EPFO Fund Transfer: ಕೆಲಸ ಬದಲಾವಣೆ ಬಳಿಕ ಇವುಗಳನ್ನು ಮಾಡದಿದ್ದರೆ PF ಹಣ ಕೈಸೇರಲ್ಲ

ಉದ್ಯೋಗ ಬದಲಾಯಿಸಿದ ನಂತರ ನಿಮ್ಮ ಹಿಂದಿನ ಕಂಪನಿಯು EPFO ​​ವ್ಯವಸ್ಥೆಯಲ್ಲಿ ನಿಮ್ಮ ಕೆಲಸದ ಕೊನೆ ದಿನಾಂಕವನ್ನು ನಮೂದಿಸುವುದನ್ನು ಮರೆತುಬಿಡುತ್ತದೆ. ಈ ಕಾರಣದಿಂದಾಗಿ ನೌಕರರು ನಂತರ PF ಬ್ಯಾಲೆನ್ಸ್ ಅನ್ನು ವರ್ಗಾಯಿಸುವಲ್ಲಿ , ಹಣ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಾರೆ.

ಇಪಿಎಫ್​ಒ

ಇಪಿಎಫ್​ಒ

  • Share this:
ಪ್ರತಿಯೊಬ್ಬ ಉದ್ಯೋಗಿಯೂ ಕಂಪನಿ ಅಥವಾ ಕೆಲಸದ ಬದಲಾವಣೆಯ ನಂತರ ತಮ್ಮ ಭವಿಷ್ಯ ನಿಧಿ (ಪಿಎಫ್) ಹಣವನ್ನು ಇನ್ನೊಂದು ಖಾತೆಗೆ ವರ್ಗಾಯಿಸುವುದು ಮುಖ್ಯ. ನೀವು ನಿಮ್ಮ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಬಯಸಿದರೆ ಅಥವಾ ಇನ್ನೊಂದು ಖಾತೆಗೆ ಪಿಎಫ್ ಹಣವನ್ನು ವರ್ಗಾಯಿಸಲು ಬಯಸಿದರೆ ಅದನ್ನು ಹೇಗೆ ಮಾಡಬೇಕೆಂದು ನಾವು ಇಲ್ಲಿ ವಿವರಿಸಿದ್ದೇವೆ.

ಉದ್ಯೋಗಗಳನ್ನು ಬದಲಾಯಿಸಿದ ನಂತರ ನಿಮ್ಮ ಹಿಂದಿನ ಕಂಪನಿಯು EPFO ​​ವ್ಯವಸ್ಥೆಯಲ್ಲಿ ನಿಮ್ಮ ಕೆಲಸದ ಕೊನೆ ದಿನಾಂಕವನ್ನು ನಮೂದಿಸುವುದನ್ನು ಮರೆತುಬಿಡುತ್ತದೆ. ಈ ಕಾರಣದಿಂದಾಗಿ ನೌಕರರು ನಂತರ PF ಬ್ಯಾಲೆನ್ಸ್ ಅನ್ನು ವರ್ಗಾಯಿಸುವಲ್ಲಿ ತೊಂದರೆ ಅನುಭವಿಸುತ್ತಾರೆ. ಉದ್ಯೋಗಗಳನ್ನು ಬದಲಾಯಿಸುವಾಗ ನಾವು ನಮ್ಮ ಪಿಎಫ್ ಖಾತೆಯನ್ನು ವರ್ಗಾಯಿಸುವುದನ್ನು ಮರೆತುಬಿಡಬಹುದು. ಮೊದಲು ಉದ್ಯೋಗದಾತರು ಮಾತ್ರ ಸೇರುವ ದಿನಾಂಕ ಮತ್ತು ಉದ್ಯೋಗಿಯ ನಿರ್ಗಮನದ ದಿನಾಂಕದಂತಹ ಮಾಹಿತಿಯನ್ನು ನಮೂದಿಸಬಹುದು ಅಥವಾ ನವೀಕರಿಸಬಹುದು. ಈ ಎರಡು ದಿನಾಂಕಗಳನ್ನು ನಿಮ್ಮ ಹಿಂದಿನ ಉದ್ಯೋಗ ಸಂಸ್ಥೆ ನವೀಕರಿಸದ ಕಾರಣ ಇಪಿಎಫ್ (ಉದ್ಯೋಗಿ ಭವಿಷ್ಯ ನಿಧಿ) ಯಿಂದ ಹಣವನ್ನು ಹಿಂಪಡೆಯುವುದು ಕಷ್ಟವಾಗುತ್ತೆ.

ಆದಾಗ್ಯೂ, ಈಗ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಉದ್ಯೋಗಿಗಳಿಗೆ ದಿನಾಂಕ ನಮೂದಿಸುವುದನ್ನು  ಸುಲಭವಾಗಿಸಿದೆ. ಈಗ ಉದ್ಯೋಗಿಗಳು ತಮ್ಮನ್ನು ನಿರ್ಗಮಿಸುವ ದಿನಾಂಕವನ್ನು ನವೀಕರಿಸಬಹುದು

ಇಪಿಎಫ್‌ಒ ತನ್ನ ಸದಸ್ಯರಿಗೆ ಇಪಿಎಫ್‌ಒ ವ್ಯವಸ್ಥೆಯಲ್ಲಿ ಉದ್ಯೋಗವನ್ನು ತೊರೆದ ದಿನಾಂಕವನ್ನು ನಮೂದಿಸಲು ಅನುಮತಿಸುತ್ತದೆ. ಇದಕ್ಕಾಗಿ ನೀವು ಹಳೆಯ ಕಂಪನಿಯನ್ನು ಅವಲಂಭಿಸಬೇಕಾಗಿಲ್ಲ. ಈ ಹೊಸ ಅಪ್‌ಡೇಟ್‌ನೊಂದಿಗೆ ನಿಧಿಯಿಂದ ಹಣವನ್ನು ಹಿಂಪಡೆಯುವುದು ಮತ್ತು ವರ್ಗಾಯಿಸುವುದು ಸುಲಭವಾಗಿದೆ. ನಿಮ್ಮ PF ಖಾತೆಯಲ್ಲಿ 'ನಿರ್ಗಮನದ ದಿನಾಂಕ' ನಮೂದಿಸುವ ಪ್ರಕ್ರಿಯೆ ತುಂಬಾ ಸುಲಭ, ನೀವು ಅದನ್ನು ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಮಾಡಬಹುದು.

ಇದನ್ನೂ ಓದಿ: PPF vs NPS: ಕೇವಲ ₹3 ಸಾವಿರ ಹೂಡಿಕೆ ಮಾಡಿ 44 ಲಕ್ಷ ರೂ. ಪಡೆಯುವ ಉಪಾಯ ಇಲ್ಲಿದೆ

ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಪ್ರಮುಖ ವಿಷಯವೆಂದರೆ ಒಮ್ಮೆ ನಮೂದಿಸಿದ ದಿನಾಂಕವನ್ನು ನಂತರ ಎಡಿಟ್ ಮಾಡಲು ಸಾಧ್ಯವಿಲ್ಲ. ಉದ್ಯೋಗವನ್ನು ತೊರೆದ ನಂತರ ನಿರ್ಗಮನ ದಿನಾಂಕವನ್ನು ನಮೂದಿಸಲು  ನೀವು ಎರಡು ತಿಂಗಳು ಕಾಯಬೇಕಾಗುತ್ತದೆ. ಏಕೆಂದರೆ ಪಿಎಫ್ ಖಾತೆಯಲ್ಲಿ ಉದ್ಯೋಗದಾತರು ನೀಡಿದ ಕೊನೆಯ ಕೊಡುಗೆಯ ಎರಡು ತಿಂಗಳ ನಂತರ ಮಾತ್ರ ಅದನ್ನು ನವೀಕರಿಸಬಹುದು.

EPFO ನಲ್ಲಿ ನಿರ್ಗಮನದ ದಿನಾಂಕವನ್ನು ನವೀಕರಿಸುವುದು ಹೇಗೆ?

Step 1: unifiedportal-mem.epfindia.gov.in/memberinterface/

Step 2: ಲಾಗ್ ಇನ್ ಮಾಡಲು UAN, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ

Step 3: ಹೊಸ ಪುಟ ಕಾಣಿಸುತ್ತದೆ ಮೇಲ್ಭಾಗದಲ್ಲಿ Manage ಕ್ಲಿಕ್ ಮಾಡಿ

Step 4: ಈಗ ನಿರ್ಗಮನ ಮಾರ್ಕ್ ಮೇಲೆ ಕ್ಲಿಕ್ ಮಾಡಿ

Step 5: ಡ್ರಾಪ್‌ಡೌನ್‌ನಲ್ಲಿ ಉದ್ಯೋಗವನ್ನು ಆಯ್ಕೆ ಮಾಡಿ

Step 6:  ಲಿಂಕ್ ಮಾಡಿರುವ ಹಳೆಯ PF ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ

Step 7  ಕೆಲಸ ಬಿಡುವ ಕಾರಣಗಳು, ನಿವೃತ್ತಿ, ಸಣ್ಣ ಸೇವೆಯಂತಹ ಆಯ್ಕೆಗಳನ್ನು ಹೊಂದಿರುತ್ತವೆ.

Step 8: ಒಟಿಪಿ ವಿನಂತಿಸಿ ಮೇಲೆ ಕ್ಲಿಕ್ ಮಾಡಿ.

Step 9: ಈಗ, ಒಟಿಪಿ ನಮೂದಿಸಿ ಮತ್ತು ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ

Step 10: ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಿ

ಈಗ ನಿಮ್ಮ ಪಿಎಫ್​​​ ಖಾತೆಯಲ್ಲಿ ನಿಮ್ಮ ಹಳೆ ಕಂಪನಿಯ ಕೊನೆ ದಿನದ ಕೆಲಸದ ದಿನಾಂಕ ಅಪಡೇಟ್​​ ಆಗಿರುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: