Dinosaur: ಬೆಕ್ಕಿನ ಗಾತ್ರದ ಡೈನೋಸಾರ್ ಪಳೆಯುಳಿಕೆ ಪತ್ತೆ: ಅರ್ಜೆಂಟೀನಾದ ಮರುಭೂಮಿಯಲ್ಲಿ ಉತ್ಖನನ!

ಮಿಲಿಯನ್ ವರ್ಷಗಳ ಹಿಂದೆ ಬುದುಕಿದ್ದ ಉದ್ದ ಕತ್ತಿನ ದೈತ್ಯ ಪ್ರಾಣಿ ಡೈನೋಸಾರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಜೀವಂತವಾಗಿ ನೋಡದಿದ್ದರೂ, ಅದರ ಕಥೆ, ಸಿನಿಮಾಗಳನ್ನು ನೋಡುವ ಮೂಲಕ ಈ ಪ್ರಾಣಿ ಬಗ್ಗೆ ನಾವು ಸಾಕಷ್ಟು ತಿಳಿದುಕೊಂಡಿದ್ದೇವೆ. ಸಂಪೂರ್ಣ ಅವನತಿ ಹೊಂದಿದೆ ಎನ್ನಲಾಗಿರುವ ಈ ಪ್ರಾಣಿಯ ಪಳೆಯುಳಿಕೆ ಆಗಾಗ್ಗೆ ಕಂಡು ಬರುತ್ತಿರುವುದು ವರದಿಯಾಗುತ್ತಲೇ ಇರುತ್ತದೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಿಲಿಯನ್ ವರ್ಷಗಳ ಹಿಂದೆ ಬುದುಕಿದ್ದ ಉದ್ದ ಕತ್ತಿನ ದೈತ್ಯ ಪ್ರಾಣಿ ಡೈನೋಸಾರ್ (Dinosaur) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಜೀವಂತವಾಗಿ ನೋಡದಿದ್ದರೂ, ಅದರ ಕಥೆ, ಸಿನಿಮಾಗಳನ್ನು ನೋಡುವ ಮೂಲಕ ಈ ಪ್ರಾಣಿ (Animal) ಬಗ್ಗೆ ನಾವು ಸಾಕಷ್ಟು ತಿಳಿದುಕೊಂಡಿದ್ದೇವೆ. ಸಂಪೂರ್ಣ ಅವನತಿ ಹೊಂದಿದೆ ಎನ್ನಲಾಗಿರುವ ಈ ಪ್ರಾಣಿಯ ಪಳೆಯುಳಿಕೆ (Animal Fossil) ಆಗಾಗ್ಗೆ ಕಂಡು ಬರುತ್ತಿರುವುದು ವರದಿಯಾಗುತ್ತಲೇ ಇರುತ್ತದೆ. ಶಸ್ತ್ರಸಜ್ಜಿತ ದೇಹವನ್ನು ಹೊಂದಿರುವ ಬೆಕ್ಕಿನ ಗಾತ್ರದ ಡೈನೋಸಾರ್‌ನ (cat-sized dinosaur) ಹೊಸ ಪಳೆಯುಳಿಕೆಯನ್ನು ಅರ್ಜೆಂಟೀನಾದ ಮರುಭೂಮಿಯಿಂದ (Argentina desert) ಉತ್ಖನನ ಮಾಡಲಾಗಿದೆ ಎಂದು ಇತ್ತೀಚಿನ ವರದಿಯಲ್ಲಿ ತಿಳಿದು ಬಂದಿದೆ.

ಅರ್ಜೆಂಟೀನಾದ ಮರುಭೂಮಿಯಲ್ಲಿ ಹೊಸ ಉತ್ಖನನ
ಸಂಶೋಧಕರು ಕೆಲವು ವರ್ಷಗಳ ಹಿಂದೆ ಅರ್ಜೆಂಟೀನಾದ ರಿಯೊ ನೀಗ್ರೋ ಪ್ರಾಂತ್ಯದ ಅಣೆಕಟ್ಟಿನ ಬಳಿ ಸ್ಟೆಗೊಸಾರಸ್ಸಿನ ದೂರದ ಸೋದರ-ಸಂಬಂಧಿಯ ಭಾಗಶಃ ಅಸ್ಥಿಪಂಜರವನ್ನು ಕಂಡುಹಿಡಿದಿದ್ದರು. ಆದಾದ ನಂತರ, ಈಗ ಈ ಪಳೆಯುಳಿಕೆ ಲಭ್ಯವಾಗಿದ್ದು, ನಿಕಟ ಪರೀಕ್ಷೆಯ ನಂತರ ಸ್ಟೆಗೊಸಾರಸ್‌ ಜೊತೆ ಹೋಲಿಕೆಯಾಗುತ್ತಿರುವುದು ಕಂಡು ಬಂದಿದೆ. ಹೊಸದಾಗಿ ಪತ್ತೆಯಾದ ಈ ಡೈನೋಸಾರ್ ಸಹ ಶಸ್ತ್ರಸಜ್ಜಿತವಾದಂತಹ ದೇಹವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದನ್ನು ಜಕಪಿಲ್ ಕಣಿಕುರ ಎಂದು ಹೆಸರಿಸಲಾಗಿದೆ. (ಜಕಪಿಲ್ ಎಂದರೆ 'ಗುರಾಣಿ ಹೊರುವವನು'; ಕಣಿಕುರ ಎಂದರೆ 'ಕಲ್ಲಿನ ಶಿಖರ')ಎಂದರ್ಥ ನೀಡುತ್ತದೆ. ವಿಜ್ಷಾನಿಗಳು ಹೇಳುವ ಪ್ರಕಾರ, ಇದು ಸ್ಟೆಗೊಸಾರಸ್ಸಿಗಿಂತ ಮುಂಚೆಯೇ ವಾಸಿಸುತ್ತಿತ್ತು ಮತ್ತು ಅದರ ಸೋದರ ಸಂಬಂಧಿಯಿಂದ ಪ್ರತ್ಯೇಕಿಸುವ ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ.

ಬೆಕ್ಕಿನ ಗಾತ್ರದ ಡೈನೋಸಾರ್
ಮೊದಲಿಗೆ, ಇದು ಜಕಾಪಿಲ್ ಥೈರಿಯೊಫೊರಾಗೆ ಸೇರಿದ ಮೊದಲ ಬೈಪೆಡಲ್ ಶಸ್ತ್ರಸಜ್ಜಿತ ಡೈನೋಸಾರ್ ಆಗಿದ್ದು, ಇದು ದೇಹದ ರಕ್ಷಾಕವಚದ ಉಪಸ್ಥಿತಿಯಿಂದ ನಿರೂಪಿಸಲ್ಪಟ್ಟಿದೆ. ಎಲ್ಲಾ ಇತರ ಥೈರಿಯೊಫೊರಾನುಗಳು ಎಲ್ಲ ನಾಲ್ಕು ಕಾಲುಗಳ ಮೇಲೆ ನಡೆಯುತ್ತವೆ, ಆದರೆ ಇದು ನಡೆಯಲು ಕೇವಲ ಎರಡು ಕಾಲುಗಳನ್ನು ಮಾತ್ರ ಬಳಸಿದೆ ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ.

ಇದನ್ನೂ ಓದಿ: Viral News: ಈ ದೇಶದಲ್ಲಿ ಕಾಡು ಪ್ರಾಣಿಗಳಿಗೂ ಕಾನೂನು ಹಕ್ಕುಗಳಿದೆಯಂತೆ, ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

5 ಅಡಿ ಎತ್ತರ, 4-7 ಕೆಜಿ ತೂಕ
ಇದಲ್ಲದೆ, ಭಾರೀ ದೇಹವನ್ನು ಹೊಂದಿರುವ ಹೆಚ್ಚಿನ ಶಸ್ತ್ರಸಜ್ಜಿತ ಡೈನೋಸಾರ್‌ಗಳಿಗಿಂತ ಭಿನ್ನವಾಗಿ, ಜಕಾಪಿಲ್ ಕೇವಲ 5 ಅಡಿ ಎತ್ತರ ಮತ್ತು 4-7 ಕೆಜಿ ತೂಕವಿತ್ತು, ಅಂದರೆ ಮನೆಗಳಲ್ಲಿರುವ ಬೆಕ್ಕಿನಷ್ಟೇ ಚಿಕ್ಕದಾಗಿತ್ತು.

15 ಎಲೆಯ ಆಕಾರದ ಹಲ್ಲಿನ ತುಣುಕು ಪತ್ತೆ
ಅಸ್ಥಿಪಂಜರವನ್ನು ಹೊರತುಪಡಿಸಿ, ಇಗುವಾನಾ ಹಲ್ಲುಗಳನ್ನು ಹೋಲುವ 15 ಎಲೆಯ ಆಕಾರದ ಹಲ್ಲಿನ ತುಣುಕುಗಳನ್ನು ಸಹ ಸಂಶೋಧಕರು ಕಂಡುಕೊಂಡಿದ್ದಾರೆ. ಈ ಹಲ್ಲುಗಳು, ಕಿರಿದಾದ ದವಡೆಯ ರಚನೆಯೊಂದಿಗೆ, ಈ ಡೈನೋಸಾರ್ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ. ಈವರೆಗಿನ ಅಧ್ಯಯನದ ಪ್ರಕಾರ ಕೆಲವು ಮಾಂಸಾಹಾರಿಗಳು ಮತ್ತು ಕೆಲ ಸಸ್ಯಾಹಾರಿ ಡೈನೋಸಾರ್ ಇವೆ ಎಂದು ವರದಿಯಾಗಿದೆ. ಕೆಲವು ಡೈನೋಸಾರ್ ಗಳು ದೈತ್ಯಾಕಾರವಾಗಿದ್ದವು, ಇನ್ನು ಕೆಲವು ಬೆಕ್ಕು ಮಾತ್ರವಲ್ಲದೇ ಕೇವಲ ಕೋಳಿಮರಿಗಳಷ್ಟು ಚಿಕ್ಕದಿದ್ದವು.ಇನ್ನೂ ಹೆಚ್ಚಿನ ವಿಶೇಷತೆ ಎಂದರೆ ಪ್ರಸ್ತುತ ಲಭ್ಯವಾಗಿರುವ ಬೆಕ್ಕಿನ ಗಾತ್ರದ ಡೈನೋಸಾರ್ ಪಳೆಯುಳಿಕೆ ದಕ್ಷಿಣ ಗೋಳಾರ್ಧದಲ್ಲಿ ಕಂಡುಬಂದಿದೆ. ಇದು ಇತಿಹಾಸ ಪೂರ್ವ ಕಾಲದಲ್ಲಿ ಗೊಂಡ್ವಾನಾದ ದಕ್ಷಿಣದ ಸೂಪರ್ಕಾಂಟಿನೆಂಟ್ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿಯವರೆಗೆ, ಎಲ್ಲಾ ಶಸ್ತ್ರಸಜ್ಜಿತ ಡೈನೋಸಾರ್ ಪಳೆಯುಳಿಕೆಗಳು, ಸ್ಟೆಗೋಸಾರಸ್ ಮತ್ತು ಆಂಕೈಲೋಸೌರ್ಗಳು ಸೇರಿದಂತೆ ಉತ್ತರ ಗೋಳಾರ್ಧದಿಂದ ಮಾತ್ರ ಉತ್ಖನನ ಮಾಡಲಾಗಿತ್ತು. ಆದರೆ ಅರ್ಜೆಂಟೀನಾದ ಮರುಭೂಮಿಯಲ್ಲಿ ಸಿಕ್ಕ ಜಕಾಪಿಲ್ ಇಲ್ಲಿಯವರೆಗಿನ ಊಹೆಗಳನ್ನು ಹುಸಿ ಮಾಡಿದೆ ಎಂದಿದ್ದಾರೆ ಸಂಶೋಧಕರು.

ಇದನ್ನೂ ಓದಿ:  Rakhi: ಅಣ್ಣನಿಗೆ ರಾಖಿ ಕಟ್ಟಲು ಹೋಗ್ತಿದ್ದ ತಂಗಿಗೆ ಸಿಕ್ತು ಗಾಯಗೊಂಡ ಚಿರತೆ, ಮುಂದಾಗಿದ್ದು ನೋಡಿ ಇಡೀ ಊರೇ ಸೈಲೆಂಟ್​!

"ಜಕಾಪಿಲ್ ನ ಆವಿಷ್ಕಾರವು ಗೊಂಡ್ವಾನಾದಲ್ಲಿ ದೀರ್ಘಕಾಲದವರೆಗೆ ಅಸ್ತಿತ್ವದಲ್ಲಿದ್ದ ಆರಂಭಿಕ ಥೈರಿಯೊಫೊರಾನ್ ಡೈನೋಸಾರುಗಳ ಹೊಸ ಗೊಂಡ್ವಾನನ್ ವಂಶಾವಳಿಯ ಉಪಸ್ಥಿತಿಯನ್ನು ಬೆಂಬಲಿಸುತ್ತದೆ, ಆದರೆ ಮೂಲ ಮತ್ತು ವಿಕಾಸದ ಅಧ್ಯಯನದಲ್ಲಿ ಗೊಂಡ್ವಾನನ್ ಪಳೆಯುಳಿಕೆ ದಾಖಲೆಯ ಪ್ರಾಮುಖ್ಯತೆಯನ್ನು ಬೆಳಕಿಗೆ ತಂದಿದೆ." ಎಂದು ಸಂಶೋಧನಾ ಪ್ರಬಂಧ ಹೇಳುತ್ತದೆ.

ಈ ಅಧ್ಯಯನವನ್ನು ಕಳೆದ ವಾರ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟಿಸಲಾಗಿದೆ.
Published by:Ashwini Prabhu
First published: