ಟಿವಿಯಲ್ಲಿ ಒಲಿಂಪಿಕ್ಸ್ ಆಟ ನೋಡುತ್ತಿರುವ ಬೆಕ್ಕಿನ ಪಾಡು ಎಂಥವರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ!

ಕ್ರೀಡಾಪಟು ಹೇಗೆ ಜಿಮ್ನಾಸ್ಟಿಕ್ ಮಾಡುತ್ತಿದ್ದಾರೆಯೋ ನೋಡಲು ಈ ಬೆಕ್ಕು ಸಹ ತನ್ನ ತಲೆಯನ್ನು ಅತ್ತ ಇತ್ತ ವೇಗವಾಗಿ ತಿರುಗಿಸುತ್ತಲೇ ಇರುವುದು ನೋಡುವುದಕ್ಕೆ ತುಂಬಾ ಕ್ಯೂಟ್ ಆಗಿದೆ.

ಬೆಕ್ಕಿನ ಪಾಡು

ಬೆಕ್ಕಿನ ಪಾಡು

 • Share this:
  ಪುಟ್ಟ ಮಕ್ಕಳು ತಾವು ಟಿವಿಯಲ್ಲಿ ಯಾವುದಾದರೂ ಕಾರ್ಟೂನ್ ನೋಡಬೇಕಾದರೆ ಅಥವಾ ವಿಡಿಯೋ ಗೇಮ್ ಆಡಬೇಕಾದರೆ ತಮ್ಮ ತಲೆಯನ್ನು ಅತ್ತ ಇತ್ತ ವೇಗವಾಗಿ ತಿರುಗಿಸುತ್ತಾ ಮಗ್ನರಾಗಿರುವುದನ್ನು ನಾವು ನೋಡಿರುತ್ತೇವೆ.  ಅದು ನಮಗೆ ತುಂಬಾ ಖುಷಿಯನ್ನೂ ನೀಡಿರುತ್ತದೆ. ಮಕ್ಕಳು ತಾವು ತಮ್ಮ ತಲೆಯನ್ನು ಅಷ್ಟು ಬಾರಿ ಮೇಲೆ, ಕೆಳಗೆ, ಅತ್ತ ಇತ್ತ ತಿರುಗಿಸುತ್ತಿರುವುದು ಗಮನಕ್ಕೆ ಬಂದಿರುವುದಿಲ್ಲ, ಅವರ ಪೂರ್ತಿ ಗಮನ ಟಿವಿಯ ಪರದೆಯ ಕಡೆಗೆ ಮತ್ತು ಆಟದ ಕಡೆಗೆ ಇರುತ್ತದೆ. ಈಗಂತೂ ಟೊಕಿಯೋ ಒಲಿಂಪಿಕ್ಸ್ ಶುರುವಾಗಿದ್ದು, ಒಲಿಂಪಿಕ್ಸ್ ಕ್ರೀಡಾಕೂಟಗಳನ್ನು ನೋಡುತ್ತಾ ಕುಳಿತಿರುವ ಪ್ರೇಕ್ಷಕರು ತಾವು ತೋರುವಂತಹ ಪ್ರತಿಕ್ರಿಯೆ ಸಹ ನೋಡಲು ಮಜವಾಗಿರುತ್ತದೆ. ಇಂತಹ ಪ್ರತಿಕ್ರಿಯೆಗಳನ್ನು ಬೇರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಅನಂತರ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವುಗಳು ಒಂದೊಂದು ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.


  ಆದರೆ ಇದೇ ತರಹ ತಮ್ಮ ತಲೆಯನ್ನು ವೃತ್ತಾಕಾರದಲ್ಲಿ ತಿರುಗಿಸುತ್ತ ಟಿವಿ ನೋಡುವುದು ಅಂದ್ರೆ ಸುಮ್ನೆ ಅಲ್ಲ. ಈ 54 ಸೆಕೆಂಡಿನ ವೈರಲ್ ವಿಡಿಯೋದಲ್ಲಿ ಒಂದು ಬೆಕ್ಕು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಡೆಯುತ್ತಿರುವಂತಹ ಜಿಮ್ನಾಸ್ಟಿಕ್ ನೋಡುತ್ತಾ ಟಿವಿ ಪರದೆ ಮುಂದೆ ಕುಳಿತು ಟಿವಿಯಲ್ಲಿ ಆ ಕ್ರೀಡಾಪಟು ಹೇಗೆ ಜಿಮ್ನಾಸ್ಟಿಕ್ ಮಾಡುತ್ತಿದ್ದಾರೆಯೋ ನೋಡಲು ಈ ಬೆಕ್ಕು ಸಹ ತನ್ನ ತಲೆಯನ್ನು ಅತ್ತ ಇತ್ತ ವೇಗವಾಗಿ ತಿರುಗಿಸುತ್ತಲೇ ಇರುವುದು ನೋಡುವುದಕ್ಕೆ ತುಂಬಾ ಕ್ಯೂಟ್ ಆಗಿದೆ.


  ಈ ವಿಡಿಯೋವನ್ನು ಟ್ವಿಟ್ಟರ್ ಖಾತೆಯ 'ಹ್ಯೂಮರ್‌ ಅಂಡ್‌ ಅನಿಮಲ್ಸ್' ಪೇಜಿನಲ್ಲಿ ಹಂಚಿಕೊಂಡಿದ್ದು, ಇದುವರೆಗೂ 8,63,500ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಈ ವಿಡಿಯೋವನ್ನು ಮೊದಲು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನಂತರ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.


  ಈ ವೈರಲ್ ವಿಡಿಯೋದಲ್ಲಿ ಬೆಕ್ಕು ಟಿವಿಗೆ ತುಂಬಾ ಹತ್ತಿರದಲ್ಲಿ ಕುಳಿತುಕೊಂಡು ಜಿಮ್ನಾಸ್ಟಿಕ್ ಮಾಡುವಂತಹ ಕ್ರೀಡಾಪಟು ನೋಡಿ ಅವರನ್ನು ಹಿಡಿಯಲು ಮತ್ತು ಮುಟ್ಟಲು ಪ್ರಯತ್ನಿಸುತ್ತಾ ತಲೆಯನ್ನು ತುಂಬಾ ಅಲುಗಾಡಿಸಿದೆ.

  ಜಿಮ್ನಾಸ್ಟಿಕ್ ಮಾಡುವ ವ್ಯಕ್ತಿಯು ಒಂದು ಕಂಬವನ್ನು ಹಿಡಿದುಕೊಂಡು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಜಿಗಿಯುತ್ತಾ ಇರುವುದನ್ನು ತುಂಬಾ ಗಂಭೀರವಾಗಿ ನೋಡುತ್ತಾ ಕುಳಿತಂತಹ ಬೆಕ್ಕು ಕ್ರೀಡಾಪಟು ಹಿಡಿಯಲು ತುಂಬಾ ಪ್ರಯತ್ನಿಸಿದ್ದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
  ಈ ವಿಡಿಯೋ ನೋಡಿದ ನೆಟ್ಟಿಗರು ಬೆಕ್ಕು ಪ್ರತಿಕ್ರಿಯಿಸಿದ ರೀತಿ ನೋಡಿ ಖುಷಿ ಪಟ್ಟಿದ್ದು, ತಮ್ಮ ಮನೆಯಲ್ಲಿ ಸಾಕಿದಂತಹ ಬೆಕ್ಕು ತಮ್ಮ ಮನೆಯ ಟಿವಿಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೇರೆ ಬೇರೆ ತರಹದ ಕ್ರೀಡೆಗಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಿವೆ ಎಂದು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಮುಗ್ದ ಪ್ರಾಣಿಗಳು ಈ ತರಹದ ಸನ್ನಿವೇಶಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ತಿಳಿದುಕೊಳ್ಳಬಹುದಾಗಿದೆ.
  Published by:Kavya V
  First published: