2022ರಲ್ಲಿ ಚಂದ್ರನತ್ತ ಸಾಗಲಿದೆ Chandrayaan-3; ಯೋಜನೆಯ ವೈಶಿಷ್ಟ್ಯತೆ ಹೀಗಿದೆ..

Chandrayaan-3: ಚಂದ್ರಯಾನ ಮಿಷನ್ -3 , 2008 ರಲ್ಲಿ ಪ್ರಾರಂಭವಾದ ಮೊದಲ ಚಂದ್ರಯಾನ ಮಿಷನ್‍ನಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತದೆ. ಮೊದಲ ಮಿಷನ್, ಚಂದ್ರನ ಮೇಲ್ಮೈನಲ್ಲಿ ನೀರಿನ ಪುರಾವೆಗಳನ್ನು ಕಂಡುಹಿಡಿಯುವುದು ಸೇರಿದಂತೆ ಪ್ರಮುಖ ಸಂಶೋಧನೆಗಳನ್ನು ಮಾಡಿದೆ.

Photo: Google

Photo: Google

 • Share this:
  ಕೋವಿಡ್ (Covid) ಸಾಂಕ್ರಾಮಿಕ ಇತರ ಎಲ್ಲಾ ಕ್ಷೇತ್ರಗಳಂತೆ, ಬಾಹ್ಯಕಾಶಕ್ಕೆ (Space) ಸಂಬಂಧಿಸಿದ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿತ್ತು. ಇದೀಗ ಬಾಹ್ಯಾಕಾಶ ಚಟುವಟಿಕೆಗಳು ಮತ್ತೆ ಭರದಿಂದ ಸಾಗಲಿವೆ. ಅದರಲ್ಲೂ ಮುಖ್ಯವಾಗಿ, ಈ 2022 ಮತ್ತು ಮುಂದಿನ ದಶಕದಲ್ಲಿ ಚಂದ್ರ ಹಲವು ಕಾರ್ಯಾಚರಣೆಗಳ ಕೇಂದ್ರ ಬಿಂದುವಾಗಲಿದೆ. ಚಂದ್ರ ಗ್ರಹ (Moon Planet), ಪ್ರಮುಖ ರಿಯಲ್ ಎಸ್ಟೇಟ್ ಮಾತ್ರವಲ್ಲ, ಮಂಗಳ ಗ್ರಹದ (Mars) ಪರಿಶೋಧನೆ ಮತ್ತು ಬಾಹ್ಯಾಕಾಶದಲ್ಲಿ ವಸಹಾತುಗಳ ನಿರ್ಮಾಣವನ್ನು ಸಕ್ರೀಯಗೊಳಿಸುವ ತಂತ್ರಜ್ಞಾನಗಳಿಗೆ ಒಂದು ಪರೀಕ್ಷಾ ಹಾದಿಯೂ ಕೂಡ ಆಗಿದೆ. ಅಷ್ಟೇ ಅಲ್ಲ, ಇದು ವಿವಿಧ ಖನಿಜಗಳ ಮೂಲವೂ ಆಗಿರಬಹುದು. ಹಲವು ದೇಶಗಳು ಚಂದ್ರನ ಬಗ್ಗೆ ಹೆಚ್ಚಿನದನ್ನು ತಿಳಿಯುವ ಪ್ರಯತ್ನದಲ್ಲಿವೆ. ಆ ದೇಶಗಳ ಸಾಲಿಗೆ ಭಾರತ ಕೂಡ ಸೇರಿದೆ. ಈ ಮೊದಲು ಭಾರತ ಚಂದ್ರಯಾನ -1 ಮತ್ತು ಚಂದ್ರಯಾನ – 2 ಕಾರ್ಯಾಚರಣೆಗಳನ್ನು ಮಾಡಿತ್ತು. ಚಂದ್ರಯಾನ- 3 (Chandrayaan-3) ಕ್ಕೂ ಭಾರತ ಸಜ್ಜಾಗಿದೆ. ನಮ್ಮ ದೇಶದ ಈ ಚಂದ್ರಯಾನ ಮಿಷನ್ (Chandrayaan Mission) -3 ಬಗ್ಗೆ ವಿಶ್ವದ ಹಲವು ದೇಶಗಳ ವಿಜ್ಞಾನಿಗಳು ಕುತೂಹಲದ ಒಂದು ಕಣ್ಣನ್ನು ನೆಟ್ಟಿದ್ದಾರೆ ಎನ್ನಬಹುದು.

  ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ವಿಶ್ವದೆಲ್ಲೆಡೆ ಕುಂಟುತ್ತಾ ಸಾಗಿದ್ದ ಇತರ ಬಾಹ್ಯಾಕಾಶ ಕಾರ್ಯಾಚರಣೆಗಳಂತೆ, ಭಾರತದ ಇಸ್ರೋದ ಬಹು ನಿರೀಕ್ಷೀತ ಚಂದ್ರಯಾನ-3 ಮಿಷನ್‍ನ ತಯಾರಿ ಕೂಡ ಹಿನ್ನಡೆ ಕಂಡಿತ್ತು. ಇದೀಗ ಆ ಚಂದ್ರಯಾನ-3 ಮಿಷನ್‍ಗೆ ಮತ್ತೆ ಚೈತನ್ಯ ಬಂದಿದೆ. ಚಂದ್ರಯಾನ 2ರ ಮಿಷನ್‍ನ ವಿಫಲತೆಯ ಎರಡು ವರ್ಷಗಳ ಬಳಿಕ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) 2022ರ ಆಗಸ್ಟ್‌ನಲ್ಲಿ ಚಂದ್ರಯಾನ -3 ಯನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಈ ಕುರಿತು ಇತ್ತೀಚೆಗೆ, ಬಾಹ್ಯಕಾಶ ಇಲಾಖೆಯು ಲಿಖಿತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಚಂದ್ರಯಾನ ಮಿಷನ್ 2 ರಿಂದ ಕಲಿತ ಪಾಠಗಳು ಮತ್ತು ಜಾಗತಿಕ ತಜ್ಞರ ಸಲಹೆಗಳ ಆಧಾರದ ಮೇಲೆ ಚಂದ್ರಯಾನ – 3 ಕೆಲಸಗಳು ನಡೆಯುತ್ತಿವೆ ಎಂದು ಅದು ತಿಳಿಸಿದೆ. ಉಡಾವಣೆಗೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಇಲಾಖೆ ಹೇಳಿದೆ.

  ಚಂದ್ರಯಾನ ಮಿಷನ್ -3 , 2008 ರಲ್ಲಿ ಪ್ರಾರಂಭವಾದ ಮೊದಲ ಚಂದ್ರಯಾನ ಮಿಷನ್‍ನಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತದೆ. ಮೊದಲ ಮಿಷನ್, ಚಂದ್ರನ ಮೇಲ್ಮೈನಲ್ಲಿ ನೀರಿನ ಪುರಾವೆಗಳನ್ನು ಕಂಡುಹಿಡಿಯುವುದು ಸೇರಿದಂತೆ ಪ್ರಮುಖ ಸಂಶೋಧನೆಗಳನ್ನು ಮಾಡಿದೆ. 2021 ರಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದ್ದ, ಚಂದ್ರನ ಬಾಹ್ಯಾಕಾಶ ನೌಕೆಯ ಉಡಾವಣೆ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ವಿಳಂಬವಾಯಿತು.

  ಚಂದ್ರಯಾನ-2 2019 ರಲ್ಲಿ ಉಡಾವಣೆಗೊಂಡಿತ್ತು. ಈ ಮಿಷನ್ ಹಲವಾರು ಕಾರಣಗಳಿಗೆ ಪ್ರಾಮುಖ್ಯತೆ ಪಡೆದಿತ್ತು. ಅತ್ಯಂತ ಕಡಿಮೆ ಬಜೆಟ್‍ನಲ್ಲಿ ಇದರ ಯೋಜನೆ ಪೂರ್ಣಗೊಂಡಿತ್ತು. ಅಷ್ಟು ಮಾತ್ರವಲ್ಲ, ಈವರೆಗೆ ಯಾರೂ ಹೋಗದ ಚಂದ್ರನ ದಕ್ಷಿಣ ಪೋಲ್‍ಗೆ ಅದು ಪ್ರವೇಶಿಸಿತ್ತು. ವಿಪರ್ಯಾಸ ಎಂದರೆ, ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿದೆ ಎನ್ನುವಾಗ ಚಂದ್ರನ ದೂರದ ಭಾಗದಲ್ಲಿ ಅದು ಕ್ರ್ಯಾಶ್‌ ಲ್ಯಾಂಡ್ ಆಗಿತ್ತು. ಚಂದ್ರಯಾನ -2 ರ ಲ್ಯಾಂಡರ್ ಮತ್ತು ರೋವರ್ ಢಿಕ್ಕಿಗೆ ಒಳಗಾಗಿದ್ದರೂ, ಅದರ ಆರ್ಬಿಟರ್ ಇನ್ನೂ ಚಂದ್ರನ ಮೇಲೆ ತೂಗಾಡುತ್ತಿದೆ, ಮತ್ತು ಅದು ಸುರಕ್ಷಿತವಾಗಿದೆ. ಅಲ್ಲಿಂದಲೇ ಚಂದ್ರನ ಚಿತ್ರಗಳನ್ನು ಸೆರೆ ಹಿಡಿದು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿದೆ. ಚಂದ್ರಯಾನ-2 ವಿಫಲಗೊಂಡು, ಎರಡು ವರ್ಷಗಳು ಕಳೆದವು, ಇದೀಗ ಚಂದ್ರಯಾನ-3 ಚಂದ್ರನೆಡೆ ಸಾಗಲು ಸಿದ್ಧವಾಗುತ್ತಿದೆ ಎಂಬುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ. ಚಂದ್ರನ ಮೇಲೆ ತೂಗಾಡುತ್ತಿರುವ ಚಂದ್ರಯಾನ -2 ಆರ್ಬಿಟರನ್ನು ಚಂದ್ರಯಾನ -3 ಕ್ಕೆ ಬಳಸಲು ಇಸ್ರೋ ನಿರ್ಧರಿಸಿದೆ.

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು, ಗಗನ್ ಯಾನ್ ಮಿಶನ್‍ಗಾಗಿ ಉಪಕರಣಗಳನ್ನು ಪರೀಕ್ಷಿಸುತ್ತಿದೆ ಮತ್ತು ನಿರ್ಮಿಸುತ್ತಿದೆ. ಗಗನ್ ಯಾನ್, ನಮ್ಮ ದೇಶದ ಮೊದಲ ಮಾನವನನ್ನು ಒಳಗೊಂಡ ಮಿಷನ್ ಆಗಿದೆ. ಇಸ್ರೋ ಕೂಡ, ಚಂದ್ರನ ಮೇಲೆ ಸಿಬ್ಬಂದಿಯನ್ನು ಇಡುವ ಆಶಯವನ್ನು ಹೊಂದಿದೆ, ಆದರೆ ಅದು ಮೊದಲು ಬಾಹ್ಯಾಕಾಶದಲ್ಲಿ ಜನರನ್ನು ಜೀವಂತವಾಗಿ ಮತ್ತು ಆರೋಗ್ಯವಾಗಿಡುವುದು ಹೇಗೆ ಎಂಬುದನ್ನು ಕಲಿಯುವುದರ ಕುರಿತು ಅದು ಹೆಚ್ಚಿನ ಗಮನವನ್ನು ಹರಿಸಬೇಕಿದೆ.

  ಭಾರತ ಮಾತ್ರವಲ್ಲ, ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನ್ಯ ದೇಶಗಳು ಕೂಡ, ಭರದಿಂದ ಕಾರ್ಯ ನಿರ್ವಹಿಸುತ್ತೀವೆ. ಈ ವಿಷಯದಲ್ಲಿ ಚೀನಾ ಮತ್ತು ರಷ್ಯಾ ಮುಂಚೂಣಿಯಲ್ಲಿವೆ. ಮುಂದಿನ ಕೆಲವು ವರ್ಷಗಳಲ್ಲಿ, ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (NAS), ಆರ್ಟೆಮಿಸ್ ಎಂಬ ಸಂಕೇತನಾಮ ಹೊಂದಿರುವ ಸರತಿಯ ಸಾಲಿನ ಕಾರ್ಯಾಚರಣೆಗಳನ್ನು ಹೊಂದಿದೆ.

  ಅದರಲ್ಲಿ ಮೊದಲನೆಯದ್ದು, ನೂತನ ಮಾನವ ರಹಿತ ರಾಕೆಟ್ ಮತ್ತು ಸಂಬಂಧಿತ ವ್ಯವಸ್ಥೆಗಳನ್ನು ಪರೀಕ್ಷೆ ಮಾಡುತ್ತದೆ. ಎರಡನೆಯದ್ದು, ಒಂದು ಗಗನಯಾತ್ರಿಗಳ ತಂಡವನ್ನು ಚಂದ್ರನ ಸುತ್ತಲಿನ ಕಕ್ಷೆಗೆ ಸೇರಿಸುತ್ತದೆ. ಇನ್ನು ಮೂರನೆಯದ್ದು, ಒಂದು ತಂಡವನ್ನು ಚಂದ್ರನ ಮೇಲೆ ಇಳಿಸುತ್ತದೆ (ಈ ತಂಡದಲ್ಲಿ ಕನಿಷ್ಟ ಒಬ್ಬ ಮಹಿಳೆ ಇರುತ್ತಾರೆ).
  ನಾಸಾವು ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಒಂದು ಬಾಹ್ಯಾಕಾಶ ನಿಲ್ದಾಣವನ್ನು ಕೂಡ ಸ್ಥಾಪಿಸಲು ನಿರ್ಧರಿಸಿದ್ದು- ಆರ್ಟೆಮಿಸ್ ಮಿಶನ್ 2 ಅದರ ಕಾರ್ಯ ಸಾಧ್ಯತೆಯನ್ನು ಅನ್ವೇಶಿಸುತ್ತದೆ.

  ಯುರೋಪಿಯನ್ ಸ್ಪೇಸ್ ಏಜನ್ಸಿಯು, ತನ್ನ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿರುವ ಗಗನ ಯಾತ್ರಿಗಳಿಗೆ ತರಬೇತಿ ನೀಡಲು, ಆರು ಗಗನ ಯಾತ್ರಿಗಳನ್ನು ಶಾರ್ಟ್‍ಲಿಸ್ಟ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿ ಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ 23,307 ಅರ್ಜಿದಾರರ ಪಟ್ಟಿಯನ್ನು, ಹಿಂದಿನ ಎಣಿಕೆಯಲ್ಲಿ 1,362ಕ್ಕೆ ಇಳಿಸಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿಯು ಹೇಳಿದೆ.

  ಯುರೋಪಿಯನ್ ಸ್ಪೇಸ್ ಏಜೆನ್ಸಿಯು ಆಯ್ಕೆ ಮಾಡಿದ ಆ ಆರು ಮಂದಿ ಗಗನಯಾತ್ರಿಗಳಿಗೆ, ಲೂನಾರ್ ಮಿಶನ್‍ನಲ್ಲಿ ತೊಡಗಿಸುವ ಮೊದಲು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಲು ತರಬೇತಿ ನೀಡಲಾಗುತ್ತದೆ. 1,362 ಅರ್ಜಿದಾರರಲ್ಲಿ ಸುಮಾರು ಶೇಕಡಾ 40 ರಷ್ಟು ಮಂದಿ ಮಹಿಳೆಯರು ಮತ್ತು 29 ಮಂದಿ ಕೆಲವು ವಿಷಯಗಳಲ್ಲಿ ಅಂಗವೈಕಲ್ಯತೆ ಹೊಂದಿವವರು ಇದ್ದಾರೆ ಎಂದು ಅದು ತಿಳಿಸಿದೆ.

  ರಷ್ಯಾ-ಚೀನಾ ಜಂಟಿ ಸಾಹಸೋದ್ಯಮ: ರಷ್ಯಾ ಮತ್ತು ಚೀನಾ ಈ ವಿಷಯದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿವೆ. ರಷ್ಯಾ ಮತ್ತು ಚೀನಾದ ಜಂಟಿ ಉದ್ಯಮವಾಗಿ, ಚಂದ್ರನ ಮೇಲೆ ಶಾಶ್ವತ ಆವಾಸ ಸ್ಥಾನವನ್ನು ನಿರ್ಮಿಸುವ ಯೋಜನೆಗಳನ್ನು ಹೊಂದಿವೆ. ಮತ್ತು ಆ ಎರಡೂ ರಾಷ್ಟ್ರಗಳು ಇತರ ದೇಶಗಳಿಗೆ ಈ ಯೋಜನೆಯಲ್ಲಿ ಕೈಜೋಡಿಸಲು ಆಹ್ವಾನ ನೀಡುತ್ತಿವೆ. ಆದರೆ ಈ ಜಂಟಿ ಯೋಜನೆ 2027 ರ ಮುನ್ನ ಸಂಭವಿಸುವ ಸಾಧ್ಯತೆ ಇಲ್ಲ.

  ಚೀನಾವು, ಈಗಾಗಲೆ ಚಂದ್ರನ ಉಪಕರಣಗಳಿಗಾಗಿ ಪ್ರಾಯೋಗಿಕ ಪರೀಕ್ಷಾ ಕೇಂದ್ರವನ್ನು ನಿರ್ಮಿಸಿದೆ ಎಂದು ಹೇಳಿದೆ. ಇದು ಮ್ಯಾಗ್ನೆಟಿಕ್ ಲೆವಿಟೇಶನ್ ಮೂಲಕ ಕಡಿಮೆ ಗುರುತ್ವಾಕರ್ಷಣೆಯನ್ನು ಬುದ್ಧಿವಂತಿಕೆಯಿಂದ ಪ್ರೇರೇಪಿಸುತ್ತದೆ, ಜೊತೆ ಅತ್ಯಂತ ತೀವ್ರ ತಾಪಮಾನ ವ್ಯತ್ಯಾಸಗಳನ್ನು ಉಂಟು ಮಾಡುತ್ತದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ಇರುವ ವಾತಾವರಣವನ್ನು ಅನುಕರಣೆ ಮಾಡುತ್ತದೆ.

  ನಾಸಾವು ಗಗನಯಾತ್ರಿಗಳನ್ನು ಪ್ಯಾರಾಬೋಲಿಕ್ ವಕ್ರಾಕೃತಿಗಳಲ್ಲಿ ಹಾರುವ ವಿಮಾನಗಳಲ್ಲಿ ಇರಿಸುವ ಮೂಲಕ, ಕಡಿಮೆ ಗುರುತ್ವಾಕರ್ಷಣೆಯಲ್ಲಿ ಬದುಕುವ ತರಬೇತಿ ನೀಡುತ್ತದೆ.

  ಇದನ್ನ ಓದಿ:Covid-19 ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಕ್ಕೆ ತನ್ನ ಉದ್ಯೋಗಿಗಳಿಗೆ ಈ ಕಂಪನಿ ಏನು ನೀಡಿದೆ ನೋಡಿ!

  ಚೀನೀ ಡೆಮಾನ್‍ಸ್ಟ್ರೇಟರ್ ಅನ್ನು ಮನುಷ್ಯರಿಗೆ ತರಬೇತಿ ನೀಡುವ ಬದಲಾಗಿ ಸಾಧನಗಳ ಪರೀಕ್ಷೆಗೆ ಬಳಸಲಾಗುತ್ತಿದೆ. ಕತ್ತಲಿನ ಬದಿಯಲ್ಲಿ ಹೊಂದಿಸಲಾಗಿರುವ ಲ್ಯಾಂಡರ್ – ರೋವರ್ ಸೇರಿದಂತೆ, ಚೀನಿಯರು ಈಗಾಗಲೇ ಚಂದ್ರನ ಮೇಲೆ ರೋಬೋಟಿಕ್ ಪ್ರೋಬ್‍ಗಳನ್ನು ಹೊಂದಿದ್ದಾರೆ. ಈ ಮಾನವರಹಿತ ಮಿಷನ್‍ಗಳಲ್ಲಿ ಕನಿಷ್ಟ ಮೂರನ್ನಾದರೂ ಪ್ರಾರಂಭಿಸಬೇಕು ಎಂಬ ಯೋಜನೆಯನ್ನು ಚೀನಾ ಹೊಂದಿದೆ.

  ದಕ್ಷಿಣ ಕೊರಿಯಾ ಕೂಡ ಬಾಹ್ಯಾಕಾಶ ಚಟುವಟಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಅದು ತನ್ನ ಮೊದಲ ಚಂದ್ರನ ಮಿಷನ್ ಆಗಿರುವ ಕೊರಿಯಾ ಪಾತ್ ಫೈಂಡರ್ ಲೂನಾರ್ ಆರ್ಬಿಟರ್ ಅನ್ನು ಆಗಸ್ಟ್‌ನಲ್ಲಿ ಕೇಪ್ ಕ್ಯಾನವೆರಲ್ (ಯುಎಸ್‍ಎ) ನಿಂದ ಉಡಾಯಿಸುವ ಉದ್ದೇಶವನ್ನು ಹೊಂದಿದೆ.

  ಇದನ್ನ ಓದಿ: ಸ್ಮಾರ್ಟ್​ಫೋನ್​ನಲ್ಲಿ IPL 2022 Auction ಉಚಿತವಾಗಿ ನೋಡಬೇಕಾ? ಹಾಗಿದ್ರೆ ಈ ಆ್ಯಪ್​ ಡೌನ್​ಲೋಡ್​ ಮಾಡಿ

  ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸಕೋಸ್ಮೋಸ್ ಕೂಡ ಚಂದ್ರನ ದಕ್ಷಿಣ ಧ್ರುವಕ್ಕೆ, ರೋಬೋಟಿಕ್ ಮಿಷನ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಮಿಷನ್‍ಗಳು, ಹೆಚ್ಚಿನ ಜ್ಞಾನವನ್ನು ಸೃಷ್ಟಿಸುತ್ತವೆ ಮತ್ತು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತವೆ. ಬಾಹ್ಯಾಕಾಶ ಸಂಶೋಧನೆಗಳಿಂದ ಭೂಮಿಯ ಮೇಲಿನ 8 ಶತಕೋಟಿ ಜನರಿಗೆ ನೇರ ಪ್ರಯೋಜನಗಳು ಆಗಬಹುದು.
  Published by:Harshith AS
  First published: