• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Cancer: ರಿಯಲ್ ಲೈಫಲ್ಲಿ ನಡೀತು ಉಪ್ಪಿದಾದ MBBS ಸಿನಿಮಾ ದೃಶ್ಯ, ಸಾಯೋ ಮುನ್ನ ಪಾರ್ಟಿ ಕೊಟ್ಟು ಪ್ರಾಣ ಬಿಟ್ಟ ಕ್ಯಾನ್ಸರ್ ರೋಗಿ!

Cancer: ರಿಯಲ್ ಲೈಫಲ್ಲಿ ನಡೀತು ಉಪ್ಪಿದಾದ MBBS ಸಿನಿಮಾ ದೃಶ್ಯ, ಸಾಯೋ ಮುನ್ನ ಪಾರ್ಟಿ ಕೊಟ್ಟು ಪ್ರಾಣ ಬಿಟ್ಟ ಕ್ಯಾನ್ಸರ್ ರೋಗಿ!

ಸ್ನೇಹಿತರ ಜೊತೆ ಆಶ್ಲೇ

ಸ್ನೇಹಿತರ ಜೊತೆ ಆಶ್ಲೇ

ಕ್ಯಾನ್ಸರ್ ರೋಗಿಯು ಉಪ್ಪಿದಾದಾ  ಸಂತೋಷಪಡಿಸಿದ್ದಕ್ಕಾಗಿ ಧನ್ಯವಾದ ಹೇಳುತ್ತಾ ಸಾಯುತ್ತಾನೆ. ಆದರೆ ಈಗ ವಾಸ್ತವದಲ್ಲಿ ಗೋವಾದಲ್ಲಿ ಇದೇ ರೀತಿಯ ಘಟನೆ ನಡೆದಿದೆ.

  • Share this:

ಸ್ಯಾಂಡಲ್​ವುಡ್ (Sandalwood)​ ರಿಯಲ್​ ಸ್ಟಾರ್​ ಉಪೇಂದ್ರ (Upendra) ಅಭಿನಯದ ಉಪ್ಪಿದಾದಾ MBBS (Uppidada MBBS) ಸಿನಿಮಾ ಎಷ್ಟರ ಮಟ್ಟಿಗೆ ಹಿಟ್​ ಆಗಿತ್ತು ಎಂಥ ಎಲ್ಲರಿಗೂ ಗೊತ್ತಿದೆ. ಇಂದಿಗೂ ಆ ಸಿನಿಮಾದ ಕೆಲವೊಂದು ದೃಶ್ಯಗಳು ಇನ್ನೂ ಜನರ ಮನಸ್ಸಿನಲ್ಲಿಯೇ ಅಚ್ಚಳಿಯದೇ ಹಾಗೆ ಉಳಿದಿದೆ. ಈ  ಚಿತ್ರದಲ್ಲಿ ವೈದ್ಯಕೀಯ ಕಾಲೇಜಿನ (Medical College) ರೋಗಿಗಳು ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಸಂತೋಷಪಡಿಸಲು ಉಪೇಂದ್ರ ಪಾತ್ರ ಮಾಡುವ ಕೆಲಸಗಳು ಜನರನ್ನು ನಗಿಸುವುದು ಮಾತ್ರವಲ್ಲದೇ ಕಣ್ಣಲ್ಲೂ ನೀರು ತರಿಸುತ್ತೆ. ಈ ಸಿನಿಮಾದಲ್ಲಿ ಉಪೇಂದ್ರ ಕ್ಯಾನ್ಸರ್​ ರೋಗಿಯೊಬ್ಬರು ಕೊನೆಯ ಹಂತದಲ್ಲಿದ್ದಾರೆ ಎಂದು ತಿಳಿದು ಅವರನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ.


ರಿಯಲ್ ಲೈಫಲ್ಲಿ ನಡೆಯಿತು ಉಪ್ಪಿದಾದ ಎಂಬಿಬಿಎಸ್‌ ಸಿನಿಮಾ ದೃಶ್ಯ!


ಉಪೇಂದ್ರ ಅವರ ಕೆಲಸವು ಆ ಕ್ಯಾನ್ಸರ್ ರೋಗಿಗೆ ಮತ್ತೆ ಬದುಕುವ ಭರವಸೆಯನ್ನು ನೀಡುತ್ತದೆ. ಆದರೆ, ಕೊನೆಯ ಹಂತದಲ್ಲಿ, ಕ್ಯಾನ್ಸರ್ ರೋಗಿಯು ಉಪ್ಪಿದಾದಾ  ಸಂತೋಷಪಡಿಸಿದ್ದಕ್ಕಾಗಿ ಧನ್ಯವಾದ ಹೇಳುತ್ತಾ ಸಾಯುತ್ತಾನೆ. ಆದರೆ ಈಗ ವಾಸ್ತವದಲ್ಲಿ ಗೋವಾದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಗೋವಾದಲ್ಲಿ ಕ್ಯಾನ್ಸರ್ ರೋಗಿಯೊಬ್ಬರ ಕೊನೆಯ ಆಸೆ ಈಡೇರಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ಘಟನೆ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ.


ಪಾರ್ಟಿಯಾದ ಕೆಲವೇ ಕ್ಷಣಗಳಲ್ಲಿ ಪ್ರಾಣಬಿಟ್ಟ ವ್ಯಕ್ತಿ!


ಗೋವಾದ ಕಂಚಿಲಿಮ್ ನಿವಾಸಿ ಆಶ್ಲೇ ನೊರೊನ್ಹಾ ಅಂಜುನಾ ಹೋಟೆಲ್‌ನಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಅವರಿಗೆ ಕ್ಯಾನ್ಸರ್ ಬಂದಿತ್ತು. ಗೋವಾ ಮೆಡಿಕಲ್ ಕಾಲೇಜಿನ ಆಂಕೊಲಾಜಿ ತಂಡದಿಂದ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಕೆಲ ದಿನ ಕೆಲಸ ಮಾಡಿದರು. ಆದರೆ ಕ್ಯಾನ್ಸರ್ ಕೊನೆಯ ಹಂತಕ್ಕೆ ಹೋಗಿತ್ತು . 28ರ ಹರೆಯದ ಆಶ್ಲೇ ನೊರ್ಹಾನಾ ಅವರು ಗೋವಾದ ಲೌಟೋಲಿಮ್‌ನಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಪ್ರಮುಖವಾದ ವಿಶ್ರಾಂತಿ ಕೇಂದ್ರವಾದ ಶಾಂತಿ ಅವೆದ್ನಾ ಸದನ್‌ನಲ್ಲಿ ಟರ್ಮಿನಲ್ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು.


ಪಾರ್ಟಿಯಲ್ಲಿ ಮಿಂಚಿದ್ದ ಆಶ್ಲೇ


ಅಗಲಿದ ಸ್ನೇಹಿತನನ್ನು ನೆನೆದು ಕಣ್ಣೀರು!


ತಾನು ಸಾಯಲಿದ್ದೇನೆ ಎಂದು ತಿಳಿದ ಆಶ್ಲೇ ತನ್ನ ಜೀವನವನ್ನು ಆಚರಿಸಲು ಬಯಸಿದ್ದರು. ಆದ್ದರಿಂದ ಅವರು ತನ್ನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತಿರುವ ಸಬ್‌ಕೇರ್ ಟ್ರಸ್ಟ್‌ನ ಸದಸ್ಯರಿಗೆ ತಮ್ಮ ಆಸೆಯನ್ನು ತಿಳಿಸಿದರು. ನಾನು ಸಾಯುವ ಮೊದಲು ಎಲ್ಲರ ಮುಖದಲ್ಲೂ ನಗು ನೋಡಬೇಕು ಎಂದು ಅವರ ಬಳಿ ಆಶ್ಲೇ ಹೇಳಿಕೊಂಡಿದ್ದರು.


ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ್ದ ಆಶ್ಲೇ


ಆಸ್ಪತ್ರೆಯಲ್ಲೇ ನಡೆದಿತ್ತು ಕೊನೆಯ ಪಾರ್ಟಿ!


ಸಮಯಾವಕಾಶ ಕಡಿಮೆ ಇದ್ದ ಕಾರಣ ಕಳೆದ ತಿಂಗಳ ಮೂರನೇ ವಾರದಲ್ಲಿ ಶಾಂತಿ ಅವದ ಸದನದ ಸದಸ್ಯರು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಂದ ಅನುಮತಿ ಪಡೆದು ಬೀಳ್ಕೊಡುಗೆ ಕೂಟ ಏರ್ಪಡಿಸಿದ್ದರು. ಪಾರ್ಟಿ ವಾತಾವರಣವನ್ನು ಸೃಷ್ಟಿಸಲು ಆಫ್‌ಲೇ ಹಾಸಿಗೆಯನ್ನು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಬಲೂನ್‌ಗಳು, ಸಂಗೀತ ಕಚೇರಿ, ಸಂಗೀತ, ಚಿಪ್ಸ್ ಮತ್ತು ಕೇಕ್‌ಗಳೊಂದಿಗೆ ಆಶ್ಲೇ ಸುತ್ತಲೂ ಪಾರ್ಟಿ ವಾತಾವರಣವನ್ನು ಸೃಷ್ಟಿಸಿದರು. ಆಶ್ಲೇ ಅವರಿಗೆ ಕ್ಷೌರ ಮಾಡಲು ಮತ್ತು ಮೇಕಪ್ ಮಾಡಲು ಟಚ್ ಅಪ್ ಮಾಡಿಸಿದ್ದರು. ಆಶ್ಲೇ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆದರು. ತನಗಾಗಿ ಪಾರ್ಟಿ ಆಯೋಜಿಸಿದ ಸಿಬ್ಬಂದಿಯೊಂದಿಗೆ ತಮಾಷೆ ಮಾಡಿದರು.


ಪಾಪ್ ಸಂಗೀತವನ್ನು ಕೇಳಲು ಬಯಸುವುದಾಗಿ ಆಶ್ಲೇ ಹೇಳಿದ್ದರಿಂದ ಇದನ್ನು ವ್ಯವಸ್ಥೆ ಮಾಡಲಾಗಿತ್ತು. ರಮ್ ಮತ್ತು ಕೋಕ್ ಬೇಕೇ ಬೇಕು ಎಂದು ಕೇಳಿದರು. ಆದರೆ ವೈದ್ಯರು ರಮ್ ಬೇಡ ಎಂದು ಹೇಳಿದ್ದರಿಂದ ಕೊಡಲಿಲ್ಲ. ಆದರೆ ಆಶ್ಲೇ ಎಲ್ಲರೊಂದಿಗೆ ಮೋಜು ಮಾಡುತ್ತಿದ್ದಾಗ ವೈದ್ಯರು ನೀವು ಹೋದರೆ ವಿಶ್ರಾಂತಿ ಪಡೆಯುತ್ತಾರೆ ಎಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರೆಲ್ಲರನ್ನು ಕಳುಹಿಸಿದರು.


ಆ ರಾತ್ರಿ ಪಾರ್ಟಿ ಲೈಟ್​ಗಳೊಂದಿಗೆ ಮಲಗಿದ್ದ ಆಶ್ಲೇ ಮತ್ತೆ ಕಣ್ಣು ತೆರೆಯಲಿಲ್ಲ. ಆಶ್ಲೇ ಮುಂಜಾನೆ 3.25ಕ್ಕೆ ಕೊನೆಯುಸಿರೆಳೆದಿದ್ದಾರೆ. ತಮ್ಮ ಕುಟುಂಬದ ಸದಸ್ಯರು ತಂದಿದ್ದ ಚೆಂದದ ಡ್ರೆಸ್​ನ ಕೊನೆಯ ಬಾರಿಗೆ ತೊಟ್ಟು ನಗುಮುಖದಲ್ಲೇ ಪ್ರಾಣ ಬಿಟ್ಟಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು