ಮಗಳಿಗಾಗಿ ಮೊಬೈಲ್ ಖರೀದಿಸಿ ಮೆರವಣಿಗೆಯಲ್ಲಿ ಗ್ರಾಮಕ್ಕೆ ತಂದ ಚಾಯ್‌ವಾಲಾ

ಮಗಳು ಎರಡು ವರ್ಷದಿಂದ ಮೊಬೈಲ್ ಖರೀದಿಸುವಂತೆ ಹೇಳುತ್ತಿದ್ದಳು. ನೀವು ಕುಡಿಯುವ ಹಣದಲ್ಲಿ ಸ್ವಲ್ಪ ಉಳಿಸಿದ್ರೂ ಹಣ ಸಿಗುತ್ತೆ  ಅಂತ ಅಂದಿದ್ದಳು. ನಾನು ಅಂದೇ ಆಕೆಗೆ ಇಡೀ ಊರು ನೋಡುವಂತಹ ಫೋನ್ ತರುತ್ತೇನೆ ಎಂದು ಹೇಳಿದ್ದೆ ಅಂತಾರೆ ಮುರಾರಿ.

ಮೊಬೈಲ್ ಮೆರವಣಿಗೆ

ಮೊಬೈಲ್ ಮೆರವಣಿಗೆ

  • Share this:
ಸಾಮಾನ್ಯವಾಗಿ ಮದುವೆ (Marriage) ಸಮಾರಂಭಗಳಂದ್ರೆ ಅಲ್ಲಿ ಮೆರವಣಿಗೆ ಇರಬೇಕು. ಕೆಲವು ರಾಜಕೀಯ ಸಮಾರಂಭಗಳು (Political Rally) ಯಾವುದೇ ಮದುವೆ ಅಬ್ಬರಕ್ಕಿಂತ ಕಡಿಮೆ ಇರಲ್ಲ. ವರ (Groom) ಮತ್ತು ವಧು (Bride) ವನ್ನು ಸಾರೋಟದಲ್ಲಿ ಕೂರಿಸಿ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡುವ ಸಂಪ್ರದಾಯ ಉತ್ತರ ಭಾರತದಲ್ಲಿ ಹೆಚ್ಚು. ಆದ್ರೆ ಓರ್ವ ಟೀ ವ್ಯಾಪಾರಿ (Chaiwala) ಮಗಳ ಒತ್ತಾಯಕ್ಕೆ ಮಣಿದು ಮೊದಲ ಬಾರಿಗೆ ಸ್ಮಾರ್ಟ್ ಫೋನ್ (Smart Phone) ಖರೀದಿ ಮಾಡಿದ್ದಾನೆ. ಟೀ ವ್ಯಾಪಾರಿ ಮೊಬೈಲ್ ಖರೀದಿಸಿದ್ರೆ ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ಮೊಬೈಲ್ ಖರೀದಿಸಿದ ಟೀ ವ್ಯಾಪಾರಿ  ಸುದ್ದಿ ಆಗುತ್ತಿರಲಿಲ್ಲ. ಆದರೆ ಅದನ್ನು ಡಿಜೆ ಮೂಲಕ ಮನೆಗೆ ತೆಗೆದುಕೊಂಡ ಬಂದ ವಿಡಿಯೋ ವೈರಲ್ ಆಗಿದೆ.

ನಗರದ ನೀಲಗರ್ ಸ್ಕ್ವೇರ್‌ನಲ್ಲಿರುವ ಹಳೆ ಶಿವಪುರಿಯ ಮುರಾರಿ ಚಾಯ್‌ವಾಲಾ ಮಾರುಕಟ್ಟೆಯಿಂದ 12,500 ರೂ.ಗೆ ಹೊಸ ಮೊಬೈಲ್ ಖರೀದಿಸಿದ್ದಾರೆ. ಮೊಬೈಲ್ ಖರೀದಿಸಿದ ಸಂತೋಷವನ್ನ ಮುರಾರಿ ವ್ಯಕ್ತಪಡಿಸಿದ ಬಗೆ ವಿಶೇಷವಾಗಿತ್ತು. ಮುರಾರಿ ತಿಂಗಳು ಕಂತಿನ ಮೇಲೆ ಈ ಮೊಬೈಲ್ ಖರೀದಿಸಿದ್ದಾರೆ.

ಮೆರವಣಿಗೆ ವಿಷಯ ತಿಳಿದು ಜನರು ಶಾಕ್!

ಸಾರೋಟದಲ್ಲಿ ಮಕ್ಕಳನ್ನು ಕೂರಿಸಿದ ಮುರಾರಿ, ಅವರ ಕೈಯಲ್ಲಿ ಮೊಬಬೈಲ್ ನೀಡಿದ್ದರು. ಮೊದಲಿಗೆ ಗ್ರಾಮಸ್ಥರು ಮಕ್ಕಳ ಹುಟ್ಟು ಹಬ್ಬ ಇರಬಹುದು. ಹಾಗಾಗಿ ಸಾರೋಟದಲ್ಲಿ ಕರೆದುಕೊಂಡು ಹೋಗುತ್ತಿರಬಹುದು ಎಂದು ಜನರು ಊಹಿಸಿದ್ದರು. ಆದ್ರೆ ಮೀಪಕ್ಕೆ ತೆರಳಿ ವಿಚಾರಿಸಿದಾಗ ಮೊಬೈಲ್ ಖರೀದಿಸಿದ್ದಕ್ಕಾಗಿ ನಡೆಯುತ್ತಿರುವ ಮೆರವಣಿಗೆ ಎಂದು ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Viral Video: ಸತ್ತ ಮೀನು ಜೀವಂತ ಎದ್ದು ನಿಂತಾಗ..! ಇದು ಕತೆಯಲ್ಲ ಜೀವನ

ವಾಸ್ತವವಾಗಿ, ಮದುವೆ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನರು ಡೋಲ್, ಬಜೆ, ಭಾಂಗ್ರಾ, ಬಗ್ಗಿ, ಪಟಾಕಿ ಹೊಡೆದು ನೃತ್ಯ ಮಾಡೋದನ್ನು ಇಲ್ಲಿಯವರೆಗೆ ಜನರು ನೋಡಿದ್ದರು. ಇದುವರೆಗೂ ಇಂತಹ ಸಂಭ್ರಮವನ್ನು ಜನ ನೋಡಿಕೊಂಡಿರಲಿಲ್ಲ.

ಮೊಬೈಲ್ ಖರೀದಿಸುವಂತೆ ಮಗಳ ಒತ್ತಾಯ

ಈ ದೃಶ್ಯವನ್ನು ನೋಡಿದ ಜನರು ತುಂಬಾ ಆಶ್ಚರ್ಯಚಕಿತರಾದರು. ಮೊಬೈಲ್ ಕೂಡ ಮುರಾರಿಯ ಚಹಾದಂತೆಯೇ ವಿಶೇಷವಾಗಿದೆ ಎಂದು ಜನರು ಹೇಳಿದ್ದಾರೆ. ಮೆರವಣಿಗೆಯ ಜೊತೆಗೆ ಮೊಬೈಲ್ ಹಿಡಿದು ಮನೆ ತಲುಪಿದಾಗ ಜನ ಅಚ್ಚರಿಗೊಂಡರು.

ಮುರಾರಿಯ ಸಂತೋಷ ಕೂಟದಲ್ಲಿ  ಎಲ್ಲರೂ ಭಾಗಿಯಾಗಿ ಮನೆವರೆಗೆ ತೆರಳಿದ್ದಾರೆ. ಮಗಳು ಎರಡು ವರ್ಷದಿಂದ ಮೊಬೈಲ್ ಖರೀದಿಸುವಂತೆ ಹೇಳುತ್ತಿದ್ದಳು. ನೀವು ಕುಡಿಯುವ ಹಣದಲ್ಲಿ ಸ್ವಲ್ಪ ಉಳಿಸಿದ್ರೂ ಹಣ ಸಿಗುತ್ತೆ ಅಂತ ಅಂದಿದ್ದಳು. ನಾನು ಅಂದೇ ಆಕೆಗೆ ಇಡೀ ಊರು ನೋಡುವಂತಹ ಫೋನ್ ತರುತ್ತೇನೆ ಎಂದು ಹೇಳಿದ್ದೆ ಅಂತಾರೆ ಮುರಾರಿ.

ಇದನ್ನೂ ಓದಿ:  ಆನೆ ಮನುಷ್ಯನನ್ನು ಅಟ್ಟಾಡಿಸಿಕೊಂಡು ಬಂದ್ರೆ ಹೇಗಿರುತ್ತೆ? ನಿಜವಾದ ಘಟನೆಯ ವಿಡಿಯೋ ನೋಡಿ...

ನಿವೃತ್ತಿ ಪಡೆದ ಕೊರೊನಾ ವಾರಿಯರ್ ಮೆರವಣಿಗೆ

ಯಾರಾದರೂ ಸರಕಾರಿ ನೌಕರ ನಿವೃತ್ತಿಯಾದರೆ ಮಾಮೂಲಿಯಾಗಿ ಸನ್ಮಾನ ಮಾಡಿ ಬೀಳ್ಕೊಡುವುದು ವಾಡಿಕೆ. ಆದರೆ, ತಮ್ಮ ಜೀವನದ ಅರ್ಧ ಆಯುಷ್ಯವನ್ನು ಜನಸೇವೆಯಲ್ಲಿ ಕಳೆದು ನಿವೃತ್ತಿಯಾದ ಕೊರೋನಾ ವಾರಿಯರ್​​ಗೆ ಹೃದಯಸ್ಪರ್ಶಿ ಬೀಳ್ಕೊಡುಗೆಯೊಂದು ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದಿತ್ತು.

60 ವರ್ಷ ವಯಸ್ಸಾದ ಹಿನ್ನೆಲೆ ಅವರು ಸೇವಾ ನಿವೃತ್ತಿಯಾದರು. ಅದರಲ್ಲಿ 30 ವರ್ಷ ಜನಸೇವೆಯಲ್ಲಿಯೇ ಕಳೆದವರು. ಅವರ ಹೆಸರು ಬಿ. ಸಿ. ಧುಮಗೊಂಡ ವಿಜಯಪುರ ಸಂಚಾರಿ ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿದ್ದರು. ಅವರು ನಿವೃತ್ತಿ ಸಮೀಪಿಸುತ್ತಿದ್ದಾಗಲೆ ಕೊರೋನಾ ವಕ್ಕರಿಸಿತ್ತು. ಆದರೇನಂತೆ ಜನಸೇವೆಗೆ ಒದಗಿಬಂದ ಮತ್ತೊಂದು ಸುವರ್ಣಾವಕಾಶ ಎಂದುಕೊಂಡು ಕೊರೊನಾ ಎಮರ್ಜೆನ್ಸಿ ಮತ್ತು ಭಾರತ ಲಾಕೌಡನ್ ನಲ್ಲಿ ಸೇವೆ ಸಲ್ಲಿಸಿದ್ದರು.

ತಮ್ಮ ಸೇವಾವಧಿಯಲ್ಲಿ ವಿಜಯಪುರ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ತಮ್ಮಲ್ಲಿರುವ ಮಾನವೀಯ ಗುಣಗಳ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು. ಸಂಚಾರಿ ಎಎಸ್ಐ ಆಗಿದ್ದಾಗಲೂ ಅಷ್ಟೇ ಜನರಿಗೆ ಸಂಚಾರಿ ನಿಯಮಗಳ ಪಾಲನೆಯ ಕುರಿತು ಅರಿವು ಮೂಡಿಸುತ್ತಲೇ ಸಮರ್ಥವಾಗಿ ತಮ್ಮ ಕರ್ತವ್ಯವನ್ನೂ ನಿಭಾಯಿಸಿದ್ದರು. ಇದು ಅವರ ಮೇಲಾಧಿಕಾರಿಗಳಿಗೂ ತೃಪ್ತಿ ತಂದಿತ್ತು, ಇಂಥವರ ಸೇವೆ ಇತರರಿಗೆ ಸ್ಪೂರ್ತಿಯೂ ಆಗಿತ್ತು.
Published by:Mahmadrafik K
First published: