• Home
  • »
  • News
  • »
  • trend
  • »
  • Hanuman Chalisa: ವಿದೇಶಿಯರಿಂದ ಹನುಮಾನ್‌ ಚಾಲೀಸ ಪಠಣ, ನೆಟ್ಟಿಗರ ಮನಗೆದ್ದ ವಿಡಿಯೋ

Hanuman Chalisa: ವಿದೇಶಿಯರಿಂದ ಹನುಮಾನ್‌ ಚಾಲೀಸ ಪಠಣ, ನೆಟ್ಟಿಗರ ಮನಗೆದ್ದ ವಿಡಿಯೋ

ವಿದೇಶಿಯರಿಂದ ಹನುಮಾನ್‌ ಚಾಲೀಸಾ ಪಠಣ

ವಿದೇಶಿಯರಿಂದ ಹನುಮಾನ್‌ ಚಾಲೀಸಾ ಪಠಣ

ಇತ್ತೀಚೆಗೆ ಇಬ್ಬರು ವಿದೇಶಿಗರು ಹನುಮಾನ್ ಚಾಲೀಸಾ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಅವರು ಗಿಟಾರ್ ಮತ್ತು ಇತರ ಸಂಗೀತ ವಾದ್ಯಗಳೊಂದಿಗೆ ತಮ್ಮದೇ ಆದ ಸಂಗೀತ ಸ್ಪಿನ್ ನೀಡುವ ಮೂಲಕ ಹನುಮಾನ್‌ ಚಾಲೀಸಾ ಪಠಿಸುವುದನ್ನು ಕಾಣಬಹುದು.

  • News18 Kannada
  • Last Updated :
  • Varanasi, India
  • Share this:

ವಾರಣಾಸಿ (Varanasi), ಹಿಂದೂಗಳ ಧಾರ್ಮಿಕ ಕೇಂದ್ರ (Religious Center). ಅಲ್ಲದೇ ಬಲವಾದ ಧಾರ್ಮಿಕ ಪ್ರಭಾವಕ್ಕೆ ಹೆಸರುವಾಸಿಯಾದಂತಹ ಸ್ಥಳವಾಗಿದೆ. ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರು ಸಾಮಾನ್ಯವಾಗಿ ದೇವಾಲಯಗಳಿಗೆ (Temples) ಭೇಟಿ ನೀಡುವುದು, ಘಾಟ್‌ಗಳಿಗೆ ಹೋಗುವುದು, ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಕಾಣಬಹುದು. ವಾರಣಾಸಿ, ಕಾಶಿಯಂಥ ಪುಣ್ಯ ಕ್ಷೇತ್ರಗಳಿಗೆ ವಿದೇಶಿಯರು (Foreigners) ಭೇಟಿ ನೀಡುವುದು ಹಾಗೂ ಇಲ್ಲಿನ ಭಾರತೀಯ ಸಂಸ್ಕೃತಿಯನ್ನು (Indian Culture) ಆನಂದಿಸುವುದನ್ನು ನಾವು ನೋಡಬಹುದು. ಇನ್ನು, ಇತ್ತೀಚೆಗೆ ಇಬ್ಬರು ವಿದೇಶಿಗರು ಹನುಮಾನ್ ಚಾಲೀಸಾ (Hanuman Chalisa) ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ವೈರಲ್ ವಿಡಿಯೋದಲ್ಲೇನಿದೆ?
ವಿಡಿಯೋದಲ್ಲಿ, ಅವರು ಗಿಟಾರ್ ಮತ್ತು ಇತರ ಸಂಗೀತ ವಾದ್ಯಗಳೊಂದಿಗೆ ತಮ್ಮದೇ ಆದ ಸಂಗೀತ ಸ್ಪಿನ್ ನೀಡುವ ಮೂಲಕ ಹನುಮಾನ್‌ ಚಾಲೀಸಾ ಪಠಿಸುವುದನ್ನು ಕಾಣಬಹುದು. ಹೀಗೆ ಹಾಡುವಾಗ ಅವರು ಅದನ್ನು ಎಷ್ಟು ಆನಂದಿಸುತ್ತಿದ್ದಾರೆ ಎನ್ನೋದನ್ನು ಕಾಣಬಹುದಾಗಿದೆ. ಅಂದಹಾಗೆ, ವಾರಣಾಸಿಯ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ಈ ವಿಡಿಯೋ ಮಾಡಲಾಗಿದೆ.


ದೇವಸ್ಥಾನದ ನೆಲದ ಮೇಲೆ ದೊಡ್ಡ ಕುಂಕುಮವಿಟ್ಟುಕೊಂಡ ಮಹಿಳೆಯೊಬ್ಬರು ಗಿಟಾರ್‌ ನುಡಿಸುತ್ತ ಪಟಪಟನೇ ಹನುಮಾನ್‌ ಚಾಲೀಸಾ ಹೇಳುತ್ತಿದ್ದರೆ, ಪಕ್ಕದಲ್ಲಿ ಕುಳಿತಿದ್ದ ಪುರುಷರೊಬ್ಬರು ಪಿಟೀಲು ನುಡಿಸುತ್ತಿದ್ದರು. ಮತ್ತೊಬ್ಬರು ತಬಲಾ ಸಾಥ್‌ ನೀಡಿದ್ದರು. ಅವರ ಜೊತೆಗೆ ಕುಳಿತಿದ್ದ ಮತ್ತೊಬ್ಬ ವಿದೇಶಿ ಮಹಿಳೆ ಹಾಗೂ ಪುರುಷ ಈ ಸಂಗೀತಕ್ಕೆ ತಲೆದೂಗುತ್ತಿದ್ದರು. ಇವರಿಷ್ಟು ಆನಂದವಾಗಿ ಹಾಡನ್ನ ಹಾಡುತ್ತಿದ್ದರೆ ಸುತ್ತ ಮುತ್ತ ಕುಳಿತಿದ್ದ ಜನರು ಅವರನ್ನೇ ಆಶ್ಚರ್ಯ ಚಕಿತರಾಗಿ ನೋಡುತ್ತಿದ್ದರು.


ವಿಡಿಯೋ ನೋಡಿ ನೆಟ್ಟಿಗರು ಏನು ಹೇಳಿದ್ರು?
ಇನ್ನು 2.20 ನಿಮಿಷದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಟ್ವಿಟ್ಟರ್ ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋಕ್ಕೆ ಸಾಕಷ್ಟು ಮೆಚ್ಚುಗೆ ಬಂದಿದೆ. ವಿದೇಶಿಗರ ಈ ಪ್ರಯತ್ನವನ್ನು ಹಲವರು ಮೆಚ್ಚಿ ಶ್ಲಾಘಿಸಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರರು, "ಶ್ಲಾಘನೀಯ. ಅವರ ಪ್ರಾಮಾಣಿಕ ಪ್ರಯತ್ನಗಳನ್ನು ಹೃದಯದಿಂದ ಸ್ವೀಕರಿಸಬೇಕು ಮತ್ತು ಶ್ಲಾಘಿಸಬೇಕು" ಎಂದಿದ್ದಾರೆ.


ಇದನ್ನೂ ಓದಿ:  Notice To Hanuman: ಜಾಗ ಒತ್ತುವರಿ ಮಾಡ್ಕೊಂಡಿದ್ದಾನಂತೆ ಆಂಜನೇಯ! 10 ದಿನಗಳೊಳಗೆ ಖಾಲಿ ಮಾಡುವಂತೆ ನೋಟಿಸ್!


ಇನ್ನೊಬ್ಬರು, “ಹನುಮಾನ್‌ ಜಿ ಇವರನ್ನು ಆಶೀರ್ವದಿಸುವುದರಲ್ಲಿ ಸಂದೇಹವಿಲ್ಲ" ಎಂದಿದ್ದಾರೆ. ಮತ್ತೊಬ್ಬರು, ಶ್ರೀ ಹನುಮಾನ್ ಚಾಲೀಸಾದಲ್ಲಿ ಸುಂದರವಾದ ವೀಡಿಯೊ. ತುಂಬಾ ಸ್ಪೂರ್ತಿದಾಯಕ, ಭಕ್ತಿಯಿಂದ ತುಂಬಿದೆ. ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್ ಜೀ" ಎಂದು ಕಾಮೆಂಟ್‌ ಮಾಡಿದ್ದಾರೆ.


ಇನ್ನೊಬ್ಬರು "ಅದ್ಭುತ, ಹನುಮಾನ್ ಚಾಲೀಸಾವನ್ನು ಈ ರೀತಿ ಹಾಡಬಹುದು ಎಂದು ಎಂದಿಗೂ ಯೋಚಿಸಿರಲಿಲ್ಲ. ಮಕ್ಕಳು ಆನಂದಿಸುತ್ತಾರೆ ಮತ್ತು ಪೂಜಿಸುತ್ತಾರೆ" ಎಂದು ಹೇಳಿದ್ದಾರೆ. ಮತ್ತೊಬ್ಬ ಟ್ವಿಟ್ಟರ್‌ ಬಳಕೆದಾರರು, "ಕುಡೋಸ್! ಗ್ರೇಟ್ ಹನುಮಾನ್ ಚಾಲೀಸಾದ ಅತ್ಯುತ್ತಮ ನಿರೂಪಣೆ! ನೀವು ನಿರ್ವಹಿಸಿದ ರೀತಿ ನಿಜವಾಗಿಯೂ ಆಕರ್ಷಕವಾಗಿದೆ" ಎಂದಿದ್ದಾರೆ.


ಮೊದಲ SCO ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ನಾಮನಿರ್ದೇಶನ
ಈ ಮಧ್ಯೆ, ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಕೌನ್ಸಿಲ್ ಆಫ್ ಸ್ಟೇಟ್‌ನ 22 ನೇ ಸಭೆಯಲ್ಲಿ 2022-2023 ರ ಅವಧಿಯಲ್ಲಿ ವಾರಣಾಸಿ ನಗರವನ್ನು ಮೊದಲ SCO ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ನಾಮನಿರ್ದೇಶನ ಮಾಡಲಾಗಿದೆ.


ಈ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮದ ಚೌಕಟ್ಟಿನ ಅಡಿಯಲ್ಲಿ, 2022-23ರ ಅವಧಿಯಲ್ಲಿ ವಾರಣಾಸಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿ SCO ಸದಸ್ಯ ರಾಷ್ಟ್ರಗಳಿಂದ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಈ ಕಾರ್ಯಕ್ರಮಗಳು ಆಹ್ವಾನಿತ ಅತಿಥಿಗಳನ್ನು ಹೊರತುಪಡಿಸಿ ಭಾರತಶಾಸ್ತ್ರಜ್ಞರು, ವಿದ್ವಾಂಸರು, ಲೇಖಕರು, ಸಂಗೀತಗಾರರು, ಕಲಾವಿದರು, ಫೋಟೋ ಪತ್ರಕರ್ತರು, ಟ್ರಾವೆಲ್ ಬ್ಲಾಗರ್‌ಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ.


ಇದನ್ನೂ ಓದಿ:  Aghori Lifestyle: ನರಭಕ್ಷಕ ಅಘೋರಿಗಳು ಇಲ್ಲಿದ್ದಾರೆ!


ಒಟ್ಟಿನಲ್ಲಿ ನಮ್ಮ ಸಂಸ್ಕೃತಿ ಪರಂಪರೆಗೆ ಅನೇಕ ವಿದೇಶಿಗರು ಮಾರುಹೋಗುತ್ತಾರೆ. ನಮ್ಮಲ್ಲಿಯ ಭಜನೆಗಳನ್ನು ಹಾಡುವುದು, ಮಂತ್ರಗಳನ್ನು ಪಠಿಸುವುದು, ಸಂಸ್ಕೃತಿಗಳನ್ನು, ಪದ್ಧತಿ ಸಂಪ್ರದಾಯಗಳನ್ನು ಅನುಸರಿಸುವ ಅದೇಷ್ಟೋ ವಿದೇಶಿಗರು ನಮಗೆ ನೋಡೋಕೆ ಸಿಗುತ್ತಾರೆ. ಅದನ್ನು ನೋಡಿಯಾದರೂ ನಮ್ಮ ಸಂಸ್ಕೃತಿಯ ಬಗ್ಗೆ ವ್ಯಂಗ್ಯವಾಡೋ ಅನೇಕರು ನಮ್ಮ ಧರ್ಮದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕಷ್ಟೇ.

Published by:Ashwini Prabhu
First published: