟ್ ಬುಕ್ ಮಾಡುವುದರಿಂದ ಕಡಿಮೆ ದರದಲ್ಲಿ ನಾವು ಟಿಕೆಟ್ ಪಡೆಯಬಹುದು.


2. ಇನ್ಕಾಗ್ನಿಟೋ ಮೋಡ್ ಬಳಸಿ ಟಿಕೆಟ್ ಬುಕ್ ಮಾಡಿ


ನೀವು ಪ್ರತಿ ಬಾರಿ ಫ್ಲೈಟ್ ಟಿಕೆಟ್ ಬುಕ್ ಮಾಡಲು ಏರ್‌ಲೈನ್ಸ್‌ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಿಮಗೆ ಹಿಂದಿನ ದರಕ್ಕಿಂತಲೂ ಹೆಚ್ಚಿನ ದರವನ್ನೇ ಸೂಚಿಸುತ್ತದೆ. ಏಕೆಂದರೆ ನೀವು ಪ್ರತಿಬಾರಿ ನಿಮ್ಮ ಬ್ರೌಸರ್​​ನಲ್ಲಿ ಹುಡುಕಿದ ಫ್ಲೈಟ್​​ಗಳ ವಿವರಗಳು ಅಲ್ಲಿ ಇರುತ್ತವೆ. ಹಾಗಾಗಿ ನೀವು ಫ್ಲೈಟ್ ಟಿಕೆಟ್ ಬುಕ್ ಮಾಡುವಾಗ ಇನ್ಕಾಗ್ನಿಟೋ ಮೋಡ್ ಬಳಸಿ ಮಾಡುವುದರಿಂದ ನಿಮಗೆ ಕಡಿಮೆ ದರದ ಟಿಕೆಟ್ ಅನ್ನು ನಿಮಗೆ ತೋರಿಸುತ್ತದೆ. ಹಾಗಾಗಿ ಈ ಮಾರ್ಗವನ್ನು ಸಹ ನಾವು ಅನುಸರಿಸಬಹುದಾಗಿದೆ.


3. ಬೇರೆ ಬೇರೆ ಫ್ಲೈಟ್ ವೆಬ್‌ಸೈಟ್‌ ಅನ್ನು ಹೋಲಿಕೆ ಮಾಡಿ


ಫ್ಲೈಟ್ ಟಿಕೆಟ್ ಬುಕ್ ಮಾಡುವ ಮುನ್ನ ನೀವು ಎಷ್ಟೇ ಆತುರದಲ್ಲಿದ್ದರೂ ಸಹ ಒಮ್ಮೆ ಬೇರೆ ಬೇರೆ ಫ್ಲೈಟ್ ವೆಬ್‌ಸೈಟ್‌ಗಳನ್ನೂ ಹುಡುಕಿ ದರಗಳನ್ನು ಹೋಲಿಕೆ ಮಾಡಿ ಮತ್ತು ಕೆಲವೊಂದು ವೆಬ್‌ಸೈಟ್‌ ಗಳಾದ ಸ್ಕೈ ಸ್ಕ್ಯಾನರ್, ಕಾಯಕ್, ಮೊಮ್ಯಾಂಡೋ ಪೂರ್ತಿ ತಿಂಗಳಿನಲ್ಲಿರುವ ಎಲ್ಲಾ ದಿನಗಳಲ್ಲಿರುವ ಫ್ಲೈಟ್ ಟಿಕೆಟ್ ದರಗಳನ್ನು ಹೋಲಿಕೆ ಮಾಡಿ ನೀಡಿರುತ್ತಾರೆ. ಅದನ್ನೆಲ್ಲಾ ಒಮ್ಮೆ ನೋಡಿಕೊಂಡರೆ ನಿಮಗೆ ಕಡಿಮೆ ದರದಲ್ಲಿ ಟಿಕೆಟ್ ಪಡೆಯುವ ಎಲ್ಲಾ ಅವಕಾಶಗಳು ಇರುತ್ತವೆ. ಆದ್ದರಿಂದ ಟಿಕೆಟ್ ಬುಕ್ ಮಾಡುವ ಮುನ್ನ ನೀವು ಎಲ್ಲಾ ಬೇರೆ ಬೇರೆ ವೆಬ್‌ಸೈಟ್‌ಗಳನ್ನೂ ನೋಡುವುದು ಉತ್ತಮ ಮಾರ್ಗವಾಗಿದೆ.


4. ಬೇರೆ ಏರ್‌ಲೈನ್ಸ್‌ ಬುಕ್ ಮಾಡಿಕೊಳ್ಳಿ


ಅನೇಕರು ಒಂದೇ ಬಾರಿ ಹೋಗುವ ಫ್ಲೈಟ್ ಟಿಕೆಟ್ ಮತ್ತು ಹಿಂದಿರುಗಿ ಬರುವ ಫ್ಲೈಟ್ ಟಿಕೆಟ್ ಒಂದೇ ಬಾರಿಗೆ ಬುಕ್ ಮಾಡಿದರೆ ಕಡಿಮೆ ದರದಲ್ಲಿ ಟಿಕೆಟ್ ದೊರೆಯುತ್ತದೆ ಎಂದು ನಂಬಿದ್ದಾರೆ. ಆದರೆ ಹಾಗೆ ಮಾಡದೆ ಬೇರೆ ಫ್ಲೈಟ್ ಗೆ ನೀವು ಹಿಂದಿರುಗಿದರೆ ನಿಮಗೆ ಕಡಿಮೆ ದರದ ಟಿಕೆಟ್ ಸಿಗುವ ಅವಕಾಶಗಳು ಹೆಚ್ಚಾಗಿರುತ್ತದೆ. ಆದರೆ ಹಿಂದಿರುಗಿ ಬರುವಾಗ ಫ್ಲೈಟ್ ಸಮಯವನ್ನು ನೀವು ಲೆಕ್ಕಿಸದೆ ಹೋದರೆ ಅಲ್ಲಿ ನಿಮಗೆ ಕಡಿಮೆ ದರದಲ್ಲಿ ಟಿಕೆಟ್ ಸಿಗುವಂತಹ ಅವಕಾಶವಿರುತ್ತದೆ.


5. ವಾರದ ಅಂತ್ಯದಲ್ಲಿ ಫ್ಲೈಟ್ ಬುಕ್ ಮಾಡಬೇಡಿ


ಯಾವಾಗಲೂ ಶುಕ್ರವಾರ ರಾತ್ರಿಯಿಂದ ದುಬಾರಿಯಾದಂತಹ ಫ್ಲೈಟ್ ಟಿಕೆಟ್ಗಳು ಸೋಮವಾರ ಬೆಳಗ್ಗೆ ಅಥವಾ ರಾತ್ರಿಗೆ ಕಡಿಮೆ ದರಕ್ಕೆ ಇಳಿಸುವುದು ಸರ್ವೇ ಸಾಮಾನ್ಯವಾಗಿದೆ. ನಿಮಗೆ ತುಂಬಾ ಕಡಿಮೆ ದರದಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬೇಕೆಂದರೆ ನೀವು ಬುಧುವಾರ ಮತ್ತು ಗುರುವಾರ ಟಿಕೆಟ್ ಬುಕ್ ಮಾಡಿಕೊಳ್ಳಿ. ಹಾಗಾಗಿ ವಾರಾಂತ್ಯದಲ್ಲಿ ಟಿಕೆಟ್ ಬುಕ್ ಮಾಡುವುದರಿಂದ ಕಡಿಮೆ ದರದಲ್ಲಿ ಸಿಗುವ ಅವಕಾಶಗಳು ಕಡಿಮೆ ಇರುತ್ತವೆ.


6.ಏರ್‌ಲೈನ್ಸ್‌ ವೆಬ್‌ಸೈಟ್‌ನಿಂದ ಬುಕ್ ಮಾಡಿಕೊಳ್ಳಿ


ನೀವು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಳ್ಳಲು ಏರ್‌ಲೈನ್ಸ್ ವೆಬ್‌ಸೈಟ್‌ ಅನ್ನು ಬಳಸಿ ಮತ್ತು ನೀವು ಕೆಲ ವೆಬ್‌ಸೈಟ್‌ಗಳನ್ನು ಬಳಸಿ ಟಿಕೇಟ್ ಬುಕ್ ಮಾಡಿಕೊಳ್ಳಲು ಪ್ರಯತ್ನಿಸಿದರೆ ನಿಮಗೆ ಟಿಕೆಟ್ ಎಷ್ಟೇ ಡಿಸ್ಕೌಂಟ್ ಇದ್ದರೂ ಸಹ ಟಿಕೆಟ್ ಬುಕ್ ಮಾಡಿದ ನಂತರವಷ್ಟೇ ನಿಮಗೆ ನೀವು ಹೆಚ್ಚು ಹಣ ನೀಡಿರುವುದು ತಿಳಿಯುತ್ತದೆ. ಏಕೆಂದರೆ ಮಧ್ಯವರ್ತಿಗಳ ವೆಬ್‌ಸೈಟ್‌ಗಳನ್ನು ಬಳಸಿ ಟಿಕೇಟ್ ಬುಕ್ ಮಾಡಿಕೊಂಡರೆ ಅವರು ನಿಮಗೆ ಸರ್ವೀಸ್‌ ಚಾರ್ಜ್ ಸಹ ನಿಮ್ಮ ಟಿಕೆಟ್ ದರಕ್ಕೆ ಸೇರಿಸಿ ತೆಗೆದುಕೊಳ್ಳುತ್ತಾರೆ.

First published: