• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • True Story: ಬೆಳಗ್ಗೆ ವಿದ್ಯಾರ್ಥಿನಿಯಾದರೆ ಮಧ್ಯಾಹ್ನ ಫುಡ್ ಡೆಲಿವರಿ ರೈಡರ್ ಆಗ್ತಾಳೆ ಈ ಹುಡುಗಿ, ಈಕೆಯ ಕಥೆ ಅನೇಕರಿಗೆ ಸ್ಪೂರ್ತಿ!

True Story: ಬೆಳಗ್ಗೆ ವಿದ್ಯಾರ್ಥಿನಿಯಾದರೆ ಮಧ್ಯಾಹ್ನ ಫುಡ್ ಡೆಲಿವರಿ ರೈಡರ್ ಆಗ್ತಾಳೆ ಈ ಹುಡುಗಿ, ಈಕೆಯ ಕಥೆ ಅನೇಕರಿಗೆ ಸ್ಪೂರ್ತಿ!

ವೈರಲ್ ಆದ ಹುಡುಗಿ

ವೈರಲ್ ಆದ ಹುಡುಗಿ

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುದೀರ್ಘ ದಿನದ ತರಗತಿಗಳ ನಂತರ, ಮೊಹ್ಸಿನಾ ತನ್ನ ದಿನದ ಎರಡನೇ ಭಾಗವನ್ನು ಸೈಕಲ್  ಮೇಲೆ ನಗರದಾದ್ಯಂತ ಸವಾರಿ ಮಾಡುತ್ತಾ ಈ ಅಂಗಡಿಗಳು, ರೆಸ್ಟೋರೆಂಟ್ ಗಳು ಮತ್ತು ಗ್ರಾಹಕರ ಮನೆಗಳಲ್ಲಿ ಆಹಾರ ಮತ್ತು ದಿನಸಿ ವಸ್ತುಗಳನ್ನು ತಲುಪಿಸುತ್ತಾರಂತೆ.

  • Share this:

ಎಷ್ಟೋ ಜನರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಇದ್ದರೂ ಸಹ ಅವರಿಗೆ ಓದಿನ ಮೇಲೆ ಆಸಕ್ತಿ ಅಷ್ಟಕಷ್ಟೆ ಇರುತ್ತದೆ ಅಂತ ಹೇಳಬಹುದು. ಆದರೆ ಇನ್ನೂ ಕೆಲವರಿಗೆ ಮನೆ ನಡೆಸೋದಕ್ಕೆ ತೊಂದರೆ ಇದ್ದರೂ ಸಹ ಓದಬೇಕೆಂಬ ಹಂಬಲ ಮಾತ್ರ ಅವರಲ್ಲಿ ಬಲವಾಗಿ ಬೇರೂರಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಸಹ ಇಂತಹದೇ ಒಂದು ಕಥೆ  (Story) ಇದೆ ನೋಡಿ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುದೀರ್ಘ ದಿನದ ತರಗತಿಗಳ ನಂತರ, ಮೊಹ್ಸಿನಾ ತನ್ನ ದಿನದ ಎರಡನೇ ಭಾಗವನ್ನು ಸೈಕಲ್  (Cycle) ಮೇಲೆ ನಗರದಾದ್ಯಂತ ಸವಾರಿ ಮಾಡುತ್ತಾ ಈ ಅಂಗಡಿಗಳು, ರೆಸ್ಟೋರೆಂಟ್ ಗಳು ಮತ್ತು ಗ್ರಾಹಕರ ಮನೆಗಳಲ್ಲಿ ಆಹಾರ  (Food) ಮತ್ತು ದಿನಸಿ ವಸ್ತುಗಳನ್ನು(Items) ತಲುಪಿಸುತ್ತಾರಂತೆ.


ಬೆಳಗ್ಗೆ ಓದುವುದು, ಮಧ್ಯಾಹ್ನ ಜೀವನಕ್ಕಾಗಿ ಕೆಲಸ ಮಾಡುವ ಹುಡುಗಿ


ಹೌದು.. ಮೊಹ್ಸಿನಾ ಬೆಳಗಿನ ಸಮಯದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಮತ್ತು ಮಧ್ಯಾಹ್ನದ ನಂತರ ಈಕೆ ಫುಡ್ ಡೆಲಿವರಿ ರೈಡರ್. ತಮ್ಮ ಸ್ಮಾರ್ಟ್‌ಫೋನ್ ಮತ್ತು ಸೈಕಲ್ ಮೂಲಕ ತಮ್ಮ ಜೀವನಕ್ಕೆ ಬೇಕಾಗುವ ಆಹಾರವನ್ನು ಸಂಪಾದಿಸುತ್ತಾರೆ.


ಮೊಹ್ಸಿನಾ ಪ್ರಸ್ತುತ ಮಿರ್‌ಪುರ್ ದ ನರ್ಸಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಜೀವನದ ಅಡೆತಡೆಗಳ ನಡುವೆ ಹೋರಾಡುತ್ತಿರುವ ಅವಳು ತನ್ನ ಕುಟುಂಬದಲ್ಲಿ ಒಬ್ಬಳೇ ಸಂಪಾದಿಸುವವಳು.


ಮೊಹ್ಸಿನಾಳ ಈ ಜೀವನ ಪ್ರಯಾಣ ನಿನ್ನೆ ಮೊನ್ನೆಯದಲ್ಲ ಬಿಡಿ, ಹತ್ತು ವರ್ಷಗಳ ಹಿಂದೆ ಪ್ರಾರಂಭವಾಯಿತು. ಅವಳು 6ನೇ ತರಗತಿಯಲ್ಲಿ ಓದುತ್ತಿರುವಾಗ ತನ್ನ ತಂದೆಯನ್ನು ಕಳೆದುಕೊಂಡಳು ಮತ್ತು ಎರಡು ವರ್ಷಗಳ ನಂತರ, ಅವಳ ಒಬ್ಬಳೇ ಅಕ್ಕ ಮದುವೆಯಾಗಿ ಹೋದಳು.


ಇದನ್ನೂ ಓದಿ: ಭಾರತದ ಈ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಹೋಳಿ ಆಚರಿಸೋದಿಲ್ವಂತೆ!


ಅಂದಿನಿಂದ, ಈ ಮೊಹ್ಸಿನಾ ಜೀವನದ ಕ್ರೂರ ವಾಸ್ತವಗಳನ್ನು ಎದುರಿಸಲು ತನ್ನ ತಾಯಿಯೊಂದಿಗೆ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ.


ತಂದೆಯ ನಿಧನದ ನಂತರ ತಾನೇ ದುಡಿದು ತಾನೇ ಓದುತ್ತಿರುವ ಮೊಹ್ಸಿನಾ


ತನ್ನ ತಂದೆಯ ನಿಧನದ ನಂತರ, ಮೊಹ್ಸಿನಾ ತನ್ನ ಓದಿಗೆ ತಾನೇ ದುಡಿದು ಸಹಾಯ ಮಾಡಿಕೊಳ್ಳುತ್ತಿದ್ದಾಳೆ. 6ನೇ ತರಗತಿಯಿಂದ ಕಾಲೇಜಿನವರೆಗೆ, ತನ್ನ ಸ್ವಂತ ಹಣದಿಂದಲೇ ಓದಿರುವ ಮೊಹ್ಸಿನಾ ಮನೆಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಪುಟ್ಟ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.


ತನ್ನ ಮತ್ತು ತಾಯಿಯ ಜೀವನ ನಡೆಯಲು ಒಳ್ಳೆಯ ಸಂಬಳದ ಕೆಲಸದ ಅಗತ್ಯವಿತ್ತು. ಆದ್ದರಿಂದ, ಅವಳು ಉತ್ತಮ ಗಳಿಕೆಯ ಅವಕಾಶಗಳನ್ನು ಹೊಂದಿರುವ ಪ್ರತಿಷ್ಠಿತ ವೃತ್ತಿಯ ಗುರಿಯನ್ನು ಹೊಂದಿದ್ದಾಳೆ.


ದುರದೃಷ್ಟವಶಾತ್, ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳಿಂದಾಗಿ, ಹೊಂದಿಕೊಳ್ಳುವ ಕೆಲಸದ ಸಮಯದೊಂದಿಗೆ ಉತ್ತಮ ಸಂಬಳದ ಕೆಲಸವನ್ನು ಕಂಡು ಹಿಡಿಯುವುದು ಕಷ್ಟಕರವಾಗಿತ್ತು.


ಮೊಹ್ಸಿನಾ ಆನ್ಲೈನ್ ಆಹಾರ ಮತ್ತು ದಿನಸಿ ವಿತರಣಾ ವೇದಿಕೆಯಾದ ಫುಡ್ ಪಾಂಡಾದ ಬಗ್ಗೆ ತಿಳಿದುಕೊಂಡಳು ಮತ್ತು ತಡ ಮಾಡದೆ ಅವಳು ಫುಡ್ ಡೆಲಿವರಿ ರೈಡರ್ ಆಗಿ ಸೇರಿಕೊಂಡರು.


ಫುಡ್ ಪಾಂಡಾದಲ್ಲಿ ಫುಡ್ ಡೆಲಿವರಿ ರೈಡರ್ ಆಗಿ ಕೆಲಸ ಶುರು ಮಾಡಿದ ಮೊಹ್ಸಿನಾ


ಅವಳು ವಿದ್ಯಾರ್ಥಿಯಾಗಿದ್ದ ಕಾರಣ, ಪ್ಲಾಟ್ಫಾರ್ಮ್ ನ ಅನುಕೂಲಕರ ಕೆಲಸದ ಸಮಯವು ಅವಳ ಸ್ವಂತ ಸಮಯವನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ನೀಡಿತು.


ಅವಳು ತನ್ನ ಅಧ್ಯಯನ ಮತ್ತು ಕೆಲಸವನ್ನು ಸಮತೋಲನಗೊಳಿಸಲು ಸಾಧ್ಯವಾಯಿತು. ಇದು ಪರೀಕ್ಷೆಯ ಸಮಯದಲ್ಲಿ ಕೆಲಸದಿಂದ ವಿರಾಮ ತೆಗೆದುಕೊಳ್ಳಲು ಅವಳಿಗೆ ನಮ್ಯತೆಯನ್ನು ಸಹ ನೀಡಿತು.


ಪ್ಲಾಟ್ ಫಾರ್ಮ್ ಗಾಗಿ ಫುಡ್ ಡೆಲಿವರಿ ರೈಡರ್ ಆಗಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು ಅವರು ವಿವಿಧ ಅರೆಕಾಲಿಕ ಉದ್ಯೋಗಗಳನ್ನು ತೆಗೆದುಕೊಂಡಿದ್ದರು. "ನನ್ನ ಅಧ್ಯಯನದಲ್ಲಿ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಲು ಫುಡ್ ಪಾಂಡಾ ನನಗೆ ಅನುವು ಮಾಡಿಕೊಟ್ಟಿದೆ" ಎಂದು ಅವರು ಹೇಳುತ್ತಾರೆ.




“ನಾನು ಪರೀಕ್ಷೆಗಳ ಸಮಯದಲ್ಲಿ ಕೆಲಸದಿಂದ ವಿರಾಮ ತೆಗೆದುಕೊಳ್ಳಬಹುದು ಮತ್ತು ತರಗತಿಯ ನಂತರ ಪ್ರತಿದಿನ ನನ್ನ ಅನುಕೂಲಕ್ಕೆ ಅನುಗುಣವಾಗಿ ನನ್ನ ಕೆಲಸದ ಸಮಯವನ್ನು ಆಯ್ಕೆ ಮಾಡಬಹುದು.


ನನ್ನ ಹಿಂದಿನ ಕೆಲಸಗಳಿಗೆ ನಿರ್ದಿಷ್ಟ ಕೆಲಸದ ಸಮಯದ ಅಗತ್ಯವಿತ್ತು, ಅದು ನನ್ನ ಅಧ್ಯಯನಕ್ಕೆ ಅಡ್ಡಿಯಾಗುತ್ತಿತ್ತು. ಈಗ, ನಾನು ಪ್ರತಿ ತಿಂಗಳು 20,000 ರೂಪಾಯಿಗಿಂತ ಹೆಚ್ಚು ಸಂಪಾದಿಸುತ್ತಿದ್ದೇನೆ. ಅಲ್ಲದೆ, ನಾನು ಕಷ್ಟಪಟ್ಟು ಸಂಪಾದಿಸಿದ ಹಣ ವಾರದ ಕೊನೆಯಲ್ಲಿಯೇ ಪಡೆಯುವುದು ಇನ್ನಷ್ಟು ಖುಷಿ ಕೊಟ್ಟಿದೆ” ಎಂದು ಹೇಳಿದರು.


ಮೊಹ್ಸಿನಾ ಅವರ ಪ್ರಕಾರ, ತನ್ನ ತಾಯಿಯ ನಿರಂತರ ಬೆಂಬಲವು ಆಕೆಗೆ ಜೀವನದಲ್ಲಿ ಎಂತಹದೇ ಕಷ್ಟ ಎದುರಾದರೂ ಸಹ ಅದನ್ನು ಎದುರಿಸಿ ಮುಂದೆ ಹೋಗುವ ಮತ್ತು ಆರ್ಥಿಕ ಸ್ವಾತಂತ್ರ್ಯವು ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಧೈರ್ಯ ಮತ್ತು ವಿಶ್ವಾಸವನ್ನು ನೀಡಿತು.


ನೆರೆಹೊರೆಯವರಿಂದ ಕಟು ಟೀಕೆಗೆ ಗುರಿಯಾದ ಮೊಹ್ಸಿನಾ


ಮೊಹ್ಸಿನಾ ನೆರೆಹೊರೆಯವರು ಮತ್ತು ಸಮಾಜದ ಇತರ ಸದಸ್ಯರಿಂದ ಕಟುವಾದ ಟೀಕೆಗಳನ್ನು ಎದುರಿಸಬೇಕಾಯಿತು. "ನನ್ನ ಕೆಲವು ನೆರೆಹೊರೆಯವರು ನಾನು ಮನೆಕೆಲಸಗಾರಳಾಗಬೇಕೆಂದು ಸಲಹೆ ನೀಡಿದರು.


ಅಷ್ಟೇ ಅಲ್ಲ, ಬೀದಿಗಳಲ್ಲಿ ರಿಕ್ಷಾ ಎಳೆಯುವವರಿಂದ ಅವಮಾನಗಳನ್ನು ಸಹ ನಾನು ಕೇಳಿದ್ದೇನೆ. ಆದಾಗ್ಯೂ, ನಾನು ಅವುಗಳನ್ನು ಎಂದಿಗೂ ಹೃದಯಕ್ಕೆ ತೆಗೆದುಕೊಳ್ಳಲಿಲ್ಲ, ಏಕೆಂದರೆ ನಾನು ಜೀವನದಲ್ಲಿ ಗುರಿಯನ್ನು ಹೊಂದಿದ್ದೇನೆ" ಎಂದು ಹೇಳುತ್ತಾರೆ.


ಯಾರಾದರೂ ಸಲಹೆಯನ್ನು ಹುಡುಕುತ್ತಾ ಅವಳ ಬಳಿಗೆ ಬಂದರೆ, ಮೊಹ್ಸಿನಾ ಯಾವಾಗಲೂ ಅವರನ್ನು ಫುಡ್ ಪಾಂಡಾ ರೈಡರ್ ಗಳಾಗಲು ಪ್ರೋತ್ಸಾಹಿಸುತ್ತಾಳೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು