Food Rating: ಅರೇ, ಜೈಲಿನ ಊಟಕ್ಕೂ 5 ಸ್ಟಾರ್ ರೇಟಿಂಗ್! ಅಷ್ಟಕ್ಕೂ ಏನಿದೆ ಇದರಲ್ಲಿ?

ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (FSSAI) ಈ ಕೇಂದ್ರ ಕಾರಾಗೃಹಕ್ಕೆ ಫೈವ್ ಸ್ಟಾರ್ ರೇಟಿಂಗ್ ನೀಡಿದೆ! ಜೈಲಿನ ಕೈದಿಗಳಿಗೆ ಜೈಲು ಸಿಬ್ಬಂದಿ ಉಣಬಡಿಸುತ್ತಿರುವ ಊಟವನ್ನು ಪ್ರಾಧಿಕಾರವು ಶ್ಲಾಘಿಸಿದೆ. ಅಂದಹಾಗೆ ಈ ವಿಶೇಷ ಜೈಲು ಎಲ್ಲಿದೆ? ಇಲ್ಲಿ ಕೊಡುವ ಊಟದ ವಿಶೇಷತೆಗಳೇನು? ಇಲ್ಲಿದೆ ಓದಿ ಕುತೂಹಲಕರ ಮಾಹಿತಿ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಕಾರಾಗೃಹ (Jail) ಹಾಗೂ ಅಲ್ಲಿನ ವಾತಾವರಣ ಎಂದರೆ ಯಾರಿಗೆ ತಾನೇ ಮೆಚ್ಚುಗೆಯಾಗುತ್ತದೆ ಹೇಳಿ? ಅದರಲ್ಲೂ ಅಲ್ಲಿ ಉಣಬಡಿಸುವ ಊಟ ಕೂಡ ಶುಚಿ ರುಚಿಯಾಗಿರುವುದಿಲ್ಲ (Taste), ನೈರ್ಮಲ್ಯದ ಕೊರತೆ ಇರುತ್ತದೆ, ಸ್ವಚ್ಛತೆಯನ್ನು ಅನುಸರಿಸುವುದಿಲ್ಲ ಇದರಿಂದ ಕೈದಿಗಳ (prisoners) ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಇನ್ನು ಜೈಲೂಟದ ಅದೇ ಚಿತ್ರಣಗಳನ್ನು ನಾವು ಹೆಚ್ಚಿನ ಸಿನಿಮಾಗಳಲ್ಲಿ (Cinema) ಕೂಡ ನೋಡುತ್ತಿರುತ್ತವೇ. ಆದರೆ ಫರೂಕಾಬಾದ್‌ನಲ್ಲಿರುವ (Farrukhabad) ಜೈಲು ಮಾತ್ರ ಈ ಮಾತಿಗೆ ವಿರೋಧವಾಗಿದೆ. ಏಕೆಂದರೆ ಈ ಜೈಲು ಸ್ವಚ್ಛವಾದ ನೈರ್ಮಲ್ಯ ಪರಿಸರದಿಂದ ಕೂಡಿದ ಅಂತೆಯೇ ಪೋಷಕಾಂಶ ಭರಿತ (Nutrient rich) ಆಹಾರವನ್ನು ಕೈದಿಗಳಿಗೆ ಉಣಬಡಿಸುತ್ತಿದೆ.


ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡ ಕಾರಾಗೃಹ
ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (FSSAI) ಫರೂಕಾಬಾದ್‌ನಲ್ಲಿರುವ ಫತೇಗರ್ ಕೇಂದ್ರ ಕಾರಾಗೃಹಕ್ಕೆ ಫೈವ್ ಸ್ಟಾರ್ ರೇಟಿಂಗ್ ಅನ್ನು ನೀಡಿದ್ದು, ಜೈಲಿನ ಖೈದಿಗಳಿಗೆ ಖಾರಾಗೃಹವು ಉಣಬಡಿಸುತ್ತಿರುವ ಊಟವನ್ನು ಪ್ರಾಧಿಕಾರವು ಶ್ಲಾಘಿಸಿದೆ.


ಆಹಾರ ಪ್ರಮಾಣ ಪತ್ರ ಪಡೆದುಕೊಂಡ ಕಾರಾಗೃಹ
FSSAI ನಿಂದ ದಾಖಲಿಸಲಾದ ಥರ್ಡ್-ಪಾರ್ಟಿ ಆಡಿಟ್ ಖಾರಾಗೃಹಕ್ಕೆ ಫೈವ್ ಸ್ಟಾರ್ ರೇಟಿಂಗ್ ಅನ್ನು ನೀಡಿದ್ದು “ಸರಿಯಾದ ಆಹಾರ ಪ್ರಮಾಣಪತ್ರ” ವನ್ನು ನೀಡಿದೆ. ಆಹಾರದ ಗುಣಮಟ್ಟ ಹಾಗೂ ನೈರ್ಮಲ್ಯದ ಗುರುತಾಗಿದೆ ಅಂದರೆ ಜೈಲಿನಲ್ಲಿ ತಯಾರಾದ ಉತ್ತಮ ಗುಣಮಟ್ಟದ ಆಹಾರವನ್ನು ಜೈಲಿನಲ್ಲಿರುವವರು ಕೈದಿಗಳು ಸಿಬ್ಬಂದಿ ವರ್ಗದವರು ಪಡೆಯುತ್ತಿದ್ದಾರೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಮಾನದಂಡಗಳಿಗೆ ಅನುಗುಣವಾಗಿ ಜೈಲೂಟ ತಯಾರಿಸುತ್ತಿರುವ ಜೈಲ್
ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು FSSAI ನ ಸರಿಯಾದ ಆಹಾರ ಪ್ರಮಾಣಪತ್ರದ ಗೌರವಕ್ಕೆ ಭಾಜನವಾಗಿರುವ ಕಾರಾಗೃಹವು 1,100 ಕೈದಿಗಳಿಗೆ ನೈರ್ಮಲ್ಯವುಳ್ಳ ಹಾಗೂ ಪೋಷಕಾಂಶವುಳ್ಳ ಆಹಾರವನ್ನು ವಿತರಿಸುತ್ತಿದೆ ಎಂಬುದರ ಗುರುತಾಗಿದೆ ಎಂದಿದ್ದಾರೆ.


ಇದನ್ನೂ ಓದಿ:  Viral Photo: ‘ಚಿಲ್ಲರೆ ತನ್ನಿ’ ಅಂತ ಸೂಚನೆ ನೀಡಿದ್ರೆ ಕೇಕ್ ಮೇಲೆ ಬರೆದು ತರೋದಾ?

ಮಾರ್ಚ್ 2022 ರಲ್ಲಿ ನಾವು FSSAI ನಿಂದ ಪರವಾನಗಿಯನ್ನು ಪಡೆದುಕೊಂಡೆವು. ಅದರ ಮಾನದಂಡಗಳಿಗೆ ಅನುಗುಣವಾಗಿ ಆಹಾರ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಸುಧಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಇಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ಜೈಲು ರಾಜ್ಯದಲ್ಲೇ ಇದೇ ಮೊದಲನೆಯದ್ದು ಎಂದು ತಿಳಿಸಿದ್ದಾರೆ.


ಜೈಲಿನ ಖೈದಿಗಳಿಗೆ ಸಿಬ್ಬಂದಿಗಳಿಗೆ ಸ್ವಚ್ಛತೆಯ ಪಾಠ
ಜೈಲಿನ ಸೂಪರಿಂಟೆಂಡೆಂಟ್ ಭೀಮ್ ಸೇನ್ ಮುಕುಂದ್ ಕೂಡ ಅಭಿಪ್ರಾಯ ಹಂಚಿಕೊಂಡಿದ್ದು, ನಾವು FSSAI ನ ಎಲ್ಲಾ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸಿದೆವು. ಶುದ್ಧೀಕರಣ, ನೈರ್ಮಲ್ಯ ಹಾಗೂ ಆಹಾರ ಸುರಕ್ಷತಾ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ವಿವರವಾದ ಶಿಫಾರಸುಗಳು ಹಾಗೂ ವೀಕ್ಷಣೆಗಳನ್ನು ನಡೆಸಿದ ನಂತರ ಪೂರ್ವ-ಆಡಿಟ್ ವರದಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. 1,100 ಖೈದಿಗಳಿಗೆ ಮಾತ್ರವಲ್ಲದೆ ಜೈಲಿನ ಸಿಬ್ಬಂದಿಗಳಿಗೆ ಕೂಡ ಸ್ವಚ್ಛತೆ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯೀಕರಣದ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.


ಖಾರಾಗೃಹದಲ್ಲಿ ಅನುಸರಿಸಿದ ಆಧುನಿಕ ಪಾಕ ಪದ್ಧತಿ
ಆಹಾರ ಸಿದ್ಧತೆಯಲ್ಲಿ ಕೂಡ ಆಧುನೀಕ ವ್ಯವಸ್ಥೆಯನ್ನು ಖಾರಾಗೃಹದಲ್ಲಿ ಅಳವಡಿಸಿಕೊಂಡಿರುವುದಾಗಿ ತಿಳಿಸಿದ ಮುಕುಂದ್, ಮೊದಲೆಲ್ಲಾ ರೋಟಿ ತಯಾರಿಸಲು, ತರಕಾರಿ ಹೆಚ್ಚಲು, ಬೇಳೆ ಬೇಯಿಸಲು ಖೈದಿಗಳ ಸಹಾಯವನ್ನು ಪಡೆದುಕೊಳ್ಳಲಾಗುತ್ತಿತ್ತು. ಆದರೆ ಈ ಕೆಲಸವು ಸಾಕಷ್ಟು ಸಮಯವನ್ನು ವ್ಯರ್ಥಗೊಳಿಸುತ್ತಿತ್ತು. 50 ಖೈದಿಗಳನ್ನು ಪಾಳಿ ಪ್ರಕಾರವಾಗಿ ಅಡುಗೆ ಕೆಲಸಗಳಿಗೆ ಸಹಾಯಕರಾಗಿ ನಿಯೋಜನೆಗೊಳಿಸಲಾಗುತ್ತಿತ್ತು.


ಇದನ್ನೂ ಓದಿ: Viral Post: ಸರ್ಕಾರಿ ಉದ್ಯೋಗ ಪಡೆಯಲು ಖತರ್ನಾಕ್​ ಐಡಿಯಾ; ಶಾಕ್​ ಆದ ಮೇಲ್ವಿಚಾರಕರು

ಇದೀಗ ಜೈಲಿನ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಗಿದ್ದು ದೊಡ್ಡ ರೋಟಿ ತಯಾರಿಕಾ ಯಂತ್ರಗಳನ್ನು ಅಳವಡಿಸಲಾಗಿದೆ ಹಾಗೂ ಹಿಟ್ಟು ನಾದುವ ಮೆಶೀನ್‌ಗಳನ್ನು ಬಳಸಲಾಗುತ್ತಿದೆ ಹಾಗೂ ತರಕಾರಿಗಳನ್ನು ಹೆಚ್ಚಲು ಮೆಶೀನ್ ಕಟ್ಟರ್‌ಗಳ ಬಳಕೆ ಮಾಡಲಾಗುತ್ತಿದೆ ಎಂದು ಮುಕುಂದ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಖಾರಾಗೃಹ ರಾಷ್ಟ್ರದಲ್ಲಿರುವ ಇತರ ಖಾರಾಗೃಹಗಳಿಗೂ ಮಾದರಿ.

Published by:Ashwini Prabhu
First published: